ರಾಷ್ಟ್ರೀಯ ನ್ಯೂಸ್

3000 ಕಾರುಗಳಿದ್ದ ಹಡಗಿದ ಆಕಸ್ಮಿಕ ಬೆಂಕಿ – ಭಾರತೀಯ ನಾವಿಕ ಮೃತ್ಯು

(ನ್ಯೂಸ್ ಕಡಬ)newskadaba.com ಅಮೆಲ್ಯಾಂಡ್‌, ಜು.27. ಉತ್ತರ ಸಮುದ್ರದಲ್ಲಿ ಸುಮಾರು 3,000 ಕಾರುಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆ ಹಡಗೊಂದು ಬೆಂಕಿಗೆ ಆಹುತಿಯಾಗಿದ್ದು, ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಬೆಂಕಿಯನ್ನು ನಂದಿಸಲು ವಿಫಲವಾದ ಕಾರಣ 23 ಸಿಬ್ಬಂದಿಯನ್ನು ಹಡಗಿನಿಂದ ಇಳಿಸಲು ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಸೇವೆಗೆ ಗಳುಹಿಸಲಾಯಿತು. ಬೆಂಕಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ ಮತ್ತು ಓರ್ವ ಭಾರತೀಯ ನಾವಿಕ ಹೇಗೆ ಮೃತಪಟ್ಟಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. […]

3000 ಕಾರುಗಳಿದ್ದ ಹಡಗಿದ ಆಕಸ್ಮಿಕ ಬೆಂಕಿ – ಭಾರತೀಯ ನಾವಿಕ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಮೆಟ್ರೋದಲ್ಲಿ ಪ್ರೇಮಿಗಳ ರೊಮ್ಯಾನ್ಸ್- ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ದೆಹಲಿ, ಜು. 27.  ಕಳೆದ ಕೆಲವು ತಿಂಗಳುಗಳಿಂದ ದೆಹಲಿ ಮೆಟ್ರೋಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲ ಪ್ರೇಮಿಗಳು ಮೆಟ್ರೋದಲ್ಲಿ ಅಸಭ್ಯವಾಗಿ ವರ್ತಿಸುತ್ತಾರೆ. ಇತ್ತೀಚೆಗೆ ಪ್ರೇಮಿಗಳ ಮೈಮರೆತು ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ಕೃತ್ಯ ದೆಹಲಿ ಮೆಟ್ರೋಗೆ ಮತ್ತೊಮ್ಮೆ ಕಳಂಕ ತಂದಿದೆ. ವೀಡಿಯೋದಲ್ಲಿ ದಂಪತಿಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸುತ್ತಿರುವುದನ್ನು ಕಾಣಬಹುದು. ಇದೇ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಮೆಟ್ರೋದಲ್ಲಿ ಸಹ ಪ್ರಯಾಣಿಕರಿದ್ದರೂ ಸಹ

ಮೆಟ್ರೋದಲ್ಲಿ ಪ್ರೇಮಿಗಳ ರೊಮ್ಯಾನ್ಸ್- ವಿಡಿಯೋ ವೈರಲ್ Read More »

ರಾಷ್ಟ್ರೀಯ ನ್ಯೂಸ್

ಚಿಕ್ಕಪ್ಪನನ್ನೇ ಮದುವೆಯಾದ ಮಗಳು- ಗ್ರಾಮಸ್ಥರಿಂದ ತೀವ್ರ ಆಕ್ರೋಶ

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜು. 27. ಪ್ರೀತಿ ಮಾಡಲು ಜಾತಿ-ಧರ್ಮ ಮತ್ತು ವಯಸ್ಸಿನ ಅಂತರವಿಲ್ಲವೆಂದು ಭಾವಿಸಿ ಅನೇಕರು ಲವ್ ಮಾಡಿ ಮದುವೆಯಾಗುತ್ತಾರೆ. ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ ಎಂಬ ಮಾತಿನಂತೆ ಇಲ್ಲೋರ್ವಳು ತನ್ನ ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ವಿಚಿತ್ರ ಘಟನೆ ಉತ್ತರಪ್ರದೇಶದ ಜೌನ್‍ಪುರ ಜಿಲ್ಲೆಯ ತಾಜುದ್ದೀನ್‌ ಪುರ ಗ್ರಾಮದಲ್ಲಿ ನಡೆದಿದೆ. ಶುಭಂ ಎನ್ನುವ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗಳನ್ನೇ ಮದುವೆಯಾಗಿದ್ದಾನೆ. ಈ ವಿವಾಹಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಆದರೆ ಇಬ್ಬರೂ ತಮ್ಮ ಕುಟುಂಬಗಳ

ಚಿಕ್ಕಪ್ಪನನ್ನೇ ಮದುವೆಯಾದ ಮಗಳು- ಗ್ರಾಮಸ್ಥರಿಂದ ತೀವ್ರ ಆಕ್ರೋಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

SSLC, PUC ಪಾಸಾದವರಿಗೆ ರೈಲ್ವೇ ಇಲಾಖೆಯಲ್ಲಿ ಭರ್ಜರಿ ಹುದ್ದೆಗಳು – 7784 ಟಿಟಿಇ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 27. ರೈಲ್ವೆ ಇಲಾಖೆಯು ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಮೂಲಕ ನಿರುದ್ಯೋಗಿಗಳಿಗೆ ಅವಕಾಶವನ್ನು ನೀಡುತ್ತಿದೆ. ದೇಶದಲ್ಲಿ ಇತ್ತೀಚಿಗೆ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಲಕ್ಷಾಂತರ ವಿದ್ಯಾವಂತರು ಉದ್ಯೋಗ ಇಲ್ಲದೇ ಈಗಲೂ ಕೂಡ ಖಾಲಿ ಕೂತಿದ್ದಾರೆ. SSLC ಮತ್ತು PUC ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಇದೀಗ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಲಾಗಿದೆ. ನೀವು ಎಸ್ ಎಸ್ ಎಲ್ ಸಿ, ಪಿಯುಸಿ ಪೂರ್ಣಗೊಳಿಸಿದ್ದು ಉದ್ಯೋಗ ಹುಡುಕುತ್ತಿದ್ದರೆ ಇದೀಗ

SSLC, PUC ಪಾಸಾದವರಿಗೆ ರೈಲ್ವೇ ಇಲಾಖೆಯಲ್ಲಿ ಭರ್ಜರಿ ಹುದ್ದೆಗಳು – 7784 ಟಿಟಿಇ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ Read More »

ಉದ್ಯೋಗ, ರಾಷ್ಟ್ರೀಯ ನ್ಯೂಸ್

ವಸತಿ ನಿಲಯದ 19 ವಿದ್ಯಾರ್ಥಿಗಳು ಅಸ್ವಸ್ತ – ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಕಾಸರಗೋಡು, ಜು.27. ವಸತಿ ನಿಲಯದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ. ನೀಲೇಶ್ವರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸತತ ಕೆಮ್ಮು ಕಂಡು ಬಂದುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಭೇಟಿಯಾದ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಅವರು ಯೋಗ ಕ್ಷೇಮ ವಿಚಾರಿಸಿದರು ಎನ್ನಲಾಗಿದೆ.

ವಸತಿ ನಿಲಯದ 19 ವಿದ್ಯಾರ್ಥಿಗಳು ಅಸ್ವಸ್ತ – ಆಸ್ಪತ್ರೆಗೆ ದಾಖಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಪಹರಣಗೈದು ಅತ್ಯಾಚಾರ – ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ)newskadaba.com ಕೊಲ್ಕತ್ತಾ, ಜು.27. ಶಾಲೆಯಿಂದ ಮನೆಗೆ ವಾಪಸ್ಸಾಗುತ್ತಿದ್ದಾಗ ಅಪಹರಣ- ಅತ್ಯಾಚಾರಕ್ಕೆ ಒಳಗಾಗಿದ್ದ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಉತ್ತರ ಬಂಗಾಳ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈ ಪ್ರಕರಣ ಸಂಬಂಧ ಪೊಲೀಸರು ಐದು ಮಂದಿ ಶಂಕಿತರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೈಂಗಿಕ ಕಿರುಕುಳದ ವೇಳೆ ಬಾಲಕಿಯ ಮೆದುಳಿಗೆ ಸಾಕಷ್ಟು ಆಮ್ಲಜನಕ ಪೂರೈಕೆಯಾಗದೇ ಆಕೆ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾಗಿ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿತ್ತು.

ಅಪಹರಣಗೈದು ಅತ್ಯಾಚಾರ – ವಿದ್ಯಾರ್ಥಿನಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಂದೇ ಭಾರತ್​ ರೈಲಿ​ಗೆ ಕಲ್ಲೆಸೆದ ಕಿಡಿಗೇಡಿಗಳು – ಕಿಟಕಿ ಗಾಜುಗಳಿಗೆ ಹಾನಿ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಜು.27. ಆಗ್ರಾ ರೈಲ್ವೇ ವಿಭಾಗದ ಭೋಪಾಲ್‌ನಿಂದ ದೆಹಲಿಯ ನಿಜಾಮುದ್ದೀನ್ ನಿಲ್ದಾಣಕ್ಕೆ ಸಂಚರಿಸುತ್ತಿದ್ದ ವಂದೇ ಭಾರತ್‌ ಎಕ್ಸ್ ಪ್ರೆಸ್‌ ರೈಲಿ​ಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎನ್ನಲಾಗಿದೆ. ರೈಲು ಕೋಚ್‌ನ ಗಾಜುಗಳು ಒಡೆದಿದ್ದು, ರೈಲ್ವೇ ಮೂಲಗಳು ನೀಡಿದ ಮಾಹಿತಿ ಪ್ರಕಾರ, ಆಗ್ರಾದ ಮಾನಿಯಾ ಮತ್ತು ಜಜೌ ನಿಲ್ದಾಣಗಳ ನಡುವೆ ರೈಲು ಸಂಚರಿಸುತ್ತಿದ್ದಾಗ ಕಲ್ಲು ತೂರಲಾಗಿದೆ. ಸಿ-7 ಕೋಚ್‌ನ ಸೀಟ್ ಸಂಖ್ಯೆ 13-14ರ ಕಿಟಕಿ ಗಾಜುಗಳು ಒಡೆದಿವೆ. ರೈಲ್ವೇ ಸಿಬ್ಬಂದಿಯ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ

ವಂದೇ ಭಾರತ್​ ರೈಲಿ​ಗೆ ಕಲ್ಲೆಸೆದ ಕಿಡಿಗೇಡಿಗಳು – ಕಿಟಕಿ ಗಾಜುಗಳಿಗೆ ಹಾನಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಡಿನಲ್ಲಿ ವಿಮಾನ ಪತನ – ಪೈಲಟ್ ಗಳಿಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಜು.26. ಕೆಟ್ಟ ಶಾಖದ ಅಲೆ ಗ್ರೀಸ್ ದೇಶಕ್ಕೆ ಎದುರಾಗಿದೆ. ಇದರಿಂದಾಗಿ ಕಾಡ್ಗಿಚ್ಚು ಎಲ್ಲೆಡೆ ಹಬ್ಬಿದೆ. ಈ ಕಾಡ್ಗಿಚ್ಚನ್ನು ನಂದಿಸಲು ಬಂದಿದ್ದ ಅಗ್ನಿಶಾಮಕ ವಿಮಾನವು ಮರಕ್ಕೆ ಢಿಕ್ಕಿ ಹೊಡೆದು ಪತನಗೊಂಡು ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೆಂಕಿ ನಂದಿಸಲು ಗ್ರೀಕ್ ವಾಟರ್ ಬಾಂಬ್ ವಿಮಾನ ಬಂದಿತ್ತು. ಇನ್ನೂ ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಢಿಕ್ಕಿ ಹೊಡೆದು ಪತನಗೊಂಡಿದೆ ಎಂದು ವರದಿಯಾಗಿದೆ.

ಕಾಡಿನಲ್ಲಿ ವಿಮಾನ ಪತನ – ಪೈಲಟ್ ಗಳಿಬ್ಬರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮತ್ತೊಂದು ಮೈಲಿಗಲ್ಲಿನತ್ತ ಇಸ್ರೋ – ಜುಲೈ 30 ರಂದು PSLV-C56 ಉಪಗ್ರಹ ಉಡಾವಣೆ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜು. 26. ಜುಲೈ 14 ರಂದು ಚಂದ್ರಯಾನ-3 ಮಿಷನ್‌ನ ಯಶಸ್ವಿ ಉಡಾವಣೆ ಮಾಡಿದ ನಂತರ, ಇಸ್ರೋ ಸಂಸ್ಥೆಯು ಪಿಎಸ್‌ಎಲ್‌ವಿ-ಸಿ 56 ಉಡಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ. DS-SAR ಉಪಗ್ರಹವನ್ನು ಜುಲೈ 30 ರಂದು ಬೆಳಿಗ್ಗೆ 6:30 ಕ್ಕೆ ಆರು ಸಹ-ಪ್ರಯಾಣಿಕ ಉಪಗ್ರಹಗಳೊಂದಿಗೆ ಇಸ್ರೋದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಾಗುವುದು ಎಂದು ತಿಳಿಸಿದೆ. ಈ ಮೊದಲು, ಉಡಾವಣೆಯನ್ನು ಜುಲೈ 26ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ಹಲವು ಕಾರಣಗಳಿಂದಾಗಿ ಅದನ್ನು ಜುಲೈ 30ಕ್ಕೆ ಮರು ನಿಗದಿಪಡಿಸಲಾಗಿದೆ.

ಮತ್ತೊಂದು ಮೈಲಿಗಲ್ಲಿನತ್ತ ಇಸ್ರೋ – ಜುಲೈ 30 ರಂದು PSLV-C56 ಉಪಗ್ರಹ ಉಡಾವಣೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಮಲಗಿದ್ದ ಮಗುವಿನ ಬಾಯೊಳಗೆ ಹೋದ ಹಲ್ಲಿ – ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಕೋಬ್ರಾ, ಜು.26. ಮನೆಯಲ್ಲಿ ಹಲ್ಲಿಗಳು ಕಾಣುವುದು ಸಾಮಾನ್ಯ. ಆದರೆ ಈ ಹಲ್ಲಿ ಯಾರನ್ನಾದರೂ ಕೊಲ್ಲುತ್ತದೆ ಎಂದರೆ ನಂಬಲೂ ಸಹ ವಿಚಿತ್ರ ಎನಿಸುತ್ತದೆ. ಇಂತಹ ಘಟನೆಯೊಂದು ಛತ್ತೀಸ್‌ಗಢದ ಕೋಬ್ರಾದಲ್ಲಿ ನಡೆದಿದ್ದು, ಮಗುವಿನ ಬಾಯಿಗೆ ಹಲ್ಲಿ ನುಗ್ಗಿ 3 ವರ್ಷದ ಮಗು ಮೃತಪಟ್ಟಿರುವ ಘಟನೆ ನಡೆದಿದೆ. ರಾಜ್‌ ಕುಮಾರ್ ಚಂಡೆ ಎಂಬುವರ ಕುಟುಂಬವು ನಾಗಿನಬಂಡಾ ಪ್ರದೇಶದಲ್ಲಿ ವಾಸಿಸುತ್ತಿದ್ದು, ಇವರ ಮೂರನೇ ಮಗ ಜಗದೀಶ್ನೇ ಮೃತ ದುರ್ದೈವಿಯಾಗಿದ್ದಾನೆ. ಘಟನೆಯ ವೇಳೆ ಎರಡೂವರೆ ವರ್ಷದ ಜಗದೀಶ್ ಮಲಗಿದ್ದ ಎನ್ನಲಾಗಿದ್ದು, ಈ

ಮಲಗಿದ್ದ ಮಗುವಿನ ಬಾಯೊಳಗೆ ಹೋದ ಹಲ್ಲಿ – ಮಗು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top