ಉಪ್ಪಿನಂಗಡಿ: ಪಿಎಫ್ಐ ಮುಖಂಡ ಮಸೂದ್ ಅಗ್ನಾಡಿ ಮನೆಗೆ ಎನ್ಐಎ ತಂಡ ದಾಳಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 06. ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯವ ಮುಖಂಡ ಪ್ರವೀಣ್ ನೆಟ್ಟಾರು(34) ರವರ ಹತ್ಯೆ ಪ್ರಕರಣದ ತನಿಖೆಗೆ‌ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸೆ.6ರಂದು ಸುಳ್ಯ, ಪುತ್ತೂರು, ಉಪ್ಪಿನಂಗಡಿ ಮತ್ತು ಕಬಕ ಪರಿಸರದಲ್ಲಿ ದಾಳಿ ನಡೆಸಿದ್ದಾರೆ.

ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯ ಪಿ ಎಫ್‌ ಐ ಮುಖಂಡ ಮಸೂದ್‌ ಅಗ್ನಾಡಿರವರ ಮನೆಗೆ ಎನ್ ಐ ಎ ತಂಡ ದಾಳಿ ನಡೆಸಿ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.

Scroll to Top