ರಾಷ್ಟ್ರೀಯ ನ್ಯೂಸ್

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಎಥನಾಲ್ ವಾಹನಗಳು ➤ ಸಾರಿಗೆ ಸಚಿವ ನಿತಿನ್ ಗಡ್ಕರಿ

(ನ್ಯೂಸ್ ಕಡಬ) newskadaba.com ನಾಗಪುರ, ಜೂ. 26. ದೇಶದಲ್ಲಿ ಶೀಘ್ರದಲ್ಲೇ ಸಂಪೂರ್ಣ ಎಥನಾಲ್‌ ಇಂಧನದಿಂದ ಸಂಚರಿಸುವ ವಾಹನಗಳು ರಸ್ತೆಗಿಳಿಯಲಿವೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಈ ಕುರಿತು ನಾಗಪುರದಲ್ಲಿ ಮಾತನಾಡಿದ ಅವರು, ಸಂಪೂರ್ಣವಾಗಿ 100% ಬಯೋಎಥೆನಾಲ್‌ ನಲ್ಲಿ ಚಲಿಸಬಲ್ಲ ವಾಹನಗಳನ್ನು ಬಜಾಜ್‌, ಟಿವಿಎಸ್‌ ಹಾಗೂ ಹೀರೋ ಸ್ಕೂಟರ್‌ ಕಂಪನಿಗಳು ತಯಾರಿಸಲಿವೆ. ಪ್ರತಿ ಲೀಟರ್‌ ಎಥನಾಲ್‌ ಗೆ 60ರೂ. ಇದ್ದರೆ ಪೆಟ್ರೋಲ್‌ಗೆ 100 ರೂ. ಇದೆ. ಅಲ್ಲದೇ ಎಥನಾಲ್‌ ಶೇ.40ರಷ್ಟು ವಿದ್ಯುತ್‌ ಉತ್ಪಾದನೆ ಮಾಡುವುದರಿಂದ ಪ್ರತಿ […]

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಎಥನಾಲ್ ವಾಹನಗಳು ➤ ಸಾರಿಗೆ ಸಚಿವ ನಿತಿನ್ ಗಡ್ಕರಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಮ್ಮ ಹೋರಾಟ ನ್ಯಾಯಾಲಯಕ್ಕೆ ಸ್ಥಳಾಂತರ ➤ ಪ್ರತಿಭಟನೆ ಹಿಂಪಡೆದ ಕುಸ್ತಿಪಟು

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 26. ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಕಳೆದ ಐದು ತಿಂಗಳಿಂದ ಮಹಿಳಾ ಕುಸ್ತಿಪಟುಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದುಕೊಳ್ಳುವುದಾಗಿ ಕುಸ್ತಿಪಟುಗಳು ತಿಳಿಸಿದ್ದಾರೆ. ಇನ್ನುಮುಂದೆ ನಾವು ರಸ್ತೆಯಲ್ಲಿ ಪ್ರತಿಭಟನೆ ಮಾಡುವುದಿಲ್ಲ, ಪ್ರತಿಭಟನೆಯನ್ನು ನ್ಯಾಯಾಲಯಕ್ಕೆ ಸ್ಥಳಾಂತರಿಸಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ. ಸರಕಾರವು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪ ಸಲ್ಲಿಸುವ ಭರವಸೆಯನ್ನು ಈಡೇರಿಸಿದೆ ಎಂದು ವಿನೇಶ್ ಫೋಗಟ್, ಸಾಕ್ಷಿ ಮಲಿಕ್

ನಮ್ಮ ಹೋರಾಟ ನ್ಯಾಯಾಲಯಕ್ಕೆ ಸ್ಥಳಾಂತರ ➤ ಪ್ರತಿಭಟನೆ ಹಿಂಪಡೆದ ಕುಸ್ತಿಪಟು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಕಂಟೇನರ್ ಢಿಕ್ಕಿ ➤ ವೃದ್ದ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ. 25. ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ವೃದ್ದರೋರ್ವರು ಮೃತಪಟ್ಟ ಘಟನೆ ಬಂದ್ಯೋಡಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಬಂಬ್ರಾಣ ದ ಮೊಯಿದಿನ್ ಕುಂಞ (78) ಎಂದು ಗುರುತಿಸಲಾಗಿದೆ. ಇವರು ಝೀಬ್ರಾ ಲೈನ್ ಮೂಲಕ ರಸ್ತೆ ದಾಟಲೆಂದು ನಿಂತಿದ್ದಾಗ ಅತೀ ವೇಗದಿಂದ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಕಂಟೇನರ್ ಢಿಕ್ಕಿ ➤ ವೃದ್ದ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತದ ಮಾಜಿ ಹಾಕಿ ಆಟಗಾರ ಮೃತ್ಯು

(ನ್ಯೂಸ್ ಕಡಬ) newskadaba.com ವಾರಣಾಸಿ, ಜೂ. 24. ಭಾರತದ ಮಾಜಿ ಜೂನಿಯರ್ ಹಾಕಿ ಆಟಗಾರ ರಾಜೀವ್ ಕುಮಾರ್ ಮಿಶ್ರಾ (46) ಅವರು ವಾರಣಾಸಿಯ ಸರ್ಸೌಲಿ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ, ರಾಜೀವ್ ಕೆಲವು ದಿನಗಳ ಹಿಂದೆ ಮೃತಪಟ್ಟಿರಬೇಕು ಮತ್ತು ಅವರ ಮನೆಯಿಂದ ದುರ್ವಾಸನೆ ಬರುತ್ತಿದ್ದ ಕಾರಣ ಅವರ ನೆರೆಹೊರೆಯವರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. 1997 ರಲ್ಲಿ ನಡೆದ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಬೆಳ್ಳಿ ಪದಕವನ್ನು ಗಳಿಸುವಲ್ಲಿ

ಭಾರತದ ಮಾಜಿ ಹಾಕಿ ಆಟಗಾರ ಮೃತ್ಯು Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಹಳಿತಪ್ಪಿದ ಗೂಡ್ಸ್ ರೈಲು ➤ 6 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜೂ. 24. ಟ್ರ್ಯಾಕ್ಟರ್​ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ಶನಿವಾರ ನಡೆದಿದೆ. ಇಂದು ಬೆಳಗ್ಗೆ ಬಂಸಿಪಹಾರ್‌ಪುರ-ರೂಪ್ ಬಾಸ್ ರೈಲು ವಿಭಾಗದಲ್ಲಿ ಗೂಡ್ಸ್ ರೈಲೊಂದು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು, ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಆರು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಹಳಿತಪ್ಪಿದ ಗೂಡ್ಸ್ ರೈಲು ➤ 6 ಮಂದಿಗೆ ಗಾಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗರ್ಭಧರಿಸಿದ 9ನೇ ತರಗತಿಯ ಬಾಲಕಿ ➤ ಪೊಲೀಸ್ ಅಧಿಕಾರಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕೊಚ್ಚಿ, ಜೂ. 24. ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಬಾಲಕಿ ಗರ್ಭಿಣಿಯಾಗಿರುವ ಸುದ್ದಿ ಹೊರಬೀಳುತ್ತಿದ್ದಂತೆಯೇ ಪೊಲೀಸ್​ ಅಧಿಕಾರಿಯೊಬ್ಬರನ್ನು ಅರ್ಯಾಂಕೋಡ್​ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಕೇರಳದ ವೆಲ್ಲರಾಡದಲ್ಲಿ ನಡೆದಿದೆ. ಬಂಧಿತರನ್ನು ಮರಯೂರ್​ ಠಾಣಾ​ ಸಿಪಿಒ ದಿಲೀಪ್​ (43) ಎಂದು ಗುರುತಿಸಲಾಗಿದೆ. ಬಂಧಿಸಿದ್ದಾರೆ. 9ನೇ ತರಗತಿಯ ಸಂತ್ರಸ್ತೆ ಕಳೆದ ಕೆಲವು ದಿನಗಳಿಂದ ಹೊಟ್ಟೆ ನೋವು ಅನುಭವಿಸುತ್ತಿದ್ದು, ಇತ್ತೀಚೆಗೆ ಹೊಟ್ಟೆನೋವು ಜಾಸ್ತಿಯಾಗಿದ್ದರಿಂದ ಪಾಲಕರು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಆಕೆ ಗರ್ಭಿಣಿ ಎಂಬುವುದು ಬೆಳಕಿಗೆ

ಗರ್ಭಧರಿಸಿದ 9ನೇ ತರಗತಿಯ ಬಾಲಕಿ ➤ ಪೊಲೀಸ್ ಅಧಿಕಾರಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇರಳದ 13 ಯೂಟ್ಯೂಬರ್ಸ್ ಗಳ ಮನೆಮೇಲೆ ಐಟಿ ದಾಳಿ ➤ 25 ಕೋಟಿ ರೂ. ತೆರಿಗೆ ವಂಚನೆ

(ನ್ಯೂಸ್ ಕಡಬ) newskadaba.com ಕೊಚ್ಚಿ, ಜೂ. 24.  ಕೇರಳದ ಕೆಲ ಯೂಟ್ಯೂಬರ್ಸ್​ ಮನೆಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಇದೀಗ ತೆರಿಗೆ ವಂಚನೆ ಆರೋಪದಡಿಯಲ್ಲಿ ಕೆಲ ಯೂಟ್ಯೂಬರ್ಸ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ದಾಳಿಯ ವೇಳೆ ಸುಮಾರು 25 ಕೋಟಿ ರೂ. ತೆರಿಗೆಯನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಕೆಲವರು 2 ಕೋಟಿ ರೂಪಾಯಿವರೆಗೂ ತೆರಿಗೆ ಕಟ್ಟಬೇಕಿದ್ದು, ಆದಾಗ್ಯೂ ಕೆಲವರು ಈವರೆಗೂ ಒಂದೇ ಒಂದು ರೂಪಾಯಿ ತೆರಿಗೆ ಹಣ ಕಟ್ಟಿಲ್ಲ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ. ಈ

ಕೇರಳದ 13 ಯೂಟ್ಯೂಬರ್ಸ್ ಗಳ ಮನೆಮೇಲೆ ಐಟಿ ದಾಳಿ ➤ 25 ಕೋಟಿ ರೂ. ತೆರಿಗೆ ವಂಚನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತೆಲಂಗಾಣ ಶಾಸಕ ಪ್ರಯಾಣಿಸುತ್ತಿದ್ದ ವಾಹನ ಕಾರ್ಕಳದಲ್ಲಿ ಅಪಘಾತ..!

(ನ್ಯೂಸ್ ಕಡಬ) newskadaba.com ಕಾರ್ಕಳ, ಜೂ. 24. ತೆಲಂಗಾಣದ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾದ ಘಟನೆ ಮಿಯ್ಯಾರು ಸೇತುವೆ ಬಳಿಯ ಮುಡಾರು- ನಲ್ಲೂರು ಕ್ರಾಸ್ ಬಳಿ ನಡೆದಿದೆ. ತೆಲಂಗಾಣದ ಟೆಂಡೂರ್ ಕ್ಷೇತ್ರದ ಶಾಸಕ ಪಂಚುಗುಲ ರೋಹಿತ್‌ ರೆಡ್ಡಿ ಮಂಗಳೂರಿನಿಂದ ಶೃಂಗೇರಿ ಕ್ಷೇತ್ರಕ್ಕೆ ತೆರಳುತ್ತಿದ್ದ ವೇಳೆ ಮುಡಾರು- ನಲ್ಲೂರು ಕ್ರಾಸ್ ಬಳಿ ತಲುಪುತ್ತಿದ್ದಂತೆ ಕಾರಿನ ಟಯರ್ ಸ್ಪೋಟಗೊಂಡು ಅಪಘಾತ ಸಂಭವಿಸಿದೆ. ಘಟನೆಯಿಂದ ಶಾಸಕರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ವೇಳೆ ಕಾರು ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ

ತೆಲಂಗಾಣ ಶಾಸಕ ಪ್ರಯಾಣಿಸುತ್ತಿದ್ದ ವಾಹನ ಕಾರ್ಕಳದಲ್ಲಿ ಅಪಘಾತ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೋವಿನ್ ಪೋರ್ಟಲ್ ನಿಂದ ಮಾಹಿತಿ ಸೋರಿಕೆ ಆರೋಪ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 22. ಕೋವಿನ್ ಪೋರ್ಟಲ್‌ ನಿಂದ ಡೇಟಾ ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಿಹಾರದಲ್ಲಿ ಬಂಧಿಸಿದ್ದಾರೆ. ಪ್ರಮುಖ ಆರೋಪಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಇತರರ ಸೂಕ್ಷ್ಮ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಮಾಧ್ಯಮ ಟೆಲಿಗ್ರಾಮ್‌ ನಲ್ಲಿ ಸೋರಿಕೆ ಮಾಡಿದ್ದಾನೆ ಎಂಬ ಆರೋಪವಿದ್ದು, ಇನ್ನೋರ್ವ ಆರೋಪಿ ಬಾಲಾಪರಾಧಿಯಾಗಿದ್ದಾನೆಂದು ತಿಳಿದುಬಂದಿದೆ. ನಾಗರಿಕರ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡ ಟೆಲಿಗ್ರಾಮ್ ಬಾಟ್ ಅನ್ನು ರಚಿಸಿದ ನಂತರ ಆರೋಪಿಯನ್ನು ಆತನ ನಿವಾಸದಿಂದ ಬಂಧಿಸಲಾಗಿದೆ ಎಂದು

ಕೋವಿನ್ ಪೋರ್ಟಲ್ ನಿಂದ ಮಾಹಿತಿ ಸೋರಿಕೆ ಆರೋಪ ➤ ಇಬ್ಬರ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪತಿ-ಪತ್ನಿ ನಡುವೆ ಕಲಹ, ಹಲ್ಲೆ ➤ ಇಬ್ಬರು ಮಕ್ಕಳು ಮೃತ್ಯು

 (ನ್ಯೂಸ್ ಕಡಬ) newskadaba.com ಶ್ರೀರಂಗಪಟ್ಟಣ, ಜೂ. 22. ಹೆತ್ತ ತಂದೆಯೇ ತನ್ನಿಬ್ಬರ ಮಕ್ಕಳನ್ನು ಕೊಂದು ಹಾಕಿದ ಘಟನೆ ಶ್ರೀರಂಗಪಟ್ಟಣದ ಮರಲಗಾಲ ಗ್ರಾಮದ ಬಳಿಯ ಫಾರ್ಮ್ ಹೌಸ್​ನಲ್ಲಿ ನಡೆದಿದೆ. ಮೃತ ಮಕ್ಕಳನ್ನು ಆದರ್ಶ ಹಾಗೂ ಅಮೂಲ್ಯ ಎಂದು ಗುರುತಿಸಲಾಗಿದೆ ಪತಿ ಪತ್ನಿ ನಡುವೆ ಕಲಹವೇರ್ಪಟ್ಟು, ಪತಿ, ಪತ್ನಿ ಲಕ್ಷ್ಮಿಗೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ. ಏಟು ಬಿದ್ದ ತಕ್ಷಣ ಲಕ್ಷ್ಮೀ ಕೆಳಗೆ ಬಿದ್ದಿದ್ದು, ಬಳಿಕ ಮಕ್ಕಳಿಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪತ್ನಿ ಲಕ್ಷ್ಮೀಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ

ಪತಿ-ಪತ್ನಿ ನಡುವೆ ಕಲಹ, ಹಲ್ಲೆ ➤ ಇಬ್ಬರು ಮಕ್ಕಳು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top