ಕರಾವಳಿ

ಉಳ್ಳಾಲ: ಟಯರ್ ಸಿಡಿದು ಟೆಂಪೋ ಪಲ್ಟಿ ➤ ರಸ್ತೆಯಲ್ಲಿ ಮೀನು ಚಲ್ಲಾಪಿಲ್ಲಿ

(ನ್ಯೂಸ್ ಕಡಬ)newskadaba.com ಉಳ್ಳಾಲ, ಫೆ.06. ತೊಕ್ಕೊಟ್ಟು ಕಲ್ಲಾಪು ಎಂಬಲ್ಲಿ ಮೀನು ಸಾಗಾಟ ನಡೆಸುತ್ತಿದ್ದ ಟೆಂಪೋ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದ ಘಟನೆ ವರದಿಯಾಗಿದೆ. ಲಾರಿ ಚಾಲಕ ಸಾದಿಕ್ ಸ್ವಲ್ಪ ಗಾಯದಿಂದ ಪಾರಾಗಿದ್ದಾರೆ. ಮಂಗಳೂರು ಧಕ್ಕೆಯಿಂದ ಉಳ್ಳಾಲ ಫಿಷ್ ಮಿಲ್ ಗೆ ಮೀನು ಸಾಗಾಟ ನಡೆಸುತ್ತಿದ್ದ ಟೆಂಪೋ, ಚಾಲಕನ ನಿಯಂತ್ರಣ ತಪ್ಪಿ ವಾಲಿದ್ದು, ಈ ವೇಳೆ ಟಯರ್ ಸಿಡಿದು ರಸ್ತೆಗೆ ಉರುಳಿದೆ ಎನ್ನಲಾಗಿದೆ. ಘಟನೆಯಿಂದ ರಸ್ತೆಯಲ್ಲಿ ಮೀನು ಚಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದು ರಸ್ತೆ ಸಂಚಾರದಲ್ಲಿ ಅಡಚಣೆಯುಂಟಾಗಿದೆ. ಮಂಗಳೂರು […]

ಉಳ್ಳಾಲ: ಟಯರ್ ಸಿಡಿದು ಟೆಂಪೋ ಪಲ್ಟಿ ➤ ರಸ್ತೆಯಲ್ಲಿ ಮೀನು ಚಲ್ಲಾಪಿಲ್ಲಿ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಕಾರಿಂಜ ಕ್ಷೇತ್ರದ ಸುತ್ತಮುತ್ತಲ 2 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಫೆ.06. ಬಂಟ್ವಾಳ ತಾಲ್ಲೂಕಿನಲ್ಲಿರುವ ಪಾರ್ವತಿ ಪರಮೇಶ್ವರ ಆವಾಸಸ್ಥಾನವಾದ ಶ್ರೀ ಕಾರಿಂಜೇಶ್ವರ ದೇವಾಲಯದ ಸುತ್ತಮುತ್ತಲಿನ 2 ಕಿ .ಮೀ. ವ್ಯಾಪ್ತಿಯನ್ನು ಗಣಿಗಾರಿಕಾ ಚಟುವಟಿಕೆ ನಿಷೇಧಿತ ಪ್ರದೇಶವೆಂದು ಘೋಷಿಸಿ ದ.ಕ. ಜಿಲ್ಲಾಧಿಕಾರಿ ಡಾ. ರವಿ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣೆಗಾಗಿ ಪರಿಸರದಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಲು ಮತ್ತು ಪಾವಿತ್ರ್ಯತೆ ಉಳಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ತಿರುಲೇಶ್ ಬೆಳ್ಳೂರು, ಇವರು ಕರ್ನಾಟಕ ಸರ್ಕಾರದ ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳಿಗೆ ಉಲ್ಲೇಖ (1)

ಬಂಟ್ವಾಳ: ಕಾರಿಂಜ ಕ್ಷೇತ್ರದ ಸುತ್ತಮುತ್ತಲ 2 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ Read More »

ಕರಾವಳಿ

ಕಾಪು: ಚೂರಿಯಿಂದ ಇರಿದು ವ್ಯಕ್ತಿಯೋರ್ವನ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಕಾಪು, ಫೆ.06. ಚೂರಿಯಿಂದ ಇರಿದು ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಪಾಂಗಾಳದಲ್ಲಿ ನಡೆದಿದೆ. ಪಾಂಗಾಳ ಮಂಡೇಡಿ ನಿವಾಸಿ ಶರತ್ ಶೆಟ್ಟಿ(39) ಹತ್ಯೆಗೀಡಾದ ವ್ಯಕ್ತಿ ಎನ್ನಲಾಗಿದೆ. ಪಾಂಗಾಳ ಶ್ರೀ ಜನಾರ್ದನ ದೇವಸ್ಥಾನದ ಬಳಿ ಅವರ ಮೇಲೆ ಚೂರಿಯಿಂದ ಇರಿಯಲಾಗಿದೆ . ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಕಾಪು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾಪು: ಚೂರಿಯಿಂದ ಇರಿದು ವ್ಯಕ್ತಿಯೋರ್ವನ ಬರ್ಬರ ಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ಮಂಗಳೂರು: ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.06. ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುದ್ರೋಳಿಯ ಟಿಪ್ಪು ಸುಲ್ತಾನ್ ನಗರದಲ್ಲಿ ನಡೆದಿದೆ. ಕುದ್ರೋಳಿ ನಿವಾಸಿ ರಿಯಾಝ್‌ ಎಂಬವರ ಪುತ್ರಿ ಖತೀಜಾ ರೀನಾ(16)ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಎಂದು ಗುರುತಿಸಲಾಗಿದೆ. ಬಾಲಕಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾಲಕಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಂದರ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.    

ಮಂಗಳೂರು: ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಮುಖ್ಯ ಶಿಕ್ಷಕರ ಗಮನಕ್ಕೆ ತಾರದೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಶಿಕ್ಷಕಿ

(ನ್ಯೂಸ್ ಕಡಬ)newskadaba.com  ಪುತ್ತೂರು, ಫೆ.05. ಶಿಕ್ಷಕಿಯೋರ್ವರು ಶಾಲಾ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರಿಗೆ ತಿಳಿಸದೆ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಘಟನೆ ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಚಿಕ್ಕಮುಡ್ನೂರು ಬೀರ್ನಹಿತ್ಲು ಶಾಲೆಯ ಮೂರನೇ ಹಾಗೂ ಒಂದನೇ ತರಗತಿ ಮಕ್ಕಳನ್ನು ಶಿಕ್ಷಕಿಯೋರ್ವರು ಶಾಲಾ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರಿಗೆ ತಿಳಿಸಿದೆ ಕರೆದುಕೊಂಡು ಹೋಗಿದ್ದು, ಈ ಕುರಿತು ಪೋಷಕರು ಮತ್ತು ಸಾರ್ವಜನಿಕರು ಆರೋಪಿಸಿದ್ದಾರೆ. ಶಾಲೆಯಲ್ಲಿ ಪತ್ರವೊಂದು ದೊರೆತಿದ್ದು, ಅದರಲ್ಲಿ ಪ್ರವಾಸಕ್ಕೆ ಹೋಗುವ ಸ್ಥಳಗಳನ್ನು ಉಲ್ಲೇಖಿಸಲಾಗಿದೆ.

ಪುತ್ತೂರು: ಮುಖ್ಯ ಶಿಕ್ಷಕರ ಗಮನಕ್ಕೆ ತಾರದೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಶಿಕ್ಷಕಿ Read More »

ಕರಾವಳಿ

ಪಡುಬಿದ್ರಿ: ಪೋಕ್ಸೋ ಪ್ರಕರಣ; ಕರಾಟೆ ಶಿಕ್ಷಕನಿಗೆ 22 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com  ಪಡುಬಿದ್ರೆ, ಫೆ.05. ಕರಾಟೆ ಕಲಿಯಲು ತನ್ನ ತರಬೇತಿ ಕೇಂದ್ರಕ್ಕೆ ಬರುತ್ತಿದ್ದ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕರಾಟೆ ತರಬೇತುದಾರ ಹಾಗೂ ಪಡುಬಿದ್ರಿ ಸಮೀಪದ ಹೆಜಮಾಡಿ ನಿವಾಸಿ ಉಮೇಶ್ ಬಂಗೇರ (48) ಎಂಬಾತನಿಗೆ 22 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀನಿವಾಸ್ ಸುವರ್ಣ ಅವರು ತೀರ್ಪು ನೀಡಿದ್ದಾರೆ. ಅಪರಾಧಿ ಪಡುಬಿದ್ರಿಯಲ್ಲಿ ಕರಾಟೆ ತರಗತಿ ನಡೆಸುತ್ತಿದ್ದು,

ಪಡುಬಿದ್ರಿ: ಪೋಕ್ಸೋ ಪ್ರಕರಣ; ಕರಾಟೆ ಶಿಕ್ಷಕನಿಗೆ 22 ವರ್ಷ ಜೈಲು ಶಿಕ್ಷೆ Read More »

ಕರಾವಳಿ, ಕ್ರೈಮ್ ನ್ಯೂಸ್

ಎನ್‌ಇಪಿ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ ➤ ಅನುತ್ತೀರ್ಣರಾದವರಿಗೆ ಶುಲ್ಕ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.05. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯಡಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ. ವಿವಿ ಕಡೆಯಿಂದ ಮರು ಮೌಲ್ಯಮಾಪನಕ್ಕೆ ಅವಕಾಶ ಸಿಕ್ಕರೂ ಕೂಡ ಈ ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಜತೆಗೆ ಶುಲ್ಕ ಹಾಗೂ ಸಮಯ ಎರಡನ್ನೂ ಕಳೆದುಕೊಳ್ಳಲಿದ್ದಾರೆ. ಮಂಗಳೂರು ವಿವಿ ಪರೀಕ್ಷೆ ಜತೆಗೆ ಫಲಿತಾಂಶ ನೀಡುವುದರಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಸುದ್ದಿಯಲ್ಲಿದೆ. ವಿದ್ಯಾರ್ಥಿಗಳ ಪ್ರತಿಭಟನೆ, ಪ್ರಿನ್ಸಿಪಾಲರ ಮನವಿಗಳೆಲ್ಲವೂ ವಿವಿ ಅಧಿಕಾರಿಗಳ ಕದ ಬಡಿದರೂ

ಎನ್‌ಇಪಿ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ ➤ ಅನುತ್ತೀರ್ಣರಾದವರಿಗೆ ಶುಲ್ಕ Read More »

ಕರಾವಳಿ

ಉಳ್ಳಾಲ: ವೀರ ರಾಣಿ ಅಬ್ಬಕ್ಕನ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ➤ ಶೋಭಾ ಕರಂದ್ಲಾಜೆ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.05. ತೊಕ್ಕೊಟ್ಟಿನ ಉದ್ದೇಶಿತ ಜಾಗದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ಹೆಸರಲ್ಲಿ ಭವನ ನಿರ್ಮಾಣ ಮಾತ್ರವಲ್ಲದೆ ಜೀಟಿಗೆ ಹಿಡಿದು ಪೋರ್ಚುಗೀಸರನ್ನ ಸೋಲಿಸಿದ ವೀರರಾಣಿಯ ಚರಿತ್ರೆ ದೇಶಕ್ಕೆ ತಿಳಿಸುವ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಹೇಳಿದ್ದಾರೆ. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ನೆರಳಲ್ಲಿ ಉಳ್ಳಾಲದ ಮಹಾತ್ಮ ಗಾಂಧಿ ರಂಗ ಮಂದಿರದಲ್ಲಿ ನಡೆದ “ವೀರ ರಾಣಿ ಅಬ್ಬಕ್ಕ ಉತ್ಸವ”ದಲ್ಲಿ ಸಭಾಧ್ಯಕ್ಷತೆ ವಹಿಸಿ ಶೋಭಾ ಕರಂದ್ಲಾಜೆಯವರು ಮಾತನಾಡಿದರು. ರಾಣಿ ಅಬ್ಬಕ್ಕನಂತಹ ವೀರ

ಉಳ್ಳಾಲ: ವೀರ ರಾಣಿ ಅಬ್ಬಕ್ಕನ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ➤ ಶೋಭಾ ಕರಂದ್ಲಾಜೆ Read More »

ಕರಾವಳಿ

ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ➤ ಬಂಟ್ವಾಳ ನಿವಾಸಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.05. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ನಿವಾಸಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿ.ಸಿ ರೋಡ್ ನ ಮುಹಮ್ಮದ್ ಇಬ್ರಾಹಿಂ ತೌಫಿಕ್ (23) ಬಂಧಿತ. ತೌಫಿಕ್ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರ್ಥಿನಿಯೋರ್ವಳನ್ನು ಆಮಿಷ ತೋರಿಸಿ ವಿವಿಧೆಡೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ತನಿಖೆ ನಡೆಸಿದ ಮಂಜೇಶ್ವರ ಪೊಲೀಸರು ತೌಫಿಕ್ ನನ್ನು ಬಂಧಿಸಿದ್ದಾರೆ.  

ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ➤ ಬಂಟ್ವಾಳ ನಿವಾಸಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿ ಹತ್ಯೆ ಕೇಸ್ ➤ಆರೋಪಿಗಾಗಿ ಮುಂದುವರಿದ ಶೋಧ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.05. ನಗರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಹಾಡಹಗಲೇ ಸಿಬ್ಬಂದಿ ರಾಘವೇಂದ್ರ ಆಚಾರ್ಯರನ್ನು ಚೂರಿಯಿಂದ ಇರಿದು ಕೊಲೆಗೈದು ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಂದರು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ ಎನ್ನಲಾಗಿದೆ. ಘಟನೆ ವೇಳೆ ಅಂಗಡಿಯಲ್ಲಿದ್ದ ಒಟ್ಟು 12 ಗ್ರಾಂ ತೂಕದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಲಾಗಿದೆ. ಆರೋಪಿಯ ಪತ್ತೆಗಾಗಿ ಅಕ್ಕಪಕ್ಕದ ಅಂಗಡಿಗಳು ಸೇರಿದಂತೆ ಹಲವಾರು ಕಟ್ಟಡಗಳ ಸಿಸಿ ಕೆಮರಾ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿ ಕೃತ್ಯ ನಡೆಸಿದ ಬಳಿಕ ತುಂಬಾ

ಮಂಗಳೂರು: ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿ ಹತ್ಯೆ ಕೇಸ್ ➤ಆರೋಪಿಗಾಗಿ ಮುಂದುವರಿದ ಶೋಧ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top