ಕರಾವಳಿ

ವಿಟ್ಲ: ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆ..!! ➤ ಕೊಲೆ ಅಥವಾ ಅಪಘಾತ ಶಂಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 29. ಇಲ್ಲಿನ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆಯಾದ ಘಟನೆ ಇಂದು ಬೆಳಕಿಗೆ ಬಂದಿದೆ. ಬದನಾಜೆ ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆಯಾಗಿದ್ದು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಯಾರನ್ನಾದರೂ ಹತ್ಯೆ ಮಾಡಲಾಗಿದೆಯೇ ಅಥವಾ ಅಪಘಾತದ ಗಾಯಾಳುಗಳು ಇಲ್ಲಿ ಕುಳಿತು ಮತ್ತೆ ಆಸ್ಪತ್ರೆಗೆ ತೆರಳಿರಬಹುದೇ ಎಂಬ ಅನುಮಾನಗಳು ಸೃಷ್ಠಿಯಾಗಿವೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ […]

ವಿಟ್ಲ: ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆ..!! ➤ ಕೊಲೆ ಅಥವಾ ಅಪಘಾತ ಶಂಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸಿಎಫ್ಐ ಪುತ್ತೂರು ವತಿಯಿಂದ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 28. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾಧ್ಯಕ್ಷರಾದ ಆರಿಫ್ ಬೆಟ್ಟಂಪಾಡಿ ಜಿಲ್ಲಾ ಕಾರ್ಯದರ್ಶಿ ಫಾರೂಕ್ ಕಟ್ಟತ್ತಾರ್ ಹಾಗೂ ಜಿಲ್ಲಾ ಸಮಿತಿ ಮುಖಂಡರಾದ ರಿಝ್ವಾನ್ ಉಪ್ಪಿನಂಗಡಿ ಶಫೀಕ್ ಬೆಟ್ಟಂಪಾಡಿ ಅರ್ಪಾಝ್ ಪರ್ಲಡ್ಕ ಹಾಗೂ ಇತರೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸಿಎಫ್ಐ ಪುತ್ತೂರು ವತಿಯಿಂದ ಸನ್ಮಾನ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಸಂಪಾಜೆಯಲ್ಲಿ ಮತ್ತೆ ಭೂಕಂಪನ…!!

(ನ್ಯೂಸ್ ಕಡಬ) newskadaba.com ಸಂಪಾಜೆ, ಜೂ. 28. ಸಂಪಾಜೆಯಲ್ಲಿ ಇಂದು ಸಂಜೆ 4.40ರ ವೇಳೆಗೆ ಮತ್ತೆ ಭೂಕಂಪದ ಅನುಭವವಾಗಿದೆ. ಹಲವರಿಗೆ ಈ ಲಘು ಭೂಕಂಪನದ ಬಗ್ಗೆ ದೂರವಾಣಿ ಮೂಲಕ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ 7.45 ಕ್ಕೆ ಭೂಮಿ ಭಾರಿ ಸದ್ದಿನೊಂದಿಗೆ ಕಂಪಿಸಿತ್ತು. ಸಂಪಾಜೆ ಗೂನಡ್ಕ ಸುತ್ತಮುತ್ತಲಿನ ಕೆಲವು ಭಾಗಗಳಲ್ಲಿ ಭಾರಿ ಕಂಪನವಾಗಿತ್ತು. ರಿಕ್ಟರ್ ಮಾಪಕದಲ್ಲಿ 3.0ರ ತೀವ್ರತೆ ಹೊಂದಿದ್ದ ಕಂಪನದಿಂದ ಜನರು ಭಯಭೀತರಾಗಿದ್ದು, ಇದೀಗ ಮತ್ತೆ ಮತ್ತೆ ಭೂಮಿ ಕಂಪಿಸುತ್ತಿರುವುದರಿಂದ ಒಂದು ರೀತಿಯ

ಸಂಪಾಜೆಯಲ್ಲಿ ಮತ್ತೆ ಭೂಕಂಪನ…!! Read More »

ಕರಾವಳಿ, ಕರ್ನಾಟಕ

ವಿದ್ಯಾರ್ಥಿಯ ಮೇಲೆ ಹಲ್ಲೆ ಪ್ರಕರಣ ➤ SYS ದ.ಕ (ಈಸ್ಟ್) ಖಂಡನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 28. ಜೂ. 27ರಂದು ರಾತ್ರಿ ಮಂಗಳೂರು ಪರಿಸರದ ಕೃಷ್ಣಾಪುರ 6ನೇ ಬ್ಲಾಕ್ ಮದ್ರಸದ ಆರನೇ ತರಗತಿಯ ವಿದ್ಯಾರ್ಥಿಯ ಶಯಾನ್ (12) ಎಂಬಾತನ ಮೇಲೆ ನಡೆಸಿದ ದುಷ್ಕರ್ಮಿಗಳ ಹಲ್ಲೆಯನ್ನು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ರಿ.) ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ವಿದ್ಯೆ ಕಲಿಯುವ ಪುಟಾಣಿಗಳನ್ನು ಗುರಿಯಾಗಿಸಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಿರುವುದು ಹೇಯಕೃತ್ಯವಾಗಿದೆ. ಸೌಹಾರ್ಧ ಸಮಾಜವನ್ನು ಒಡೆಯುವ ಹಾಗೂ ಚ್ಯುತಿಯುಂಟು ಮಾಡುವ

ವಿದ್ಯಾರ್ಥಿಯ ಮೇಲೆ ಹಲ್ಲೆ ಪ್ರಕರಣ ➤ SYS ದ.ಕ (ಈಸ್ಟ್) ಖಂಡನೆ Read More »

ಕರಾವಳಿ, ಕರ್ನಾಟಕ

ಸುಳ್ಯ: ವಿಖಾಯ ತರಬೇತಿಗೆ ತಹಶೀಲ್ದಾರ್ ಅನಿತಾ ಲಕ್ಷ್ಮೀ ಭೇಟಿ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 28. ಸುಳ್ಯ ವಲಯ ವಿಖಾಯ ಹಾಗೂ ಎಸ್ಕೆಎಸ್ಸೆಸ್ಸೆಫ್ ಗೂನಡ್ಕ ಶಾಖೆ ವತಿಯಿಂದ ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ಸ್ಮಾರಕ ಮದರಸ ಸಭಾಂಗಣದಲ್ಲಿ ನಡೆಯುತ್ತಿದ್ದ ವಿಖಾಯ ತರಬೇತಿ ಶಿಬಿರಕ್ಕೆ ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿರುವ ವಿಖಾಯ ತಂಡವನ್ನು ಪ್ರಶಂಸನೀಯ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸದಸ್ಯ ಎಸ್ ಕೆ.ಹನೀಫ್, ಸಂಪಾಜೆ ಗ್ರಾಮ ಪಂಚಾಯತ್ ಅಧಿಕಾರಿ

ಸುಳ್ಯ: ವಿಖಾಯ ತರಬೇತಿಗೆ ತಹಶೀಲ್ದಾರ್ ಅನಿತಾ ಲಕ್ಷ್ಮೀ ಭೇಟಿ Read More »

ಕರಾವಳಿ, ಕರ್ನಾಟಕ

ಶಾಂತಿಮೊಗರು: ಗೌಡ ಸಂಸ್ಕೃತಿ ಆಚಾರ – ವಿಚಾರ ಕಾರ್ಯಾಗಾರ ➤ ಗ್ರಾಮ ಸಮಿತಿ ಪುನರ್ ರಚನೆ – ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಜೂ. 28. ಗೌಡ ಸಮುದಾಯದ ಆಚಾರ, ವಿಚಾರ, ಸಂಸ್ಕೃತಿ ಸಂಸ್ಕಾರವನ್ನು ಉಳಿಸಿಕೊಂಡು ಹೋದಲ್ಲಿ ಮಾತ್ರ ಸಮಾಜದಲ್ಲಿ ನಮ್ಮತನ ಉಳಿಯಲು ಸಾಧ್ಯವಿದೆ. ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಪಾಲನೆ ಮಾಡುವುದರೊಂದಿಗೆ ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಕಾರ್ಯವಾಗಬೇಕು ಎಂದು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ವಿ. ನಾರಾಯಣ ಗೌಡ ಹೇಳಿದರು. ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಗೌಡ ಸಂಸ್ಕೃತಿ ಆಚಾರ- ವಿಚಾರ ಕಾರ್ಯಾಗಾರ, ಗ್ರಾಮ ಸಮಿತಿ ಪುನರಚನೆ

ಶಾಂತಿಮೊಗರು: ಗೌಡ ಸಂಸ್ಕೃತಿ ಆಚಾರ – ವಿಚಾರ ಕಾರ್ಯಾಗಾರ ➤ ಗ್ರಾಮ ಸಮಿತಿ ಪುನರ್ ರಚನೆ – ಸನ್ಮಾನ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಸುಳ್ಯ: ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ಭೂಕಂಪನ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 28. ಸುಳ್ಯ ತಾಲೂಕಿನ ಹಲವೆಡೆ ಉಂಟಾದ ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಬಿಡುಗಡೆಗೊಳಿಸಿದ್ದು, ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿರುವುದಾಗಿ ತಿಳಿಸಿದೆ. ಇಂದು ಬೆಳಿಗ್ಗೆ 7: 45 ನಿಮಿಷ 47 ಸೆಕೆಂಡಿಗೆ ಭೂಕಂಪನ ಸಂಭವಿಸಿದ್ದು, ಮಡಿಕೇರಿ ದಕ್ಷಿಣ ಕನ್ನಡ ಗಡಿ ಗ್ರಾಮವಾಗಿರುವ ಚೆಂಬುವಿನಿಂದ 5.2 ವಾಯುವ್ಯ ದಿಕ್ಕಿನಲ್ಲಿ ಭೂಮಿಯ 15 ಕಿಲೋಮೀಟರ್ ಆಳದಲ್ಲಿ ರಿಕ್ಟರ್ ಮಾಪಕ 3.0ರಷ್ಟು ಭೂಕಂಪನವಾಗಿದೆ. ಹೀಗಾಗಿ ಮಡಿಕೇರಿ ತಾಲೂಕಿನ

ಸುಳ್ಯ: ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ಭೂಕಂಪನ ದಾಖಲು Read More »

ಕರಾವಳಿ, ಕರ್ನಾಟಕ

ಜೂ. 29ರಂದು ಪಶು ಸಂಗೋಪನಾ ಸಚಿವ ಕೊಯ್ಲ ಜಾನುವಾರು ಸಂವರ್ಧನಾ ಕೇಂದ್ರಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 28. ಪಶು ಸಂಗೋಪನೆ ಸಚಿವರಾದ ಪ್ರಭು ಬಿ. ಚೌಹಾಣ್ ಅವರು ಜೂ. 29ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.   ವಿವರ ಇಂತಿದೆ: ಅವರು ಜೂ. 29ರ ಬುಧವಾರ ಬೆಳಿಗ್ಗೆ 11 ಗಂಟೆಗೆ ರಸ್ತೆ ಮಾರ್ಗವಾಗಿ ಮಡಿಕೇರಿಯಿಂದ ಕೊಯ್ಲ ಕ್ಕೆ ಆಗಮಿಸುವರು. 11 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಕಡಬ ತಾಲೂಕಿನ ಕೊಯ್ಲ ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಗೋಶಾಲೆ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ

ಜೂ. 29ರಂದು ಪಶು ಸಂಗೋಪನಾ ಸಚಿವ ಕೊಯ್ಲ ಜಾನುವಾರು ಸಂವರ್ಧನಾ ಕೇಂದ್ರಕ್ಕೆ ಭೇಟಿ Read More »

ಕರಾವಳಿ, ಕರ್ನಾಟಕ

ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ➤ ವೇದವ್ಯಾಸ ಕಾಮತ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 28. ಇಪ್ಪತ್ತಮೂರು ವರ್ಷಗಳ ಆಡಳಿತ ನಡೆಸಿ, ಇಂದಿನ ಬಹುದೊಡ್ಡ ಸುಸಜ್ಜಿತ ನಗರವೊಂದಕ್ಕೆ ಶಾಶ್ವತ ಭದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ಎಂದು ಶಾಸಕರಾದ ವೇದವ್ಯಾಸ್ ಕಾಮತ್ ಅವರು ಅಭಿಪ್ರಾಯಪಟ್ಟರು. ಅವರು ಸೋಮವಾರ ನಗರದ ತುಳು ಭವನದ ಸಿರಿ ಚಾವಡಿ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ನಾಡಪ್ರಭು ಕೆಂಪೇಗೌಡ ಜಯಂತಿಗೆ ಚಾಲನೆ

ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ➤ ವೇದವ್ಯಾಸ ಕಾಮತ್ Read More »

ಕರಾವಳಿ, ಕರ್ನಾಟಕ

ಜೂ. 30ರಂದು ಮನಪಾ ಸಾಮಾನ್ಯ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 28. ಇಲ್ಲಿನ ಮಹಾನಗರ ಪಾಲಿಕೆಯ ಪರಿಷತ್ತಿನ ಸಾಮಾನ್ಯ ಸಭೆಯು ಜೂ.30ರ ಬೆಳಿಗ್ಗೆ 11 ಗಂಟೆಗೆ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಪಾಲಿಕೆಯ ಪರಿಷತ್ತು ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ. 30ರಂದು ಮನಪಾ ಸಾಮಾನ್ಯ ಸಭೆ Read More »

ಕರಾವಳಿ, ಕರ್ನಾಟಕ
Scroll to Top