ಕರಾವಳಿ

ಕಡಬ: ಕ್ಷುಲ್ಲಕ ವಿಚಾರಕ್ಕೆ ಇತ್ತಂಡಗಳ ನಡುವೆ ಹಲ್ಲೆ ➤‌ ಇಬ್ಬರು ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಆ. 15. ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಇತ್ತಂಡದೊಳಗೆ ಹಲ್ಲೆ ನಡೆದು, ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಆತೂರಿನಲ್ಲಿ ಸೋಮವಾರದಂದು ಸಂಜೆ ನಡೆದಿದೆ. ಹಲ್ಲೆಗೊಳಗಾದವರನ್ನು ಆತೂರು ಜನತಾ ಕಾಲೊನಿ ನಿವಾಸಿ ನವಾಜ್ ಎಂಬವರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆತೂರಿನ ನೌಫಲ್ ಎಂಬವರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.  

ಕಡಬ: ಕ್ಷುಲ್ಲಕ ವಿಚಾರಕ್ಕೆ ಇತ್ತಂಡಗಳ ನಡುವೆ ಹಲ್ಲೆ ➤‌ ಇಬ್ಬರು ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನಾಲ್ವರ ಹಂತಕ ಪ್ರವೀಣ್ ಬಿಡುಗಡೆ ಸಾಧ್ಯತೆ ಕಡಿಮೆ ➤‌ ಎಸ್ಪಿ ಋಷಿಕೇಶ್ ಸೋನಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 15. ಚಿನ್ನಾಭರಣಕ್ಕಾಗಿ ನಾಲ್ವರು ಸಂಬಂಧಿಕರನ್ನೇ ಹತ್ಯೆ ಮಾಡಿದ ಪ್ರಕರಣದಲ್ಲಿ ಸುದೀರ್ಘ 28 ವರ್ಷಗಳ ಜೈಲು ವಾಸದಲ್ಲಿರುವ ಪ್ರವೀಣ್ ಕುಮಾರ್ ಎಂಬಾತನ ಬಿಡುಗಡೆ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ. ಸನ್ನಡತೆಯ ಆಧಾರದಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭ ಬಿಡುಗಡೆಯಾಗುವ ಕೈದಿಗಳ ಪೈಕಿ ಪ್ರವೀಣ್‌ ಕುಮಾರ್‌ ಹೆಸರು ಕೂಡಾ ಸೇರ್ಪಡೆಯಾಗಿತ್ತು. ಈತನ ಬಿಡುಗಡೆಗೂ ಮುನ್ನ ಪ್ರವೀಣ್ ಬಗ್ಗೆ ವರದಿ ನೀಡುವಂತೆ ಕಾರಾಗೃಹ ಇಲಾಖೆಯು ದ.ಕ.ಜಿಲ್ಲಾ ಪೊಲೀಸರಿಂದ ವರದಿಯನ್ನು ಕೇಳಿತ್ತು. ಈ ಹಿನ್ನೆಲೆ ಪ್ರವೀಣ್ ಕುಟುಂಬಸ್ಥರ

ನಾಲ್ವರ ಹಂತಕ ಪ್ರವೀಣ್ ಬಿಡುಗಡೆ ಸಾಧ್ಯತೆ ಕಡಿಮೆ ➤‌ ಎಸ್ಪಿ ಋಷಿಕೇಶ್ ಸೋನಾವಣೆ Read More »

ಕರಾವಳಿ, ಕರ್ನಾಟಕ

ಎಸ್ವೈಎಸ್ ಮಾಣಿ ಸೆಂಟರ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಾಣಿ, ಆ. 15. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ಮಾಣಿ ಸೆಂಟರ್ ಹಾಗೂ ಎಸ್ಸೆಸ್ಸೆಫ್ ಮತ್ತು ಎಸ್‌ವೈ‌ಎಸ್ ಸೂರಿಕುಮೇರು ಇದರ ಜಂಟಿ ಆಶ್ರಯದಲ್ಲಿ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಇಲ್ಲಿನ ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಂಟರ್ ನಾಯಕರಾದ ಯೂಸುಫ್ ಹಾಜಿ ಸೂರಿಕುಮೇರು ಧ್ವಜಾರೋಹಣಗೈದರು. ಇಬ್ರಾಹಿಂ ಸಅದಿ ಮಾಣಿ ಮುಖ್ಯ ಭಾಷಣ ಮಾಡಿದರು, ಹೈದರ್ ಸಖಾಫಿ ಗಡಿಯಾರ ದುಆ ನೆರವೇರಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಪೇರಮೊಗರು

ಎಸ್ವೈಎಸ್ ಮಾಣಿ ಸೆಂಟರ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ Read More »

ಕರಾವಳಿ

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ ದ.ಕ ಜಿಲ್ಲಾ ಸಮಿತಿ ವತಿಯಿಂದ ಪುಂಜಾಲಕಟ್ಟೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಪೂಂಜಾಲಕಟ್ಟೆ, ಆ. 15. ದಕ್ಷಿಣ ಕನ್ನಡ ಜಿಲ್ಲಾ ಇಮಾಮ್ಸ್ ಕೌನ್ಸಿಲ್‌ ವತಿಯಿಂದ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಕಾರ್ಯಕ್ರಮವು ಪೂಂಜಾಲಕಟ್ಟೆ ಜಂಕ್ಶನ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಇಮಾಮ್ಸ್ ಕೌನ್ಸಿಲ್‌ ಕರಾವಳಿ ಪ್ರಾಂತ್ಯ ಅಧ್ಯಕ್ಷ ಜಾಪರ್ ಸಾಧಿಕ್ ಫೈಝಿ, ಈ ಅಮೃತ ಮಹೋತ್ಸವದ ಸಂಭ್ರಮವು ಕೆಲವರಿಗೆ ಮಾತ್ರ ಸೀಮಿತವಾಗಿದೆ. ಪ್ರಭುತ್ವಕ್ಕೆ ಅಮೃತವಾದರೆ ಭ್ರಷ್ಟರಿಗೆ , ಕೊಲೆಗಡುಕರಿಗೆ, ಗೂಂಡಾಗಳಿಗೆ , ಅಶಾಂತಿ ಹರಡುವವರಿಗೆ ಉತ್ಸವವಾಗಿದೆ. ದೇಶದ ಅಲ್ಪಸಂಖ್ಯಾತರಿಗೆ, ದಲಿತರಿಗೆ, ರೈತರಿಗೆ, ಕಾರ್ಮಿಕರಿಗೆ, ವಿದ್ಯಾವಂತರಿಗೆ

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ ದ.ಕ ಜಿಲ್ಲಾ ಸಮಿತಿ ವತಿಯಿಂದ ಪುಂಜಾಲಕಟ್ಟೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ Read More »

ಕರಾವಳಿ, ಕರ್ನಾಟಕ

ಮರ್ಧಾಳ: ಶ್ರೀ ಅಯ್ಯಪ್ಪ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ನೇಮಕ ➤‌ ಅಧ್ಯಕ್ಷರಾಗಿ ಪ್ರೇಮಸಾಗರ ಆಳ್ವ ಅತ್ಲಾಜೆ ಆಯ್ಕೆ

(ನ್ಯೂಸ್ ಕಡಬ) newskadaba.com ಮರ್ಧಾಳ, ಆ. 15. ಶ್ರೀ ಅಯ್ಯಪ್ಪ ಭಜನಾ ಮಂಡಳಿ ಮರ್ಧಾಳ ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಭಜನಾ ಮಂಡಳಿ ಗೌರವಾಧ್ಯಕ್ಷರಾಗಿ ಶ್ರೀ ಕೂಸಪ್ಪ ಗೌಡ ಕೋರಡ್ಕ, ಅಧ್ಯಕ್ಷರಾಗಿ ಶ್ರೀ ಪ್ರೇಮಸಾಗರ ಆಳ್ವ ಅತ್ಲಾಜೆ, ಉಪಾಧ್ಯಕ್ಷರಾಗಿ ಶ್ರೀಧರ ಹೊಸಮನೆ, ಕಾರ್ಯದರ್ಶಿಯಾಗಿ ಶ್ರೀಮತಿ ಸುಭಾಷಿಣಿ ಗಂಗಾಧರ ರೈ ಹಾಗೂ ಖಜಾಂಜಿಯಾಗಿ ಸಂತೋಷ್ ರೈ ಪಾಲೆತ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು.

ಮರ್ಧಾಳ: ಶ್ರೀ ಅಯ್ಯಪ್ಪ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ನೇಮಕ ➤‌ ಅಧ್ಯಕ್ಷರಾಗಿ ಪ್ರೇಮಸಾಗರ ಆಳ್ವ ಅತ್ಲಾಜೆ ಆಯ್ಕೆ Read More »

ಕರಾವಳಿ, ಕರ್ನಾಟಕ

ಕಡಬ: ಧ್ವಜಾರೋಹಣದ ಸಿದ್ಧತೆ ವೇಳೆ ಕುಸಿದು ಬಿದ್ದ ನಿವೃತ್ತ ಯೋಧ ➤‌ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಆ.15. ಧ್ವಜಾರೋಹಣದ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡ ನಿವೃತ್ತ ಸೈನಿಕರೋರ್ವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಹಳೆ ಸ್ಟೇಷನ್ ಅಮೃತ ಸರೋವರದ ಬಳಿ ನಿವೃತ್ತ ಸೈನಿಕ ಗಂಗಾಧರ ಗೌಡ ಅವರು ಧ್ವಜ ವಂದನೆಯ ಮಾಹಿತಿ ನೀಡಿ ಧ್ವಜಾರೋಹಣಕ್ಕೆ ಸಿದ್ದವಾಗುತ್ತಿದ್ದ ವೇಳೆ ಗಂಗಾಧರ ಗೌಡ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಡಬ: ಧ್ವಜಾರೋಹಣದ ಸಿದ್ಧತೆ ವೇಳೆ ಕುಸಿದು ಬಿದ್ದ ನಿವೃತ್ತ ಯೋಧ ➤‌ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ ದ.ಕ ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಅಂಗಾಂಗ ದಾನ ಮಾಡಲು ಇತರರಿಗೂ ಸ್ಪೂರ್ತಿಯಾಗಿದ್ದಾರೆ. ಮಂಗಳೂರಿನ ಐಎಂಎ ಭವನದಲ್ಲಿ ನಡೆದ ವಿಶ್ವ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ. ಜಿಲ್ಲಾ ಶಾಖೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಮತ್ತು ಜೀವ ಸಾರ್ಥಕತೆ

ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ ದ.ಕ ಜಿಲ್ಲಾಧಿಕಾರಿ Read More »

ಕರಾವಳಿ, ಕರ್ನಾಟಕ

ಪುತ್ತೂರು: ಯುವಕನಿಗೆ ಹಲ್ಲೆ- ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಆ. 14. ಏಕಾಏಕಿ ಮನೆಗೆ ನುಗ್ಗಿದ ತಂಡವೊಂದು ಯುವಕನ ಮೇಲೆ  ಹಲ್ಲೆ ನಡೆಸಿದ ಘಟನೆ ವಿಟ್ಲದ ಚಂದಳಿಕೆಯ ಕುರುಂಬಳ ಎಂಬಲ್ಲಿ ನಡೆದಿದೆ.   ಹಲ್ಲೆಗೊಳಗಾದವರನ್ನು ಲೋಕನಾಥ್ ಜೋಗಿ ಎಂಬವರ ಪುತ್ರ ಹೃದಯ್ ಎಂದು ಗುರುತಿಸಲಾಗಿದೆ. ರಸ್ತೆಯ ವಿಚಾರವಾಗಿ ವ್ಯಾಟ್ಸಾಪ್‌ನಲ್ಲಿ ಹಾಕಿದ್ದಾರೆ ಎಂಬವುದಾಗಿ ಜಗಳ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ವಿಟ್ಲ ಆಸ್ಪತ್ರೆಗೆ ದಾಖಲಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪುತ್ತೂರು: ಯುವಕನಿಗೆ ಹಲ್ಲೆ- ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 14. ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರಿಂದ ನಗದು ದೋಚಿದ ಪ್ರಕರಣದದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬನ್ನೂರಿನಲ್ಲಿ ಬಂಧಿಸಿದ್ದಾರೆ.   ಬಂಧಿತ ಆರೋಪಿಯನ್ನು ಉಪ್ಪಿನಂಗಡಿ ನಿನ್ನಿಕಲ್ಲು ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಈತ 2016ರಲ್ಲಿ ಪುತ್ತೂರು ಪರಿಸರದಲ್ಲಿ ವ್ಯಕ್ತಿಯೋರ್ವರ ನಗದು ದೋಚಿದ ಪ್ರಕರಣದಲ್ಲಿ ಬಂಧಿತರಾಗಿ, ಬಳಿಕ ಜಾಮಿನು ಪಡೆದ ಅವರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯವು ಆರೋಪಿ ಶರತ್ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ತನಿಖೆ

ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮರ್ಧಾಳ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ‘ಪ್ರೇರಣಾ ಕಾರ್ಯಾಗಾರ & ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ➤‌ ಜೇಸಿಐ ಕಡಬ ಕದಂಬ ಸಾಥ್

(ನ್ಯೂಸ್ ಕಡಬ) newskadaba.com ಕಡಬ, ಆ.13. ಜೇಸಿಐ ಕಡಬ ಕದಂಬ, ಸೈಂಟ್ ಮೇರಿಸ್ ಪ್ರೌಢಶಾಲೆ ಮರ್ಧಾಳ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪ್ರೇರಣಾ ಕಾರ್ಯಾಗಾರ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯು ಇತ್ತೀಚೆಗೆ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜೇಸಿಐ ಭಾರತದ ವಲಯ 15ರ ಉಪಾಧ್ಯಕ್ಷೆ ಸ್ವಾತಿ ಜಗನ್ನಾಥ್ ರೈ ಉದ್ಘಾಟಿಸಿದರು. ಕಂಪ್ಯೂಟರ್ ಲ್ಯಾಬ್ ನ್ನು ಕಡಬದ ಗ್ಲೋಬ್ ಪ್ರಿಂಟರ್ಸ್ ಮಾಲಕ ದಯಾನಂದ ಉಂಡಿಲ ಉದ್ಘಾಟಿಸಿದರು. ಜೇಸಿಐ ಕಡಬ ಕದಂಬ

ಮರ್ಧಾಳ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ‘ಪ್ರೇರಣಾ ಕಾರ್ಯಾಗಾರ & ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ➤‌ ಜೇಸಿಐ ಕಡಬ ಕದಂಬ ಸಾಥ್ Read More »

ಕರಾವಳಿ
Scroll to Top