ಅಂತರ್ರಾಷ್ಟ್ರೀಯ ನ್ಯೂಸ್

ಕೌಲಾಲಂಪುರ್ ಭೂಕುಸಿತ ➤ 60ಕ್ಕೂ ಹೆಚ್ಚು ಮಂದಿ ನಾಪತ್ತೆ!

(ನ್ಯೂಸ್‌ ಕಡಬ) newskadaba.com ಕೌಲಾಲಂಪುರ್, ಡಿ. 16. ಕೌಲಾಲಂಪುರ್ ಮಲೇಷ್ಯಾದ ಕ್ಯಾಪ್ ಸೈಟ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟು, 60ಕ್ಕೂ ಹೆಚ್ಚು ಜನರು ನಾಪತ್ತೆಯಾದ ಘಟನೆ ವರದಿಯಾಗಿದೆ.   ಕೌಲಾಲಂಪುರ್ ನ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ಸುಮಾರು 3 ಗಂಟೆಗಳ ಕಾಲ ಕ್ಯಾಂಪಿಂಗ್ ಒದಗಿಸುವ ಫಾರ್ಮ್ ಹೌಸ್  ಬಳಿಯ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದಲ್ಲಿ 79 ಮಂದಿ ಸಿಲುಕಿದ್ದು, 23 ಮಂದಿ ಸುರಕ್ಷಿತವಾಗಿದ್ದಾರೆ ಎಂದೆನ್ನಲಾಗಿದೆ.

ಕೌಲಾಲಂಪುರ್ ಭೂಕುಸಿತ ➤ 60ಕ್ಕೂ ಹೆಚ್ಚು ಮಂದಿ ನಾಪತ್ತೆ! Read More »

ಅಂತರ್ರಾಷ್ಟ್ರೀಯ ನ್ಯೂಸ್

ಹಾಲಿವುಡ್ ನಟ ಸ್ಟೀಫನ್ ಬಾಸ್ ಆತ್ಮಹತ್ಯೆ..?

(ನ್ಯೂಸ್ ಕಡಬ) newskadaba.com ಅಮೇರಿಕಾ, ಡಿ 15. ಹಾಲಿವುಡ್ ನ ಖ್ಯಾತ ನಟ, ಡ್ಯಾನ್ಸರ್, ಹಾಗೂ ಡಿಜೆ ಸ್ಟೀಫನ್ ಬಾಸ್ ಮೃತಪಟ್ಟಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ಡಿ. 13 ರಂದು ಅವರ ಮೃತದೇಹ ಹೋಟೇಲೊಂದರ ಕೋಣೆಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಸ್ಟೀಫನ್ ಬಾಸ್ ಸೋಮವಾರ (ಡಿ. 12) ರಾತ್ರಿ ತಂಗಲು ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ್ದರು. ಈ ಹೋಟೆಲ್ ತಮ್ಮ ಪತ್ನಿ ಆಲಿಸನ್ ಹೋಲ್ಕರ್ ಮತ್ತು ಅವರ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಒಂದು ಮೈಲಿಗಿಂತಲೂ ಕಡಿಮೆ

ಹಾಲಿವುಡ್ ನಟ ಸ್ಟೀಫನ್ ಬಾಸ್ ಆತ್ಮಹತ್ಯೆ..? Read More »

ಅಂತರ್ರಾಷ್ಟ್ರೀಯ ನ್ಯೂಸ್

ದುಬೈ, ಕುವೈಟ್ ನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.15. ದುಬೈ ಮತ್ತು ಕುವೈಟ್ ದೇಶಗಳಲ್ಲಿ ಮನೆ ಕೆಲಸ ನಿರ್ವಹಿಸಲು ಒಟ್ಟು 800 ಜನ ಮಹಿಳಾ ಕೆಲಸಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು 30-45 ವಯೋಮಿತಿಯಲ್ಲಿರಬೇಕು. ಪಾಸ್ ಪೋರ್ಟ್ ಹೊಂದಿರಬೇಕು. ಟಿಕೆಟ್ ಮತ್ತು ವೀಸಾ ವೆಚ್ಚವನ್ನು ವಿದೇಶಿ ನಿಯೋಜಕರು ಭರಿಸಲಿದ್ದು,  ಎರಡು ವರ್ಷಗಳ ಸೇವಾವಧಿ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಉರ್ವ ಮಾರುಕಟ್ಟೆಯ ಕಟ್ಟಡದ ಎರಡನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಸಂಯೋಜಕರ ಮೊ.ಸಂ: 9110248485 ಅನ್ನು ಸಂಪರ್ಕಿಸುವಂತೆ

ದುಬೈ, ಕುವೈಟ್ ನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ Read More »

ಅಂತರ್ರಾಷ್ಟ್ರೀಯ ನ್ಯೂಸ್

ಯುಕೆನಲ್ಲಿ ಶುಶ್ರೂಷಕರ ನೇಮಕಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.15. ಯುನೈಟೆಡ್ ಕಿಂಗ್ ಡಮ್‍ನಲ್ಲಿ ಶುಶ್ರೂಷಕರ ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಿಂಗಳಿಗೆ ಗರಿಷ್ಠ 2 ಲಕ್ಷ ರೂ.ಗಳ ವೇತನದೊಂದಿಗೆ 3 ತಿಂಗಳು ಉಚಿತ ವಸತಿ ವ್ಯವಸ್ಥೆ ನೀಡಲಾಗುವುದು. ಹುದ್ದೆಯ ಅರ್ಹತೆಯ ವಿವರ ಇಂತಿವೆ: ಬಿ.ಎಸ್ಸಿ ನರ್ಸಿಂಗ್, ಜಿಎನ್‍ಎಮ್ ಹಾಗೂ ಪಿಬಿಬಿಎಸ್ಸಿ ನರ್ಸಿಂಗ್‍ನಲ್ಲಿ 6 ತಿಂಗಳು ಮತ್ತು ಮೇಲ್ಪಟ್ಟ ಅನುಭವ ಹೊಂದಿದ್ದು, ಐಇಎಲ್‍ಟಿಎಸ್-ಬಾನ್ಡ್ 7 ಅಥವಾ ಒಇಟಿ-ಗ್ರೇಡ್ ಬಿ, ಅರ್ಹತೆ ಹೊಂದಿದ್ದು, ಗರಿಷ್ಠ 50 ವರ್ಷದವರಾಗಿರಬೇಕು. ಆಸಕ್ತರು

ಯುಕೆನಲ್ಲಿ ಶುಶ್ರೂಷಕರ ನೇಮಕಕ್ಕೆ ಅರ್ಜಿ ಆಹ್ವಾನ Read More »

ಅಂತರ್ರಾಷ್ಟ್ರೀಯ ನ್ಯೂಸ್

ಫಿಫಾ ವಿಶ್ವಕಪ್ ➤ ಫೈನಲ್ ಪ್ರವೇಶಿಸಿದ ಫ್ರಾನ್ಸ್

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ ,ಡಿ 15 : ಫಿಪಾ ವಿಶ್ವಕಪ್ ಫೈನಲ್ ತಲುಪುವ ಮೊರಾಕ್ಕೊ ಕನಸನ್ನು ನುಚ್ಚು ನೂರು ಮಾಡಿದ ಫ್ರಾನ್ಸ್, ಪ್ರಶಸ್ತಿಗಾಗಿ ಲಿಯೊನಾಲ್ ಮೆಸ್ಸಿ ನೇತೃತ್ವದ  ಅರ್ಜೆಂಟೀನಾ ಜತೆ ಹೋರಾಟಕ್ಕೆ ಅರ್ಹತೆ ಪಡೆದಿದೆ. ಅಲ್ ಬೈತ್ ಸ್ಟೇಡಿಯಂ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊರಾಕ್ಕೊ ತಂಡವನ್ನು 2-0 ಅಂತರದಲ್ಲಿ ಸೋಲಿಸಿ ಹಾಲಿ ಚಾಂಪಿಯನ್ನರು ರವಿವಾರ ಪ್ರಶಸ್ತಿನ ಕದನಕ್ಕೆ ಸಜ್ಜಾಗಿದ್ದಾರೆ. 2002ರ  ಬಳಿಕ ಫೈನಲ್ ಗೆ ತಲುಪಿದ ಹಾಲಿ ಚಾಂಪಿಯನ್  ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಫ್ರಾನ್ಸ್

ಫಿಫಾ ವಿಶ್ವಕಪ್ ➤ ಫೈನಲ್ ಪ್ರವೇಶಿಸಿದ ಫ್ರಾನ್ಸ್ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್

ಕಾರು ಅಪಘಾತ ➤ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಲಂಡನ್, ಡಿ. 14. ಕಾರು ಅಪಘಾತಕ್ಕೊಳಗಾಗಿ ಇಂಗ್ಲೆಂಡ್‌ ಕ್ರಿಕೆಟ್ ತಂಡದ ಮಾಜಿ ನಾಯಕ ಆಂಡ್ರ್ಯೂ ಫ್ಲಿಂಟಾಫ್ ಅವರು ಗಾಯಗೊಂಡ ಘಟನೆ ವರದಿಯಾಗಿದೆ. ಬಿಬಿಸಿಯ “ಟಾಪ್ ಗೇರ್” ಕಾರ್ಯಕ್ರಮದ ಸಂಚಿಕೆಯ ಚಿತ್ರೀಕರಣದ ವೇಳೆ ಆಂಡ್ರ್ಯೂ ಕುಳಿತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಕೂಡಲೇ ಸೆಟ್‌ನಲ್ಲಿದ್ದ ವೈದ್ಯಕೀಯ ತಂಡವು ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಬಿಬಿಸಿ ತಿಳಿಸಿರುವುದಾಗಿ ವರದಿಯಾಗಿದೆ. 124 ಎಂಪಿಎಚ್ ವೇಗದಲ್ಲಿ

ಕಾರು ಅಪಘಾತ ➤ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಸ್ಪತ್ರೆಗೆ ದಾಖಲು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್

ಚೀನಾ ಶಾಲೆಯಲ್ಲಿ ಮತ್ತೆ ಕೋವಿಡ್ ಹೆಚ್ಚಳ

(ನ್ಯೂಸ್ ಕಡಬ) newskadaba.com  ಬೀಜಿಂಗ್, ಡಿ. 10. ಕೋವಿಡ್ ಸಾಂಕ್ರಾಮಿಕತೆ ನಿಯಂತ್ರಣಕ್ಕೆ ಹೇರಲಾಗಿದ್ದ ಕಠಿಣ ನಿಯಮಗಳನ್ನು ಸಡಿಗೊಳಿಸಿದ ಹಿನ್ನೆಲೆ ಚೀನಾದ ಶಾಲೆಗಳು ಮತ್ತು ವಾಣಿಜ್ಯಕೇಂದ್ರಗಳಲ್ಲಿ ಮತ್ತೆ ಸೋಂಕಿನ ಪ್ರಕರಣ ಹೆಚ್ಚಳವಾಗುತ್ತಿದೆ ಎಂದು ವರದಿ ತಿಳಿಸಿದೆ.     ಕುಸಿತ ಕಂಡ ಆರ್ಥಿಕತೆಯ ಪುನಶ್ಚೇತನದ ಉದ್ದೇಶದಿಂದ ಕೆಲವು ದಿನಗಳ ಹಿಂದೆ ಶೂನ್ಯ ಕೋವಿಡ್ ನೀತಿಯನ್ನು ಸಡಿಲಗೊಳಿಸಲು ಆರಂಭ ಮಾಡಿದ್ದರಿಂದ ಸಾಂಕ್ರಾಮಿಕತೆಯ ಪರಿಣಾಮವನ್ನು ಎದುರಿಸಲು ಚೀನಿ ಅಧಿಕಾರಿಗಳು ಪರದಾಡುತ್ತಿದ್ದಾರೆ. ಶೂನ್ಯ ಕೋವಿಡ್ ನೀತಿಯಿಂದಾಗಿ ಲಕ್ಷಾಂತರ ಜನರು ಮನೆಯೊಳಗೇ ಇರಬೇಕಾಗಿ ಬಂದಿದ್ದು,

ಚೀನಾ ಶಾಲೆಯಲ್ಲಿ ಮತ್ತೆ ಕೋವಿಡ್ ಹೆಚ್ಚಳ Read More »

ಅಂತರ್ರಾಷ್ಟ್ರೀಯ ನ್ಯೂಸ್

ಹಾಲಿವುಡ್ ನಟಿ ಕ್ರಿಸ್ಟಿ ಆ್ಯಲೆ ನಿಧನ

(ನ್ಯೂಸ್ ಕಡಬ) newskadaba.com ಫ್ಲೋರಿಡಾ, ಡಿ. 06. ಎರಡು ಬಾರಿ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಹಾಲಿವುಡ್‌ ನಟಿ ಕ್ರಿಸ್ಟಿ ಆ್ಯಲೆ(71) ನಿಧನರಾಗಿದ್ದಾರೆ. ಹಲವು ತಿಂಗಳುಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರು, ಫ್ಲೋರಿಡಾದ ಮೊಫಿಟ್ ಕ್ಯಾನ್ಸರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದೆನ್ನಲಾಗಿದೆ. 1987 ರಿಂದ 1993 ರವರೆಗೆ ಅವರು ನಟಿಸಿದ ಎನ್‌ಬಿಸಿ ಸಿಟ್‌ಕಾಮ್ ‘ಚೀರ್ಸ್’ ನಲ್ಲಿ ರೆಬೆಕ್ಕಾ ಹೋವ್ ಆಗಿ ಅಲ್ಲೆ ಅವರ ನಟನೆಗೆ 1991 ರಲ್ಲಿ ಎಮ್ಮಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದರು. ಇದಾದ ಬಳಿಕ

ಹಾಲಿವುಡ್ ನಟಿ ಕ್ರಿಸ್ಟಿ ಆ್ಯಲೆ ನಿಧನ Read More »

ಅಂತರ್ರಾಷ್ಟ್ರೀಯ ನ್ಯೂಸ್

ಲಾಲೂ ಪ್ರಸಾದ್ ಯಾದವ್ ಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ ➤ ಮಗಳಿಂದಲೇ ಕಿಡ್ನಿ ದಾನ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 05. ಲಾಲು ಪ್ರಸಾದ್‌ ಯಾದವ್‌ ಅವರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ ಎಂದು ವರದಿ ತಿಳಿಸಿದೆ.   ಲಾಲೂ ಪ್ರಸಾದ್ ಅವರಿಗೆ ಮಗಳು ರೋಹಿಣಿ ಅವರು ಒಂದು ಕಿಡ್ನಿಯನ್ನು ದಾನ ಮಾಡಿದ್ದು, ಸುಮಾರು ಒಂದು ಗಂಟೆಗಳ ಕಾಲ ಮಾಡಿದ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿ ನೆರವೇರಿದೆ. ಮೊದಲಿಗೆ ರೋಹಿಣಿ ಅವರ ಶಸ್ತ್ರಚಿಕಿತ್ಸೆ ನಡೆಸಿ, ಬಳಿಕ ಲಾಲೂ ಪ್ರಸಾದ್‌ ಯಾದವ್‌ ಅವರ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಪ್ರಸ್ತುತ ಇಬ್ಬರನ್ನೂ ಕೂಡ ಐಸಿಯುನಲ್ಲಿ

ಲಾಲೂ ಪ್ರಸಾದ್ ಯಾದವ್ ಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ ➤ ಮಗಳಿಂದಲೇ ಕಿಡ್ನಿ ದಾನ Read More »

ಅಂತರ್ರಾಷ್ಟ್ರೀಯ ನ್ಯೂಸ್
Crime

ಬಂದೂಕುಧಾರಿ ಗುಂಪಿನಿಂದ ಮಸೀದಿ ಮೇಲೆ ದಾಳಿ ➤ 12 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 05. ಬಂದೂಕುಧಾರಿ ಢಕಾಯಿತರ ಗುಂಪೊಂದು ಮಸೀದಿಯೊಂದರ ಮೇಲೆ ದಾಳಿ ಮಾಡಿ 12 ಮಂದಿಯನ್ನು ಹತ್ಯೆಗೈದು, ಇತರರನ್ನು ಅಪಹರಿಸಿರುವ ಘಟನೆ ನೈಜೀರಿಯಾದಲ್ಲಿ ವರದಿಯಾಗಿದೆ. ಮೈಗಾಮ್ಜಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಬೈಕ್‌ ನಲ್ಲಿ ಬಂದ ಗುಂಪೊಂದು ಏಕಾಏಕಿ ಗುಂಡು ಹಾರಿಸಿದ್ದರಿಂದ ಆತಂಕಗೊಂಡ ಜನರು ಅತ್ತಿತ್ತ ಓಡಿದ್ದಾರೆ. ಬಂದೂಕುಧಾರಿಗಳು ಕೆಲವರನ್ನು ಶೂಟ್‌ ಮಾಡಿದ್ದು, ಮಸೀದಿಯ ಮುಖ್ಯ ಧರ್ಮಗುರು ಸೇರಿದಂತೆ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಪೊಲೀಸರು ಬಂದೂಕುಧಾರಿ ಗುಂಪಿನ ಪತ್ತೆಗೆ

ಬಂದೂಕುಧಾರಿ ಗುಂಪಿನಿಂದ ಮಸೀದಿ ಮೇಲೆ ದಾಳಿ ➤ 12 ಮಂದಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್
Scroll to Top