ಹನಿಟ್ರ್ಯಾಪ್ ಶಂಕೆ ➤‌ ಮಹಿಳೆಯ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 17. ಮಹಿಳೆಯೊಬ್ಬರು ನನ್ನನ್ನು ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ‘ನನ್ನ ಮೊಬೈಲ್‌ಗೆ ಕರೆ ಮಾಡಿ ಮಹಿಳೆಯೋರ್ವರು ಅಶ್ಲೀಲವಾಗಿ ಮಾತನಾಡಿ ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ’ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಮಹಿಳೆಯೋರ್ವರು ಅಶ್ಲೀಲವಾಗಿ ಮಾತನಾಡುತ್ತಿದ್ದು, ಆಕೆಯ ಮಾತಿಗೆ ವಿರೋಧಿಸಿದರೂ 3-4 ಬಾರಿ ಕರೆ ಮಾಡಿ ವಿಕೃತ ವರ್ತನೆ ತೋರಿದ್ದಾರೆ‌. ಇದರಿಂದ ನನಗೆ ಹನಿಟ್ರ್ಯಾಪ್ ಸಂಶಯವಿದೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವ್ಯಕ್ತಿ ದೂರು ನೀಡಿದ್ದಾರೆ.

 

Scroll to Top