ಕರಾವಳಿ

ಡಿ.15ರ ವರೆಗೆ ಭಾರೀ ಮಳೆ ಸಾಧ್ಯತೆ ➤ ಹವಾಮಾನ ಇಲಾಖೆ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com ಮಂಗಳೂರು, ಡಿ.14.  ಚಂಡಮಾರುತ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಕರಾವಳಿಯಲ್ಲಿ ಮಳೆ ಮುಂದುವರಿದಿದೆ. ಡಿ.15ರವರೆಗೂ ಹೀಗೇ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಇನ್ನು ಅರಬ್ಬೀ ಸಮುದ್ರದಲ್ಲಿ ಡಿಸೆಂಬರ್‌ 13ರಿಂದ ವಾಯುಭಾರ ಕುಸಿತವಾಗಲಿದ್ದು, ಎರಡು ದಿನ ಭಾರಿ ಮಳೆಯಾಗುವ ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ 65ಮಿ.ಮಿ ನಿಂದ 115ಮಿ.ಮಿವರೆಗೆ ಮಳೆ ಸುರಿಯಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.

ಡಿ.15ರ ವರೆಗೆ ಭಾರೀ ಮಳೆ ಸಾಧ್ಯತೆ ➤ ಹವಾಮಾನ ಇಲಾಖೆ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ

ಪೆರುವಾಜೆ: ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಧೀಶರು ಭೇಟಿ                                                            

(ನ್ಯೂಸ್ ಕಡಬ) newskadaba.com  ಪೆರುವಾಜೆ, ಡಿ. 14. ಪೆರುವಾಜೆ ಇಲ್ಲಿನ ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಧೀಶರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸಮಿತಿ ಸದಸ್ಯರಾದ ಜಯಪ್ರಕಾಶ್ ರೈ, ವೆಂಕಟಕೃಷ್ಣ ರಾವ್, ಸಿಬ್ಬಂದಿ ವಸಂತ ಆಚಾರ್ಯ ಹಾಗೂ ವಾಸುದೇವ ಪೆರುವಾಜೆ, ವಿಜಯ ಪೆರುವಾಜೆ, ಹರ್ಷಿತ್ ಪೆರುವಾಜೆ ಮೊದಲಾದವರು ಉಪಸ್ಥಿತರಿದ್ದರು.    

ಪೆರುವಾಜೆ: ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಧೀಶರು ಭೇಟಿ                                                             Read More »

ಕರಾವಳಿ, ಕರ್ನಾಟಕ

ಅಜಿಲಮೊಗರು : ಶಾಲೆಗೆ ತೆರಳುತ್ತಿದ್ದ ಮಕ್ಕಳ ಕಿಡ್ನಾಪ್ ಗೆ ಯತ್ನ..?                                 

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಡಿ. 14.  ಶಾಲೆಗೆ ತೆರಳುತ್ತಿದ್ದ ಮಕ್ಕಳನ್ನು ಅಪಹರಣ ಮಾಡಲು ಯತ್ನಿಸಿದ ಆರೋಪ ಕೇಳಿ ಬಂದ ಘಟನೆ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕುಟ್ಟಿಕಳ ಎಂಬಲ್ಲಿ ಸಂಭವಿಸಿದೆ. ಇಬ್ಬರು ಮಕ್ಕಳು ತಮ್ಮ ಮನೆಯಿಂದ ಕುಟ್ಟಿಕಳ ಹಿ.ಪ್ರಾ.ಶಾಲೆಗೆ ತೆರಳುತ್ತಿದ್ದ ವೇಳೆ ಕಾರೊಂದರಲ್ಲಿ ಬಂದ ವ್ಯಕ್ತಿ ಅಂಗಿಯನ್ನು  ಎಳೆಯಲು ಪ್ರಯತ್ನಿಸಿದ್ದು, ಈ ವೇಳೆ ಅಂಗಿಯ ಗುಬ್ಬಿಗಳು ಎದ್ದು ಹೋಗಿವೆ. ತಿಳಿದುಬಂದಿದೆ. ಈ ಕುರಿತು ಮಕ್ಕಳು ಪೋಷಕರಿಗೆ ಮಾಹಿತಿ ನೀಡಿದ್ದು, ನಂತರ ಅವರು ಬಂಟ್ವಾಳ ಪೋಲಿಸ್ ಠಾಣೆಗೆ  ಮಾಹಿತಿ

ಅಜಿಲಮೊಗರು : ಶಾಲೆಗೆ ತೆರಳುತ್ತಿದ್ದ ಮಕ್ಕಳ ಕಿಡ್ನಾಪ್ ಗೆ ಯತ್ನ..?                                  Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮುಲ್ಕಿ, ಡಿ. 14. ಅಕ್ರಮವಾಗಿ 50 ಕ್ವಿಂಟಾಲ್ ಗಿಂತಲೂ ಅಧಿಕ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅಕ್ಕಿ ಹಾಗೂ ಲಾರಿ ಸಹಿತ ವಶಕ್ಕೆ ಪಡೆದ ಘಟನೆ ಮುಲ್ಕಿಯಲ್ಲಿ ನಡೆದಿದೆ. ಬಂಧಿತರನ್ನು ಬಂಟ್ವಾಳ ನಿವಾಸಿಗಳಾದ ಸಮೀರ್ ಮತ್ತು ಯಾಸಿರ್ ಎಂದು ಗುರುತಿಸಲಾಗಿದೆ. ಇವರು ಮುಲ್ಕಿಯ ಬಳ್ಕುಂಜೆ ಕಡೆಯಿಂದ ಮೈಸೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ವೇಳೆ ಗಸ್ತು ನಿರತರಾಗಿದ್ದ ಪೊಲೀಸರು ತಡೆದು ಕೇಳಿದಾಗ ಚಾಲಕ ಗೊಬ್ಬರ ಎಂದು ಹೇಳಿದ್ದು,

ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ➤ ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ

ವಿಟ್ಲ: ಅನ್ಯಕೋಮಿನ ವಿದ್ಯಾರ್ಥಿಗೆ ಪತ್ರ ಬರೆದ ಪ್ರಕರಣ ➤ 18 ವಿದ್ಯಾರ್ಥಿಗಳು ಡಿಬಾರ್- ಪರೀಕ್ಷೆಗೆ ಮಾತ್ರ ಅವಕಾಶ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 13. ವಿಟ್ಲದ ಖಾಸಗಿ ಪದವಿಪೂರ್ವ ಕಾಲೇಜಿನ ಅನ್ಯಕೋಮಿನ ವಿದ್ಯಾರ್ಥಿಗಳ ನಡುವಿನ ಪ್ರೇಮ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಅಮಾನತು ಮಾಡಲಾಗಿದ್ದ 18 ವಿದ್ಯಾರ್ಥಿಗಳ ಪೋಷಕರ ಸಮ್ಮುಖದಲ್ಲಿ ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ನಡುವೆ ಮಾತುಕತೆ ನಡೆಸಿ, ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಲಾಗಿದೆ. ಕೆಲವು ಸಮಯದಿಂದ ಅನ್ಯಕೋಮಿನ ವಿದ್ಯಾರ್ಥಿಗಳ ನಡುವೆ ಪ್ರೇಮ ಪ್ರಕರಣವಿದ್ದು, ಇದನ್ನರಿತ ಕಾಲೇಜು ಆಡಳಿತ ಮಂಡಳಿಯು ಪೊಷಕರನ್ನು ಕರೆಸಿ ವಿಷಯವನ್ನು ತಿಳಿಸಿತ್ತು. ಬಳಿಕ ಕೆಲವು ಸಮಯ ಯಾವುದೇ ಗೊಂದಲವಿಲ್ಲದೇ

ವಿಟ್ಲ: ಅನ್ಯಕೋಮಿನ ವಿದ್ಯಾರ್ಥಿಗೆ ಪತ್ರ ಬರೆದ ಪ್ರಕರಣ ➤ 18 ವಿದ್ಯಾರ್ಥಿಗಳು ಡಿಬಾರ್- ಪರೀಕ್ಷೆಗೆ ಮಾತ್ರ ಅವಕಾಶ Read More »

ಕರಾವಳಿ, ಕರ್ನಾಟಕ

ಮಂಗಳೂರು: ಗಂಭೀರಾವಸ್ಥೆಯಲ್ಲಿದ್ದ ಶಂಕಿತ ಉಗ್ರ ಶಾರೀಕ್ ಆರೋಗ್ಯದಲ್ಲಿ ಚೇತರಿಕೆ ➤ ತನಿಖೆ ಚುರುಕುಗೊಳಿಸಿದ ಎನ್ಐಎ

(ನ್ಯೂಸ್ ಕಡಬ) newskdaba.com  ಮಂಗಳೂರು, ಡಿ. 14. ನ. 19ರಂದು ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಬಹುತೇಕ ಚೇತರಿಸಿಕೊಂಡಿದ್ದು ಆತನನ್ನು ಎನ್‌ಐಎ ತಂಡ ತೀವ್ರ ವಿಚಾರಣೆಗೊಳಪಡಿಸಿದೆ. ಘಟನೆಯಿಂದಾಗಿ ಶಾರೀಕ್ನ ಶ್ವಾಸಕೋಶದೊಳಗೆ ಹೊಗೆ ತುಂಬಿ, ಆರೋಗ್ಯ ಹದಗೆಟ್ಟಿತ್ತು. ಅಲ್ಲದೇ ಆತನ ಕಣ್ಣಿಗೂ ಹಾನಿಯಾಗಿ, ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದರಿಂದ ಆತನನ್ನು ತನಿಖಾ ತಂಡವು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಆತ ಚೇತರಿಸಿಕೊಂಡಿರುವುದರಿಂದ

ಮಂಗಳೂರು: ಗಂಭೀರಾವಸ್ಥೆಯಲ್ಲಿದ್ದ ಶಂಕಿತ ಉಗ್ರ ಶಾರೀಕ್ ಆರೋಗ್ಯದಲ್ಲಿ ಚೇತರಿಕೆ ➤ ತನಿಖೆ ಚುರುಕುಗೊಳಿಸಿದ ಎನ್ಐಎ Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ಮನೆಯ ಹಿಂಬಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ➤ 12.40 ಲಕ್ಷ ರೂ. ಮೌಲ್ಯದ ನಗ-ನಗದು ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 14. ಸಜಿಪನಡು ಗ್ರಾಮದ ನಿಶಾಭಾಗ್ ನ ನಜೀಬ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಸುಮಾರು ಒಟ್ಟು 12.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ ಘಟನೆ ಮಂಗಳವಾರದಂದು ನಡೆದಿದೆ. ಮನೆಯವರು ಡಿ. 13 ರಂದು ಮಧ್ಯಾಹ್ನ 2.30ರ ಸಮಯಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದು, ರಾತ್ರಿ 8.10 ರ ಸುಮಾರಿಗೆ ಹಿಂದಿರುಗಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಜೀಬ್ ಅವರ ತಾಯಿ ಮಲಗುವ ಕೋಣೆಯ ಕಪಾಟಿನ

ಬಂಟ್ವಾಳ: ಮನೆಯ ಹಿಂಬಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ➤ 12.40 ಲಕ್ಷ ರೂ. ಮೌಲ್ಯದ ನಗ-ನಗದು ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಟ್ರಾಕ್ಟರ್ ಗೆ ಕಂಟೈನರ್ ಲಾರಿ ಡಿಕ್ಕಿ      ➤ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಚಾಲಕ

 (ನ್ಯೂಸ್ ಕಡಬ) newskadaba.com   ಉಪ್ಪಿನಂಗಡಿ, ಡಿ.14 ಓವರ್ಟೇಕ್ ಮಾಡುವ ಭರದಲ್ಲಿ ಕಂಟೈನರ್ ಲಾರಿಯೊಂದು ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಘಟನೆ ಉಪ್ಪಿನಂಗಡಿ ಬಳಿ ಗಾಂಧಿಪಾರ್ಕ್ ಎಂಬಲ್ಲಿ ಸಂಭವಿಸಿದೆ. ಪರಿಣಾಮವಾಗಿ ಟ್ರಾಕ್ಟರ್ ಹಿಂಬದಿಯ ಟ್ರಾಲಿ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.   ನೆಲ್ಯಾಡಿ ಕಡೆಯಿಂದ ಬಿ,ಸಿ ರೋಡು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿಯು ಗಾಂಧಿಪಾರ್ಕ್ ಬಳಿ ಓವರ್ ಟೇಕ್ ಮಾಡಿದ್ದು, ಆಗ ಟ್ರಾಕ್ಟರ್ ಗೆ ಕಂಟೈನರ್ ಡಿಕ್ಕಿ ಹೊಡೆದಿದೆ ಎಂದು

ಟ್ರಾಕ್ಟರ್ ಗೆ ಕಂಟೈನರ್ ಲಾರಿ ಡಿಕ್ಕಿ      ➤ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಚಾಲಕ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಉಪ್ಪಿನಂಗಡಿ: ಗುಜಿರಿ ಹೆಕ್ಕುವ ನೆಪದಲ್ಲಿ ಕಳ್ಳತನ ➤ ಇಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 14. ಗುಜಿರಿ ಹೆಕ್ಕುವ ನೆಪದಲ್ಲಿ ಮನೆಯಂಗಳಕ್ಕೆ ಭೇಟಿ ನೀಡಿ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಮಂಗಳವರಾದಂದು ನಡೆದಿದೆ. ಬಂಧಿತರನ್ನು ದಾವಣಗೆರೆಯ ಹರಪ್ಪನಹಳ್ಳಿ ತಾಲೂಕಿನ ಹರ್‌ಕರಣ್ ಹಳ್ಳಿ ನಿವಾಸಿ ಶಿವ ಯಾನೆ ಧರ್ಮ ನಾಯಕ್ (39) ಹಾಗೂ ಇನ್ನೊಬ್ಬ ಗದಗ ಜಿಲ್ಲೆಯ ಮುಂಡರಿಲ್ಲಾ ನಿವಾಸಿ ಪ್ರದೀಪ್ ಯಾನೆ ಚಟ್ರಪ್ಪ (27) ಎಂದು ತಿಳಿದು ಬಂದಿದೆ. ಇವರು ಮಂಗಳವಾರದಂದು ನಸುಕಿನ ವೇಳೆ

ಉಪ್ಪಿನಂಗಡಿ: ಗುಜಿರಿ ಹೆಕ್ಕುವ ನೆಪದಲ್ಲಿ ಕಳ್ಳತನ ➤ ಇಬ್ಬರು ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಸ್ಕೂಟರ್ ಹಾಗೂ ರಿಕ್ಷಾ ನಡುವೆ ಢಿಕ್ಕಿ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 14. ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಾರಾವಿಯಲ್ಲಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ನಿತ್ಯ ಪೂಜಾರಿ (48) ಎಂದು ಗುರುತಿಸಲಾಗಿದೆ. ಇವರು ಕೌಕ್ರಾಡಿ–ಶಿರ್ತಾಡಿ ರಸ್ತೆಯ ಪೆರಂದಡ್ಕ ಎಂಬಲ್ಲಿ ಸ್ಕೂಟರ್‌ನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಆಟೋ ಮುಖಾಮುಖಿ ಢಿಕ್ಕಿ ಹೊಡೆದಿದ್ದು, ಪರಿಣಾಮ ನಿತ್ಯಾನಂದ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ: ಸ್ಕೂಟರ್ ಹಾಗೂ ರಿಕ್ಷಾ ನಡುವೆ ಢಿಕ್ಕಿ ➤ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top