ಅಜಿಲಮೊಗರು : ಶಾಲೆಗೆ ತೆರಳುತ್ತಿದ್ದ ಮಕ್ಕಳ ಕಿಡ್ನಾಪ್ ಗೆ ಯತ್ನ..?                                 

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಡಿ. 14.  ಶಾಲೆಗೆ ತೆರಳುತ್ತಿದ್ದ ಮಕ್ಕಳನ್ನು ಅಪಹರಣ ಮಾಡಲು ಯತ್ನಿಸಿದ ಆರೋಪ ಕೇಳಿ ಬಂದ ಘಟನೆ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕುಟ್ಟಿಕಳ ಎಂಬಲ್ಲಿ ಸಂಭವಿಸಿದೆ.

ಇಬ್ಬರು ಮಕ್ಕಳು ತಮ್ಮ ಮನೆಯಿಂದ ಕುಟ್ಟಿಕಳ ಹಿ.ಪ್ರಾ.ಶಾಲೆಗೆ ತೆರಳುತ್ತಿದ್ದ ವೇಳೆ ಕಾರೊಂದರಲ್ಲಿ ಬಂದ ವ್ಯಕ್ತಿ ಅಂಗಿಯನ್ನು  ಎಳೆಯಲು ಪ್ರಯತ್ನಿಸಿದ್ದು, ಈ ವೇಳೆ ಅಂಗಿಯ ಗುಬ್ಬಿಗಳು ಎದ್ದು ಹೋಗಿವೆ. ತಿಳಿದುಬಂದಿದೆ. ಈ ಕುರಿತು ಮಕ್ಕಳು ಪೋಷಕರಿಗೆ ಮಾಹಿತಿ ನೀಡಿದ್ದು, ನಂತರ ಅವರು ಬಂಟ್ವಾಳ ಪೋಲಿಸ್ ಠಾಣೆಗೆ  ಮಾಹಿತಿ ನೀಡಿದ್ದು, ಘಟನೆಯ ಸತ್ಯಾಂಶವದ ಕುರಿತು ಪೊಲೀಸರು  ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ..

 

 

Scroll to Top