ಅಂತರ್ರಾಷ್ಟ್ರೀಯ ನ್ಯೂಸ್

ಟರ್ಕಿ ಹಾಗೂ ಸಿರಿಯಾದಲ್ಲಿ ನಡೆದ ಭೂಕಂಪನ ಅವಶೇಷಗಳಡಿ ಮಗುವಿಗೆ ಜನ್ಮ ನೀಡಿದ ಮಹಿಳೆ ➤ತಾಯಿ ಮೃತಪಟ್ಟರೂ ಹೊಕ್ಕುಳ ಬಳ್ಳಿ ಸಮೇತ ಬದುಕಿ ಬಂದ ಕೂಸು

(ನ್ಯೂಸ್ ಕಡಬ) newskadaba.com. ಟರ್ಕಿ, ಫೆ.8.  ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ, ಇನ್ನೂ ಸಾವಿರಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಆದರೆ ಅದೇ ಅವಶೇಷಗಳಡಿ ಮಗುವೊಂದು ಜನಿಸಿದ್ದು, ಹೊಕ್ಕುಳ ಬಳ್ಳಿ ಕತ್ತರಿಸುವ ಮುನ್ನವೇ ತಾಯಿ ಮೃತಪಟ್ಟಿದ್ದು, ಮಗುವನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಭಾರತದಿಂದ ಪರಿಹಾರ ಮತ್ತು ರಕ್ಷಣಾ ತಂಡಗಳು ಟರ್ಕಿ ತಲುಪಿವೆ. ಅವಶೇಷಗಳಡಿ ಇನ್ನೂ ಸಾವಿರಾರು ಜನರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. […]

ಟರ್ಕಿ ಹಾಗೂ ಸಿರಿಯಾದಲ್ಲಿ ನಡೆದ ಭೂಕಂಪನ ಅವಶೇಷಗಳಡಿ ಮಗುವಿಗೆ ಜನ್ಮ ನೀಡಿದ ಮಹಿಳೆ ➤ತಾಯಿ ಮೃತಪಟ್ಟರೂ ಹೊಕ್ಕುಳ ಬಳ್ಳಿ ಸಮೇತ ಬದುಕಿ ಬಂದ ಕೂಸು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

➤2ನೇ ಬಾರಿಗೆ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಪಡೆದ ಭಾರತ ಮೂಲದ ಬಾಲಕಿ

(ನ್ಯೂಸ್ ಕಡಬ) newskadaba.com. ವಾಷಿಂಗ್ಟನ್ ಫೆ.7. ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ಅವರು ಸತತ ಎರಡನೇ ವರ್ಷ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಯುಎಸ್ ಮೂಲದ ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ ಸಂಸ್ಥೆಯು 76 ದೇಶಗಳ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ನಡೆಸಿದ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ  “ವಿಶ್ವದ ಬುದ್ಧಿವಂತ” ವಿದ್ಯಾರ್ಥಿಗಳ ಪಟ್ಟಿಯಲ್ಲಿ ನತಾಶಾ ಸ್ಥಾನ ಪಡೆದುಕೊಂಡಿದ್ದಾಳೆ.    

➤2ನೇ ಬಾರಿಗೆ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಪಡೆದ ಭಾರತ ಮೂಲದ ಬಾಲಕಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ ಪಾಕಿಸ್ತಾನದಲ್ಲಿ ನಿಗೂಢ ಕಾಯಿಲೆ ಪತ್ತೆ!

(ನ್ಯೂಸ್ ಕಡಬ) newskadaba.com, ಕರಾಚಿ, ಜ. 28. ಪಾಕಿಸ್ತಾನದ ಕರಾಚಿ ನಗರದಲ್ಲಿ 14 ಮಕ್ಕಳು ಸೇರಿದಂತೆ 18 ಜನರು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಆರೋಗ್ಯ ಸೇವೆಗಳ ನಿರ್ದೇಶಕ ಅಬ್ದುಲ್ ಹಮೀದ್ ಜುಮಾನಿ ಶುಕ್ರವಾರ ಇದನ್ನು ಖಚಿತಪಡಿಸಿದ್ದಾರೆ. ಜನವರಿ 10 ಮತ್ತು 25 ರ ನಡುವೆ ಕೆಮಾರಿಯ ಮಾವಾಚ್ ಗೋಥ್ ಪ್ರದೇಶದಲ್ಲಿ ನಿಗೂಢ ಕಾಯಿಲೆಯಿಂದ ಈ ಸಾವುಗಳು ಸಂಭವಿಸಿವೆ ಎಂದು ಅವರು ಹೇಳಿದರು. ಮಾವಾಚ್ ಗೋಥ್ ಒಂದು ಕೊಳೆಗೇರಿ ಪ್ರದೇಶವಾಗಿದ್ದು, ಜನರು ಹೆಚ್ಚಾಗಿ ದೈನಂದಿನ ಕೂಲಿ ಕಾರ್ಮಿಕರು ಅಥವಾ

➤ ಪಾಕಿಸ್ತಾನದಲ್ಲಿ ನಿಗೂಢ ಕಾಯಿಲೆ ಪತ್ತೆ! Read More »

ಅಂತರ್ರಾಷ್ಟ್ರೀಯ ನ್ಯೂಸ್

➤ಅಮೆರಿಕದಲ್ಲಿ ಪೊಲೀಸರ ಹೊಡೆತಕ್ಕೆ ಪ್ರಾಣಬಿಟ್ಟ ಕಪ್ಪುವರ್ಣೀಯ ➤ವ್ಯಾಪಕ ಜನಾಕ್ರೋಶ

(ನ್ಯೂಸ್ ಕಡಬ) newskadaba.com. ಅಮೆರಿಕ , ಜ.28. ಪೊಲೀಸರ ಹೊಡೆತಕ್ಕೆ ಕಪ್ಪುವರ್ಣೀಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೃತನನ್ನು ಟೈರ್ ನಿಕೊಲಸ್ ಎಂದು ಗುರುತಿಸಲಾಗಿದೆ. ಮುಖಕ್ಕೆ ಗುದ್ದುವುದು, ಬೂಟುಗಾಲಿನಿಂದ ತುಳಿಯುವುದು ಹಾಗೂ ಲಾಠಿ ಹೊಡೆತಗಳನ್ನು ತಡೆಯಲು ಆಗದೆ ಟೈರ್ ನಿಕೊಲಸ್ ಸಾವನ್ನಪ್ಪಿದ್ದಾನೆ. ಸಾಯುವ ಮೊದಲು ಆತ ‘ಮಾಮ್’ (ಅಮ್ಮ) ಎಂದು ಹಲವು ಬಾರಿ ಕೂಗಿರುವುದು ಜನರ ಮನಸ್ಸು ಕಲಕಿದೆ. ಮೆಂಫಿಸ್ ಅಧಿಕಾರಿಗಳು ಇದೀಗ ಘಟನೆಯ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಕಪ್ಪುವರ್ಣೀಯರೇ ಆಗಿರುವ ಪೊಲೀಸರು ನಿಕೊಲಸ್​ನನ್ನು

➤ಅಮೆರಿಕದಲ್ಲಿ ಪೊಲೀಸರ ಹೊಡೆತಕ್ಕೆ ಪ್ರಾಣಬಿಟ್ಟ ಕಪ್ಪುವರ್ಣೀಯ ➤ವ್ಯಾಪಕ ಜನಾಕ್ರೋಶ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಸಹಪಾಠಿಯ ಮೇಲೆ ನಾಲ್ವರು ವಿದ್ಯಾರ್ಥಿನಿಯರಿಂದ ಹಲ್ಲೆ 

(ನ್ಯೂಸ್ ಕಡಬ)newskadaba.com ಲಾಹೋರ್​, ಜ.23. ತಮ್ಮೊಂದಿಗೆ ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ನಾಲ್ವರು ವಿದ್ಯಾರ್ಥಿನಿಯರು ಸೇರಿ, ಸಹಪಾಠಿ ವಿದ್ಯಾರ್ಥಿನಿ ಮೇಲೆ ಶಾಲೆಯ ಕ್ಯಾಂಟಿನ್​ನಲ್ಲೇ ಹಲ್ಲೆ ಮಾಡಿ, ಕಿರುಕುಳ ನೀಡಿರುವ ಆತಂಕಕಾರಿ ಘಟನೆ ಪಾಕಿಸ್ತಾನ ರಾಜಧಾನಿ ಲಾಹೋರ್​ನಲ್ಲಿರುವ ಅಮೆರಿಕನ್​ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದಿದೆ. ಈ ಘಟನೆ ಪಾಕಿಸ್ತಾನದಾದ್ಯಂತ ಚರ್ಚೆ ಹುಟ್ಟು ಹಾಕಿರುವುದಲ್ಲದೆ, ವಿದ್ಯಾರ್ಥಿನಿಯರ ವರ್ತನೆ ನೋಡಿ ಶಾಕ್​ ಆಗಿದ್ದಾರೆ. ಅದರಲ್ಲೂ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳನ್ನು ಹೇರುವ ಪಾಕ್​ನಂತಹ ದೇಶದಲ್ಲೇ ಈ ರೀತಿಯ ಘಟನೆ ನಡೆದಿರುವುದು ಅಚ್ಚರಿಯೇ ಸರಿ. ಹಲ್ಲೆಗೆ

ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಸಹಪಾಠಿಯ ಮೇಲೆ ನಾಲ್ವರು ವಿದ್ಯಾರ್ಥಿನಿಯರಿಂದ ಹಲ್ಲೆ  Read More »

ಅಂತರ್ರಾಷ್ಟ್ರೀಯ ನ್ಯೂಸ್

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ದಿಢೀರ್ ರಾಜೀನಾಮೆ..!

(ನ್ಯೂಸ್ ಕಡಬ) newskadaba.com ವೆಲ್ಲಿಂಗ್ಟನ್‌, ಜ. 19. ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ತಮ್ಮ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಘೋಷಿಸಿದ್ದು, ಪ್ರಧಾನಿ ಸ್ಥಾನದಲ್ಲಿ ಉಳಿಯಲು ಇನ್ನು ಮುಂದೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಇದರ ಹಿಂದೆ ಯಾವುದೇ ರಹಸ್ಯವಿಲ್ಲ. ಸ್ಥಾನ ತ್ಯಜಿಸಲು ಇದು ಸೂಕ್ತ ಸಮಯ. ಇದೊಂದು ಅತ್ಯಂತ ಹೆಚ್ಚಿನ ಜವಾಬ್ದಾರಿಯುತ ಹುದ್ದೆ, ಅದನ್ನು ನಿರ್ವಹಿಸುವುದು ಕೂಡಾ ಸುಲಭವಲ್ಲ. ಮತ್ತೆ ನಾಲ್ಕು ವರ್ಷಗಳ ಕಾಲ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ಜಸಿಂಡಾ ಅವರು

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ದಿಢೀರ್ ರಾಜೀನಾಮೆ..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಚೀನಾದಲ್ಲಿ ಕೋವಿಡ್ ಸ್ಫೋಟ ➤ನಿತ್ಯ 36000 ಜನರ ಬಲಿ..!

(ನ್ಯೂಸ್ ಕಡಬ) newskadaba.com. ಚೀನಾ,ಜ.19. ಚೀನಾ ದೇಶದಲ್ಲಿ ನಿತ್ಯ ಕೋವಿಡ್‌ಗೆ 36,000 ಜನರು ಮೃತಪಡುತ್ತಾರೆ ಎನ್ನಲಾಗಿದೆ. ಚೀನಾದಲ್ಲಿ ಕೋವಿಡ್‌ ಸೋಂಕು  ಹರಡುತ್ತಿರುವುದು ಭಾರಿ ಆತಂಕ ಉಂಟುಮಾಡಿದೆ. ಚೀನಾದಲ್ಲಿ ಒಂದು ತಿಂಗಳು ಕಾಲ ನಡೆಯುವ ಹೊಸ ವರ್ಷಾಚರಣೆ ಜನವರಿ 21ರಿಂದ ಆರಂಭವಾಗಲಿದ್ದು, ದೇಶದಲ್ಲಿ ಮತ್ತೆ ಕೋವಿಡ್‌ ಸೋಂಕು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ. ನಿತ್ಯ ಗರಿಷ್ಠ 36,000 ಜನರು ಸಾಯಬಹುದು ಎಂದು ಅಧ್ಯಯನ ವರದಿಯೊಂದು ಎಚ್ಚರಿಕೆ ನೀಡಿದೆ. ಕೋವಿಡ್‌ ವಿಷಯದಲ್ಲಿ ಕಳೆದ 3 ವರ್ಷಗಳಿಂದ ಕಟ್ಟುನಿಟ್ಟಾಗಿ ಜಾರಿ ಮಾಡಿದ್ದ ನೀತಿಯನ್ನು

ಚೀನಾದಲ್ಲಿ ಕೋವಿಡ್ ಸ್ಫೋಟ ➤ನಿತ್ಯ 36000 ಜನರ ಬಲಿ..! Read More »

ಅಂತರ್ರಾಷ್ಟ್ರೀಯ ನ್ಯೂಸ್

➤ನೇಪಾಳದಲ್ಲಿ ವಿಮಾನ ಅಪಘಾತ ಭಾರತೀಯರು ಸೇರಿ 68 ಪ್ರಯಾಣಿಕರು ಮೃತ್ಯು..!

(ನ್ಯೂಸ್ ಕಡಬ) newskadaba.com, ಕಠ್ಮಂಡು, ಜ. 16 .​ ನೇಪಾಳದ ಪ್ರಯಾಣಿಕ ವಿಮಾನವೊಂದು ಭಾನುವಾರ ಪೋಖರಾ ವಿಮಾನ ನಿಲ್ದಾಣದಲ್ಲಿ  ಲ್ಯಾಂಡಿಂಗ್ ಆಗುವಾಗ ನದಿಯ ದಡದಲ್ಲಿ ಪತನಗೊಂಡಿದ್ದು, 68 ಮಂದಿ ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಇವರಲ್ಲಿ ಐವರು ಭಾರತೀಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಯೇತಿ ಏರ್‌ಲೈನ್ಸ್‌ನ ವಿಮಾನ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:33 ಕ್ಕೆ ಟೇಕ್ ಆಫ್ ಆಗಿತ್ತು. ನಂತರದಲ್ಲಿ ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ

➤ನೇಪಾಳದಲ್ಲಿ ವಿಮಾನ ಅಪಘಾತ ಭಾರತೀಯರು ಸೇರಿ 68 ಪ್ರಯಾಣಿಕರು ಮೃತ್ಯು..! Read More »

ಅಂತರ್ರಾಷ್ಟ್ರೀಯ ನ್ಯೂಸ್

➤ ತಾಲಿಬಾನಿಗಳ ಪೈಶಾಚಿಕ ಕೃತ್ಯಕ್ಕೆ ಮಾಜಿ ಸಂಸದೆ ಬಲಿ

ನ್ಯೂಸ್ ಕಡಬ) newskadaba.com, ಅಫ್ಘಾನಿಸ್ತಾನ,  ಜ. 16 .​ ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್ ನಬಿಜಬಾದ್ ಅವರನ್ನುಕಾಬೂಲ್ ನಲ್ಲಿರುವ ಮಾಜಿ ಸಂಸದರ ನಿವಾಸದಲ್ಲಿಯೇ  ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ತಾಲಿಬಾನಿಗಳ ಗುಂಡಿನ ದಾಳಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಕೂಡ ಮೃತಪಟ್ಟಿದ್ದಾರೆ. 2021 ಆಗಸ್ಟ್ ನಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ, ಕೆಲವು ಮಹಿಳಾ ಸಂಸದರು  ಕಾಬೂಲ್ ನಲ್ಲಿ ನಿವಾಸ ಹೂಡಿದ್ದಾರೆ. ಇಷ್ಟು ದಿನ ಮಹಿಳಾ ಅಧಿಕಾರಿಗಳ ಹತ್ಯೆ ಮಾಡುತ್ತಿದ್ದ ತಾಲಿಬಾನಿಗಳು, ಇದೇ ಮೊದಲ ಬಾರಿಗೆ ಜನ ನಾಯಕಿಯೊಬ್ಬರನ್ನು ಕಗ್ಗೊಲೆ ಮಾಡಿದ್ದಾರೆ.

➤ ತಾಲಿಬಾನಿಗಳ ಪೈಶಾಚಿಕ ಕೃತ್ಯಕ್ಕೆ ಮಾಜಿ ಸಂಸದೆ ಬಲಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಹಜ್ ಗೆ ನಿರ್ಬಂಧಿಸಿದ್ದ ಎಲ್ಲಾ ನಿಯಮಗಳಿಗೆ ಸಡಿಲಿಕೆ.!

(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾ, ಜ.11. ಕೊರೊನಾ ಸೋಂಕಿನ ಭೀತಿಯಿಂದ ಹಲವು ನಿರ್ಬಂಧಗಳಿಗೆ ಒಳಗಾಗಿದ್ದ ಸೌದಿ ಅರೇಬಿಯಾ ವಾರ್ಷಿಕ ಹಜ್ ಯಾತ್ರೆ ಈ ಬಾರಿ ಸರಾಗವಾಗಿ ಸಡೆಯಲಿದ್ದು, ಕೊರೊನಾ ಪೂರ್ವ ಸ್ಥಿತಿಗೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. 2021 ರಲ್ಲಿ ಸೌದಿ ಅರೇಬಿಯಾದ 60 ಸಾವಿರ ನಿವಾಸಿಗಳು ಯಾತ್ರೆ ಮಾಡಿದ್ದರೆ, ಕಳೆದ ವರ್ಷ 10 ಲಕ್ಷ ಮಂದಿ ಮೆಕ್ಕಾಗೆ ಆಗಮಿಸಿದ್ದರು. ಈ ಬಾರಿ ಎಲ್ಲ ನಿರ್ಬಂಧಗಳನ್ನೂ ತೆರವುಗೊಳಿಸಲಾಗಿದೆ. ಜೊತೆಗೆ ವಯಸ್ಸಿನ ಮಿತಿಯಿಲ್ಲದೇ ಕೊರೊನಾ ಪೂರ್ವದಂತೆ ಈ

ಹಜ್ ಗೆ ನಿರ್ಬಂಧಿಸಿದ್ದ ಎಲ್ಲಾ ನಿಯಮಗಳಿಗೆ ಸಡಿಲಿಕೆ.! Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top