ಪುತ್ತೂರು: ಯುವಕನಿಗೆ ಹಲ್ಲೆ- ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಆ. 14. ಏಕಾಏಕಿ ಮನೆಗೆ ನುಗ್ಗಿದ ತಂಡವೊಂದು ಯುವಕನ ಮೇಲೆ  ಹಲ್ಲೆ ನಡೆಸಿದ ಘಟನೆ ವಿಟ್ಲದ ಚಂದಳಿಕೆಯ ಕುರುಂಬಳ ಎಂಬಲ್ಲಿ ನಡೆದಿದೆ.

 

ಹಲ್ಲೆಗೊಳಗಾದವರನ್ನು ಲೋಕನಾಥ್ ಜೋಗಿ ಎಂಬವರ ಪುತ್ರ ಹೃದಯ್ ಎಂದು ಗುರುತಿಸಲಾಗಿದೆ. ರಸ್ತೆಯ ವಿಚಾರವಾಗಿ ವ್ಯಾಟ್ಸಾಪ್‌ನಲ್ಲಿ ಹಾಕಿದ್ದಾರೆ ಎಂಬವುದಾಗಿ ಜಗಳ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ವಿಟ್ಲ ಆಸ್ಪತ್ರೆಗೆ ದಾಖಲಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Scroll to Top