ಕರಾವಳಿ

ಮಂಗಳೂರು: ಡಿ. 17ರಂದು ತಹಶೀಲ್ದಾರರ ಗ್ರಾಮ ವಾಸ್ತವ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 15. ತಾಲೂಕಿನ ಗುರುಪುರ ಹೋಬಳಿಯ ಮುಳೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಡಿ.17ರ ಶನಿವಾರದಂದು ಬೆಳಿಗ್ಗೆ 10 ಗಂಟೆಯಿಂದ ತಹಶೀಲ್ದಾರರ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಡಿ. 17ರಂದು ತಹಶೀಲ್ದಾರರ ಗ್ರಾಮ ವಾಸ್ತವ್ಯ Read More »

ಕರಾವಳಿ, ಕರ್ನಾಟಕ

ಅರಂತೋಡು : ಬಾನಿ ಹಝ್ರತ್ ರವರ 106ನೇ ಅನುಸ್ಮರಣೆ ಹಾಗೂ ಕರ್ನಾಟಕ ಬಾಖವಿ ಉಲಮಾ ಸಂಗಮ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 15. ತಮಿಳುನಾಡಿನ ವೆಲ್ಲೂರಿನ ಬಾಖಿಯಾತ್ ಸ್ವಾಲಿಯಾತ್ ಶಂಶುಲ್ ಉಲಮಾ ಬಾನಿ ಹಝ್ರತ್ ಶಾಹ್ ಅಬ್ದುಲ್ ವಹಾಬ್ ಅಲ್ ಖಾದಿರಿರವರ 106ನೇ ಅನುಸ್ಮರಣೆ ಹಾಗೂ ಕರ್ನಾಟಕ ಬಾಖವಿ ಉಲಮಾ ಸಂಗಮ ಡಿಸೆಂಬರ್ 13 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಸಭಾಂಗಣದಲ್ಲಿ ಉಲಮಾ ಒಕ್ಕೂಟದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬಾಖವಿ ಕಬಕರವರ ಅಧ್ಯಕ್ಷತೆಯಲ್ಲಿ ನಡೆಯಿತು. ದುವಾ ವನ್ನು ಇಬ್ರಾಹಿಂ ಬಾಖವಿ ಉಸ್ತಾದ್ ಕೆ. ಸಿ. ರೋಡ್ ರವರು ನೆರವೇರಿಸಿದರು. ಕಾರ್ಯಕ್ರಮದ ಉಧ್ಘಾಟನೆಯನ್ನು ಅರಂತೋಡು

ಅರಂತೋಡು : ಬಾನಿ ಹಝ್ರತ್ ರವರ 106ನೇ ಅನುಸ್ಮರಣೆ ಹಾಗೂ ಕರ್ನಾಟಕ ಬಾಖವಿ ಉಲಮಾ ಸಂಗಮ Read More »

ಕರಾವಳಿ

ಬಂಟ್ವಾಳ: ಆಟೋ ರಿಕ್ಷಾ ಅಪಘಾತ ➤ ಮಹಿಳೆ ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ,ಡಿ. 15. ಟಿಪ್ಪರ್ ಲಾರಿಯೊಂದು ರಿಕ್ಷಾಕ್ಕೆ ಡಿಕ್ಕಿ‌ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ವೃದ್ದೆ ಗಂಭೀರ ಗಾಯಗೊಂಡು ಉಳಿದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ  ಬಿ.ಸಿ‌ರೋಡು ಸಮೀಪದ ಮೊಡಂಕಾಪು‌ ಎಂಬಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಅವ್ವಮ್ಮ ಎಂದು ಗುರುತಿಸಲಾಗಿದೆ. ಇವರು ರಿಕ್ಷಾದಲ್ಲಿ ಪ್ರಯಾಣಿಕರನ್ನು ಕೈಕಂಬ ಕಡೆಯಿಂದ ಮೊಡಂಕಾಪು ಕಡೆಗೆ ಕರೆದೊಯ್ಯುತ್ತಿದ್ದ ವೇಳೆ ಮೊಡಂಕಾಪು ಕಡೆಯಿಂದ ಬಂದ ಟಿಪ್ಪರ್ ಲಾರಿ, ಬಸ್ಸೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಪಕ್ಕದ ವಿದ್ಯುತ್

ಬಂಟ್ವಾಳ: ಆಟೋ ರಿಕ್ಷಾ ಅಪಘಾತ ➤ ಮಹಿಳೆ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನಕಲಿ ದಾಖಲೆ ಸೃಷ್ಟಿಸಿ 1.25 ಕೋಟಿ ವಂಚನೆ ➤ ಮಗಳ ವಿರುದ್ದ ದೂರು ದಾಖಲಿಸಿದ ತಾಯಿ  

 (ನ್ಯೂಸ್ ಕಡಬ) newskadaba.com  ಮಂಗಳೂರು, ಡಿ. 15. ನಕಲಿ ದಾಖಲೆ ಸೃಷ್ಟಿಸಿ ತಾಯಿಗೆ, ಮಗಳು ಮತ್ತು ಆಕೆಯ ಸ್ನೇಹಿತೆ ಸೇರಿ 1.25 ಕೋಟಿ ರೂಪಾಯಿ ವಂಚಿಸಿದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಈ ಕುರಿತು ತಾಯಿ ರೀಟಾ ಪೇರಿಸ್‌ ದೂರು ನೀಡಿದ್ದು ಅವರ ಪುತ್ರಿ ನಿಕಿತಾ ಪೇರಿಸ್‌ ಮತ್ತು ಗೋಡ್ವಿನ್‌ ಫೆರ್ನಾಂಡಿಸ್‌ ಆರೋಪಿಗಳಾಗಿದ್ದಾರೆ. ದೂರಿನ ಪ್ರಕಾರ ರೀಟಾ ಪೇರಿಸ್‌ ಮತ್ತು ಅವರ ಪುತ್ರ ಅಮಿತ್‌ ಪೇರಿಸ್‌ ವಿದೇಶದಲ್ಲಿ ನೆಲೆಸಿದ್ದು, ರೀಟಾ ಪೇರಿಸ್‌ ಅವರ ಪುತ್ರಿ ನಿಕಿತಾ ಪೇರಿಸ್‌ ಮುದರಂಗಡಿಯ

ನಕಲಿ ದಾಖಲೆ ಸೃಷ್ಟಿಸಿ 1.25 ಕೋಟಿ ವಂಚನೆ ➤ ಮಗಳ ವಿರುದ್ದ ದೂರು ದಾಖಲಿಸಿದ ತಾಯಿ   Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೋಡಿಂಬಾಳ: ‘ನಮ್ಮ ಕ್ಲಿನಿಕ್’ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಡಿ. 15. ಗ್ರಾಮಾಂತರ ಮಟ್ಟದಲ್ಲಿ ಜನಸಾಮಾನ್ಯರಿಗೂ ಅತ್ಯಂತ ಸುಲಭದಲ್ಲಿ ಆರೋಗ್ಯ ಸೇವೆ ದೊರೆಯಬೇಕು ಎನ್ನುವ ಉದ್ದೇಶದಿಂದ ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ನಮ್ಮ ಕ್ಲಿನಿಕ್‌ನ್ನು ಪ್ರಾರಂಭಿಸಲಾಗಿದೆ ಎಂದು ಬಂದರು ಮೀನುಗಾರಿಕೆ , ಒಳನಾಡು, ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳದಲ್ಲಿ ಸರಕಾರದ ‘ನಮ್ಮ ಕ್ಲಿನಿಕ್’ ಆರೋಗ್ಯ ಸೇವಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರಕಾರ ರಾಜ್ಯದಲ್ಲಿ ನಾನಾ ತಾಲೂಕುಗಳಲ್ಲಿ ಒಟ್ಟು 243 ನಮ್ಮ ಕ್ಲಿನಿಕ್ ಘಟಕಗಳನ್ನು

ಕೋಡಿಂಬಾಳ: ‘ನಮ್ಮ ಕ್ಲಿನಿಕ್’ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ದ್ವಿಚಕ್ರ ವಾಹನ ಢಿಕ್ಕಿ ➤ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 15. ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಯೊಂದರ ಹಿಂಬಾಗಕ್ಕೆ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದು, ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಕಬಕ- ವಿಟ್ಲ ರಸ್ತೆಯಲ್ಲಿ ನಡೆದಿದೆ. ಕಬಕ ವಿಟ್ಲ ರಸ್ತೆಯ ಮಧ್ಯೆ ಲಾರಿಯೊಂದನ್ನು ನಿಲ್ಲಿಸಲಾಗಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಸ್ಕೂಟರ್ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ದ್ವಿಚಕ್ರ ವಾಹನ ಢಿಕ್ಕಿ ➤ ಸವಾರನಿಗೆ ಗಾಯ Read More »

ಕರಾವಳಿ, ಕರ್ನಾಟಕ

ಹೃದಯಾಘಾತ- ಕಾವೂರು ಹೆಡ್ ಕಾನ್ಸ್ಟೇಬಲ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 15. ಕಾವೂರು ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತ ಲಮಾಣಿ (38) ಅವರು ಗುರುವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ತಮ್ಮ ಊರಾದ ಬಾಗಲಕೋಟೆಗೆ ಹೋಗಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. 2008 ರ ಬ್ಯಾಚ್ ನಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದ ಇವರು ಮೂಲತಃ ಬಾಗಲಕೋಟೆಯ ಲವಲೇಶ್ವರ ಗ್ರಾಮದವರಾಗಿದ್ದು ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹೃದಯಾಘಾತ- ಕಾವೂರು ಹೆಡ್ ಕಾನ್ಸ್ಟೇಬಲ್ ನಿಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯ ದೇಹದ ಗುರುತು ಪತ್ತೆ

(ನ್ಯೂಸ್‌ ಕಡಬ) newskadaba.com ಬೆಳ್ತಂಗಡಿ, ಡಿ. 14  ನಡ ಗ್ರಾ.ಪಂ. ವ್ಯಾಪ್ತಿಯ ಸೊರಕೆ ಸಮೀಪ ರಬ್ಬರ್ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಡಿ.12 ರಂದು ಪತ್ತೆಯಾಗಿತ್ತು, ಆದರೆ ದೇಹದ ಗುರುತು ಪತ್ತೆಯಾಗಿರಲಿಲ್ಲ,  ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ ವೈದ್ಯರು ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಮೃತದೇಹ ಮಹಿಳೆದ್ದೇ ಎಂದು ತಜ್ಞರು ಖಚಿತ ಪಡಿಸಿದ್ದಾರೆ. ಸುಮಾರು 30ರಿಂದ 40 ವರ್ಷದ ಮಹಿಳೆಯ ಮೃತದೇಹ ಎಂದು ತಿಳಿದು ಬಂದಿದ್ದು, ಶವ ಸಿಕ್ಕ ಸ್ಥಳದಲ್ಲಿ ಕಾಲು ಉಂಗುರ, ಬಳೆಗಳು ಪತ್ತೆಯಾಗಿವೆ. ಮಹಿಳೆಯ ದೇಹ

ಬೆಳ್ತಂಗಡಿ ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯ ದೇಹದ ಗುರುತು ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಜೇಸಿಐ ಕಡಬ ಕದಂಬ ಅಧ್ಯಕ್ಷರಾಗಿ ಅಭಿಷೇಕ್. ಜಿ.ಎಂ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ಎ.ಕೆ ಆಯ್ಕೆ  

(ನ್ಯೂಸ್ ಕಡಬ) newskadaba.com ಕಡಬ, ಡಿ. 14. 2022-23ನೇ ಸಾಲಿನ ಜೇಸಿಐ ಕಡಬ ಕದಂಬದ ಅಧ್ಯಕ್ಷರಾಗಿ ಅಭಿಷೇಕ್ ಜಿ.ಎಂ. ಕಾರ್ಯದರ್ಶಿಯಾಗಿ ರಾಜೇಶ್ ಎ.ಕೆ ಅವರು ಆಯ್ಕೆಯಾಗಿದ್ದಾರೆ. ಜೇಸಿರೇಟ್ ಅಧ್ಯಕ್ಷರಾಗಿ ಪ್ರಜ್ಞಾ ಎಸ್.ಆರ್, ಜೂನಿಯರ್ ಜೇಸಿಯಾಗಿ ವಿನಿತ್ ಪಿ.ಎಸ್, ಖಜಾಂಜಿಯಾಗಿ ವಿನಯ್, ಜತೆ ಕಾರ್ಯದರ್ಶಿಯಾಗಿ ಮಹೇಶ್, ಉಪಾಧ್ಯಕ್ಷಕರಾಗಿ ರಮೇಶ್ ಕೊಠಾರಿ, ಅಬ್ದುಲ್ ರಹಿಮಾನ್, ಪ್ರಕಾಶ್ ಎನ್.ಕೆ, ಅನೀಶ್ ಲೋಬೋ, ಶ್ರೀ ಕೃಷ್ಣ ಎಂ.ಆರ್, ಜೆಸಿರೇಟ್ ಕೋರ್ಡಿನೇಟರ್ ಆಗಿ ಪ್ರಸನ್ನ ಪುತ್ರಬೈಲು, ಜೂನಿಯರ್ ಜೇಸಿ ಕೋರ್ಡಿನೇಟರ್ ಆಗಿ ಮಹೇಶ್ ಕುಂಟೋಡಿ,

ಜೇಸಿಐ ಕಡಬ ಕದಂಬ ಅಧ್ಯಕ್ಷರಾಗಿ ಅಭಿಷೇಕ್. ಜಿ.ಎಂ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ಎ.ಕೆ ಆಯ್ಕೆ   Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ: ನಿಲ್ಲಿಸಿದ್ದ ಸ್ಕೂಟರ್ ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 14. ಇಲ್ಲಿನ ಪೃಥ್ವಿ ಶಾಪಿಂಗ್ ಮಾಲ್ ಬಳಿ ನಿಲ್ಲಿಸಲಾಗಿದ್ದ ಆಕ್ಸಸ್ ದ್ವಿಚಕ್ರ ವಾಹನ ಕಳವಾದ ಘಟನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ. ಉಪ್ಪಿನಂಗಡಿ ಬ್ಲೂ ಲೇಡಿ ಬಟ್ಟೆ ಅಂಗಡಿಯ ಮಾಲಕರ ಗಾಡಿ ಇದಾಗಿದ್ದು, ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಅಪಹರಿಸಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮಾಲಕ ಜಮಾಲ್ ಎಂಬವರು ದೂರು ನೀಡಿದ್ದಾರೆ.

ಉಪ್ಪಿನಂಗಡಿ: ನಿಲ್ಲಿಸಿದ್ದ ಸ್ಕೂಟರ್ ಕಳವು Read More »

ಕರಾವಳಿ, ಕರ್ನಾಟಕ
Scroll to Top