ಕರಾವಳಿ

ಸಿ.ಎನ್.ಜಿ ಬೆಲೆ ಇಳಿಕೆಗೆ ಪತ್ರ ಮುಖೇನ ಮನವಿ ➤ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 28. ಪರಿಸರ ಸ್ನೇಹಿ ಇಂಧನ ಸಿಎನ್‍ಜಿಯ ಬೆಲೆಯನ್ನು ಆದಷ್ಟು ಇಳಿಕೆ ಮಾಡುವಂತೆ ಕೋರಿ ದಕ್ಷಿಣ ಕನ್ನಡದ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾಧಿಕಾರಿಯವರ ಕಚೇರಿಯಿಂದ ಪತ್ರ ಮುಖೇನ ಸಂಬಂಧಿಸಿದ ಕಾರ್ಪೋರೇಟ್ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು. ಅವರು ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿಎನ್‍ಜಿ ಇಂಧನ ದರ ಪರಿಷ್ಕರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಿಎನ್‍ಜಿ ಇಂಧನದ ಬೆಲೆ ಹೆಚ್ಚಳವಾಗಿದ್ದು, […]

ಸಿ.ಎನ್.ಜಿ ಬೆಲೆ ಇಳಿಕೆಗೆ ಪತ್ರ ಮುಖೇನ ಮನವಿ ➤ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ Read More »

ಕರಾವಳಿ, ಕರ್ನಾಟಕ

ಸುಳ್ಯ: ಭೂಕಂಪನದಿಂದ ಹಾನಿಯಾದ ಮನೆಗೆ ತಹಶೀಲ್ದಾರ್ ಭೇಟಿ

(ನ್ಯೂಸ್ ಕಡಬ) newskadaba.com ಗೂನಡ್ಕ, ಜೂ. 28. ಇಲ್ಲಿನ ಕಲ್ಲುಗುಂಡಿ ಗೂನಡ್ಕ ಭಾಗದಲ್ಲಿ ಭೂಕಂಪನದಿಂದ ಹಾನಿಯಾದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದರು. ಗೂನಡ್ಕ ಅಬ್ಬಾಸ್ ಎಂಬವರ ಮನೆಗೆ ದರ್ಖಾಸ್ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಪಿಕೆ ಅಬುಸಾಲಿ ಹಾಗೂ ಸಿದ್ದೀಕ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ ಸುಳ್ಯ ಎಸ್.ಐ.ದಿಲೀಪ್ ಕುಮಾರ್, ಸಂಪಾಜೆ ಪಿಡಿಓ ಸರಿತಾ ಡಿಸೋಜಾ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸದಸ್ಯರಾದ ಶೌವಾದ್ ಗೂನಡ್ಕ, ಎಸ್.ಕೆ.ಹನೀಫ್,

ಸುಳ್ಯ: ಭೂಕಂಪನದಿಂದ ಹಾನಿಯಾದ ಮನೆಗೆ ತಹಶೀಲ್ದಾರ್ ಭೇಟಿ Read More »

ಕರಾವಳಿ, ಕರ್ನಾಟಕ

ಮಂಗಳೂರು: ಬೈಕ್ ಗಳ ನಡುವೆ ಢಿಕ್ಕಿ ➤ ರಸ್ತೆಗೆಸೆಯಲ್ಪಟ್ಟ ಮಹಿಳೆಯ ಕೈ ಮೇಲೆ ಹರಿದ ಲಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 28. ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಮಹಿಳೆಯ ಕೈ ಮೇಲೆ ಲಾರಿ ಹರಿದ ಘಟನೆ ಕೆಪಿಟಿ ಜಂಕ್ಷನ್ ನಲ್ಲಿ ನಡೆದಿದೆ. ಗಾಯಾಳು ಮಹಿಳೆಯನ್ನು ಮರಿಯಮ್ಮ(47) ಎಂದು ಗುರುತಿಸಲಾಗಿದೆ. ಹನೀಫ್ ಎಂಬವರು ಕೆಪಿಟಿಯ ಪೆಟ್ರೋಲ್ ಪಂಪ್ ನಲ್ಲಿ ಬೈಕ್ ಪೆಟ್ರೋಲ್ ಹಾಕಿಸಿ ವಿಟ್ಲ ಕಡೆಗೆ ಹೋಗಲು ಹೆದ್ದಾರಿ ಪ್ರವೆಶಿಸಿದ್ದರು. ಅವಾಗ ವಿರುದ್ದ ದಿಕ್ಕಿನಿಂದ ಬಂದ ಬೈಕೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನ ಹಿಂಬದಿ ಕುಳಿತಿದ್ದ ಮರಿಯಮ್ಮ ಎಂಬವರು

ಮಂಗಳೂರು: ಬೈಕ್ ಗಳ ನಡುವೆ ಢಿಕ್ಕಿ ➤ ರಸ್ತೆಗೆಸೆಯಲ್ಪಟ್ಟ ಮಹಿಳೆಯ ಕೈ ಮೇಲೆ ಹರಿದ ಲಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆ ➤ ಠಾಣೆಯ ಮುಂಭಾಗ ಮುರಿದು ಬಿದ್ದ ಮರ – ವಿದ್ಯುತ್ ಕಂಬಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಜೂ.28. ಮಂಗಳವಾರ ಬೆಳಗ್ಗಿನಿಂದಲೇ ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಕಡಬ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮರವೊಂದು ರಸ್ತೆಗುರುಳಿದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಠಾಣೆಯ ನಾಮಫಲಕ ಮುರಿದಿದ್ದು, ರಸ್ತೆಯ ಪಕ್ಕದಲ್ಲೇ ಹಲವು ವಾಹನಗಳನ್ನು ನಿಲ್ಲಿಸಲಾಗಿತ್ತಾದರೂ, ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ವಿದ್ಯುತ್ ಕಂಬಗಳು ಮುರಿದ ಪರಿಣಾಮ ವಿದ್ಯುತ್ ವ್ಯತ್ಯಯವುಂಟಾಗಿದೆ.  

ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆ ➤ ಠಾಣೆಯ ಮುಂಭಾಗ ಮುರಿದು ಬಿದ್ದ ಮರ – ವಿದ್ಯುತ್ ಕಂಬಗಳಿಗೆ ಹಾನಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸುಳ್ಯ: ಯುವಕನಿಗೆ ಬೆದರಿಸಿ ಮೊಬೈಲ್ ಫೋನ್ ಹಾಗೂ ನಗದು ದರೋಡೆ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 28. ಹಾಸನಕ್ಕೆ ವ್ಯಾಪಾರಕ್ಕೆ ಹೋಗಿದ್ದ ಜಯನಗರ ಮೂಲದ ಯುವಕನ ಕೈಯಿಂದ ಯಾರೋ ಅಪರಿಚಿತರು ತಡರಾತ್ರಿ ಒಂದು ಗಂಟೆಯ ವೇಳೆಗೆ ಮೊಬೈಲ್ ಹಣ ಕದ್ದೊಯ್ದ ಘಟನೆ ವರದಿಯಾಗಿದೆ. ಸುಳ್ಯ ಜಯನಗರ ನಿವಾಸಿ ಪ್ರದೀಪ್ ಎಂಬ ಯುವಕ ಹಾಸನದಲ್ಲಿ ಮಸಾಲೆ ಪದಾರ್ಥಗಳ ಲೈನ್ ಸೇಲ್ ಗೆಂದು ಹೋಗಿದ್ದ ಈತ ಸೋಮವಾರ ರಾತ್ರಿ ಒಂದು ಗಂಟೆಯ ವೇಳೆಗೆ ಬಸ್ಸಿನಿಂದ ಇಳಿದು ರೂಮಿಗೆ ಹೋಗುತ್ತಿದ್ದ ಸಂದರ್ಭ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಚೂರಿ ತೋರಿಸಿ ಆತನ

ಸುಳ್ಯ: ಯುವಕನಿಗೆ ಬೆದರಿಸಿ ಮೊಬೈಲ್ ಫೋನ್ ಹಾಗೂ ನಗದು ದರೋಡೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಅಪರಿಚಿತ ವ್ಯಕ್ತಿಗೆ ಬೈಕ್ ಢಿಕ್ಕಿ- ಮೃತ್ಯು..! ➤ ಗುರುತು ಪತ್ತೆಗೆ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ. 28. ಇಲ್ಲಿನ ಆಟೋ ರಿಕ್ಷಾ ನಿಲ್ದಾಣದ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಯೋರ್ವರಿಗೆ ಬುಲೆಟ್ ಬೈಕ್ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ. ಅಂದಾಜು 65 ವರ್ಷ ಆಸುಪಾಸಿನ ಅಪರಿಚಿತ ವ್ಯಕ್ತಿಯಾಗಿದ್ದು, ಗುರುತು ಪತ್ತೆಯಾಗದ ಹಿನ್ನೆಲೆ ವ್ಯಕ್ತಿಯ ಗುರುತು ಇರುವವರು ಪುತ್ತೂರು ಸಂಚಾರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಉಪ್ಪಿನಂಗಡಿ: ಅಪರಿಚಿತ ವ್ಯಕ್ತಿಗೆ ಬೈಕ್ ಢಿಕ್ಕಿ- ಮೃತ್ಯು..! ➤ ಗುರುತು ಪತ್ತೆಗೆ ಮನವಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

“ಕಡಬ ರೆಸಿಡೆನ್ಸಿ” ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜೂ. 28. ಇಲ್ಲಿನ ಮುಖ್ಯರಸ್ತೆಯಲ್ಲಿರುವ ಶ್ರೀರಾಮ ಟವರ್ಸ್ ಹಿಂಭಾಗದಲ್ಲಿ ನೂತನವಾಗಿ ಆರಂಭಗೊಂಡಿರುವ ಕಡಬ ರೆಸಿಡೆನ್ಸಿ ಎಸಿ ಹಾಗೂ ನಾನ್ ಎಸಿ ಫ್ಯಾಮಿಲಿ ರೆಸ್ಟೋರೆಂಟ್‌ನ ಉದ್ಘಾಟನಾ ಸಮಾರಂಭವು ಜೂ.26ರಂದು ನಡೆಯಿತು. ಇದರ ಉದ್ಘಾಟನೆಯನ್ನು ಕೇರಳದ ಹಿರಿಯ ಉದ್ಯಮಿ ಇ.ಪಿ.ಥಾಮಸ್ ರವರು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ದೀಪ ಬೆಳಗಿಸಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಬೆಳೆಯುತ್ತಿರುವ ಕಡಬ ಪೇಟೆಯಲ್ಲಿ ಈ ರೀತಿಯ ಸುಸಜ್ಜಿತವಾದ ವ್ಯವಸ್ಥೆ ಅಗತ್ಯವಾಗಿ ಬೇಕಾಗಿತ್ತು. ಅದು ಇಂದು

“ಕಡಬ ರೆಸಿಡೆನ್ಸಿ” ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ Read More »

ಕರಾವಳಿ, ಕರ್ನಾಟಕ

ಕಡಬ: ಬಿಜೆಪಿ ಸರಕಾರ 8 ವರ್ಷ ಪೂರೈಸಿದ ಹಿನ್ನೆಲೆ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳ ಹೋರಾಟಗಾರರಿಗೆ ಗೌರವಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ. 28. ಬಿಜೆಪಿ ಸುಳ್ಯ ಮಂಡಲ ವತಿಯಿಂದ ಕೇಂದ್ರದ ಮೋದಿ ನೇತೃತ್ವದ ಸರಕಾರ 8 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಸೇವೆ, ಸುಶಾಸನ, ಬಡವರ ಕಲ್ಯಾಣ ಯೋಜನೆಯಡಿ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳ ಹೋರಾಟಗಾರರಿಗೆ ಗೌರವಾರ್ಪಣೆ ಕಾರ್ಯಕ್ರಮವು ನೂಜಿಬಾಳ್ತಿಲ ಕಲ್ಲುಗುಡ್ಡೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಮಳೇಲ ಶೇಖರ ಗೌಡ ಮತ್ತು ಜಯವರ್ಮ ಜೈನ್, ಸುಜೇತ ಜೈನ್ ದಂಪತಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ,

ಕಡಬ: ಬಿಜೆಪಿ ಸರಕಾರ 8 ವರ್ಷ ಪೂರೈಸಿದ ಹಿನ್ನೆಲೆ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳ ಹೋರಾಟಗಾರರಿಗೆ ಗೌರವಾರ್ಪಣೆ Read More »

ಕರಾವಳಿ, ಕರ್ನಾಟಕ

ಕಡಬ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ. 27. ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಠಾಣಾ ವ್ಯಾಪ್ತಿಯ ಕೋಡಿಂಬಾಳ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ಕೊಡಿಂಬಾಳ ಕೊಡೆಂಕೇರಿ ನಿವಾಸಿ ತೋಮಸ್ (63) ಎಂದು ಗುರುತಿಸಲಾಗಿದೆ. ಅವರು ತನ್ನ ಮನೆಯಲ್ಲಿ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಅಲ್ಯೂಮಿನಿಯಂ ಕೊಕ್ಕೆ ವಿದ್ಯುತ್ ತಂತಿಗೆ ತಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಮೆಸ್ಕಾಂ ಎಇಟಿ ಸಜಿಕುಮಾರ್, ಮೆಸ್ಕಾಂ ಎಇಇ ಸತ್ಯನಾರಾಯಣ, ಪೊಲೀಸ್

ಕಡಬ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬಟ್ಟೆಯನ್ನು ನುಂಗಿದ ನಾಗರಹಾವು..!! ➤ ಸುರಕ್ಷಿತವಾಗಿ ಹೊರತೆಗೆದು ಕಾಡಿಗೆಬಿಟ್ಟ ಸ್ನೇಕ್ ಅಶೋಕ್

(ನ್ಯೂಸ್ ಕಡಬ) newskadaba.com ಕಳೆಂಜ, ಜೂ. 27. ಕಳೆಂಜ ಗ್ರಾಮದ ಶಾಲೆತ್ತಡ್ಕ ನಿವಾಸಿ ಅಶೋಕ್ ಪೂಜಾರಿ ಎಂಬವರ ಮನೆಯ ಪಕ್ಕದಲ್ಲಿ ನಾಗರಹಾವೊಂದು ಬಟ್ಟೆಯನ್ನು ನುಂಗಿದ ಘಟನೆ ವರದಿಯಾಗಿದೆ. ಇದನ್ನು ಗಮನಿಸಿದ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಎಂಬವರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಧಾವಿಸಿದ ಅವರು ನಾಗರಹಾವನ್ನು ಹಿಡಿದು ನುಂಗಿದ್ದ ಬಟ್ಟೆಯನ್ನು ಹೊರತೆಗೆದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಬಟ್ಟೆಯನ್ನು ನುಂಗಿದ ನಾಗರಹಾವು..!! ➤ ಸುರಕ್ಷಿತವಾಗಿ ಹೊರತೆಗೆದು ಕಾಡಿಗೆಬಿಟ್ಟ ಸ್ನೇಕ್ ಅಶೋಕ್ Read More »

ಕರಾವಳಿ, ಕರ್ನಾಟಕ
Scroll to Top