ರಾಷ್ಟ್ರೀಯ ನ್ಯೂಸ್

ಸೇನಾಶಾಲೆಗೆ ತಲೆನೋವಾಗಿ ಪರಿಣಮಿಸಿದ ಪಾಕ್ ಗುಪ್ತಚರ ಸಂಸ್ಥೆ

(ನ್ಯೂಸ್ ಕಡಬ) newskadaba.com  ಜಮ್ಮು- ಕಾಶ್ಮೀರ, ಜು. 26. ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ಕಾರ್ಯಕರ್ತರು ಸೇನಾ ಶಾಲೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ವೈಯಕ್ತಿಕ ವಿವರಗಳನ್ನು ಹುಡುಕುತ್ತಿದ್ದು, ಜಮ್ಮು- ಕಾಶ್ಮೀರ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ತಲೆನೋವಾಗಿ ಪರಿಣಮಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸೇನಾ ಶಾಲೆಗಳನ್ನು ನಿರ್ವಹಿಸುವ ಅಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮತ್ತು ಅಸ್ತಿತ್ವದಲ್ಲಿರುವ ಶಾಲಾ ಗುಂಪುಗಳನ್ನು ವಾಟ್ಸಾಪ್‌ನಲ್ಲಿ ರಾಜಿ ಮಾಡಿಕೊಂಡಿದ್ದಲ್ಲಿ ಅದನ್ನು ಅಳಿಸಲು ಬೋಧಕ ಸಿಬ್ಬಂದಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆರ್ಮಿ […]

ಸೇನಾಶಾಲೆಗೆ ತಲೆನೋವಾಗಿ ಪರಿಣಮಿಸಿದ ಪಾಕ್ ಗುಪ್ತಚರ ಸಂಸ್ಥೆ Read More »

ರಾಷ್ಟ್ರೀಯ ನ್ಯೂಸ್

14.12 ಸೆಕೆಂಡ್‌ಗಳಲ್ಲಿ ಪೇಟ ಕಟ್ಟಿ ಗಿನ್ನೆಸ್ ರೆಕಾರ್ಡ್ ಬರೆದ ಭಾರತೀಯ

(ನ್ಯೂಸ್ ಕಡಬ) newskadaba.com  ನವದೆಹಲಿ, ಜು. 26. ಪೇಟ ಭಾರತೀಯ ಪುರುಷರ ವೇಷಭೂಷಣದ ಪ್ರಮುಖ ಭಾಗ. ಸಾಮಾನ್ಯವಾಗಿ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ದೇಶದ ಹೆಚ್ಚಿನ ಕಡೆಗಳಲ್ಲಿ ಈ ಪೇಟವನ್ನು ಧರಿಸಲಾಗುತ್ತದೆ. ಆದರೆ, ಪೇಟವನ್ನು ಕಟ್ಟೋದಿಕ್ಕೆ ಒಟ್ಟು ಎಷ್ಟು ಟೈಮ್ ಬೇಕೆಂಬುದು ಗೊತ್ತಿದೆಯೇ. ಇದಕ್ಕೆ ಸರಿಸಾಟಿಯೆಂಬಂತೆ ಆದಿತ್ಯ ಪಚೋಲಿ ಎಂಬವರು ಪೇಟವನ್ನು ಅತ್ಯಂತ ವೇಗವಾಗಿ ಕಟ್ಟುವ ಮೂಲಕ ವಿಶ್ವದಾಖಲೆಯನ್ನು ಬರೆದಿದ್ದಾರೆ. ಆದಿತ್ಯ ಪಚೋಲಿ ಅವರು ಈ ಪೇಟ ಕಟ್ಟೋದಕ್ಕೆ ತೆಗೆದುಕೊಂಡ ಸಮಯ ಕೇಳಿದ್ರೆ ನೀವು ಶಾಕ್ ಆಗೋದಂತೂ ಗ್ಯಾರಂಟಿ.

14.12 ಸೆಕೆಂಡ್‌ಗಳಲ್ಲಿ ಪೇಟ ಕಟ್ಟಿ ಗಿನ್ನೆಸ್ ರೆಕಾರ್ಡ್ ಬರೆದ ಭಾರತೀಯ Read More »

ರಾಷ್ಟ್ರೀಯ ನ್ಯೂಸ್

ಮಣಿಪುರ ಹಿಂಸಾಚಾರದ ಕರಾಳ ಸತ್ಯ ಬಿಚ್ಚಿಟ್ಟ ಸಂತ್ರಸ್ತೆ

(ನ್ಯೂಸ್ ಕಡಬ) newskadaba.com  ಇಂಫಾಲ, ಜು. 26. ಮಣಿಪುರದ ರಾಜಧಾನಿಯಲ್ಲಿ ಮೇ ತಿಂಗಳಿನಲ್ಲಿ ಆರಂಭವಾದ ಹಿಂಸಾತ್ಮಕ ಕೃತ್ಯಗಳಿಂದ ಹಲವರು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಹೀಗೆ ತಪ್ಪಿಕೊಳ್ಳುವ ಉದ್ದೇಶದಿಂದ ಎಟಿಎಂಗೆ ತೆರಳಿದ್ದ 19 ವರ್ಷದ ಯುವತಿಯೋರ್ವಳನ್ನು ಹಲವು ಮಂದಿಯ ಗುಂಪೊಂದು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಆಘಾತಕಾರಿ ಘಟನೆಯ ಮಾಹಿತಿಯನ್ನು ಹೊರಹಾಕಿದ ಯುವತಿ, ಜನಾಂಗೀಯ ಸಂಘರ್ಷದಿಂದ ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯವನ್ನು ಟಿವಿಗೆ ನೀಡಿದ ಸಂದರ್ಶನವೊಂದದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಯುವತಿಯ ಮಾಹಿತಿ ಪ್ರಕಾರ, ಬೆಟ್ಟ ಪ್ರದೇಶಕ್ಕೆ

ಮಣಿಪುರ ಹಿಂಸಾಚಾರದ ಕರಾಳ ಸತ್ಯ ಬಿಚ್ಚಿಟ್ಟ ಸಂತ್ರಸ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬ್ರಿಜ್ ಭೂಷಣ್ ಸಿಂಗ್ ಚುನಾವಣಾ ಕಣದಿಂದ ಹೊರಕ್ಕೆ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಜು. 26. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಗಸ್ಟ್ 12ರಂದು ನಡೆಯಲಿರುವ ಚುನಾವಣಾ ಕಣದಿಂದ ಹೊರಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿವೆ. ಚುನಾವಣಾ ಅಧಿಕಾರಿ ನಿವೃತ್ತ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್, ಅರ್ಹ ಮತದಾರರ ಪಟ್ಟಿಯನ್ನು ಅಂತಿಮಪಡಿಸಿದ್ದು, ಅದರಲ್ಲಿ ಬ್ರಿಜ್ ಭೂಷಣ್ ಸಿಂಗ್ ಹಾಗೂ ಉತ್ತರ ಪ್ರದೇಶ ಕುಸ್ತಿ ಸಂಘದ ಅಧ್ಯಕ್ಷರಾಗಿರುವ ಅವರ ಕಿರಿಯ ಪುತ್ರ

ಬ್ರಿಜ್ ಭೂಷಣ್ ಸಿಂಗ್ ಚುನಾವಣಾ ಕಣದಿಂದ ಹೊರಕ್ಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಕ್ಟೋಬರ್ 15ರಂದು ನಿಗದಿಯಾಗಿದ್ದ ವಿಶ್ವಕಪ್ ದಿನಾಂಕ ಬದಲಾವಣೆ ಸಾಧ್ಯತೆ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಜು. 26. ನವರಾತ್ರಿ ಹಬ್ಬದ ಹಿನ್ನೆಲೆ ಅಕ್ಟೋಬರ್ 15ರಂದು ಅಹಮದಾಬಾದ್ ನಲ್ಲಿ ನಿಗದಿಪಡಿಸಲಾಗಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಕ್ರಿಕೆಟ್ ವಿಶ್ವಕಪ್ 2023 ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅಕ್ಟೋಬರ್ 15 ರಂದು ನವರಾತ್ರಿಯ ಮೊದಲ ದಿನವಾಗಿದ್ದು, ಅಂದು ಅಹಮದಾಬಾದ್ ನಲ್ಲಿ ಐಸಿಸಿ ಪಂದ್ಯವನ್ನು ನಿಗದಿಪಡಿಸಿದೆ. ನವರಾತ್ರಿ ಗುಜರಾತ್ ನಾದ್ಯಂತ ಗಾರ್ಬಾ ನೃತ್ಯಗಳೊಂದಿಗೆ ಆಚರಿಸಲಾಗುವ ಮಹತ್ವದ ಹಬ್ಬವಾಗಿದ್ದು, ಭದ್ರತೆಯ ಕಾರಣದಿಂದ ಬಿಸಿಸಿಐಗೆ ಪ್ರಯಾಣದ ವೇಳಾಪಟ್ಟಿಯನ್ನು ಮರು ಪರಿಶೀಲಿಸುವಂತೆ

ಅಕ್ಟೋಬರ್ 15ರಂದು ನಿಗದಿಯಾಗಿದ್ದ ವಿಶ್ವಕಪ್ ದಿನಾಂಕ ಬದಲಾವಣೆ ಸಾಧ್ಯತೆ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಂದ್ರಯಾನ-3 ಭೂಮಿಯ ಕೊನೆಯ ಕಕ್ಷೆಗೆ ಪ್ರವೇಶ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 25. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕಯು ಇಂದು ಭೂಮಿಯ ಕೊನೆಯ ಕಕ್ಷೆಯನ್ನು ಪ್ರವೇಶಿಸಲಿದೆ. ಮಧ್ಯಾಹ್ನ 2-3 ಗಂಟೆಗೆ 5ನೇ ಅರ್ಥ್‌-bound perigee firing ಪೂರ್ಣಗೊಳ್ಳಲಿದ್ದು ನಂತರ ಜು.31ರ ರಾತ್ರಿ ಭೂಮಿ ಕಕ್ಷೆಯನ್ನು ತೊರೆದು ಚಂದ್ರನ ಕಡೆಗೆ ಚಲಿಸುತ್ತದೆ. ಪ್ರಸ್ತುತ, ಗಗನನೌಕೆ ಭೂಮಿಯಿಂದ 71,351 ಕಿಮೀ x 233 ಕಿಮೀ ದೂರದ ಕಕ್ಷೆಯಲ್ಲಿದೆ ಎಂದು ಇಸ್ರೋ ಸಂಸ್ಥೆ ಹೇಳಿದೆ. ಬಳಿಕ ಚಂದ್ರನಿಗೆ 5 ಸುತ್ತುಗಳನ್ನು ಹಾಕಿ ಆ. 23ರಂದು ಚಂದ್ರನ ದಕ್ಷಿಣ

ಚಂದ್ರಯಾನ-3 ಭೂಮಿಯ ಕೊನೆಯ ಕಕ್ಷೆಗೆ ಪ್ರವೇಶ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್
crime, arrest, suspected

ಕೇರಳದಲ್ಲಿ ಅಜ್ಜ-ಅಜ್ಜಿಯ ಕೊಲೆ- ಆರೋಪಿ ಮಂಗಳೂರಿನಲ್ಲಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25. ಕೇರಳದ ತ್ರಿಶೂರ್ ನಲ್ಲಿ ಅಜ್ಜ- ಅಜ್ಜಿಯ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು, ಚಿನ್ನಾಭರಣ ಮಾರಾಟ ಮಾಡುತ್ತಿದ್ದ ವೇಳೆ ಮಂಗಳೂರಿನಲ್ಲಿ ಬಂಧಿಸಲಾದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಯನ್ನು ತ್ರಿಶೂರ್ ಜಿಲ್ಲೆಯ ವೈಲತ್ತೂರ್ ನಿವಾಸಿ ಅಹಮ್ಮದ್ ಅಕ್ಮಲ್ ಎಂದು ಗುರುತಿಸಲಾಗಿದೆ. ಈತ ತ್ರಿಶೂರ್ ಜಿಲ್ಲೆಯ ವಡೆಕ್ಕೆಕಾಡ್ ಎಂಬಲ್ಲಿ ಜುಲೈ 23ರಂದು ಅಜ್ಜ ಮತ್ತು ಅಜ್ಜಿಯನ್ನು ಕೊಲೆಮಾಡಿ ಅವರಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಮಂಗಳೂರಿಗೆ ಬಂದಿದ್ದ. ಸೋಮವಾರದಂದು ನಗರದ ಕಾರ್ ಸ್ಟ್ರೀಟ್ ಪರಿಸರದಲ್ಲಿ ಅನುಮಾನಾಸ್ಪದವಾಗಿ

ಕೇರಳದಲ್ಲಿ ಅಜ್ಜ-ಅಜ್ಜಿಯ ಕೊಲೆ- ಆರೋಪಿ ಮಂಗಳೂರಿನಲ್ಲಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ಥ್ರೆಡ್ಸ್’ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜು. 25. ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ ಫ್ಯಾನ್ ಬಳಗ ತುಂಬಾ ದೊಡ್ಡದು. ದಕ್ಷಿಣದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಸ್ಟೈಲಿಸ್ಟ್ ಸ್ಟಾರ್ ಅವರ ಸಿನಿಮಾಗಳನ್ನು ನೋಡುವವರಿದ್ದಾರೆ. ಅಲ್ಲು ಅರ್ಜುನ್ ಅವರ ಅನೇಕ ಸಿನಿಮಾಗಳು ಹಿಂದಿ ಸೇರಿದಂತೆ ಇತರ ಭಾಷೆಗೆ ಆಗಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿವೆ. ಹಾಗಾಗಿ ಅವರಿಗೆ ಅಭಿಮಾನಿಗಳು ಎಲ್ಲಾ ಕಡೆ ಇದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಹವಾ ಸೃಷ್ಟಿಸಿರುವ ಅಲ್ಲು ಅರ್ಜುನ್ ಇತ್ತೀಚೆಗೆ ಬಂದ ಮೆಟಾ

‘ಥ್ರೆಡ್ಸ್’ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್ Read More »

ರಾಷ್ಟ್ರೀಯ ನ್ಯೂಸ್, ಸಿನಿಮಾ

ಐಸಿಯು ನಲ್ಲಿ ದಾಖಲಾಗಿದ್ದ ರೋಗಿಯ ಕಿವಿ, ಹಣೆ, ಕಾಲುಗಳಿಗೆ ಕಚ್ಚಿದ ಇಲಿಗಳು

(ನ್ಯೂಸ್ ಕಡಬ) newskadaba.com ಬದೌನ್, ಜು. 25. ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದ ರೋಗಿಯೋರ್ವರನ್ನು ಇಲಿಗಳು ಕಚ್ಚಿವೆ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಭರವಸೆ ನೀಡಿರುವುದಾಗಿಯೂ ವರದಿಯಾಗಿದೆ. ದಾತಗಂಜ್ ತಹಸಿಲ್ ಪ್ರದೇಶದ ಬುದ್ ಬಜಾರ್ ಪಟ್ಟಣದ ನಿವಾಸಿ ರಾಮ್ ಸೇವಕ್ ಗುಪ್ತಾ ಎಂಬವರು ಇತ್ತೀಚೆಗೆ ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆಗಾಗಿ

ಐಸಿಯು ನಲ್ಲಿ ದಾಖಲಾಗಿದ್ದ ರೋಗಿಯ ಕಿವಿ, ಹಣೆ, ಕಾಲುಗಳಿಗೆ ಕಚ್ಚಿದ ಇಲಿಗಳು Read More »

ರಾಷ್ಟ್ರೀಯ ನ್ಯೂಸ್

ಕೃಷಿ ಹೊಂಡದಲ್ಲಿ ಈಜಲು ಮೃತಪಟ್ಟ ಯುವತಿ

(ನ್ಯೂಸ್ ಕಡಬ)newskadaba.com ಕೇರಳ, ಜು.25. ಕೃಷಿ ಹೊಂಡದಲ್ಲಿ ಈಜಲು ಹೋಗಿ ಯುವತಿಯೊಬ್ಬಳು ದುರಂತವಾಗಿ ಮೃತಪಟ್ಟ ಘಟನೆ ಜರುಗಿದೆ. 19 ವರ್ಷದ ಸೋನಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈಕೆ ಮನೆಯ ಸಮೀಪವೇ ಇರುವ ಕೃಷಿ ಉದ್ದೇಶಕ್ಕಾಗಿ ಮಣ್ಣನ್ನು ಅಗೆದು ನಿರ್ಮಾಣ ಮಾಡಿದ್ದ ಹೊಂಡದಲ್ಲಿ ಈ ಘಟನೆ ನಡೆದಿದೆ. ತಂದೆಯ ಜತೆ ಈಜುವಾಗ ಮಣ್ಣಿನಲ್ಲಿ ಸಿಲುಕಿ, ಅದರಿಂದ ಬಿಡಿಸಿಕೊಳ್ಳಲಾಗದೇ ಸೋನಾ ಕೊನೆಯುಸಿರೆಳೆದಿದ್ದಾಳೆ. ಇದಕ್ಕೂ ಮುನ್ನ ಸ್ಥಳೀಯರಿಗೆ ಈ ಮಾಹಿತಿ ತಿಳಿದು ಸೋನಾಳನ್ನು ಕಾಪಾಡಲು ಸ್ಥಳಕ್ಕೆ ದೌಡಾಯಿಸಿದರೂ ಸಹ ಆಕೆಯನ್ನು

ಕೃಷಿ ಹೊಂಡದಲ್ಲಿ ಈಜಲು ಮೃತಪಟ್ಟ ಯುವತಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top