ಅಂತರ್ರಾಷ್ಟ್ರೀಯ ನ್ಯೂಸ್

ವಿಶ್ವದ ಅತೀ ದೊಡ್ಡ ಏಸುವಿನ ಪ್ರತಿಮೆಗೆ ಬಡಿದ ಸಿಡಿಲು!

(ನ್ಯೂಸ್ ಕಡಬ) newskadaba.com ಬ್ರಿಸಿಲಿಯ, ಫೆ.13. ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಬ್ರೆಜಿಲ್‌ನ ರಿಯೋ  ಡಿ ಜನೈರೊದ  ಮೇಲಿರುವ ವಿಶ್ವದ ಅತಿ ದೊಡ್ಡ ಏಸುಕ್ರಿಸ್ತನ ಪ್ರತಿಮೆಗೆ ಸಿಡಿಲು ಬಡಿದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು,  ಬ್ರೆಜಿಲ್‌ ಕರಾವಳಿಗೆ ಫ್ಲ್ಯಾಶ್‌ ಚಂಡಮಾರುತ ಅಪ್ಪಳಿಸಿದ ಸಮಯದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. 100 ಅಡಿ ಎತ್ತರದ ಏಸುಕ್ರಿಸ್ತನ ಮೂರ್ತಿಯ ತಲೆಯಿಂದ ಆಕಾಶಕ್ಕೆ ಸಂಪರ್ಕ ಹೊಂದಿರುವಂತೆ ಸಿಡಿಲು ಬಡಿದ ದೃಶ್ಯ ಸೆರೆಯಾಗಿದ್ದು ಇದು ದೈವಿಕ ದೃಶ್ಯ ಎಂಬಂತೆ ಭಾಸವಾಗಿದೆ. ಆದರೆ ಇದರಿಂದ […]

ವಿಶ್ವದ ಅತೀ ದೊಡ್ಡ ಏಸುವಿನ ಪ್ರತಿಮೆಗೆ ಬಡಿದ ಸಿಡಿಲು! Read More »

ಅಂತರ್ರಾಷ್ಟ್ರೀಯ ನ್ಯೂಸ್

ಬದುಕು ಕಸಿದ ಭೂಕಂಪನ! ➤ಟರ್ಕಿ, ಸಿರಿಯಾದಲ್ಲಿ ಮೃತರ ಸಂಖ್ಯೆ 28,000ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಇಸ್ತಾಂಬುಲ್, ಫೆ.12.  ಶತಮಾನದ ಭೀಕರವಾದ ಭೂಕಂಪಕ್ಕೆ ನಲುಗಿರುವ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳಲ್ಲಿ  ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಒಟ್ಟು ಮೃತರ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 24,617 ಮಂದಿ ಮೃತಪಟ್ಟಿದ್ದಾರೆ, ಸಿರಿಯಾದಲ್ಲಿ 3,575 ಮಂದಿ ಮೃತಪಟ್ಟಿದ್ದಾರೆ  ಎಂದು ವರದಿ ತಿಳಿಸಿದೆ. ಟರ್ಕಿಯಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಉಭಯ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ.  

ಬದುಕು ಕಸಿದ ಭೂಕಂಪನ! ➤ಟರ್ಕಿ, ಸಿರಿಯಾದಲ್ಲಿ ಮೃತರ ಸಂಖ್ಯೆ 28,000ಕ್ಕೆ ಏರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಭೂಕಂಪನಕ್ಕೆ ನಲುಗಿದ ಟರ್ಕಿ, ಸಿರಿಯಾ; ➤‌ಮೃತರ ಸಂಖ್ಯೆ 24,000ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಇಸ್ತಾನ್‌ಬುಲ್‌, ಫೆ.11. ಶತಮಾನದ ಭೀಕರ ಭೂಕಂಪಕ್ಕೆ ನಡುಗಿಹೋದ ಟರ್ಕಿ ಮತ್ತು ಸಿರಿಯಾದಲ್ಲಿ ಮೃತರ ಸಂಖ್ಯೆ 24 ಸಾವಿರ ಗಡಿ ದಾಟಿದೆ. ಅವಶೇಷಗಳಡಿಯಿಂದ ಹೆಣಗಳ ಕೊಳೆತ ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಟರ್ಕಿ ಹಾಗೂ ಸಿರಿಯಾ ಸರಕಾರಗಳು ಹರಸಾಹಸಪಡುತ್ತಿವೆ ಎಂದು ವರದಿಯಾಗಿದೆ.  

ಭೂಕಂಪನಕ್ಕೆ ನಲುಗಿದ ಟರ್ಕಿ, ಸಿರಿಯಾ; ➤‌ಮೃತರ ಸಂಖ್ಯೆ 24,000ಕ್ಕೆ ಏರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

➤ ಟರ್ಕಿಯಲ್ಲಿ ಚುರುಕುಗೊಂಡ  ಭಾರತದ ರಕ್ಷಣಾ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಟರ್ಕಿ, ಫೆ.10. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೆ ಮತ್ತಷ್ಟು ಮೃತರ  ಸಂಖ್ಯೆ 22 ಸಾವಿರ ಗಡಿ  ದಾಟಿದೆ. ಅವಶೇಷದ ಅಡಿಯಲ್ಲಿ ಸಿಲುಕಿ  ಮೃತಪಟ್ಟ ಒಂದಿಷ್ಟು ಮಂದಿಯಾದರೆ, ಅತಿಯಾಶ ಶೀತ, ಹಸಿವು ಮತ್ತು ಅವಶೇಷದ ಅಡಿ ಉಸಿರುವಗಟ್ಟಿ ಸಾಯುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಟರ್ಕಿಯಲ್ಲಿ  ಭಾರತದ ರಕ್ಷಣಾ ಕಾರ್ಯಾಚರಣೆ  ನಡೆಸುತ್ತಿದ್ದು, ಅವಶೇಷದ ಅಡಿ ಸಿಲುಕಿದವರ ಶೋಧಕ್ಕೆ NDRF ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು,  NDRF ಅವಶೇಷದ ಅಡಿ ನುಗ್ಗಿ  ಜನರನ್ನು ರಕ್ಷಣೆ ಮಾಡುತ್ತಿದ್ದಾರೆ.  ಭಾರತದ ತಂಡಗಳು ಮೂರು ವಿಮಾನಗಳಲ್ಲಿ

➤ ಟರ್ಕಿಯಲ್ಲಿ ಚುರುಕುಗೊಂಡ  ಭಾರತದ ರಕ್ಷಣಾ ಕಾರ್ಯಾಚರಣೆ Read More »

ಅಂತರ್ರಾಷ್ಟ್ರೀಯ ನ್ಯೂಸ್

➤ ಅವಶೇಷಗಳಡಿಯಲ್ಲಿ ಮಗಳ ಮೃತದೇಹ,ಆಕೆಯ ಕೈ ಹಿಡಿದು ಮೌನವಾಗಿ ಕುಳಿತ ಅಪ್ಪ

(ನ್ಯೂಸ್ ಕಡಬ) newskadaba.com. ಟರ್ಕಿ, ಫೆ.10.  ಟರ್ಕಿಯ ಭೂಕಂಪದ  ದೃಶ್ಯಗಳನ್ನು ನೋಡಿದರೆ ಎಂಥಾ ಗಟ್ಟಿ ಮನಸ್ಸು  ಕೂಡಾ ಕರಗುತ್ತದೆ. ತನ್ನ 15ರ ಹರೆಯದ ಮಗಳು ಭೂಕಂಪದಲ್ಲಿ ಸಾವಿಗೀಡಾಗಿದ್ದಾಳೆ. ಅವಶೇಷಗಳಡಿಯಲ್ಲಿ ಆಕೆಯ ದೇಹ ಸಿಕ್ಕಿಬಿದ್ದಿದ್ದು, ಆಕೆಯ ಕೈ ಮಾತ್ರ ಹೊರಗೆ ಕಾಣತ್ತದೆ. ಆ ಬಾಲಕಿಯ ಅಪ್ಪ ಆಕೆಯ ಕೈ ಹಿಡಿದು ಕೂತಿದ್ದಾನೆ. ಚಿತ್ರದಲ್ಲಿರುವ ಆ ವ್ಯಕ್ತಿ ಹೆಸರು ಮೆಸುಟ್ ಹ್ಯಾನ್ಸರ್. ಒಡೆದ ಇಟ್ಟಿಗೆಗಳ ರಾಶಿಯ ಮೇಲೆ ಹೆಪ್ಪುಗಟ್ಟುವ ಚಳಿಯಲ್ಲಿ ಒಬ್ಬಂಟಿಯಾಗಿ ಕುಳಿತುಕೊಂಡಿದ್ದಾರೆ. ಅವರ ಮನೆ ನೆಲಸಮವಾಗಿದೆ. ಅವರ ಮಗಳು

➤ ಅವಶೇಷಗಳಡಿಯಲ್ಲಿ ಮಗಳ ಮೃತದೇಹ,ಆಕೆಯ ಕೈ ಹಿಡಿದು ಮೌನವಾಗಿ ಕುಳಿತ ಅಪ್ಪ Read More »

ಅಂತರ್ರಾಷ್ಟ್ರೀಯ ನ್ಯೂಸ್

  ಬಾರ್ಡ್‌ ತಪ್ಪು ಮಾಹಿತಿ ನೀಡಿದ್ದಕ್ಕೆ ಗೂಗಲ್‌ಗೆ 8 ಲಕ್ಷ ಕೋಟಿ ನಷ್ಟ!

(ನ್ಯೂಸ್ ಕಡಬ) newskadaba.com  ನ್ಯೂಯಾರ್ಕ್, ಫೆ.10.  ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರಭಾವ ಸೃಷ್ಟಿಸುತ್ತಿರುವ ಚಾಟ್‌ ಜಿಪಿಟಿಗೆ ಪರ್ಯಾಯವಾಗಿ ಗೂಗಲ್‌ ಬಿಡುಗಡೆ ಮಾಡಿರುವ ‘ಬಾರ್ಡ್’ ತಪ್ಪು ಮಾಹಿತಿಯೊಂದನ್ನು ನೀಡಿದೆ. ಇದರ ಬೆನ್ನಲ್ಲೇ ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್‌ನ ಷೇರು ಮೌಲ್ಯ ಒಟ್ಟಾರೆ 8.2 ಲಕ್ಷ ಕೋಟಿ ರೂ.ನಷ್ಟು ಕುಸಿತ ಕಂಡಿದೆ. ಸೋಮವಾರ ಬಿಡುಗಡೆಯಾದ ‘ಬಾರ್ಡ್‌’ನ ಪ್ರಾತ್ಯಕ್ಷಿಕೆಯನ್ನು ಬುಧವಾರ ಗೂಗಲ್‌ ಆಯೋಜಿಸಿತ್ತು. ಈ ವೇಳೆ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಬಗ್ಗೆ ವಿವರಿಸುತ್ತಿದ್ದ ಬಾರ್ಡ್‌, ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಮೊಟ್ಟಮೊದಲ ಬಾರಿಗೆ ನಮ್ಮ

  ಬಾರ್ಡ್‌ ತಪ್ಪು ಮಾಹಿತಿ ನೀಡಿದ್ದಕ್ಕೆ ಗೂಗಲ್‌ಗೆ 8 ಲಕ್ಷ ಕೋಟಿ ನಷ್ಟ! Read More »

ಅಂತರ್ರಾಷ್ಟ್ರೀಯ ನ್ಯೂಸ್

➤ಮಾರ್ಚ್ 23ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಫೆ.9. ಬೆಂಗಳೂರಿನಲ್ಲಿ ಮಾರ್ಚ್ 23 ರಿಂದ ಮಾರ್ಚ್ 30 ರವರೆಗೆ 14ನೇ ಆವೃತ್ತಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ವಿಶ್ವದಾದ್ಯಂತ 50 ರಿಂದ 55 ದೇಶಗಳಿಂದ ವಿವಿಧ ಭಾಷೆಯ 300 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, 8 ದಿನಗಳ ಕಾಲ ನಡೆಯುವ ಈ ಉತ್ಸವವು ಇತ್ತೀಚಿನ ತಾಂತ್ರಿಕ ಪ್ರವೃತ್ತಿಗಳು ಮತ್ತು ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿನ ಬೆಳವಣಿಗೆಗಳ ವಿನಿಮಯಕ್ಕೆ ವೇದಿಕೆಯನ್ನು ಒದಗಿಸಲಿದೆ.  

➤ಮಾರ್ಚ್ 23ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರ್ನಾಟಕ

ಪ್ರಬಲ ಭೂಕಂಪಕ್ಕೆ ನಡುಗಿದ ಟರ್ಕಿ-ಸಿರಿಯಾ ➤ ದಿನೇ ದಿನೇ ಹೆಚ್ಚುತ್ತಿರುವ ಮೃತರ ಸಂಖ್ಯೆ

(ನ್ಯೂಸ್ ಕಡಬ)newskadaba.com ಟರ್ಕಿ, ಫೆ.09. ಭೀಕರವಾದ ಭೂಕಂಪದಿಂದ ನಡುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಈ ವರೆಗೆ ಮೃತಪಟ್ಟ ಸಂಖ್ಯೆ 15,000ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,391 ಮಂದಿ ಮೃತಪಟ್ಟಿದ್ದಾರೆ, ಸಿರಿಯಾದಲ್ಲಿ 2,992  ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಟರ್ಕಿ-ಸಿರಿಯಾ ಭೂಕಂಪದಿಂದ ಸಾವಿನ ಸಂಖ್ಯೆ 15,000 ದಾಟಿದ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ದೃಢಪಡಿಸಿದ್ದಾರೆ. ಹವಾಮಾನ ಪರಿಸ್ಥಿತಿಗಳು ಭೂಕಂಪದಿಂದ ಉಂಟಾದ ವಿನಾಶದ ಪ್ರಮಾಣವನ್ನು ಹೆಚ್ಚಿಸಿವೆ ಎಂದು ಅವರು ಹೇಳಿದ್ದಾರೆ. ಈ ನಡುವೆ

ಪ್ರಬಲ ಭೂಕಂಪಕ್ಕೆ ನಡುಗಿದ ಟರ್ಕಿ-ಸಿರಿಯಾ ➤ ದಿನೇ ದಿನೇ ಹೆಚ್ಚುತ್ತಿರುವ ಮೃತರ ಸಂಖ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್

➤17 ಗಂಟೆಗಳ ಕಾಲ ಕಟ್ಟಡಗಳ ಅವಶೇಷದ ಕೆಳಗೆ ಸಿಲುಕಿದ ತಮ್ಮನನ್ನು ಕಾಪಾಡಿದ ಏಳು ವರ್ಷದ ಬಾಲಕಿ!

ನ್ಯೂಸ್ ಕಡಬ) newskadaba.com ನವದೆಹಲಿ, ಫೆ.8.  ನವದೆಹಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಅವಶೇಷಗಳ ಕೆಳಗೆ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ತಮ್ಮನ ತಲೆಯನ್ನು ರಕ್ಷಿಸುತ್ತಿರುವ ಪೋಟೋ  ಮನಸ್ಸು ಕರಗಿಸುವಂತಿದೆ. 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದು, ಸುರಕ್ಷಿತವಾಗಿ ಇಬ್ಬರು ಮಕ್ಕಳು ಹೊರಬಂದಿದ್ದಾರೆ. ಸಂಕಟದ ಪರಿಸ್ಥಿಯಲ್ಲೂ ಆಕೆಗಿರುವ ತಮ್ಮನ ಬಗೆಗಿನ ಕಾಳಜಿಗಾಗಿ ಆ ಬಾಲಕಿಯನ್ನು ಅನೇಕರು ಹೊಗಳಿದ್ದಾರೆ.

➤17 ಗಂಟೆಗಳ ಕಾಲ ಕಟ್ಟಡಗಳ ಅವಶೇಷದ ಕೆಳಗೆ ಸಿಲುಕಿದ ತಮ್ಮನನ್ನು ಕಾಪಾಡಿದ ಏಳು ವರ್ಷದ ಬಾಲಕಿ! Read More »

ಅಂತರ್ರಾಷ್ಟ್ರೀಯ ನ್ಯೂಸ್

ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ➤ 30 ಮಂದಿ ಸಾವು, 15 ಜನರಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com ಪಾಕಿಸ್ತಾನ, ಫೆ.08.  ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ 30 ಮಂದಿ ಮೃತಪಟ್ಟಿದ್ದು, 15 ಜನರಿಗೆ ಗಂಭೀರ ಗಾಯಗಳಾಗಿವೆ. ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ ಜಿಲ್ಲೆಯ ಕಾರಕೋರಂ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಗಿಲ್ಗಿಟ್‌ನಿಂದ ರಾವಲ್ಪಿಂಡಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಬಸ್ ಪ್ರಾಂತ್ಯದ ಶಿತಿಯಾಲ್ ಪ್ರದೇಶದಲ್ಲಿ ಎದುರು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಘಟನೆ ಸಂಬಂಧ ಪಾಕಿಸ್ತಾನದ ಅಧ್ಯಕ್ಷ ಡಾ. ಆರಿಫ್ ಅಲ್ವಿ, ಪ್ರಧಾನಿ ಶೆಹಬಾಜ್ ಷರೀಫ್

ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ➤ 30 ಮಂದಿ ಸಾವು, 15 ಜನರಿಗೆ ಗಂಭೀರ ಗಾಯ Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top