ರಾಷ್ಟ್ರೀಯ ನ್ಯೂಸ್

ಸ್ಯಾಫ್ ಪುಟ್ಬಾಲ್ ಪಂದ್ಯಾಟ ➤ 9ನೇ ಬಾರಿಗೆ ಚಾಂಪಿಯನ್ ಆದ ಭಾರತ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 04. ಫೈನಲ್‌ ಪಂದ್ಯದಲ್ಲಿ ಕುವೈತ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಿಂದ ಮಣಿಸಿದ ಭಾರತ ಸ್ಯಾಫ್ ಕಪ್ ಪುಟ್‌ಬಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಂಗಳವಾರದಂದು ನಡೆದ ಪೈನಲ್‌ ಪಂದ್ಯಾಟದಲ್ಲಿ ನಿಗದಿತ ಸಮಯದ ಅಂತ್ಯಕ್ಕೆ ಎರಡೂ ತಂಡಗಳು ತಲಾ 1 ಗೋಲು ಗಳಿಸಿದ್ದವು. ಹೆಚ್ಚುವರಿ ಸಮಯದಲ್ಲೂ ಉಭಯ ತಂಡಗಳು ಸಮಬಲ ಕಾಯ್ದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲೂ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸಿ, ಒಂದು […]

ಸ್ಯಾಫ್ ಪುಟ್ಬಾಲ್ ಪಂದ್ಯಾಟ ➤ 9ನೇ ಬಾರಿಗೆ ಚಾಂಪಿಯನ್ ಆದ ಭಾರತ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ಭಯೋತ್ಪಾದನೆ ವಿಚಾರದಲ್ಲಿ ದ್ವಂದ್ವ ನೀತಿ ಇರಬಾರದು’ ➤ ಪ್ರಧಾನಿ ನರೇಂದ್ರ ಮೋದಿ

(ನ್ಯೂಸ್ ಕಡಬ)newskadaba.com ನವದೆಹಲಿ, ಜು. 04. ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು. ಭಾರತೀಯರಿಗೆ ರಾಷ್ಟ್ರಗಳು ಕೇವಲ ನೆರೆಹೊರೆಯವರಲ್ಲ, ಅದು ಕುಟುಂಬವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಪಾಕಿಸ್ತಾನದ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಮ್ಮುಖದಲ್ಲಿ ನಡೆದ ಎಸ್‌ಸಿಒ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ದೇಶಗಳು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದು ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಾಧನವಾಗಿ ಬಳಸುತ್ತಿದೆ ಎಂದಿದ್ದಾರೆ.ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ದೇಶಗಳನ್ನು ಟೀಕಿಸಲು ಎಸ್‌ಸಿಒ

‘ಭಯೋತ್ಪಾದನೆ ವಿಚಾರದಲ್ಲಿ ದ್ವಂದ್ವ ನೀತಿ ಇರಬಾರದು’ ➤ ಪ್ರಧಾನಿ ನರೇಂದ್ರ ಮೋದಿ Read More »

ರಾಷ್ಟ್ರೀಯ ನ್ಯೂಸ್

ನಟ ಶಾರುಖ್‌ ಖಾನ್‌ಗೆ ಶೂಟಿಂಗ್‌ ವೇಳೆ ಅನಾಹುತ

(ನ್ಯೂಸ್ ಕಡಬ)newskadaba.com ಮುಂಬೈ, ಜು. 04. ನಟ ಶಾರುಖ್‌ ಖಾನ್‌ ರವರಿಗೆ ಶೂಟಿಂಗ್‌ ವೇಳೆ ಪೆಟ್ಟು ಬಿದ್ದಿರುವ ಘಟನೆ ನಡೆದಿದೆ. ಲಾಸ್ ಏಂಜಲೀಸ್‌ನಲ್ಲಿ ಬಹಿರಂಗವಾಗದಿರುವ ಪ್ರಾಜೆಕ್ಟ್‌ ವೊಂದರ ಶೂಟಿಂಗ್‌ ನಲ್ಲಿರುವಾಗ ನಟ ಶಾರುಖ್‌ ಖಾನ್‌ ಅವರ ಮೂಗಿಗೆ ಪೆಟ್ಟು ಬಿದ್ದಿದೆ, ತಕ್ಷಣ ಚಿತ್ರತಂಡದವರು ಅವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ರಕ್ತ ನಿಲ್ಲಲು ಶಸ್ತ್ರಚಿಕಿತ್ಸೆಯನ್ನು ಮಾಡಿ, ಯಾವುದೇ ಹೆದರುವ ಅವಶ್ಯಕತೆಯಿಲ್ಲ ಎಂದು ಬ್ಯಾಂಡೇಜ್‌ ಹಾಕಿ ಕಳುಹಿಸಿದ್ದಾರೆ.ಸದ್ಯ ಇವರು ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಟ ಶಾರುಖ್‌ ಖಾನ್‌ಗೆ ಶೂಟಿಂಗ್‌ ವೇಳೆ ಅನಾಹುತ Read More »

ರಾಷ್ಟ್ರೀಯ ನ್ಯೂಸ್

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಹೆಚ್ಚಳ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 04. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು 7 ರೂ.ಗಳಷ್ಟು ಏರಿಕೆ ಮಾಡಿದೆ. ಜೂನ್ ತಿಂಗಳಲ್ಲಿ 83.5 ರೂ. ಗಳಷ್ಟು ಕಡಿತಗೊಳಿಸಿದ ನಂತರ ಜುಲೈನಲ್ಲಿ ಕೊಂಚ ಏರಿಕೆ ಕಂಡಿದೆ. ಇನ್ನು ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 7 ರೂ.ಗಳಷ್ಟು ಏರಿಕೆಯಾಗಿದ್ದು, ಇದು ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌‌ಗಳ ಬೆಲೆಯನ್ನು 1,773

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಹೆಚ್ಚಳ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ 

(ನ್ಯೂಸ್ ಕಡಬ)newskadaba. ನವದೆಹಲಿ, ಜು. 4. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 7 ರೂ.ಗಳಷ್ಟು ಹೆಚ್ಚಿಸಲಾಗಿದೆ. ಜೂನ್ ತಿಂಗಳ ಸಿಲಿಂಡರ್ ಬೆಲೆಗಳನ್ನು 83.5 ರೂ.ಗಳಷ್ಟು ಕಡಿತಗೊಳಿಸಿ ನಂತರ ಜುಲೈನಲ್ಲಿ ಕೊಂಚ ಏರಿಕೆ ಕಂಡಿದೆ ಇನ್ನು ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ವಾಣಿಜ್ಯ ಎಲ್ಪಿಜಿ ಸಿಲಿಂಡರ್  ಬೆಲೆ 7 ರೂ.ಗಳಷ್ಟು ಏರಿಕೆಯಾಗಿದ್ದು, ಇದು ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌‌ಗಳ ಬೆಲೆಯನ್ನು 1,773 ರೂ.ಗಳಿಂದ 1,780 ರೂ.ಗೆ ಹೆಚ್ಚಿಸಲಾಗಿದೆ.

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ  Read More »

ರಾಷ್ಟ್ರೀಯ ನ್ಯೂಸ್

ಚಿತ್ರೀಕರಣದ ವೇಳೆ ಗಾಯ ➤ ಮಲಯಾಳಂ ನಟ ಪೃಥ್ವಿರಾಜ್ ಗೆ ಇಂದು ಶಸ್ತ್ರಕ್ರಿಯೆ

(ನ್ಯೂಸ್ ಕಡಬ) newskadaba.com ಕೊಚ್ಚಿ, ಜೂ. 26. ಕೇರಳದ ಇಡುಕ್ಕಿ ಮರಯೂರ್‌ ಎಂಬಲ್ಲಿ ಮಲಯಾಳಂ ಚಿತ್ರ “ವಿಲಾಯತ್‌ ಬುದ್ಧ” ಇದರ ಚಿತ್ರೀಕರಣದ ವೇಳೆ ಕಾಲುಜಾರಿ ಬಿದ್ದು ಗಾಯಗೊಂಡಿದ್ದ ನಟ ಪೃಥ್ವಿರಾಜ್ ಅವರಿಗೆ ಇಂದು ಶಸ್ತ್ರಕ್ರಿಯೆ ನಡೆಯಲಿದೆ. ಬಸ್‌ ತಂಗುದಾಣವೊಂದರಲ್ಲಿ ಫೈಟ್‌ ದೃಶ್ಯದ ಚಿತ್ರೀಕರಣ ವೇಳೆ ಹಾರುವಾಗ ಕಾಲುಜಾರಿ ಬಿದ್ದ ಪೃಥ್ವಿರಾಜ್ ಅವರ ಕಾಲಿನ ಲಿಗಮೆಂಟ್‌ಗೆ ಗಾಯವಾಗಿದ್ದು ಅವರನ್ನು ಇಡುಕ್ಕಿಯ ಹತ್ತಿರದ ಆಸ್ಪತ್ರೆಗೆ ಮೊದಲು ದಾಖಲಿಸಿ, ನಂತರ ಅಲ್ಲಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಅವರಿಗೆ ಕೀಹೋಲ್‌

ಚಿತ್ರೀಕರಣದ ವೇಳೆ ಗಾಯ ➤ ಮಲಯಾಳಂ ನಟ ಪೃಥ್ವಿರಾಜ್ ಗೆ ಇಂದು ಶಸ್ತ್ರಕ್ರಿಯೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್, ಸಿನಿಮಾ

ಸಿನಿಮೀಯ ಶೈಲಿಯಲ್ಲಿ ದರೋಡೆ ➤ ಸಿಸಿಟಿವಿ ದೃಶ್ಯ  ವೈರಲ್

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 26. ಚಲಿಸುತ್ತಿದ್ದ ಕ್ಯಾಬ್ ಒಂದನ್ನು ತಡೆದ ಕಳ್ಳರ ಗ್ಯಾಂಗೊಂದು ಸಿನಿಮೀಯ ಶೈಲಿಯಲ್ಲಿ ದರೋಡೆ ನಡೆಸಿರುವ ಘಟನೆ ದೆಹಲಿಯ ಪ್ರಗತಿ ಮೈದಾನ್ ನಲ್ಲಿ ನಡೆದಿದೆ. ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ಖದೀಮರು ಗನ್ ತೋರಿಸಿ ಕ್ಯಾಬ್ ಅನ್ನು ಅಡ್ಡಗಟ್ಟಿ ಬಳಿಕ ಕಾರಿನ ಒಳಗಿದ್ದ ವ್ಯಕ್ತಿಯ ಬ್ಯಾಗ್ ಕಸಿದು ಕೆಲವೇ ಸೆಕೆಂಡುಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಕ್ಯಾಬ್ ನಲ್ಲಿದ್ದ ವ್ಯಕ್ತಿ, ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  

ಸಿನಿಮೀಯ ಶೈಲಿಯಲ್ಲಿ ದರೋಡೆ ➤ ಸಿಸಿಟಿವಿ ದೃಶ್ಯ  ವೈರಲ್ Read More »

ರಾಷ್ಟ್ರೀಯ ನ್ಯೂಸ್

ಭಾರೀ ಮಳೆಗೆ ಬಿದ್ದ ಮದುವೆ ಮನೆಯ ಪೆಂಡಲ್ ➤ 8 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಜೂ. 26. ಭಾರೀ ಮಳೆ ಮತ್ತು ಬಿರುಸಿನ ಗಾಳಿಯಿಂದಾಗಿ ಪೆಂಡಾಲ್ ಕುಸಿದು ಬಿದ್ದು ಮದುವೆಯಲ್ಲಿ ಭಾಗವಹಿಸಿದ್ದ ಎಂಟು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ದಾಮೋಹ್‌ ನಲ್ಲಿ ನಡೆದಿದೆ. ಅಧಿಕಾರಿಗಳ ಪ್ರಕಾರ, ಭಾನುವಾರದಂದು ರಾತ್ರಿ ಭಾರೀ ಮಳೆ, ಗಾಳಿಯಿಂದಾಗಿ ದಾಮೋಹ್‌ ನಲ್ಲಿ ಪೆಂಡಾಲ್ ಕುಸಿದು  ಬಿದ್ದು ಸುಮಾರು 8 ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಓರ್ವ ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಜಬಲ್‌ ಪುರಕ್ಕೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

ಭಾರೀ ಮಳೆಗೆ ಬಿದ್ದ ಮದುವೆ ಮನೆಯ ಪೆಂಡಲ್ ➤ 8 ಮಂದಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹವಾಮಾನ ವೈಪರೀತ್ಯ ➤ ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದ ಇಂಡಿಗೋ ವಿಮಾನ

(ನ್ಯೂಸ್ ಕಡಬ) newskadaba.com ಶ್ರೀನಗರ, ಜೂ. 26. ಹವಾಮಾನ ವೈಪರೀತ್ಯದಿಂದ ಶ್ರೀನಗರದಿಂದ ಜಮ್ಮುಗೆ ಹೊರಟಿದ್ದ ಇಂಡಿಗೊ ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿದ ಘಟನೆ ನಡೆದಿದೆ. ಇಂಡಿಗೊ 6ಇ – 2124 ವಿಮಾನವು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳಬೇಕಾಗಿತ್ತು, ಆದರೆ ಹವಾಮಾನ ವೈಪರೀತ್ಯದಿಂದಾಗಿ ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿದ್ದು ತಕ್ಷಣವೇ ಪೈಲಟ್ ವಿಮಾನವನ್ನು ಅಮೃತ್‍ ಸರದಲ್ಲಿ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಇನ್ನು ಪೈಲಟ್‍ ನ ಸಮಯಪ್ರಜ್ಞೆಯನ್ನು ಎರಡೂ ರಾಷ್ಟ್ರಗಳ ನಾಗರಿಕ ವಿಮಾನಯಾನ ಅಧಿಕಾರಿಗಳು ಶ್ಲಾಘಿಸಿದ್ದಾರೆ.    

ಹವಾಮಾನ ವೈಪರೀತ್ಯ ➤ ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದ ಇಂಡಿಗೋ ವಿಮಾನ Read More »

ರಾಷ್ಟ್ರೀಯ ನ್ಯೂಸ್

ವಿದ್ಯುತ್ ಶಾಕ್- ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 26. ವಿದ್ಯುತ್‌ ತಗುಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸಾಕ್ಷಿ ಅಹುಜಾ ಎಂದು ಗುರುತಿಸಲಾಗಿದೆ. ಇವರು ಭೋಪಾಲ್‌ಗೆ ಹೋಗಲೆಂದು ತನ್ನ ಸಹೋದರಿ ಮತ್ತು ಮೂವರು ಮಕ್ಕಳೊಂದಿಗೆ ನವದೆಹಲಿ ರೈಲು ನಿಲ್ದಾಣಕ್ಕೆ ಬಂದಿದ್ದು, ಈ ವೇಳೆ ಮಳೆ ಬರುತ್ತಿದ್ದರಿಂದ ಆಧಾರವಾಗಿ ವಿದ್ಯುತ್‌ ಕಂಬವನ್ನು ಹಿಡಿದಿದ್ದರು. ಈ ವೇಳೆ ಕಂಬದಿಂದ ಸಾಕ್ಷಿ ಅವರಿಗೆ ವಿದ್ಯುತ್‌ ಪ್ರವಹಿಸಿದೆ. ತಕ್ಷಣವೇ ಸ್ಥಳೀಯರು ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಸಾಕ್ಷಿ ಮೃತಪಟ್ಟಿದ್ದರು

ವಿದ್ಯುತ್ ಶಾಕ್- ಮಹಿಳೆ ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top