ಕರಾವಳಿ

ಮಂಗಳೂರು: ಟೆಂಪೋ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿ..! ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 29. ಚಲಿಸುತ್ತಿದ್ದ ಟೆಂಪೋವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಹೊರವಲಯದ ಮುಲ್ಕಿ ಕೊಲ್ನಾಡು ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ನಡೆದಿದೆ. ಮೃತಚಾಲಕನನ್ನು ಕೆಎಸ್.ರಾವ್ ನಗರ ವಿಜಯಪುರ ಕಾಲೊನಿ ನಿವಾಸಿ ಯಶವಂತರಾಯ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಭಗವಂತರಾಯ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸಕ್ಕೆಂದು ಟೆಂಪೋದಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. […]

ಮಂಗಳೂರು: ಟೆಂಪೋ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿ..! ➤ ಚಾಲಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ತೆಂಗಿನ ಸಿಪ್ಪೆಯ ರಾಶಿಗೆ ತಗುಲಿದ ಬೆಂಕಿ ➤ ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 29. ತೆಂಗಿನಕಾಯಿ ಸಿಪ್ಪೆ ಮತ್ತು ಕಟ್ಡಿಗೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಕೆಮ್ಮಾಯಿಯಲ್ಲಿ ವರದಿಯಾಗಿದೆ. ಕೆಮ್ಮಾಯಿ ನಿವಾಸಿ ಇಬ್ರಾಹಿಂ ಎಂಬವರು ಮನೆಯ ಪಕ್ಕದಲ್ಲಿ ರಾಶಿ ಹಾಕಿದ್ದ ತೆಂಗಿನಕಾಯಿ ಸಿಪ್ಪೆ ಮತ್ತು ಕಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಶಾಮಕದಳ ಸಿಬ್ಬಂದಿಗಳು ಬೆಂಕಿ ನಂದಿಸಿ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪುತ್ತೂರು: ತೆಂಗಿನ ಸಿಪ್ಪೆಯ ರಾಶಿಗೆ ತಗುಲಿದ ಬೆಂಕಿ ➤ ತಪ್ಪಿದ ಭಾರೀ ಅನಾಹುತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಶ್ರೀ.ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಪರಿಸರ ಜಾಗೃತಿ ಮಾಹಿತಿ ಹಾಗೂ ಗಿಡಗಳ ನಾಟಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ರೆಂಜಿಲಾಡಿ, ಜೂ. 29.‌ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಡಬ ವಲಯದ ರೆಂಜಿಲಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಹಾಗೂ ಗಿಡಗಳ ನಾಟಿ ಮಾಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ವಲಯ ಮೇಲ್ವಿಚಾರಕ ರವಿಪ್ರಸಾದ್, ಪ್ರತೀ ಜೀವ ಸಂಕುಲನಕ್ಕೆ ಪ್ರಕೃತಿಯ ಕೊಡುಗೆ ಮಹತ್ತರವಾದುದು. ಧರ್ಮಸ್ಥಳ ಯೋಜನೆಯ ಹಲವು ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣಾ ಜಾಗೃತಿ ಮೂಡಿಸುವ ಕಾರ್ಯಕ್ರಮವೂ ಒಂದಾಗಿದೆ. ನಾವು ಪ್ರಕೃತಿಯ ಆಸರೆ ಪಡೆದಷ್ಟು ಪ್ರಕೃತಿಯ ಸಂಪತ್ತು

ಕಡಬ: ಶ್ರೀ.ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಪರಿಸರ ಜಾಗೃತಿ ಮಾಹಿತಿ ಹಾಗೂ ಗಿಡಗಳ ನಾಟಿ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಉದ್ಯೋಗಿನಿ ಯೋಜನೆಯಡಿ ಸಹಾಯಧನಕ್ಕೆ ಮಹಿಳೆಯರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 29. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಂಡ ಉದ್ಯೋಗಿನಿ ಯೋಜನೆಯಲ್ಲಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇ.50 ಹಾಗೂ ಇತರೆ ವರ್ಗದ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕಿನಿಂದ ಶೇ.30 ಸಹಾಯಧನ ಪಡೆಯಲು ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಂಬಂಧಿಸಿದ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದು ಜುಲೈ 31ರೊಳಗೆ ಭರ್ತಿ ಮಾಡಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ತಾಲೂಕಿನ

ಉದ್ಯೋಗಿನಿ ಯೋಜನೆಯಡಿ ಸಹಾಯಧನಕ್ಕೆ ಮಹಿಳೆಯರಿಂದ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಮಂಗಳೂರು: ಸರಕು ಸಾಗಾಟದ ಹಡಗು ಮುಳುಗಡೆ ಹಿನ್ನೆಲೆ ➤ ಮೀನುಗಾರಿಗೆ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 29. ಉಳ್ಳಾಲ ವಲಯದ ಬಟ್ಟಪ್ಪಾಡಿ ಹತ್ತಿರದ ಸಮುದ್ರದಲ್ಲಿ ಪ್ರಿನ್ಸೆಸ್ ಮಿರಾಲ್ ಹೆಸರಿನ ಸರಕು ಸಾಗಾಟದ ಹಡಗು ಮುಳುಗಿದ್ದು, ಹಡಗಿನ ಡರ್ಟಿ ವಾಟರ್ ಟ್ಯಾಂಕಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ವಲಯದ ಸುತ್ತಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಸರಕು ಸಾಗಾಟದ ಹಡಗು ಮುಳುಗಡೆ ಹಿನ್ನೆಲೆ ➤ ಮೀನುಗಾರಿಗೆ ನಿಷೇಧ Read More »

ಕರಾವಳಿ, ಕರ್ನಾಟಕ

ಕಿಡ್ನಾಪ್ ಮಾಡಿ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆಂದು ತಂದೆ-ತಾಯಿಗೆ ವಂಚನೆ ➤ “ಇದು ಪೋಷಕರ ಹಣ ಲಪಟಾಯಿಸುವ ನಾಟಕ” ಎಂದ ಮಗ..!!!!

(ನ್ಯೂಸ್ ಕಡಬ) newskadaba.com ಉಡುಪಿ, ಜೂ. 29. ಮೋಜು ಮಸ್ತಿಗಾಗಿ ಸ್ವತಃ ಮಗನೇ ತಂದೆ ತಾಯಿಯ ಜೊತೆ ಅಪಹರಣದ ನಾಟಕವಾಡಿ ಐದು ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟ ಘಟನೆ ಅಂಬಾಗಿಲು ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ವರುಣ್ ನಾಯಕ್ ಎಂದು ಗುರುತಿಸಲಾಗಿದೆ. ಈತ ಜೂ. 26ರ ಮುಂಜಾನೆ ಮೂರು ಗಂಟೆ ಸುಮಾರಿಗೆ ತಂದೆ ತಾಯಿಗೆ ಕರೆ ಮಾಡಿ, ನನ್ನನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಬಿಡುಗಡೆ ಮಾಡಲು ಐದು ಲಕ್ಷ ರೂ. ಕೊಡುವಂತೆ ಬೇಡಿಕೆಇಟ್ಡಿದ್ದು, ಕೂಡಲೇ ಐದು ಲಕ್ಷ

ಕಿಡ್ನಾಪ್ ಮಾಡಿ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆಂದು ತಂದೆ-ತಾಯಿಗೆ ವಂಚನೆ ➤ “ಇದು ಪೋಷಕರ ಹಣ ಲಪಟಾಯಿಸುವ ನಾಟಕ” ಎಂದ ಮಗ..!!!! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ: ಮಗುವನ್ನು ಜೊತೆಗೆ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ- ಮೃತ್ಯು..! ➤ ಅದೃಷ್ಟವಶಾತ್ ಬದುಕುಳಿದ ಮಗು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 29. ಮಗುವನ್ನು ಜೊತೆಗೆ ಕಟ್ಟಿಕೊಂಡು ತಾಯಿಯು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ತಳೂರು ದಯಾನಂದ ಎಂಬವರ ಪತ್ನಿ ಗೀತಾ ಎಂದು ಗುರುತಿಸಲಾಗಿದೆ. ಇವರು ಎನ್.ಎಮ್.ಸಿ ನಲ್ಲಿ ಕಛೇರಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಮಗು ಅದೃಷ್ಟವಶಾತ್ ಕೆರೆಯೊಳಗಿದ್ದ ಕಲ್ಲಿನ ಸಹಾಯದಿಂದ ಬದುಕುಳಿದಿದ್ದು, ಸ್ಥಳೀಯರ ಸಹಾಯದಿಂದ ರಕ್ಷಿಸಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಳ್ಯ: ಮಗುವನ್ನು ಜೊತೆಗೆ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ- ಮೃತ್ಯು..! ➤ ಅದೃಷ್ಟವಶಾತ್ ಬದುಕುಳಿದ ಮಗು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆ -ಪ್ರಕರಣ ➤ ಕುಡುಕ ವ್ಯಕ್ತಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 29. ಇಲ್ಲಿನ ಸಾರ್ವಜನಿಕ ಬಸ್ ‌ನಿಲ್ದಾಣದಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವ್ಯಕ್ತಿಯೋರ್ವರು ಕುಡಿದ ಮತ್ತಿನಲ್ಲಿ ಬಿದ್ದು ಉಂಟಾದ ಘಟನೆ ಎಂದು ತಿಳಿದುಬಂದಿದೆ. ಬದನಾಜೆ ಬಸ್ ನಿಲ್ದಾಣದ ಪಕ್ಕದಲ್ಲಿ ಹಾಲು ಸಂಗ್ರಹಣಾ ಕೇಂದ್ರವಿದ್ದು, ಅಲ್ಲಿಗೆ ಬಂದವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯು ಸಾರ್ವಜನಿಕ ವಲಯದಲ್ಲಿ ಭಾರೀ ಊಹಾಪೋಹಗಳಿಗೆ ಕಾರಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಅದರಂತೆ ಓರ್ವನನ್ನು ಬಂಧಿಸಿ ಮಾಹಿತಿ

ವಿಟ್ಲ: ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆ -ಪ್ರಕರಣ ➤ ಕುಡುಕ ವ್ಯಕ್ತಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ಪಾತ್ರೆಗಳ ಕಳವು ಪ್ರಕರಣ ➤ ಓರ್ವ ಅಂದರ್..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 29. ಒಂಟಿ ಮಹಿಳೆ ವಾಸವಿದ್ದ ಮನೆಯ ಹೊರಗಡೆ ತೊಳೆದಿಟ್ಟಿದ್ದ ಪಾತ್ರೆಗಳನ್ನು ಕಳ್ಳತನಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಯನ್ನು ಅಗರಂಗಡಿ ನಿವಾಸಿ ಪ್ರವೀಣ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಈತನ ಸಹೋದರ ಸತೀಶ್ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು ಜೂ. 25ರಂದು ಮನೆಯ ಹೊರಗಡೆ ಇದ್ದ ಸುಮಾರು 3500ರೂ. ಮೌಲ್ಯದ ಪಾತ್ರೆಗಳನ್ನು ಕಳ್ಳತನಗೈದಿದ್ದರು. ಈ ಕುರಿತು ಅಗರಂಗಡಿ ನಿವಾಸಿ ಪದ್ಮನಾಭ ನಾಯಕ್ ಅವರು ನೀಡಿದ ದೂರಿನಂತೆ

ಬಂಟ್ವಾಳ: ಪಾತ್ರೆಗಳ ಕಳವು ಪ್ರಕರಣ ➤ ಓರ್ವ ಅಂದರ್..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಲ್ಲಡ್ಕ ಪೇಟೆಯ ಸ್ವಚ್ಚತೆಗೆ ಸವಾಲಾಗಿರುವ ಕಸದ ರಾಶಿ..! ➤ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 29. ಬೆಳೆಯುತ್ತಿರುವ ಪಟ್ಟಣ ಕಲ್ಲಡ್ಕದಲ್ಲಿ ತ್ಯಾಜ್ಯ ನಿರ್ವಹಣೆ ಕಾರ್ಯ ಸಮರ್ಪಕವಾಗಿ ನಡೆಯದೇ ಇರುವುದು ಸ್ವಚ್ಚತೆಗೆ ಸವಾಲಾಗಿ ಪರಿಣಮಿಸಿದೆ. ಪೇಟೆಯ ಕಲ್ಲಡ್ಕ ವಿಟ್ಲ ರಸ್ತೆಯ ಉದ್ದಗಲಕ್ಕೂ ಜನರು ಕಸ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಈಗಾಗಲೇ ಡೆಂಗ್ಯೂ, ಹಂದಿಜ್ವರ ಎಲ್ಲೆಡೆ ವ್ಯಾಪಿಸಿದ್ದು ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ದಿನಂಪ್ರತಿ ಕಸ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಪೇಟೆಯ ಸ್ವಚ್ಚತೆ ಕಾಪಾಡದಿದ್ದಲ್ಲಿ ಮುಂದೆ ಸಾಂಕ್ರಾಮಿಕ ರೋಗದ ತಾಣವಾಗಿ ಕಲ್ಲಡ್ಕ ಪೇಟೆಯು

ಕಲ್ಲಡ್ಕ ಪೇಟೆಯ ಸ್ವಚ್ಚತೆಗೆ ಸವಾಲಾಗಿರುವ ಕಸದ ರಾಶಿ..! ➤ ಎಚ್ಚೆತ್ತುಕೊಳ್ಳದ ಅಧಿಕಾರಿಗಳು Read More »

ಕರಾವಳಿ, ಕರ್ನಾಟಕ
Scroll to Top