ರಾಷ್ಟ್ರೀಯ ನ್ಯೂಸ್

ವಿವಾಹಿತ ಮಹಿಳೆ ಪಕ್ಕದ ಮನೆಯ ಯುವತಿಯೊಂದಿಗೆ ನಾಪತ್ತೆ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಜು. 29. ವಿವಾಹಿತ ಮಹಿಳೆಯೊಬ್ಬಳು ಪಕ್ಕದ ಮನೆ ಯುವತಿಯೊಂದಿಗೆ ಓಡಿ ಹೋಗಿರುವ ವಿಚಿತ್ರ ಪ್ರಕರಣ ಉತ್ತರಪ್ರದೇಶದಿಂದ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಇಬ್ಬರ ನಡುವೆ ಮೊಬೈಲ್ ಫೋನ್‌ ಮೂಲಕ ದಿನಂಪ್ರತಿ ಕನಿಷ್ಠ ಏಳರಿಂದ ಎಂಟು ಗಂಟೆಗಳವರೆಗೆ ಫೋನ್ ಮೂಲಕ ಸಂಭಾಷಣೆ ನಡೆಯುತ್ತಿತ್ತು. ಈ ನಡುವೆ, ಪಕ್ಕದ ಮನೆಯ ಯುವತಿ ಮತ್ತು ವಿವಾಹಿತ ಮಹಿಳೆ ಇದ್ದಕಿದ್ದಂತೆ ನಾಪತ್ತೆ ಆಗಿ ಬಿಟ್ಟಿದ್ದಾರೆ ಎನ್ನಲಾಗಿದೆ. ಪತಿಯೊಂದಿಗೆ ಮಾರುಕಟ್ಟೆಗೆ ತೆರಳಿದ್ದ ವಿವಾಹಿತ ಮಹಿಳೆ ನಿಗೂಢವಾಗಿ ಕಣ್ಮರೆಯಾಗಿದ್ದರಿಂದ ಚಿಂತಿತನಾದ […]

ವಿವಾಹಿತ ಮಹಿಳೆ ಪಕ್ಕದ ಮನೆಯ ಯುವತಿಯೊಂದಿಗೆ ನಾಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಗಸ್ಟ್ 1 ರಿಂದ ಈ ‘ಸ್ಮಾರ್ಟ್ ಪೋನ್’ ಗಳು ಕಾರ್ಯನಿರ್ವಹಿಸಲ್ಲ- ಗೂಗಲ್ ವರದಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 29. ಮೊಬೈಲ್ ಫೋನ್ ಬಳಕೆದಾರರಿಗೆ ಗೂಗಲ್ ಬಿಗ್ ಶಾಕ್ ನೀಡಿದ್ದು, ಆಗಸ್ಟ್ 1 ರಿಂದ ಕೆಲವು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಕಾರ್ಯನಿರ್ವಹಿಸಲ್ಲ. ಕೆಲವು ಸ್ಮಾರ್ಟ್ ಫೋನ್ ಗಳಿಗೆ ಆಂಡ್ರಾಯ್ಡ್ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ ಎನ್ನಲಾಗಿದೆ. 2013ರಲ್ಲಿ ಬಿಡುಗಡೆಯಾದ ಆಂಡ್ರಾಯ್ಡ್ 4.4 ಕಿಟ್ ಕ್ಯಾಟ್ ಗೆ ನೀಡುತ್ತಿದ್ದ ಬೆಂಬಲವನ್ನು ನಿಲ್ಲಿಸಲು ಗೂಗಲ್ ನಿರ್ಧರಿಸಿದೆ. ನಿಮ್ಮ ಸ್ಮಾರ್ಟ್ಫೋನ್ ಕಿಟ್ ಕ್ಯಾಟ್ ಅಥವಾ ಹಿಂದಿನ ಆಂಡ್ರಾಯ್ಡ್ ಆವೃತ್ತಿಯನ್ನು ಆಧರಿಸಿದ್ದರೆ, ಗೂಗಲ್ ತನ್ನ

ಆಗಸ್ಟ್ 1 ರಿಂದ ಈ ‘ಸ್ಮಾರ್ಟ್ ಪೋನ್’ ಗಳು ಕಾರ್ಯನಿರ್ವಹಿಸಲ್ಲ- ಗೂಗಲ್ ವರದಿ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ಆದಾಯ ತೆರಿಗೆದಾರರೇ ಗಮನಿಸಿ- ಐಟಿ ರಿಟರ್ನ್ಸ್ ಗೆ ಕೊನೆಯ 3 ದಿನಗಳು ಬಾಕಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 29. ಆದಾಯ ತೆರಿಗೆದಾರರಿಗೆ ಹಣಕಾಸು ಸಚಿವಾಲಯವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2023 ಏಪ್ರಿಲ್-ಜುಲೈ ವರೆಗಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ನಾಲ್ಕು ತಿಂಗಳ ಅವಧಿಯು ಏಪ್ರಿಲ್ 1 ರಂದು ಪ್ರಾರಂಭಗೊಂಡು ಜುಲೈ 31 ರಂದು ಕೊನೆಗೊಳ್ಳುತ್ತದೆ. ಈ ಗಡುವಿನೊಳಗೆ ನೀವು ನಿಮ್ಮ ಐಟಿಆರ್ ಸಲ್ಲಿಸದಿದ್ದಲ್ಲಿ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ನೀವು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯಬಹುದು. ಜುಲೈ 31 ರ ಗಡುವನ್ನು

ಆದಾಯ ತೆರಿಗೆದಾರರೇ ಗಮನಿಸಿ- ಐಟಿ ರಿಟರ್ನ್ಸ್ ಗೆ ಕೊನೆಯ 3 ದಿನಗಳು ಬಾಕಿ Read More »

ರಾಷ್ಟ್ರೀಯ ನ್ಯೂಸ್

ಹಿಮಾಲಯದ ಮೇಲೆ ಪುರಾತನ ಸಮುದ್ರ ಸಂಶೋಧಿಸಿದ ವಿಜ್ಞಾನಿಗಳು

(ನ್ಯೂಸ್ ಕಡಬ)newskadaba.com ನವದೆಹಲಿ, ಜು.29. ಜಪಾನ್​ನ ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಮತ್ತು ನಿಗಾಟಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಿಮಾಲಯದಲ್ಲಿ ಪ್ರಾಚೀನ ಸಮುದ್ರದ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. 700 ರಿಂದ 500 ದಶಲಕ್ಷ ವರ್ಷಗಳ ಹಿಂದೆ, ಭೂಮಿಯು ಹಿಮದ ಉಂಡೆಯ ರೀತಿ ಇದ್ದು ದೀರ್ಘಕಾಲದ ಹಿಮಯುಗಕ್ಕೆ ಒಳಗಾಯಿತು ಎಂದು ವಿಜ್ಞಾನಿಗಳು ಸಿದ್ಧಾಂತ ವ್ಯಕ್ತಪಡಿಸಿದ್ದಾರೆ. ಖನಿಜ ನಿಕ್ಷೇಪಗಳಲ್ಲಿ ಸಿಕ್ಕಿಬಿದ್ದ ನೀರಿನ ಹನಿಗಳನ್ನು ತಂಡವು ಕಂಡುಹಿಡಿದಿದ್ದು ಸಂಶೋಧನೆ, ಭೂಮಿಯಲ್ಲಿ ಹಿಂದೆ ನಡೆದ ಮಹತ್ವದ ಆಮ್ಲಜನಕೀಕರಣ ಹಾಗೂ ಜೀವದ ಅಭಿವೃದ್ಧಿಯ

ಹಿಮಾಲಯದ ಮೇಲೆ ಪುರಾತನ ಸಮುದ್ರ ಸಂಶೋಧಿಸಿದ ವಿಜ್ಞಾನಿಗಳು Read More »

ರಾಷ್ಟ್ರೀಯ ನ್ಯೂಸ್

ಸೇನಾ ಹೆಲಿಕಾಪ್ಟರ್ ಪತನ – ನಾಲ್ವರು ಸಿಬ್ಬಂದಿಗಳು ನಾಪತ್ತೆ !!

(ನ್ಯೂಸ್ ಕಡಬ)newskadaba.com ಆಸ್ಟ್ರೇಲಿಯಾ, ಜು.29. ಸೇನಾ ಹೆಲಿಕಾಪ್ಟರ್ ಪತನವಾಗಿ ನಾಲ್ವರು ಅದೃಶ್ಯವಾಗಿರುವ ಘಟನೆ ಆಸ್ಟ್ರೇಲಿಯಾದಲ್ಲಿ ವರದಿಯಾಗಿದೆ. ಆಸ್ಟ್ರೇಲಿಯಾದ ಈಶಾನ್ಯ ಕರಾವಳಿಯಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿದ್ದಾಗ ಸೇನಾ ಹೆಲಿಕಾಪ್ಟರ್ ನೀರಿನಲ್ಲಿ ಮುಳುಗಿದ್ದು, ನಾಲ್ವರು ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಹೇಳಿದ್ದಾರೆ. ಸೇನಾ ಅಭ್ಯಾಸ ನಡೆಸುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿದ್ದು, ನಾಲ್ವರು ಏರ್ ಸಿಬ್ಬಂದಿ ಕಾಣೆಯಾಗಿದ್ದಾರೆ. ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ನಡೆಯುತ್ತಿದ್ದು, ಕಾಣೆಯಾದವರಿಗಾಗಿ ಶೋಧ ನಡೆಯುತ್ತಿದೆ.

ಸೇನಾ ಹೆಲಿಕಾಪ್ಟರ್ ಪತನ – ನಾಲ್ವರು ಸಿಬ್ಬಂದಿಗಳು ನಾಪತ್ತೆ !! Read More »

ರಾಷ್ಟ್ರೀಯ ನ್ಯೂಸ್

16 ವರ್ಷದ ಬಾಲಕಿಯ ಅಪಹರಿಸಿ ರೇಪ್ – ಆರೋಪಿ 15 ವರ್ಷದ ಬಾಲಕ ವಶಕ್ಕೆ !!

(ನ್ಯೂಸ್ ಕಡಬ)newskadaba.com ಬಲ್ಲಿಯಾ, ಜು.28. ನೆರೆಮನೆಯ ಹದಿಹರೆಯದ ಹುಡುಗಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 15 ವರ್ಷದ ಹುಡುಗನನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರಪ್ರದೇಶದ ಬಲ್ಲಿಯಾ ಪೊಲೀಸರು ತಿಳಿಸಿದ್ದಾರೆ. ಕಳವಳಕಾರಿ ಘಟನೆ ಸಂಬಂಧ 16 ವರ್ಷದ ಬಾಲಕಿಯ ತಾಯಿ ದೂರು ದಾಖಲಿಸಿದ್ದರು. ಆಕೆಯ ಆರೋಪಗಳ ಪ್ರಕಾರ, ಹುಡುಗ ಜುಲೈ 19 ರಂದು ಮಗಳನ್ನು ಅಪಹರಿಸಿದ್ದಾನೆ. ”ಅಪ್ರಾಪ್ತ ವಯಸ್ಕ ಬಾಲಕಿಯನ್ನು ಆರೋಪಿಯ ಮನೆಯ ಸಮೀಪದಿಂದ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಹುಡುಗಿಯ ಗುರುತಿನ ಮೇಲೆ ನಾವು ಆರೋಪಿ ಹುಡುಗನನ್ನು ಹಿಡಿದಿದ್ದೇವೆ

16 ವರ್ಷದ ಬಾಲಕಿಯ ಅಪಹರಿಸಿ ರೇಪ್ – ಆರೋಪಿ 15 ವರ್ಷದ ಬಾಲಕ ವಶಕ್ಕೆ !! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಾರತೀಯ ನೌಕಾಪಡೆಯ ನಾವಿಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಕೊಚ್ಚಿ, ಜು.28. ಭಾರತೀಯ ನೌಕಾಪಡೆಯ 19 ವರ್ಷದ ನಾವಿಕನೊಬ್ಬನ ಮೃತದೇಹ INS ವಿಕ್ರಾಂತ್ ಹಡಗಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಚ್ಚಿಯಲ್ಲಿ ನಡೆದಿದೆ. ಪ್ರಸ್ತುತ ನೌಕೆಯನ್ನು ಕೊಚ್ಚಿ ಕರಾವಳಿಯಲ್ಲಿ ನಿಲ್ಲಿಸಲಾಗಿದೆ. ಘಟನೆಯ ಕುರಿತು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹೇಳಿದ್ದು, ನಾವಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ನಾವಿಕ ಬಿಹಾರದ ಮುಜಾಫರ್ ಪುರದ ಮೂಲದವರಾಗಿದ್ದು, ಸಾಮಾನ್ಯ ಕೇಡರ್ ಆಗಿದ್ದು, ಕೇಂದ್ರದ ಅಗ್ನಿವೀರ್ ಯೋಜನೆಯ ಮೂಲಕ ನೇಮಕಗೊಂಡಿಲ್ಲ ಎಂದು ವರದಿಯಾಗಿದೆ.

ಭಾರತೀಯ ನೌಕಾಪಡೆಯ ನಾವಿಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಸೀದಿ ಸ್ಫೋಟದ ಅಪರಾಧಿ ಸೇರಿ ಐವರಿಗೆ ಗಲ್ಲು ಶಿಕ್ಷೆ  

(ನ್ಯೂಸ್ ಕಡಬ)newskadaba.com ದುಬೈ, ಜು.28. ‘2015ರಲ್ಲಿ ನಡೆದಿದ್ದ ಮಸೀದಿ ಸ್ಫೋಟ ಪ್ರಕರಣದ ಅಪರಾಧಿ ಸೇರಿದಂತೆ ಐವರನ್ನು ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿದೆ’ ಎಂದು ಪಬ್ಲಿಕ್‌ ಪ್ರಾಸಿಕ್ಯೂಷನ್‌ ತಿಳಿಸಿದೆ. ಸ್ಫೋಟದಲ್ಲಿ 27 ಮಂದಿ ಮೃತಪಟ್ಟಿದ್ದರು ಎನ್ನಲಾಗಿದೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಹೊತ್ತುಕೊಂಡಿತ್ತು ಎನ್ನಲಾಗಿದೆ. ‘ಈ ಐವರಲ್ಲಿ ಮಸೀದಿ ದಾಳಿಯಲ್ಲಿ ಶಿಕ್ಷೆಗೊಳಗಾದ ಅಬ್ದುಲ್ ರಹ್ಮಾನ್ ಸಬಾ ಇದಾನ್‌, ಕೊಲೆ ಶಿಕ್ಷೆಗೊಳಗಾದ ಮೂವರು ಮತ್ತು ಮಾದಕ ವಸ್ತು ಕಳ್ಳಸಾಗಣೆ ಅಪರಾಧಿಯಾದ ಶ್ರೀಲಂಕಾದ ವ್ಯಕ್ತಿ ಸೇರಿದ್ದಾರೆ’ ಎಂದು ಪಬ್ಲಿಕ್‌

ಮಸೀದಿ ಸ್ಫೋಟದ ಅಪರಾಧಿ ಸೇರಿ ಐವರಿಗೆ ಗಲ್ಲು ಶಿಕ್ಷೆ   Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ – ಆರೋಪಿಯ ಮೊಬೈಲ್ ವಶ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 28. ಮಣಿಪುರದಲ್ಲಿ ಮಹಿಳೆಯ ನಗ್ನ ಮೆರವಣಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ಇದೀಗ ಘಟನೆಯ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿಯನ್ನೂ ಬಂಧಿಸಿ ಆತನ ಮೊಬೈಲ್ ಫೋನ್ ನ್ನು ಜಪ್ತಿ ಮಾಡಲಾಗಿದೆ ಎಂದು ವರದಿಯಾಗಿದೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ದೌರ್ಜನ್ಯ ಎಸಗಿರುವ ಪ್ರಕರಣವನ್ನು ಕೇಂದ್ರ ಸರ್ಕಾರ ಕೇಂದ್ರ ಗುಪ್ತಚರ ಸಂಸ್ಥೆಗೆ ತನಿಖೆಗೆ ವಹಿಸಲಿದೆ ಎಂದೂ ವರದಿಯಾಗಿದೆ. ಇನ್ನು ಮೇ. 4 ರಂದು ಮಣಿಪುರದಲ್ಲಿ ಎರಡು ಬಣಗಳ

ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ – ಆರೋಪಿಯ ಮೊಬೈಲ್ ವಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ಟಾರ್(*) ಚಿಹ್ನೆ ಹೊಂದಿರುವ ನೋಟುಗಳಿಗೆ ಮಾನ್ಯತೆಯಿದೆ, ಗೊಂದಲ ಬೇಡ – ಆರ್.ಬಿಐ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 28. ಸ್ಟಾರ್‌(*) ಚಿಹ್ನೆ ಇರುವ ನೋಟುಗಳು ಇತರೆ ನೋಟುಗಳಂತೆಯೇ ಮಾನ್ಯವಾಗಿರುತ್ತದೆ, ಹಾಗಾಗಿ ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಪಷ್ಟನೆ ನೀಡಿದೆ. ಕರೆನ್ಸಿ ನೋಟುಗಳು ಸ್ಟಾರ್‌ ಚಿಹ್ನೆಯನ್ನು ಹೊಂದಿವೆ ಎಂಬುದನ್ನು ಆರ್‌ಬಿಐ ಈಗಾಗಲೇ ಸ್ಪಷ್ಟಪಡಿಸಿದ್ದು, ಈ ಚಿಹ್ನೆ ಇರುವ ಕರೆನ್ಸಿ ನೋಟುಗಳು ಇತರ ಕರೆನ್ಸಿ ನೋಟುಗಳಂತೆ ಮಾನ್ಯವಾಗಿರುತ್ತವೆ ಎಂದು ಸ್ಪಷ್ಟಪಡಿಸಿದೆ. ಇನ್ನು ಈ ಚಿಹ್ನೆಯಿರುವಂಥ ನೋಟುಗಳು ಮಾನ್ಯವಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ಹಿನ್ನೆಲೆ

ಸ್ಟಾರ್(*) ಚಿಹ್ನೆ ಹೊಂದಿರುವ ನೋಟುಗಳಿಗೆ ಮಾನ್ಯತೆಯಿದೆ, ಗೊಂದಲ ಬೇಡ – ಆರ್.ಬಿಐ ಸ್ಪಷ್ಟನೆ Read More »

ರಾಷ್ಟ್ರೀಯ ನ್ಯೂಸ್
Scroll to Top