ಕರಾವಳಿ

ಮಂಗಳೂರು: ಬೆಳ್ಳಂಬೆಳಗ್ಗೆ ಎಸ್ಡಿಪಿಐ ನಾಯಕನ ಮನೆಮೇಲೆ ಎನ್ಐಎ ದಾಳಿ ➤ ಸ್ಥಳದಲ್ಲಿ ಕಾರ್ಯಕರ್ತರ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 08. ದ.ಕ ಜಿಲ್ಲೆಯಲ್ಲಿ ಎನ್ಐಎ ದಾಳಿ ಮುಂದುವರಿದಿದ್ದು, ಎಸ್ಡಿಪಿಐ ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ ಗುರುವಾರ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಸೆಪ್ಟೆಂಬರ್ 6 ರಂದು ಸುಳ್ಯ, ಪುತ್ತೂರು ಸೇರಿದಂತೆ 30 ಕಡೆ ದಾಳಿ ನಡೆಸಿತ್ತು. ಇದರ ಮುಂದುವರಿದ ಭಾಗವಾಗಿ ಇಂದು ಬೆಳಿಗ್ಗೆ ಎಸ್ಡಿಪಿಐ ರಾಷ್ಟ್ರೀಯ ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ ಎನ್ಐಎ ದಾಳಿ ನಡೆಸಿದ್ದು, ಇದನ್ನು […]

ಮಂಗಳೂರು: ಬೆಳ್ಳಂಬೆಳಗ್ಗೆ ಎಸ್ಡಿಪಿಐ ನಾಯಕನ ಮನೆಮೇಲೆ ಎನ್ಐಎ ದಾಳಿ ➤ ಸ್ಥಳದಲ್ಲಿ ಕಾರ್ಯಕರ್ತರ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಸರಕಾರಿ ಬಸ್ ನಿಂದ ಪ್ರಯಾಣಿಕನನ್ನು ತಳ್ಳಿಹಾಕಿದ ಕಂಡಕ್ಟರ್ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 08. ಪುತ್ತೂರಿನಿಂದ ಈಶ್ವರಮಂಗಲ ಮಾರ್ಗವಾಗಿ ಸುಳ್ಯಪದವು ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ ನಲ್ಲಿ ಪಾನಮತ್ತ ಪ್ರಯಾಣಿಕೋರ್ವನಿಗೆ ನಿರ್ವಾಹಕ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ಎದೆಗೆ ಒದ್ದ ಘಟನೆ ಈಶ್ವರಮಂಗಲ ಪೇಟೆಯಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ಪಡುವನ್ನೂರು ಗ್ರಾಮದ ಪದಡ್ಕ ನಿವಾಸಿ ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಇವರು ಪದಡ್ಕಕ್ಕೆ ಹೋಗಲು ಈಶ್ವರಮಂಗಲದಲ್ಲಿ ಬಸ್ಸನ್ನು ಹತ್ತಿದ್ದು, ಈತ ಮದ್ಯಪಾನ ಮಾಡಿದ್ದಾನೆ ಎಂದು ಬಸ್ ನಿರ್ವಾಹಕ ಕೈಯಿಂದ ದೂಡಿ, ಹಲ್ಲೆ ನಡೆಸಿ ಕಾಲಿನಿಂದ ಒದ್ದಿರುವುದರಿಂದ ಪ್ರಯಾಣಿಕ

ಪುತ್ತೂರು: ಸರಕಾರಿ ಬಸ್ ನಿಂದ ಪ್ರಯಾಣಿಕನನ್ನು ತಳ್ಳಿಹಾಕಿದ ಕಂಡಕ್ಟರ್ ➤ ವಿಡಿಯೋ ವೈರಲ್ Read More »

ಕರಾವಳಿ, ಕರ್ನಾಟಕ

ಕಡಬ: ಮರದ ಕೊಂಬೆ ಕಡಿಯುವ ವೇಳೆ ವಿದ್ಯುತ್ ಲೈನ್ ತಗುಲಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಸೆ. 07. ಮರದ ಕೊಂಬೆ ಕಡಿಯುತ್ತಿದ್ದ ವೇಳೆ ವಿದ್ಯುತ್ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ ಮೃತ ವ್ಯಕ್ತಿಯನ್ನು ಕಡಬ ಸಮೀಪದ ಕುಂತೂರು ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ. ಮನೋಜ್ ಅವರು ಮರದ ಕೊಂಬೆಯೊಂದನ್ನು ಕಡಿಯುವಾಗ 33 kv ವಿದ್ಯುತ್ ತಂತಿ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಮನೋಜ್ ಮೃತದೇಹ ಮರದಲ್ಲೇ ನೇತಾಡುತ್ತಿತ್ತು. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ತರಲಾಗಿದೆ.

ಕಡಬ: ಮರದ ಕೊಂಬೆ ಕಡಿಯುವ ವೇಳೆ ವಿದ್ಯುತ್ ಲೈನ್ ತಗುಲಿ ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ: ಮನೆಗೆ ಬೆಂಕಿಬಿದ್ದು ಯಜಮಾನ ಜೀವಂತ ದಹನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ. 07. ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ಯಜಮಾನ ಜೀವಂತ ದಹನವಾದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪರ್ಲಿಕಜೆ ಸುಧಾಕರ (47) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸುಧಾಕರ್ ಅವರು ಮನೆಯಲ್ಲಿ ಮಲಗಿದ್ದು, ಪತ್ನಿ ಟ್ಯಾಪಿಂಗ್‌ಗೆಂದು ಹೋಗಿದ್ದರು. ಮಗಳು ಶಾಲೆಗೆ ತೆರಳಿದ್ದಳು. ಈ ಹೊತ್ತಿನಲ್ಲಿ ಬೆಂಕಿ ಮನೆಯ ಒಂದು ಪಾರ್ಶ್ವವನ್ನು ಸುಟ್ಟು ಹಾಕಿದೆ. ಸುಧಾಕರರು ಅಸೌಖ್ಯಕ್ಕೀಡಾಗಿರುವ ಹಿನ್ನಲೆ

ಸುಳ್ಯ: ಮನೆಗೆ ಬೆಂಕಿಬಿದ್ದು ಯಜಮಾನ ಜೀವಂತ ದಹನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಚಪ್ಪಲಿಯಲ್ಲಿ ಅಕ್ರಮ ಚಿನ್ನ ಸಾಗಾಟ ➤ 55.39 ಲಕ್ಷ ರೂ. ಮೌಲ್ಯದ ಚಿನ್ನ ವಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 07. ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಮತ್ತು ಮಂಗಳವಾರದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 55.39 ಲಕ್ಷ ರೂ ಮೌಲ್ಯದ ಚಿನ್ನ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡ ಘಟನೆ ಇಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವರದಿಯಾಗಿದೆ. ಸೋಮವಾರದಂದು ದುಬೈನಿಂದ ಬಂದಿದ್ದ ಮೂವರು ಚಪ್ಪಲಿ ಮತ್ತು ಬನಿಯಾನ್ ನಲ್ಲಿ ಪೇಸ್ಟ್ ರೂಪದಲ್ಲಿ 24 ಕ್ಯಾರೆಟ್ ಪರಿಶುದ್ದತೆಯ 897 ಗ್ರಾಂ. ತೂಕದ 45,65,730 ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು

ಮಂಗಳೂರು: ಚಪ್ಪಲಿಯಲ್ಲಿ ಅಕ್ರಮ ಚಿನ್ನ ಸಾಗಾಟ ➤ 55.39 ಲಕ್ಷ ರೂ. ಮೌಲ್ಯದ ಚಿನ್ನ ವಶ Read More »

ಕರಾವಳಿ, ಕ್ರೈಮ್ ನ್ಯೂಸ್

ಪ್ರವೀಣ್ ಹತ್ಯೆ ಪ್ರಕರಣ- ಎನ್ಐಎ ದಾಳಿ ➤ ಮದ್ದುಗುಂಡು, ಸುಧಾರಿತ ಶಸ್ತ್ರಾಸ್ತ್ರಗಳು ಪತ್ತೆ.

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 07. ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ತಂಡವು ಕರ್ನಾಟಕದ ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪುತ್ತೂರು, ಸುಳ್ಯ ಸೇರಿದಂತೆ 33 ಸ್ಥಳಗಳಿಗೆ ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಪ್ರವೀಣ್‌ ಹತ್ಯಾ ಆರೋಪಿಗಳ ವಿಚಾರಣೆಯ ಸಂದರ್ಭದಲ್ಲಿ ಎನ್ಐಎ ತಂಡಕ್ಕೆ ದೊರೆತ ಮಾಹಿತಿಯನುಸಾರ ಹತ್ಯೆ ಪ್ರಕರಣಕ್ಕೆ ಸಹಕರಿಸಿದ ಹಾಗೂ ಆರೋಪಿಗಳ ರಕ್ಷಣೆಗೆ ನೆರವಾಗುತ್ತಿರುವವರ ಮಾಹಿತಿ ಕಲೆ

ಪ್ರವೀಣ್ ಹತ್ಯೆ ಪ್ರಕರಣ- ಎನ್ಐಎ ದಾಳಿ ➤ ಮದ್ದುಗುಂಡು, ಸುಧಾರಿತ ಶಸ್ತ್ರಾಸ್ತ್ರಗಳು ಪತ್ತೆ. Read More »

ಕರಾವಳಿ, ಕರ್ನಾಟಕ

ನಾಳೆ (ಸೆ. 07) ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ಮಂಗಳೂರು ನಗರ ಸೇರಿ‌ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಭಾರೀ ಮಳೆಯಾಗಲಿದ್ದು, ಈ ಹಿನ್ನೆಲೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆಯಿಂದ ಮುಂದಿನ ಐದು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದ್ದು, ಸೆ. 07ರಂದು ರೆಡ್ ಅಲರ್ಟ್ ಹಾಗೂ ಮೂರು ದಿನ ಆರೆಂಜ್ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋಷಿಸಿದೆ.

ನಾಳೆ (ಸೆ. 07) ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಳ್ಳಾಲ: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಕಣಜದ ಹುಳುಗಳ ದಾಳಿ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ. 06. ತೆಂಗಿನಕಾಯಿ ಕೀಳಲು ಮರವೇರಿದ ವೇಳೆ ಗೂಡುಕಟ್ಟಿದ್ದ ಕಣಜದ ಹುಳುಗಳು ದಾಳಿ ನಡೆಸಿದ ಪರಿಣಾಮ ಕಾಯಿ ಕೀಳುವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ತಂದೆ ಹಾಗೂ ಮಗಳಿಗೂ ಹುಳುಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತೊಕ್ಕೊಟ್ಟು ಸಮೀಪದ ಉಳ್ಳಾಲ ಬೈಲು ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಉಳ್ಳಾಲ ಬೈಲು ನಿವಾಸಿ ಜಿತನ್‌ ರೆಸ್ಕಿನ(40), ಪ್ರವೀಣ್ ಪೂಜಾರಿ ಹಾಗೂ ಅವರ ಮಗಳು ದೃತಿ ಎಂದು ಗುರುತಿಸಲಾಗಿದೆ. ಜಿತನ್ ಅವರು ವೃತ್ತಿಪರ ತೆಂಗಿನಕಾಯಿ

ಉಳ್ಳಾಲ: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಕಣಜದ ಹುಳುಗಳ ದಾಳಿ ➤ ಮೂವರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ನೂತನ ತಹಶೀಲ್ದಾರ್ ಆಗಿ ರಮೇಶ್ ಕುಮಾರ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಸೆ. 06. ಪುತ್ತೂರಿನಿಂದ ವರ್ಗಾವಣೆಗೊಂಡಿದ್ದ ತಹಶೀಲ್ದಾರ್ ರಮೇಶ್ ಬಾಬು ಅವರನ್ನು ಕಡಬ ತಾಲೂಕಿಗೆ ವರ್ಗಾವಣೆಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. 2020 ರಲ್ಲಿ ಮೈಸೂರಿನಿಂದ ಪುತ್ತೂರು ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದ ರಮೇಶ್ ಬಾಬು ಅವರು, 2022ರ ಜೂನ್ ತಿಂಗಳಲ್ಲಿ ವರ್ಗಾವಣೆಗೊಂಡಿದ್ದರು. ಆದರೆ ಅವರಿಗೆ ಸ್ಥಳ ನಿಗದಿಪಡಿಸದೇ ಇದ್ದುದರಿಂದ, ಇದೀಗ ಅವರನ್ನು ಕಡಬ ತಹಶೀಲ್ದಾರ್ ಅಗಿ ವರ್ಗಾವಣೆಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸರಕಾರದ ಅಧಿಕೃತ ಆದೇಶ ಇನ್ನಷ್ಟೆ ಬರಬೇಕಿದೆ.

ಕಡಬ: ನೂತನ ತಹಶೀಲ್ದಾರ್ ಆಗಿ ರಮೇಶ್ ಕುಮಾರ್ ನೇಮಕ Read More »

ಕರಾವಳಿ

ಉಪ್ಪಿನಂಗಡಿ: ಪಿಎಫ್ಐ ಮುಖಂಡ ಮಸೂದ್ ಅಗ್ನಾಡಿ ಮನೆಗೆ ಎನ್ಐಎ ತಂಡ ದಾಳಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 06. ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯವ ಮುಖಂಡ ಪ್ರವೀಣ್ ನೆಟ್ಟಾರು(34) ರವರ ಹತ್ಯೆ ಪ್ರಕರಣದ ತನಿಖೆಗೆ‌ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸೆ.6ರಂದು ಸುಳ್ಯ, ಪುತ್ತೂರು, ಉಪ್ಪಿನಂಗಡಿ ಮತ್ತು ಕಬಕ ಪರಿಸರದಲ್ಲಿ ದಾಳಿ ನಡೆಸಿದ್ದಾರೆ. ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯ ಪಿ ಎಫ್‌ ಐ ಮುಖಂಡ ಮಸೂದ್‌ ಅಗ್ನಾಡಿರವರ ಮನೆಗೆ ಎನ್ ಐ ಎ ತಂಡ ದಾಳಿ ನಡೆಸಿ ವಿಚಾರಣೆ ನಡೆಸಿದೆ ಎಂದು

ಉಪ್ಪಿನಂಗಡಿ: ಪಿಎಫ್ಐ ಮುಖಂಡ ಮಸೂದ್ ಅಗ್ನಾಡಿ ಮನೆಗೆ ಎನ್ಐಎ ತಂಡ ದಾಳಿ Read More »

ಕರಾವಳಿ, ಕರ್ನಾಟಕ
Scroll to Top