ಕರಾವಳಿ

ಹನಿಟ್ರ್ಯಾಪ್ ಶಂಕೆ ➤‌ ಮಹಿಳೆಯ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 17. ಮಹಿಳೆಯೊಬ್ಬರು ನನ್ನನ್ನು ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ‘ನನ್ನ ಮೊಬೈಲ್‌ಗೆ ಕರೆ ಮಾಡಿ ಮಹಿಳೆಯೋರ್ವರು ಅಶ್ಲೀಲವಾಗಿ ಮಾತನಾಡಿ ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ’ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಮಹಿಳೆಯೋರ್ವರು ಅಶ್ಲೀಲವಾಗಿ ಮಾತನಾಡುತ್ತಿದ್ದು, ಆಕೆಯ ಮಾತಿಗೆ ವಿರೋಧಿಸಿದರೂ 3-4 ಬಾರಿ ಕರೆ ಮಾಡಿ ವಿಕೃತ ವರ್ತನೆ ತೋರಿದ್ದಾರೆ‌. ಇದರಿಂದ ನನಗೆ ಹನಿಟ್ರ್ಯಾಪ್ ಸಂಶಯವಿದೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವ್ಯಕ್ತಿ ದೂರು ನೀಡಿದ್ದಾರೆ.  

ಹನಿಟ್ರ್ಯಾಪ್ ಶಂಕೆ ➤‌ ಮಹಿಳೆಯ ವಿರುದ್ದ ದೂರು ದಾಖಲು Read More »

ಕರಾವಳಿ, ಕರ್ನಾಟಕ

ಆರ್.ಸಿ ಹಾಗೂ ಇನ್ಶೂರೆನ್ಸ್ ದಾಖಲೆಪತ್ರದಲ್ಲಿ ತೊಂದರೆ ಹಿನ್ನೆಲೆ ➤‌ ಅಪಘಾತಕ್ಕೀಡಾಗಿದ್ದ ಕಾರನ್ನು ಪರಿಚಯಸ್ಥರ ಮನೆಸಮೀಪ ನಿಲ್ಲಿಸಿಹೋದ ಮಾಲಕ- ಆತಂಕಗೊಂಡ ಜನತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 17. ಆರು ತಿಂಗಳ ಹಿಂದೆ ಬೆಳ್ಳಾರೆಯಲ್ಲಿ ಅಪಘಾತಗೊಂಡ ಹುಂಡೈ ಕಾರೊಂದನ್ನು ದುರಸ್ಥಿ ಮಾಡುವ ಸಂದರ್ಭ RCಯಲ್ಲಿ ಮತ್ತು ಇನ್‌ಶ್ಯೂರೆನ್ಸ್‌ನ ಮಾಲಕತ್ವದ ದಾಖಲೆ ಪತ್ರದಲ್ಲಿ ತೊಂದರೆ ಕಂಡು ಬಂದಿದ್ದರಿಂದ ಕಾರನ್ನು ರೋಟರಿಪುರದ ಪರಿಚಯಸ್ಥರ ಮನೆ ಸಮೀಪ ನಿಲ್ಲಿಸಿ ಹೋದ ಘಟನೆ ಬೆಳಕಿಗೆ ಬಂದಿದ್ದು ಮತ್ತು ಈ ಕುರಿತು ಸ್ಥಳೀಯರು ಅಪರಿಚಿತ ಕಾರೊಂದು ಪತ್ತೆಯಾದ ಹಿನ್ನೆಲೆ ಆತಂಕಗೊಂಡ ಘಟನೆ ನಡೆದಿದೆ. ಬೆಳ್ಳಾರೆಯಲ್ಲಿ ಆರು ತಿಂಗಳ ಹಿಂದೆ ಮೋರಿಗೆ ಢಿಕ್ಕಿಯಾದ ಸವಣೂರಿನ ಮಿಥುನ್ ಎಂಬವರ

ಆರ್.ಸಿ ಹಾಗೂ ಇನ್ಶೂರೆನ್ಸ್ ದಾಖಲೆಪತ್ರದಲ್ಲಿ ತೊಂದರೆ ಹಿನ್ನೆಲೆ ➤‌ ಅಪಘಾತಕ್ಕೀಡಾಗಿದ್ದ ಕಾರನ್ನು ಪರಿಚಯಸ್ಥರ ಮನೆಸಮೀಪ ನಿಲ್ಲಿಸಿಹೋದ ಮಾಲಕ- ಆತಂಕಗೊಂಡ ಜನತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್ ➤‌ 14 ದಿನಗಳ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಆ. 17. ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದ ಪ್ರಕರಣದ ಆರೋಪಿ ಕುಂತೂರಿನ ರಾಜಿಕ್ ಎಂಬಾತನ್ನು ಕಡಬ ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ.   ಈತನ ವಿರುದ್ದ 2012 ರಲ್ಲಿ ಕಡಬ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ಕೋರ್ಟಿನಲ್ಲಿ ನಡೆಯುತ್ತಿತ್ತಾದರೂ, ಆರೋಪಿ ರಾಜಿಕ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದರಿಂದ ಪುತ್ತೂರಿನ ಸೆಷನ್ ಕೋರ್ಟ್ ಈತನ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು. ಇದೀಗ ಕುಂತೂರಿನ ರಾಜಿಕ್ ನನ್ನು ಕಡಬ ಪೊಲೀಸರು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,

ಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್ ➤‌ 14 ದಿನಗಳ ನ್ಯಾಯಾಂಗ ಬಂಧನ Read More »

ಕರಾವಳಿ, ಕರ್ನಾಟಕ

ನೆಲ್ಯಾಡಿ: ನಿಲ್ಲಿಸಿದ್ದ ಸ್ಕೂಟಿ ಕದ್ದು ಪೊಲೀಸರ ಅತಿಥಿಯಾದ ಕೇರಳ ಮೂಲದ ಕೊಲೆ ಆರೋಪಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ. 17. ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದು, ಕೇರಳದ ಕೋಯಿಕ್ಕೋಡ್‌ ಮಾನಸಿಕ ಚಿಕಿತ್ಸಾ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದು ಎಂಜೀರದಲ್ಲಿ ಮಹಿಳೆಯೋರ್ವರ ಸ್ಕೂಟಿ ಕದ್ದು ಪರಾರಿಯಾಗುತ್ತಿದ್ದ ವೇಳೆ ಗುಂಡ್ಯದಲ್ಲಿ ಧರ್ಮಸ್ಥಳ ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ. ಪೊಲೀಸರ ವಶವಾದ ಆರೋಪಿಯನ್ನು ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿ ವಿನೀಶ್(21) ಎಂದು ಗುರುತಿಸಲಾಗಿದೆ. ರೆಖ್ಯ ಸಮೀಪದ ಎಂಜೀರ ಮಲ್ನಾಡ್ ಹೋಟೆಲ್ ಸಮೀಪ ಮಹಿಳೆಯೋರ್ವರು ಕೀಯನ್ನು ಸ್ಕೂಟಿಯಲ್ಲಿಯೇ ಬಿಟ್ಟು ಹೋಟೆಲ್‌ಗೆ ಹೋಗಿದ್ದು, ಇದೇ ವೇಳೆ ಅಲ್ಲಿಗೆ ಬಂದ ವಿನೀಶ್

ನೆಲ್ಯಾಡಿ: ನಿಲ್ಲಿಸಿದ್ದ ಸ್ಕೂಟಿ ಕದ್ದು ಪೊಲೀಸರ ಅತಿಥಿಯಾದ ಕೇರಳ ಮೂಲದ ಕೊಲೆ ಆರೋಪಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಮಗು ಹಟ ಹಿಡಿಯಿತೆಂದು ಸಟ್ಟುಗದಿಂದ ಸುಟ್ಟ ಪಾಪಿ ತಾಯಿ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 17. ಹಟ ಮಾಡುತ್ತಿದ್ದ ನಾಲ್ಕು ವರ್ಷ ಪ್ರಾಯದ ಮಗುವಿಗೆ ತಾಯಿಯೇ ಸಟ್ಟುಗ ಬಿಸಿ ಮಾಡಿ ಬರೆ ಹಾಕಿದ ದಾರುಣ ಘಟನೆ ಸುಳ್ಯದ ನಾವೂರಿನಲ್ಲಿ ನಡೆದಿದೆ. ಆರು ದಿನಗಳ ಹಿಂದೆ ಈ ಘಟನೆ ನಡೆದಿದೆಯೆನ್ನಲಾಗಿದ್ದು, ಸ್ಥಳೀಯರು ನೀಡಿದ ಮಾಹಿತಿಯನುಸಾರ ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆಯವರು ಮನೆಗೆ ಧಾವಿಸಿ ಪರಿಶೀಲಿಸಿ ಬಳಿಕ ಮಗುವನ್ನು ಸಿ.ಡಿ.ಪಿ.ಒ. ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತೆಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

ಸುಳ್ಯ: ಮಗು ಹಟ ಹಿಡಿಯಿತೆಂದು ಸಟ್ಟುಗದಿಂದ ಸುಟ್ಟ ಪಾಪಿ ತಾಯಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಹಲ್ಲೆ ಪ್ರಕರಣ ➤‌ ತಂದೆ, ಮಗ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 17. ಬೋಳೂರು ಜಾರಂದಾಯ ದೇವಸ್ಥಾನದ ಬಳಿ ಮಂಗಳವಾರ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ತಂದೆ ಹಾಗೂ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದೇವದಾಸ್ ಬೋಳೂರು (61) ಮಗ ಸಾಯಿ ಕಿರಣ್ (21) ಎಂದು ಗುರುತಿಸಲಾಗಿದೆ. ಗಾಯಗೊಂಡ ನವೀನ್ ಸಾಲ್ಯಾನ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನವೀನ್ ಸಾಲ್ಯಾನ್ ರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಲಾಗಿದ್ದು, ಹಲ್ಲೆಗೆ ಹಳೆಯ ದ್ವೇಷವೇ ಕಾರಣ ಎಂದು ತಿಳಿದು ಬಂದಿದೆ.

ಮಂಗಳೂರು: ಹಲ್ಲೆ ಪ್ರಕರಣ ➤‌ ತಂದೆ, ಮಗ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ಳಾರೆ: ಮಸೂದ್ ಹತ್ಯೆ ಪ್ರಕರಣ ➤‌ ಅರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 17. ಗುಂಪಿನಿಂದ ಹಲ್ಲೆಗೊಳಗಾಗಿ ಮೃತಪಟ್ಟ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಳಂಜದ ಮಸೂದ್‌ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಎಲ್ಲಾ ಆರೋಪಿಗಳಿಗೆ ವಿಧಿಸಲಾಗಿದ್ದ ನ್ಯಾಯಾಂಗ ಬಂಧನವನ್ನು ಆ. 29ರ ವರೆಗೆ ವಿಸ್ತರಿಸಿ ಸುಳ್ಯ ನಾಯಾಲಯವು ಆದೇಶ ನೀಡಿದೆ. ಆರೋಪಿಗಳಾದ ಅಭಿಲಾಷ್‌, ಸುನಿಲ್‌ ಕೆ., ಸುಧೀರ್‌, ಶಿವಪ್ರಸಾದ್‌, ರಂಜಿತ್‌ ಬಿ., ಸದಾಶಿವ ಪೂಜಾರಿ, ರಂಜಿತ್‌, ಭಾಸ್ಕರ ಕೆ.ಎಂ. ಎಂಬವರ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಕಸ್ಟಡಿಯಲ್ಲಿದ್ದರು. ಇದೀಗ ಮಂಗಳವಾರ ಕಸ್ಟಡಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ

ಬೆಳ್ಳಾರೆ: ಮಸೂದ್ ಹತ್ಯೆ ಪ್ರಕರಣ ➤‌ ಅರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ದನ ಕಳವು ಪ್ರಕರಣ ➤‌ ಐವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 17. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ದನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ ಘಟನೆ ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಬಜಾಲ್‌ ಗ್ರಾಮದ ದೋಟ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಮಂಗಳೂರಿನ ಗುರುನಗರ ಬಂಗ್ಲೆಗುಡ್ಡೆಯ ಮಹಮ್ಮದ್‌ ಅಶ್ಪಾಕ್ ಆಲಿಯಾಸ್‌ ಶಮೀರ್‌ ಯಾನೆ ಚಮ್ಮಿ (22), ಗುರುಪುರ ಅಡ್ಡೂರು ಆದ್ಯಪಾಡಿ ಅಝರುದ್ದೀನ್‌ ಅಲಿಯಾಸ್‌ ಅಜರ್‌ (31), ಬಜಾಲ್‌ ಪಡ್ಪುವಿನ ಸುಹೈಲ್‌ (19), ಬಜಾಲ್‌ ಪಕ್ಕಲಡ್ಕದ ಮೊಹಮ್ಮದ್‌ ಅಫ್ರೀದ್‌ (25) ಮತ್ತು ಬಜಾಲ್‌

ಮಂಗಳೂರು: ದನ ಕಳವು ಪ್ರಕರಣ ➤‌ ಐವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ- ಫ್ರೀಡಂ ಸ್ಕ್ವೇರ್

(ನ್ಯೂಸ್ ಕಡಬ) newskadaba.com ಆ. 17. ಪ್ರತಿವರ್ಷ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಎಸ್ಕೆಎಸ್ಸೆಸ್ಸೆಫ್ ಆಯೋಜಿಸುವ ಫ್ರೀಡಂ ಸ್ಕ್ವೇರ್ ಕಾರ್ಯಕ್ರಮವು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ವಲಯಾಧ್ಯಕ್ಷರಾದ ಅಬ್ದುಲ್ಲ ಫೈಝಿ ಪೈಂಬಚ್ಚಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅರಂತೋಡು ಖತೀಬರಾದ ಬಹು ಇಸ್ಹಾಕ್ ಬಾಖವಿ ದುವಾ ನೇತೃತ್ವ ವಹಿಸಿದರು. ಎನ್.ಪಿ.ಎಂ ಸಯ್ಯಿದ್ ಜಲಾಲುದ್ದೀನ್ ತಂಙಳ್ ಕುನ್ನುಂಗೈ ಉದ್ಘಾಟಿಸಿದರು. ಮುಖ್ಯ ಪ್ರಭಾಷಣ ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಒರ್ಗಾನೆಟ್ ಚೇರ್ಮನ್ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ನಡೆಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ತೆಕ್ಕಿಲ್

ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ- ಫ್ರೀಡಂ ಸ್ಕ್ವೇರ್ Read More »

ಕರಾವಳಿ, ಕರ್ನಾಟಕ

ಕಡಬ: ಕ್ಷುಲ್ಲಕ ವಿಚಾರಕ್ಕೆ ಹಲ್ಲೆ ಪ್ರಕರಣ ➤‌ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಆ. 16. ಇತ್ತಂಡಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತನನ್ನು ನೌಫಲ್(29) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಮೊಹಮ್ಮದ್ ನವಾಜ್ ಎಂಬಾತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ನವಾಝ್ ಎಂಬಾತ ಆ.15 ರಂದು ಸಂಜೆ ವೇಳೆ ಮೊಬೈಲ್ ರಿಚಾರ್ಜ್ ಖಾಲಿಯಾಗಿದ್ದರಿಂದ ಮನೆಯ ಪಕ್ಕದಲ್ಲಿರುವ ನೌಫಲ್ ಎಂಬಾತನ ಅಂಗಡಿಗೆ ಹೋಗಿ ಫೋನ್ ಫೇ ಮೂಲಕ 50 ರೂ. ರಿಚಾರ್ಜ್ ಮಾಡಲು ಹೇಳಿದ್ದು,

ಕಡಬ: ಕ್ಷುಲ್ಲಕ ವಿಚಾರಕ್ಕೆ ಹಲ್ಲೆ ಪ್ರಕರಣ ➤‌ ಓರ್ವನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top