ಅಮೇರಿಕಾದಲ್ಲಿ ರಸ್ತೆ ಅಪಘಾತ ➤ ಭಾರತೀಯ ಮೂಲದ ಮಗು ಮೃತ್ಯು.!

(ನ್ಯೂಸ್ ಕಡಬ) newskadaba.com ನ್ಯೂಯಾರ್ಕ್, ಡಿ. 31. ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಎರಡು ವರ್ಷದ ಮಗು ಮೃತಪಟ್ಟ ಘಟನೆ ಅಮೇರಿಕಾದ ನೆವಡಾ ರಾಜ್ಯದಿಂದ ವರದಿಯಾಗಿದೆ‌.

ಮೃತ ಬಾಲಕನನ್ನು ಕ್ಯಾಲಿಫೋರ್ನಿಯಾದ ಐರ್ವಿನ್ ನಲ್ಲಿ ವಾಸವಾಗಿದ್ದ ಆರವ್ ಮುತ್ಯಾಲ ಎಂದು ಗುರುತಿಸಲಾಗಿದೆ. ರಸ್ತೆ ಅಪಘಾತದಲ್ಲಿ ಈತನ ತಲೆಗೆ ಗಂಭೀರ ಗಾಯವಾಗಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Scroll to Top