ನೆಲ್ಯಾಡಿ: ಬುಲೆಟ್ ಟ್ಯಾಂಕರ್ ನ ಹಿಂಭಾಗ ಕಾರಿಗೆ ಢಿಕ್ಕಿ ➤ ತೋಡಿಗೆ ಉರುಳಿಬಿದ್ದ ಕಾರು..



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ. 14. ಕಾರೊಂದು ಬುಲೆಟ್ ಟ್ಯಾಂಕರ್ ನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಪಕ್ಕದ ತೋಡಿಗೆ ಬಿದ್ದ ಘಟನೆ ರಾ.ಹೆ 75ರ ನೀರಕಟ್ಟೆ ಎಂಬಲ್ಲಿರುವ ಅಪಾಯಕಾರಿ ತಿರುವಿನಲ್ಲಿ ಸಂಭವಿಸಿದೆ.








ಮಂಗಳೂರಿನಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ ಕಾರಿಗೆ ವಿರುದ್ದ ದಿಕ್ಕಿನಿಂದ ಬಂದ ಟ್ಯಾಂಕರ್ ಹಿಂಭಾಗ ಢಿಕ್ಕಿಯಾದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಪಕ್ಕದ ತೋಡಿಗೆ ಬಿದ್ದಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.






 

 

error: Content is protected !!
Scroll to Top