ಕರಾವಳಿ

➤ಸೌದಿ ಅರೇಬಿಯಾ ಕಾರಿಗೆ ಅಡ್ಡ ಬಂದ ಒಂಟೆ ➤ ಮಂಗಳೂರು ಮೂಲದ ಮೂವರು ಮೃತ್ಯು!

(ನ್ಯೂಸ್ ಕಡಬ) newskadaba.com. ಮಂಗಳೂರು, ಫೆ.4.  ಸೌದಿ ಅರೇಬಿಯಾದ ಅಲ್-ಹಸಾ ಪ್ರದೇಶದ ಖುರೈಸ್ ಹೆದ್ದಾರಿಯಲ್ಲಿ ಹಠಾತ್ತನೆ ಒಂಟೆಯೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಹಳೆಯಂಗಡಿ ಬಳಿಯ ಕದಿಕೆ ನಿವಾಸಿ 23 ವರ್ಷದ ರಿಜ್ವಾನ್, ಮಂಗಳೂರು ಬೆಂಗರೆ ನಿವಾಸಿ ಅಕೀಲ್, ಸುರತ್ಕಲ್ ಕೃಷ್ಣಾಪುರದ ಶಿಹಾಬ್ ಹಾಗೂ ಬಾಂಗ್ಲಾದೇಶದ ನಾಸೀರ್ ಎಂದು ಗುರುತಿಸಲಾಗಿದೆ.

➤ಸೌದಿ ಅರೇಬಿಯಾ ಕಾರಿಗೆ ಅಡ್ಡ ಬಂದ ಒಂಟೆ ➤ ಮಂಗಳೂರು ಮೂಲದ ಮೂವರು ಮೃತ್ಯು! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಜಿರೆ: ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡುತ್ತಿರುವ ಸಮ್ಮೇಳನದ ಸಂದೇಶ ಎಲ್ಲೆಡೆ ಹರಡಲಿ ➤ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್

(ನ್ಯೂಸ್ ಕಡಬ)newskadaba.com ಉಜಿರೆ, ಫೆ.04. “ಕನ್ನಡವು ಶ್ರೇಷ್ಠ ಭಾಷೆಯಾಗಿದ್ದು, ಇದನ್ನು ಉಳಿಸಿ,ಬೆಳೆಸಿ, ಪಸರಿಸಿ,ಇದರ ಕಂಪನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಸಮ್ಮೇಳನವು ಸಹಕಾರಿಯಾಗಲಿ. ಪ್ರತಿ ವ್ಯಕ್ತಿಗೂ ಕನ್ನಡದ ಪರಿಚಯವನ್ನು, ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹವನ್ನು ನೀಡುತ್ತಿರುವ ಸಾಹಿತ್ಯ ಸಮ್ಮೇಳನದ ಸಂದೇಶ ಎಲ್ಲೆಡೆ ಹರಡಲಿ” ಎಂದು ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದರು. ಉಜಿರೆಯಲ್ಲಿ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಿ ಜರಗಲಿದ್ದು,ಉತ್ತಮ ಆಶಯವನ್ನು ಹೊಂದಿದೆ. ಜಿಲ್ಲಾಡಳಿತದಿಂದ

ಉಜಿರೆ: ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡುತ್ತಿರುವ ಸಮ್ಮೇಳನದ ಸಂದೇಶ ಎಲ್ಲೆಡೆ ಹರಡಲಿ ➤ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ Read More »

ಕರಾವಳಿ

ಭಾರೀ ಅಗ್ನಿ ಅನಾಹುತಕ್ಕೆ ಸುಟ್ಟು ಭಸ್ಮವಾದ ಗ್ಯಾರೆಜ್

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.04. ಭಾರೀ ಬೆಂಕಿ ಅನಾಹುತಕ್ಕೆ ಗ್ಯಾರೆಜ್ ಒಂದು ಸುಟ್ಟು ಭಸ್ಮವಾದ ಘಟನೆ ಮಂಗಳೂರು ಹೊರವಲಯದ ಜಪ್ಪಿನಮೊಗರು ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ಬದಿಯಲ್ಲಿರುವ ವಾಹನ ದುರಸ್ಥಿ ಮಾಡುವ ಗ್ಯಾರೇಜ್ ಸಂಪೂರ್ಣ ಹೊತ್ತಿ ಉರಿಯುತ್ತಿದ್ದು ಹತ್ತಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ವಾಹನಗಳು, ಪೊಲೀಸ್ ಅಧಿಕಾರಿಗಳು ಧಾವಿಸಿ ಬಂದಿದ್ದು ಬೆಂಕಿ ಆರಿಸಲು ಪ್ರಯತ್ನಿಸುತ್ತಿದ್ದಾರೆ. ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್‌ಫರ್ಮರ್ ಸ್ಪೋಟಗೊಂಡು ಈ ಅವಘಡ ಸಂಭವಿಸಿದೆ ಎಂಬ ಪ್ರಾರ್ಥಮಿಕ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ

ಭಾರೀ ಅಗ್ನಿ ಅನಾಹುತಕ್ಕೆ ಸುಟ್ಟು ಭಸ್ಮವಾದ ಗ್ಯಾರೆಜ್ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಪತ್ರಕರ್ತರ ಮೇಲೆ ಹಲ್ಲೆ; ರಕ್ಷಣೆಗೆ ಮನವಿ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.04. ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪತ್ರಕರ್ತರು ಮತ್ತು ಜನಸಾಮಾನ್ಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿರುವುದನ್ನು ಖಂಡಿಸಿ, ಪತ್ರಕರ್ತರಿಗೆ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಪೊಲೀಸ್‌ ಕಮಿಷನರ್‌ ಎನ್.ಶಶಿಕುಮಾರ್ ಅವರಿಗೆ ಶುಕ್ರವಾರ ಪತ್ರಕರ್ತರ ನಿಯೋಗ ಮನವಿ ಸಲ್ಲಿಸಿತು. ಟೋಲ್‌ಗೇಟ್‌ಗಳಲ್ಲಿ ಸಿಬ್ಬಂದಿಗಳು ಪತ್ರಕರ್ತರು ಸಹಿತ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿರುವ ಕೃತ್ಯಗಳು ಹೆಚ್ಚಿವೆ. ಪೊಲೀಸ್‌ ಇಲಾಖೆ ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ

ಮಂಗಳೂರು: ಪತ್ರಕರ್ತರ ಮೇಲೆ ಹಲ್ಲೆ; ರಕ್ಷಣೆಗೆ ಮನವಿ Read More »

ಕರಾವಳಿ

ಕೊಡಗಿನಲ್ಲಿ ಮತ್ತೆ ಜಾನುವಾರುಗಳ ಮೇಲೆ ದಾಳಿ ನಡೆಸಿದ ಹುಲಿ

(ನ್ಯೂಸ್ ಕಡಬ)newskadaba.com ಕೊಡಗು, ಫೆ.04. ದಕ್ಷಿಣ ಕೊಡಗಿನಲ್ಲಿ ಹುಲಿಗಳ ಹಾವಳಿ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಹಲವು ಜಾನುವಾರುಗಳು ದಾಳಿಗೆ ಬಲಿಯಾಗುತ್ತಿರುವುದು ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ. ಪೊನ್ನಂಪೇಟೆ ತಾಲೂಕಿನ ಸಮೀಪದ ಗ್ರಾಮಗಳಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಹಸುಗಳು ಬಲಿಯಾಗಿದ್ದು, ಹುಲಿಯನ್ನು ಹಿಡಿಯುವಂತೆ ಗ್ರಾಮಸ್ಥರು ಈ ಹಿಂದೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಪಂಚಾಯಿತಿ ವ್ಯಾಪ್ತಿಯ ರುದ್ರಗುಪ್ಪೆಯಲ್ಲಿ ಹಸುವೊಂದರ ಮೇಲೆ ಹುಲಿ ದಾಳಿ ನಡೆಸಿದ್ದು, ಹಸು ಬಲಿಯಾಗಿದೆ. ಈ ಸ್ಥಳದಿಂದ ಕೇವಲ 20 ಕಿ.ಮೀ ದೂರದಲ್ಲಿ, ಹಿಂದಿನ ದಿನ

ಕೊಡಗಿನಲ್ಲಿ ಮತ್ತೆ ಜಾನುವಾರುಗಳ ಮೇಲೆ ದಾಳಿ ನಡೆಸಿದ ಹುಲಿ Read More »

ಕರಾವಳಿ
crime, arrest, suspected

ಪ್ರತ್ಯೇಕ 5 ಕಳವು ಪ್ರಕರಣ ಭೇದಿಸಿದ ಕೊಡಗು ಪೊಲೀಸರು

(ನ್ಯೂಸ್ ಕಡಬ)newskadaba.com ಕೊಡಗು, ಫೆ.04. ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 5 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕುಶಾಲನಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕಳವು ಪ್ರಕರಣ ಭೇದಿಸಿದ ಪೊಲೀಸರಿಗೆ ಅಚ್ಚರಿ ಮೂಡುವಂತೆ ಖದೀಮರು ಐದು ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯ ಬಯಲಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯೇಕ 5 ಕಳವು ಪ್ರಕರಣ ಭೇದಿಸಿದ ಕೊಡಗು ಪೊಲೀಸರು Read More »

ಕರಾವಳಿ

ಮಂಗಳೂರು: ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿಯ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.04. ಹಾಡಹಗಲೇ ಜ್ಯುವೆಲ್ಲರಿ ಶಾಪ್ಗೆ ನುಗ್ಗಿ ಸಿಬ್ಬಂದಿಯನ್ನ ಚೂರಿ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ‌ಮಂಗಳೂರು ನಗರದ ಹಂಪನಕಟ್ಟೆ ಬಳಿ‌ ನಡೆದಿದೆ. ಹಂಪನಕಟ್ಟೆಯ ಮಂಗಳೂರು ‌ಜ್ಯುವೆಲ್ಲರಿ ಹೆಸರಿನ ಶಾಪ್ ನಲ್ಲಿ ಘಟನೆ ನಡೆದಿದ್ದು, ಜ್ಯುವೆಲ್ಲರಿ ಸಿಬ್ಬಂದಿ, ಅತ್ತಾವರ ನಿವಾಸಿ ರಾಘವೇಂದ್ರ(50) ಹತ್ಯೆಯಾದವರು ಎಂದು ತಿಳಿದುಬಂದಿದೆ.‌ ಕೇಶವ ಆಚಾರ್ಯ ಎಂಬವರಿಗೆ ಸೇರಿದ ಶಾಪ್ ಇದಾಗಿದ್ದು, ಮಾಲೀಕ ‌ಮಧ್ಯಾಹ್ನ ಊಟಕ್ಕೆ ಹೋಗಿದ್ದ ವೇಳೆ ಒಬ್ಬನೇ ಇದ್ದ ಸಿಬ್ಬಂದಿ ರಾಘವೇಂದ್ರ ಮೇಲೆ ದಾಳಿ ನಡೆಸಲಾಗಿದೆ. ಮಾಸ್ಕ್ ಮತ್ತು

ಮಂಗಳೂರು: ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿಯ ಬರ್ಬರ ಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ! ➤ ಮಂಗಳೂರಿನ ಮೂವರು ಯುವಕರು ಮೃತ್ಯು

(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾದ, ಫೆ.04. ರಿಯಾದ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕರಾವಳಿ ಮಂಗಳೂರಿನ ಮೂವರು ಸೇರಿ ಒಟ್ಟು ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.‌ ಅಕೀಲ್, ನಾಸಿರ್, ರಿಝ್ವಾನ್, ಶಿಹಾಬ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯಲ್ಲಿ ಇವರು ತೆರಳುವಾಗ ಒಂಟೆಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತದೇಹಗಳನ್ನು ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಕೀಲ್ ಅವರು ಮಂಗಳೂರಿನ ಬೋಳಾರ್ ನಿವಾಸಿಯಾಗಿದ್ದು, ರಿಝ್ವಾನ್ ಹಳೆಯಂಗಡಿ ಕದಿಕೆ ನಿವಾಸಿ

ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ! ➤ ಮಂಗಳೂರಿನ ಮೂವರು ಯುವಕರು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮುಲ್ಕಿ: ಅಪಘಾತ ಪ್ರಕರಣ ! ➤ ತುಳು ಸ್ಟ್ಯಾಂಡ್ ಆಫ್ ಕಾಮಿಡಿಯನ್ ಅರ್ಪಿತ್ ಅರೆಸ್ಟ್

(ನ್ಯೂಸ್ ಕಡಬ)newskadaba.com ಮುಲ್ಕಿ, ಫೆ.04. ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಾರಿಯಾಗಿದ್ದ ಆರೋಪಿ ಕಾರು ಚಾಲಕನನ್ನು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕಾರು ಸಮೇತ ಬಂಧಿಸಿರುವುದಾಗಿ ವರದಿಯಾಗಿದೆ. ಆರೋಪಿ ಕಾರು ಚಾಲಕನನ್ನು ಹಳೆಯಂಗಡಿ ಇಂದ್ರ ನಗರ ನಿವಾಸಿ ಅರ್ಪಿತ್ ಎಂದು ಗುರುತಿಸಲಾಗಿದ್ದು, ಈತ ತುಳು ಸ್ಟ್ಯಾಂಡ್ ಆಫ್ ಕಾಮಿಡಿ ಯೂಟ್ಯೂಬರ್ ಎಂದು ತಿಳಿದು ಬಂದಿದೆ. ಮಧ್ಯಪ್ರದೇಶದ

ಮುಲ್ಕಿ: ಅಪಘಾತ ಪ್ರಕರಣ ! ➤ ತುಳು ಸ್ಟ್ಯಾಂಡ್ ಆಫ್ ಕಾಮಿಡಿಯನ್ ಅರ್ಪಿತ್ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಮೂಡಬಿದಿರೆ: ನಿಧಾನವಾಗಿ ಹೋಗು ಎಂದದ್ದಕ್ಕೆ ಟಿಪ್ಪರ್ ಚಲಾಯಿಸಿ ಹತ್ಯೆ..!

(ನ್ಯೂಸ್ ಕಡಬ)newskadaba.com ಮೂಡಬಿದಿರೆ, ಫೆ.04. ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ ನಿಧಾನವಾಗಿ ಹೋಗೆಂದು ಹೇಳಿದ ವ್ಯಕ್ತಿಗೆ ಟಿಪ್ಪರ್ ಚಾಲಕ ರಾಡ್ ನಿಂದ ಹೊಡೆದು, ಟಿಪ್ಪರ್ ಚಲಾಯಿಸಿ ಕೊಲೆ ನಡೆಸಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟೆಬಾಗಿಲಿನ ನಿವಾಸಿ ಪಯಾಝ್ (61) ಹತ್ಯೆಗೀಡಾದ ವ್ಯಕ್ತಿ ಎಂದು ತಿಳಿದುಬಂದಿದೆ. ಪಯಾಜ್ ಕೋಟೆಬಾಗಿಲು ಮಸೀದಿಗೆ ನಮಾಝ್ ಗೆ ತೆರಳುವ ಸಂಧರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಆರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು ಹೋಗಿದ್ದು ಆಗ ಅಲ್ಲೇ

ಮೂಡಬಿದಿರೆ: ನಿಧಾನವಾಗಿ ಹೋಗು ಎಂದದ್ದಕ್ಕೆ ಟಿಪ್ಪರ್ ಚಲಾಯಿಸಿ ಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top