ಕರಾವಳಿ

ಪುತ್ತೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಕಾರು ಢಿಕ್ಕಿ..! ➤ ಯುವತಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 14. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಟ್ರಾನ್ಸ್ ಫಾರ್ಮರ್ ಗೆ ಢಿಕ್ಕಿ ಹೊಡೆದ ಪರಿಣಾಮ ಯುವತಿ ಗಾಯಗೊಂಡ ಘಟನೆ ಪುತ್ತೂರಿನ ತೆಂಕಿಲ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ವಿದ್ಯುತ್ ಕಂಬ ತುಂಡಾಗಿದೆ. ಯುವತಿಯು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ ಎನ್ನಲಾಗಿದೆ.  

ಪುತ್ತೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಕಾರು ಢಿಕ್ಕಿ..! ➤ ಯುವತಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಮನೆಯಿಂದ ಹೊರಹೋದ ಯುವತಿ ಹಿಂತಿರುಗದೆ ನಾಪತ್ತೆ ➤ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಕಡಬ, ಜ.14. ಮನೆಯಿಂದ ಹೊರಹೋದ ಯುವತಿಯೋರ್ವಳು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಕಡಬದಿಂದ ವರದಿಯಾಗಿದೆ. ನಾಪತ್ತೆಯಾದ ಯುವತಿಯನ್ನು ಕೋಡಿಂಬಾಳ ಗ್ರಾಮದ ಗಾಣದಗುಂಡಿ ನಿವಾಸಿ ರಮೇಶ್ ಎಂಬವರ ಪುತ್ರಿ ದಿವ್ಯಾ(22) ಎಂದು ಗುರುತಿಸಲಾಗಿದೆ. ಬುಧವಾರದಂದು ಮನೆಯಿಂದ ಹೊರಹೋದ ದಿವ್ಯಾ ರಾತ್ರಿಯಾದರೂ ಮನೆಗೆ ಹಿಂತಿರುಗದೆ ಇದ್ದುದರಿಂದ ಸಂಬಂಧಿಕರಲ್ಲಿ ಹಾಗೂ ನೆರೆಕರೆಯವರಲ್ಲಿ ವಿಚಾರಿಸಿ ಪತ್ತೆಯಾಗದ ಹಿನ್ನೆಲೆಯಲ್ಲಿ ಆಕೆಯ ತಂದೆ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕಡಬ: ಮನೆಯಿಂದ ಹೊರಹೋದ ಯುವತಿ ಹಿಂತಿರುಗದೆ ನಾಪತ್ತೆ ➤ ಪೊಲೀಸ್ ದೂರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ಮಾರಕಾಸ್ತ್ರಗಳಿಂದ ಕಡಿದು ವ್ಯಕ್ತಿಯ ಕೊಲೆ ಪ್ರಕರಣ ➤ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ. 14. ಎಲ್ಐಸಿ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಾಂತಪ್ಪ ಗೌಡ ಎಂಬವರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜಯಚಂದ್ರ ಎಂದು ಗುರುತಿಸಲಾಗಿದೆ. ಗುರುವಾರದಂದು ಬೆಳಗ್ಗೆ ಶಾಂತಪ್ಪ ಗೌಡರು ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಆರೋಪಿ ಜಯಚಂದ್ರ ಕೆಲಸದಾಳುಗಳೊಂದಿಗೆ ರಸ್ತೆಬದಿ ಪೊದೆಗಳನ್ನು ಕಡಿಯುತ್ತಿದ್ದ ಸಂದರ್ಭ ಏಕೆ ಪೊದೆಯನ್ನು ಕಡಿಯುವುದಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಜಯಚಂದ್ರ ಅವಾಚ್ಯ ಶಬ್ದಗಳಿಂದ ಶಾಂತಪ್ಪ ಅವರನ್ನು ಬೈದು

ನೆಲ್ಯಾಡಿ: ಮಾರಕಾಸ್ತ್ರಗಳಿಂದ ಕಡಿದು ವ್ಯಕ್ತಿಯ ಕೊಲೆ ಪ್ರಕರಣ ➤ ಆರೋಪಿ ಅರೆಸ್ಟ್..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಕಟ್ಟಡ ಕಾಮಗಾರಿ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 14. ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಮೃತರನ್ನು ವೇಣೂರು ಮುದ್ದಾಡಿ ನಿವಾಸಿ ದಿನೇಶ್ (40) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಇವರು, ಇಂದು ಬೆಳಗ್ಗೆ ಕಟ್ಟಡವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

ಬೆಳ್ತಂಗಡಿ: ಕಟ್ಟಡ ಕಾಮಗಾರಿ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ವ್ಯಕ್ತಿ ಮೃತ್ಯು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಿಸಿಬಿ ಪೊಲೀಸರ್ ಭರ್ಜರಿ ಬೇಟೆ ➤ 22 ಕೇಸುಗಳ ರೌಡಿಶೀಟರ್ ಆಕಾಶಭವನ ಶರಣ್ ಮತ್ತು ನಾಲ್ವರು‌ ಸಹಚರರ ಬಂಧನ…!

(ನ್ಯೂಸ್ ಕಡಬ) newskadaba.com ಮಂಗಳೂರು, ಜ.14. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ 2 ತಿಂಗಳ ಹಿಂದೆ ಜೈಲಿನಿಂದ ಜಾಮೀನಿನ ಮೇರೆಗೆ ಬಿಡುಗಡೆಗೊಂಡಿದ್ದ ಆಕಾಶ ಭವನ ಶರಣ್ ಸಹಿತ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೋಹಿದಾಸ್ ಯಾನೆ ಶರಣ್ ಆಕಾಶಭವನ (38), ಅನಿಲ್ ಕುಮಾರ್ ಸಾಲ್ಯಾನ್ ಯಾನೆ ಅನಿಲ್ ಪಂಪ್ ವೆಲ್ (40), ಸೈನಾಲ್ ಡಿ ಸೋಜಾ (22),

ಸಿಸಿಬಿ ಪೊಲೀಸರ್ ಭರ್ಜರಿ ಬೇಟೆ ➤ 22 ಕೇಸುಗಳ ರೌಡಿಶೀಟರ್ ಆಕಾಶಭವನ ಶರಣ್ ಮತ್ತು ನಾಲ್ವರು‌ ಸಹಚರರ ಬಂಧನ…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ: ಬುಲೆಟ್ ಟ್ಯಾಂಕರ್ ನ ಹಿಂಭಾಗ ಕಾರಿಗೆ ಢಿಕ್ಕಿ ➤ ತೋಡಿಗೆ ಉರುಳಿಬಿದ್ದ ಕಾರು..

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ. 14. ಕಾರೊಂದು ಬುಲೆಟ್ ಟ್ಯಾಂಕರ್ ನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಪಕ್ಕದ ತೋಡಿಗೆ ಬಿದ್ದ ಘಟನೆ ರಾ.ಹೆ 75ರ ನೀರಕಟ್ಟೆ ಎಂಬಲ್ಲಿರುವ ಅಪಾಯಕಾರಿ ತಿರುವಿನಲ್ಲಿ ಸಂಭವಿಸಿದೆ. ಮಂಗಳೂರಿನಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ ಕಾರಿಗೆ ವಿರುದ್ದ ದಿಕ್ಕಿನಿಂದ ಬಂದ ಟ್ಯಾಂಕರ್ ಹಿಂಭಾಗ ಢಿಕ್ಕಿಯಾದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಪಕ್ಕದ ತೋಡಿಗೆ ಬಿದ್ದಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.    

ನೆಲ್ಯಾಡಿ: ಬುಲೆಟ್ ಟ್ಯಾಂಕರ್ ನ ಹಿಂಭಾಗ ಕಾರಿಗೆ ಢಿಕ್ಕಿ ➤ ತೋಡಿಗೆ ಉರುಳಿಬಿದ್ದ ಕಾರು.. Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡಲ್ಲ…! ➤ ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 14. ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುದ್ದಿಗಾಗರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡು ಬಾರಿ ಲಾಕ್ಡೌನ್ ಮಾಡಿದ್ದರಿಂದಾಗಿ ಜನರಿಗೆ ಆರ್ಥಿಕ ಸಮಸ್ಯೆ ಎದುರಾದ ಹಿನ್ನೆಲೆ, ಕೊರೋನಾ ನಿಯಂತ್ರಣದ ವಿಷಯದಲ್ಲಿ ನಿರ್ಲಕ್ಷ್ಯ ತೋರದೇ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತೇವೆ. ಹೀಗಾಗಿ ಲಾಕ್ ಡೌನ್ ಮಾಡುವ ಉದ್ದೇಶ ಸರಕಾರದ ಮುಂದಿಲ್ಲ ಎಂದರು. ತಜ್ಞರ ಪ್ರಕಾರ ಫೆಬ್ರವರಿ ಮೊದಲ ವಾರದಲ್ಲಿ

ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡಲ್ಲ…! ➤ ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆ Read More »

ಕರಾವಳಿ

ಕಡಬ: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ➤ ಆರೋಪಿ ಕಾನ್ಸ್‌ಟೇಬಲ್ ಶಿವರಾಜ್ ಜಾಮೀನು ಅರ್ಜಿ ತಿರಸ್ಕೃತ

(ನ್ಯೂಸ್ ಕಡಬ) newskadaba.com ಕಡಬ, ಜ. 14. ಸಂತ್ರಸ್ತ ಬಾಲಕಿಗೆ ಸಹಾಯ ಮಾಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯನ್ನಾಗಿಸಿದ ಬಳಿಕ ಗರ್ಭಪಾತ ಮಾಡಿಸಿದ ಆರೋಪಕ್ಕೆ ಸಂಬಂಧಿಸಿ ಬಂಧಿತನಾಗಿರುವ ಕಡಬ ಠಾಣಾ ಕಾನ್ಸ್‌ಟೇಬಲ್ ಶಿವರಾಜ್ ಅವರ ಜಾಮೀನು ಅರ್ಜಿಯನ್ನು ಪುತ್ತೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ. ಕಡಬ ತಾಲೂಕಿನ ಗ್ರಾಮವೊಂದರ ಬಾಲಕಿಯನ್ನು ಲೈಂಗಿಕವಾಗಿ ಬಳಸಿ ಆಕೆ ಗರ್ಭವತಿಯಾದಾಗ ಗರ್ಭಪಾತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಶಿವರಾಜ್ ನನ್ನು ಕಳೆದ ಸೆ. 28ರಂದು ಬಂಧಿಸಲಾಗಿತ್ತು. ಇದೀಗ ಬಂಧನವಾಗಿ

ಕಡಬ: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ➤ ಆರೋಪಿ ಕಾನ್ಸ್‌ಟೇಬಲ್ ಶಿವರಾಜ್ ಜಾಮೀನು ಅರ್ಜಿ ತಿರಸ್ಕೃತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕರ್ತವ್ಯ ನಿರತ ಟಿ.ಸಿ ಗೆ ಪ್ರಯಾಣಿಕನಿಂದ ಹಲ್ಲೆ..!

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 14. ಕರ್ತವ್ಯನಿರತ ಕೆಎಸ್ಸಾರ್ಟಿಸಿ ಬಸ್ ಸಂಚಾರ ನಿಯಂತ್ರಣಾಧಿಕಾರಿಗೆ ಪ್ರಯಾಣಿಕನೋರ್ವ ಹಲ್ಲೆ ನಡೆಸಿದ ಘಟನೆ ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರದಂದು ಸಂಜೆ ನಡೆದಿದೆ. ಹಲ್ಲೆಗೊಳಗಾದವರನ್ನು ಸಂಚಾರ ನಿಯಂತ್ರಣಾಧಿಕಾರಿ ಸುಬ್ರಹ್ಮಣ್ಯ ಭಟ್ ಎಂದು ಗುರುತಿಸಲಾಗಿದೆ. ಇವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಕರ್ತವ್ಯ ನಿರತರಾಗಿದ್ದ ವೇಳೆ ಪ್ರಯಾಣಿಕನೋರ್ವ ಕಾಂಞಂಗಾಡಿಗೆ ಹೋಗುವ ಕೇರಳ ಬಸ್ ನ ಮಾಹಿತಿ ಕೇಳಿದ್ದು, ಅದರಂತೆ ಮಾಹಿತಿ ನೀಡಿದ್ದೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಬಂದ ಆತ

ಕರ್ತವ್ಯ ನಿರತ ಟಿ.ಸಿ ಗೆ ಪ್ರಯಾಣಿಕನಿಂದ ಹಲ್ಲೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 14. ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ನಗರಸಭೆ ವಾಣಿಜ್ಯ ಸಂಕೀರ್ಣದ ಸಮೀಪ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಸ್ಥಳಕ್ಕೆ ಪುತ್ತೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top