ರಾಷ್ಟ್ರೀಯ ನ್ಯೂಸ್

2027ರೊಳಗೆ 11 ಕೋಟಿ ರೈತರಿಗೆ ‘ಡಿಜಿಟಲ್‌ ಐಡಿ’ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದ ಸರ್ಕಾರ

(ನ್ಯೂಸ್ ಕಡಬ) newskadaba.com  ನವದೆಹಲಿ, ಸೆ. 5. ರೈತ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2027ರೊಳಗೆ 11 ಕೋಟಿ ರೈತರಿಗೆ ‘ಡಿಜಿಟಲ್‌ ಐಡಿ’ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದೆ. ಇದು ಆಧಾರ್ ಕಾರ್ಡ್‌ನಂತೆಯೇ ಇರುತ್ತದೆ. ರೈತರಿಗೆ ಪ್ರಮುಖ ಸೇವೆಗಳು ಮತ್ತು ಯೋಜನೆಗಳನ್ನು ತಲುಪಿಸುವ ರೈತ ಕೇಂದ್ರಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ)ದಂತೆ ರಚಿಸಿರುವ ಅಗ್ರಿಸ್ಟಾಕ್ ಉಪಕ್ರಮದ ಭಾಗವಾಗಿರುವುದು ಇದರ ಗುರಿಯಾಗಿದೆ. ಆಧಾರ್ ಕಾರ್ಡ್‌ನಂತೆಯೇ ರೈತರಿಗೆ ‘ರೈತ ಗುರುತಿನ ಚೀಟಿ ಪರಿಚಯಿಸುವುದು ಅಗ್ರಿಸ್ಟ್ಯಾಕ್‌ನ ಪ್ರಮುಖ ವೈಶಿಷ್ಟ್ಯವಾಗಿದೆ. 2024-25ರ […]

2027ರೊಳಗೆ 11 ಕೋಟಿ ರೈತರಿಗೆ ‘ಡಿಜಿಟಲ್‌ ಐಡಿ’ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

ಲೈಂಗಿಕ ದೌರ್ಜನ್ಯದ ಅಪರಾಧಿಗಳಿಗೆ 5 ವರ್ಷ ನಿಷೇಧ- ದಕ್ಷಿಣ ಭಾರತೀಯ ಕಲಾವಿದರ ಸಂಘ

(ನ್ಯೂಸ್ ಕಡಬ) newskadaba.com ತಮಿಳುನಾಡು, ಸೆ. 05. ಲೈಂಗಿಕ ದೌರ್ಜನ್ಯಗಳಲ್ಲಿ ತಪ್ಪಿತಸ್ಥ ವ್ಯಕ್ತಿಗಳಿಗೆ ಚಲನಚಿತ್ರೋದ್ಯಮದಿಂದ 5 ವರ್ಷಗಳ ಕಾಲ ನಿಷೇಧವನ್ನು ವಿಧಿಸುವ ಕುರಿತು ದಕ್ಷಿಣ ಭಾರತೀಯ ಕಲಾವಿದರ ಸಂಘ (SIAA) ಮಹತ್ವದ ನಿರ್ಣಯವೊಂದನ್ನು ಲಿಂಗ ಸಂವೇದನೆ ಮತ್ತು ಆಂತರಿಕ ದೂರುಗಳ ಸಮಿತಿ (GSICC) ಸಭೆಯಲ್ಲಿ ಅಂಗೀಕರಿಸಿರುವ ಕುರಿತು ಮಾಧ್ಯಮ ವರದಿ ಪ್ರಕಟಿಸಿದೆ. ಅಲ್ಲದೇ ತಮಿಳು ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರಿಗೆ GSICC ಎಲ್ಲಾ ಕಾನೂನು ನೆರವು ನೀಡಲಿದೆ ಎಂದು ನಿರ್ಣಯವು ಹೇಳಿದೆ. ಈ ಪ್ರಕಾರ, ಸಂತ್ರಸ್ತರು ತಮ್ಮ

ಲೈಂಗಿಕ ದೌರ್ಜನ್ಯದ ಅಪರಾಧಿಗಳಿಗೆ 5 ವರ್ಷ ನಿಷೇಧ- ದಕ್ಷಿಣ ಭಾರತೀಯ ಕಲಾವಿದರ ಸಂಘ Read More »

ರಾಷ್ಟ್ರೀಯ ನ್ಯೂಸ್, ಸಿನಿಮಾ

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ವೈದ್ಯ ಅರೆಸ್ಟ್  

(ನ್ಯೂಸ್ ಕಡಬ) newskadaba.com  ಚೆನ್ನೈ, ಸೆ. 5. ತಿರುಚ್ಚಿಯ ಸರ್ಕಾರಿ ಅನುದಾನಿತ ಶಾಲಾ ಹಾಸ್ಟೆಲ್‌ ನಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವೈದ್ಯನೋರ್ವನನ್ನು ಬಂಧಿಸಲಾಗಿದೆ. ಎಸ್ ಸ್ಯಾಮ್ಸನ್ ಡೇನಿಯಲ್(31) ಬಂಧಿತ ವೈದ್ಯ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2017ರಲ್ಲಿ ಪುದುಚೇರಿಯಿಂದ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದ ನಂತರ 2021ರಲ್ಲಿ ತನ್ನ ಸರ್ಕಾರಿ ಸೇವೆಯನ್ನು ಪ್ರಾರಂಭಿಸಿದ್ದ ಆರೋಪಿ ಸ್ಯಾಮ್ಸನ್, ತಿರುಚಿರಾಪಳ್ಳಿಗೆ ವರ್ಗಾವಣೆಯಾಗುವ ಮೊದಲು ತೂತುಕುಡಿಯಲ್ಲಿದ್ದನು

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ವೈದ್ಯ ಅರೆಸ್ಟ್   Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

3ನೇ ಪ್ರಯತ್ನದಲ್ಲಿ ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಶಿವಿಕಾ ಹನ್ಸ್

(ನ್ಯೂಸ್ ಕಡಬ) newskadaba.com  ಪಂಜಾಬ್, ಸೆ. 5. ಯುಪಿಎಸ್‌ಸಿ ಪರೀಕ್ಷೆ ಅದೆಷ್ಟೋ ಜನರ ಕನಸಾಗಿರುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಅಷ್ಟು ಸುಲಭದ ಮಾತಲ್ಲ. ಹೀಗೆ ತಮ್ಮ ಎರಡು ಪ್ರಯತ್ನಗಳ ಬಳಿಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಶಿವಿಕಾ ಹನ್ಸ್ ಅವರ ಸ್ಫೂರ್ತಿದಾಯಕ ಕಥೆ ಇದು. ಶಿವಿಕಾ ಹನ್ಸ್ ಅವರು ಪಂಜಾಬ್ ನ ಪಟಿಯಾಲಾದ ರಾಜಪುರ ನಗರದ ನಿವಾಸಿಯಾಗಿದ್ದಾರೆ. ಶಿವಿಕಾ ಅವರ ತಂದೆ ರಾಜಪುರದಲ್ಲಿ ಫೋಟೋಗ್ರಫಿ ಮಳಿಗೆ ಹೊಂದಿದ್ದಾರೆ ಮತ್ತು ಅವರ ತಾಯಿ ಗೃಹಿಣಿ. ಅವರಿಗೆ ಕಿರಿಯ

3ನೇ ಪ್ರಯತ್ನದಲ್ಲಿ ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಶಿವಿಕಾ ಹನ್ಸ್ Read More »

ರಾಷ್ಟ್ರೀಯ ನ್ಯೂಸ್

ಹೆಣ್ಣು ಭ್ರೂಣ ಹತ್ಯೆ ಪ್ರಕರಣ- 12 ಆರೋಪಿಗಳು ಅರೆಸ್ಟ್..!   23 ಲಕ್ಷ ಮೌಲ್ಯದ ವಸ್ತುಗಳು ವಶ

(ನ್ಯೂಸ್ ಕಡಬ) newskadaba.com  ಮಂಡ್ಯ, ಸೆ. 5. ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಅಭಿಷೇಕ್​ ಎಂಬಾತನನ್ನು ಬಂಧಿಸಲಾಗಿದೆ. ಸಾವಿರಾರು ಕರುಳಬಳ್ಳಿ ಕೊಂದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಐಡಿಗೂ ಚಳ್ಳೆಹಣ್ಣು ತಿನ್ನಿಸಿ ದಂಧೆ ವಿಸ್ತರಿಸಿದ್ದ ಅಭಿಷೇಕ್​ ಪ್ರಮುಖ ಆರೋಪಿಯಾಗಿದ್ದಾನೆ. ಅಭಿಷೇಕ್ ಜೊತೆ ವಿರೇಶ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ. ಈಗಾಗಲೇ ಭ್ರೂಣ ಹತ್ಯೆ ಕೇಸ್ ​ನಲ್ಲಿ ವಿರೇಶ್​ ಜೈಲು ಸೇರಿ ಬೇಲ್ ಮೇಲೆ ಹೊರ ಬಂದಿದ್ದ. ಬಂಧಿತರಿಂದ 2 ಸ್ಕ್ಯಾನಿಂಗ್ ಮಷಿನ್,

ಹೆಣ್ಣು ಭ್ರೂಣ ಹತ್ಯೆ ಪ್ರಕರಣ- 12 ಆರೋಪಿಗಳು ಅರೆಸ್ಟ್..!   23 ಲಕ್ಷ ಮೌಲ್ಯದ ವಸ್ತುಗಳು ವಶ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ- ಕೊಲೆ ಪ್ರಕರಣ ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅಮಾನತು

(ನ್ಯೂಸ್ ಕಡಬ) newskadaba.com  ಕೋಲ್ಕತ್ತಾ, ಸೆ. 4. ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಪಶ್ಚಿಮಬಂಗಾಳದ ಆರೋಗ್ಯ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಡಾ.ಸಂದೀಪ್ ಘೋಷ್ ಅವರನ್ನು ಬಂಧಿಸಿತ್ತು. ಆಸ್ಪತ್ರೆಯೊಳಗೆ ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದ 26 ದಿನಗಳ ಬಳಿಕ ಡಾ.ಸಂದೀಪ್ ಘೋಷ್ ಅವರನ್ನು ಅಮಾನತುಗೊಳಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಈಗಾಗಲೇ ಸೆಕ್ಯುರಿಟಿ ಗಾರ್ಡ್

ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ- ಕೊಲೆ ಪ್ರಕರಣ ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅಮಾನತು Read More »

ರಾಷ್ಟ್ರೀಯ ನ್ಯೂಸ್

ಆರ್ಕೆಸ್ಟ್ರಾ ಪ್ರದರ್ಶನದ ವೇಳೆ ಛಾವಣಿ ಕುಸಿತ ಹಲವರಿಗೆ ಗಾಯ          

(ನ್ಯೂಸ್ ಕಡಬ) newskadaba.com  ಬಿಹಾರ, ಸೆ. 4. ಆರ್ಕೆಸ್ಟ್ರಾ ಪ್ರದರ್ಶನದ ವೇಳೆ ತವರದ ಛಾವಣಿ (ಟಿನ್ ರೂಫ್) ಕುಸಿದು ಹಲವರು ಗಾಯಗೊಂಡ ಘಟನೆ ನಡೆದಿದೆ. ಛಪ್ರಾದ ಇಸುಪಾರ್ ನಲ್ಲಿ ನಡೆದ ಮಹಾವೀರ ಮೇಳದ ವೇಳೆ ಈ ಘಟನೆ ನಡೆದಿದೆ. ಛಾಪ್ರಾ ನಗರದಲ್ಲಿ ನೂರಾರು ಜನರು ತವರದ ಛಾವಣಿಯ ಮೇಲೆ ನಿಂತು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾಗ ಟಿನ್ ರೂಫ್ ತುಂಡಾಗಿ ಅದರ ಕೆಳಗೆ ನಿಂತಿದ್ದ ನೂರಾರು ಜನರ ಮೇಲೆ ಬಿದ್ದಿದೆ. ಇದರಿಂದಾಗಿ ಅನೇಕರು ಗಾಯಗೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಎರಡು

ಆರ್ಕೆಸ್ಟ್ರಾ ಪ್ರದರ್ಶನದ ವೇಳೆ ಛಾವಣಿ ಕುಸಿತ ಹಲವರಿಗೆ ಗಾಯ           Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ- ತಮಿಳರ ಕ್ಷಮೆ ಕೇಳಿದ ಸಚಿವೆ ಶೋಭಾ ಕರಂದ್ಲಾಜೆ..!

(ನ್ಯೂಸ್ ಕಡಬ) newsksdaba.com ತಮಿಳುನಾಡು, ಸೆ. 04. ಇತ್ತೀಚೆಗೆ ನಡೆದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೂ ತಮಿಳರಿಗೂ ಸಂಬಂಧವಿದೆ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಮಿಳರ ಕ್ಷಮೆ ಯಾಚಿಸಿದ್ದಾರೆ. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಶೋಭಾ ಕರಂದ್ಲಾಜೆ ಪರವಾಗಿ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣ ನಿನ್ನೆ ಮತ್ತೆ ವಿಚಾರಣೆಗೆ ಬಂದಿತ್ತು.ಕೋರ್ಟಿನಲ್ಲಿ ಶೋಭಾ ಪರ ವಾದ ಮಂಡಿಸಿದ ವಕೀಲರು, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸುವುದಾಗಿ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ- ತಮಿಳರ ಕ್ಷಮೆ ಕೇಳಿದ ಸಚಿವೆ ಶೋಭಾ ಕರಂದ್ಲಾಜೆ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೋವಿಡ್-19 ಸಮಯದಲ್ಲಿ ಶೇ. 80 ರಷ್ಟು ಪತ್ರಕರ್ತರ ಸ್ವಯಂ ನಿವೃತ್ತಿ ವಜಾ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸಮಿತಿ ವರದಿ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಸೆ. 04.  ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚಿನ ಪತ್ರಕರ್ತರಿಗೆ ರಾಜೀನಾಮೆ ನೀಡಲು ಮತ್ತು ಸ್ವಯಂ ನಿವೃತ್ತಿಗೆ ಒತ್ತಾಯಿಸಲಾಗಿದೆ, ಇದಲ್ಲದೆ ಕೆಲ ಸಂಸ್ಥೆಗಳು ಪತ್ರಕರ್ತರನ್ನು ಸ್ಪಷ್ಟಕಾರಣ ನೀಡದೆ ಬಲವಂತವಾಗಿ ವಜಾಗೊಳಿಸಿದೆ ಎಂಬ ಅಂಶವನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ. COVID-19 ಸಾಂಕ್ರಾಮಿಕ ಸಮಯದಲ್ಲಿ ವಿವಿಧ ಮಾಧ್ಯಮ ಸಮೂಹದಿಂದ ಪತ್ರಕರ್ತರನ್ನು ಪದಚ್ಯುತಿಗೊಳಿಸಿರುವ ಕುರಿತು ಅಧ್ಯಯನ ಮಾಡಲು ಸಮಿತಿಯನ್ನು ಭಾರತೀಯ ಪ್ರೆಸ್ ಕೌನ್ಸಿಲ್ ಈ ಮೊದಲು ರಚಿಸಿತ್ತು.

ಕೋವಿಡ್-19 ಸಮಯದಲ್ಲಿ ಶೇ. 80 ರಷ್ಟು ಪತ್ರಕರ್ತರ ಸ್ವಯಂ ನಿವೃತ್ತಿ ವಜಾ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸಮಿತಿ ವರದಿ Read More »

ರಾಷ್ಟ್ರೀಯ ನ್ಯೂಸ್

ಕಸ ಗುಡಿಸುವ ಹುದ್ದೆಗಳಿಗೆ 46,000 ಮಂದಿ ಸ್ನಾತಕೋತ್ತರ, ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ

(ನ್ಯೂಸ್ ಕಡಬ) newskadaba.com  ಚಂಡೀಗಢ, ಸೆ. 04.  ಹರ್ಯಾಣದ ಸರಕಾರಿ ಇಲಾಖೆಗಳು, ಮಂಡಳಿಗಳು, ನಿಗಮಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿನ ಕಸ ಗುಡಿಸುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸುಮಾರು 46,000 ಮಂದಿ ಸ್ನಾತಕೋತ್ತರ ಹಾಗೂ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹರ್ಯಾಣ ಸರಕಾರ ಹೊರಡಿಸಿರುವ ಉದ್ಯೋಗ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಮಾಸಿಕ ರೂ. 15,000 ವೇತನ ನಿಗದಿಪಡಿಸಲಾಗಿದ್ದು, ಹುದ್ದೆಗಳ ನಿರ್ದಿಷ್ಟ ಸಂಖ್ಯೆಯನ್ನು ಪ್ರಕಟಿಸಲಾಗಿಲ್ಲ. ಈ

ಕಸ ಗುಡಿಸುವ ಹುದ್ದೆಗಳಿಗೆ 46,000 ಮಂದಿ ಸ್ನಾತಕೋತ್ತರ, ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ Read More »

ರಾಷ್ಟ್ರೀಯ ನ್ಯೂಸ್
Scroll to Top