ಕಡಬ: ಮರದ ಕೊಂಬೆ ಕಡಿಯುವ ವೇಳೆ ವಿದ್ಯುತ್ ಲೈನ್ ತಗುಲಿ ವ್ಯಕ್ತಿ ಮೃತ್ಯು



(ನ್ಯೂಸ್ ಕಡಬ) newskadaba.com ಕಡಬ, ಸೆ. 07. ಮರದ ಕೊಂಬೆ ಕಡಿಯುತ್ತಿದ್ದ ವೇಳೆ ವಿದ್ಯುತ್ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ







ಮೃತ ವ್ಯಕ್ತಿಯನ್ನು ಕಡಬ ಸಮೀಪದ ಕುಂತೂರು ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ. ಮನೋಜ್ ಅವರು ಮರದ ಕೊಂಬೆಯೊಂದನ್ನು ಕಡಿಯುವಾಗ 33 kv ವಿದ್ಯುತ್ ತಂತಿ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಮನೋಜ್ ಮೃತದೇಹ ಮರದಲ್ಲೇ ನೇತಾಡುತ್ತಿತ್ತು. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ತರಲಾಗಿದೆ.






error: Content is protected !!
Scroll to Top