ಕರಾವಳಿ

ಅಮ್ಮನ ಕ್ಯಾನ್ಸರ್ ಚಿಕಿತ್ಸೆಗಾಗಿ ಸಂಘಟನೆಗೆ ಪತ್ರ ಬರೆದ 11ರ ಬಾಲಕಿ !!

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಫೆ.17. ನನ್ನ ಅಮ್ಮನ ‘ಹೊಟ್ಟೆಯಲ್ಲಿ ಗಡ್ಡೆ ಕ್ಯಾನ್ಸರ್‌ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಅಮ್ಮನ ಪ್ರಾಣ ಉಳಿಸಲು ನೆರವಾಗಿ’ ಎಂದು ಎಳೆಯ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿರುವ 11ರ ಹರೆಯದ ಬಾಲಕಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ. ಬೆಳ್ತಂಗಡಿ ತಾಲ್ಲೂಕಿನ ಕಣಿಯೂರು ಗ್ರಾಮದ ಕೊರಜಂಡ ಮನೆ ನಿವಾಸಿ‌ ದಿ.ವಾಸಪ್ಪ ಎಂಬುವರ ಪುತ್ರಿ ವಿತೀತಾ ಈ ರೀತಿ ಪತ್ರ ಬರೆದು, ಸಹಾಯಯಾಚಿಸಿದ್ದಾಳೆ.  

ಅಮ್ಮನ ಕ್ಯಾನ್ಸರ್ ಚಿಕಿತ್ಸೆಗಾಗಿ ಸಂಘಟನೆಗೆ ಪತ್ರ ಬರೆದ 11ರ ಬಾಲಕಿ !! Read More »

ಕರಾವಳಿ

ಯಕ್ಷಗಾನದ ಹೆಸರಾಂತ ಭಾಗವತ ಬಲಿಪ ನಾರಾಯಣ ನಿಧನ !!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.17. ಯಕ್ಷಗಾನದ ಹೆಸರಾಂತ ಭಾಗವತ, ಕಂಚಿನ ಕಂಠದ ‘ಬಲಿಪ ಶೈಲಿ’ಯ ಹಾಡುಗಾರಿಕೆಗೆ ಖ್ಯಾತವಾಗಿರುವ ಬಲಿಪ ನಾರಾಯಣ ಭಾಗವತ ಅವರು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಬಲಿಪ ನಾರಾಯಣ ಭಾಗವತರು ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಾರೂರು ನೂಯಿಯಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ ದಂಪತಿಯ ಪುತ್ರರಾದ ಅವರು, ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 1938ರ ಮಾರ್ಚ್ 13ರಂದು ಜನಿಸಿದ್ದು, 13ನೇ ವಯಸ್ಸಿಗೆ ಯಕ್ಷಗಾನ

ಯಕ್ಷಗಾನದ ಹೆಸರಾಂತ ಭಾಗವತ ಬಲಿಪ ನಾರಾಯಣ ನಿಧನ !! Read More »

ಕರಾವಳಿ

ಅಕ್ರಮ ಮರಳು ಸಾಗಾಟ ಪ್ರಕರಣ➤ ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com. ಹಾವೇರಿ, ಫೆ.17. ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ,  ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಕೇರಳದ ಕೊಯಿಲಾಂಡಿ ನಿವಾಸಿ ಸುರೇಶ್ ಬಾಬು ಯಾನೆ ಸೂರಿ ಬಂಧಿತ ಆರೋಪಿಯಾಗಿದ್ದಾನೆ. ಈ ಅಕ್ರಮ ಮರಳು ಸಾಗಾಟದ ಪ್ರಮುಖ ಆರೋಪಿಯಾಗಿದ್ದ ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ವಾರೆಂಟ್ ಜಾರಿಯಾಗಿತ್ತು. ಇದೀಗ ಆರೋಪಿಯನ್ನು ವಿಟ್ಲ ಠಾಣೆ ಎಸ್ಸೈ ಜಯರಾಮ್ ಕೇರಳದ ಕೊಯಿಲಾಂಡಿಯ ವಾರಾಂಗೀಲ್ ಎಂಬಲ್ಲಿ ಬಂಧಿಸಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ➤ ಆರೋಪಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ತಂದು ಕಸದ ರಾಶಿಗೆ ಎಸೆದ ದುಷ್ಕರ್ಮಿಗಳು ➤ ಆರೋಪಿಗಳು ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.17. ಅಸ್ವಸ್ಥ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ಉಳಿದ ಇಬ್ಬರು ಆತನನ್ನು ಗೂಡ್ಸ್ ವಾಹನವೊಂದರಲ್ಲಿ ಹಾಕಿ ತಂದು ಕಸದ ರಾಶಿಗೆ ಎಸೆದ ಪ್ರಕರಣ ಕೆಮ್ಮಣ್ಣು ಸಂತೆ ಮಾರುಕಟ್ಟೆಯ ಬಳಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಹನುಮಂತ ಎಂದು ಗುರುತಿಸಲಾಗಿದೆ. ಈತ ವಾರದ ಸಂತೆ ಹಿನ್ನೆಲೆಯಲ್ಲಿ ಕೆಮ್ಮಣ್ಣು ಮಾರುಕಟ್ಟೆಗೆ ವ್ಯಾಪಾರ ನಡೆಸಲು ಬಂದಿದ್ದ ಎನ್ನಲಾಗಿದೆ.ಆದರೆ ಅಸ್ವಸ್ಥಗೊಂಡು ಮೃತಪಟ್ಟಿದ್ದನು.ಇದನ್ನು ಕಂಡು ಇತರ ಇಬ್ಬರು ವ್ಯಾಪಾರಿಗಳು ಹನುಮಂತನ ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ಸಾಗಿಸಿಕೊಂಡು ಹೋಗಿ ಕೆಮ್ಮಣ್ಣು ಸಂತೆಮಾರುಕಟ್ಟೆ ಬಳಿಯ

ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ತಂದು ಕಸದ ರಾಶಿಗೆ ಎಸೆದ ದುಷ್ಕರ್ಮಿಗಳು ➤ ಆರೋಪಿಗಳು ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿ ಪುಣೆಯಲ್ಲಿ ಮೃತ್ಯು !!

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.17. ಅಜ್ಮೀರ್‌ ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿಯೋರ್ವರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಸಿದ್ದೀಖ್ ಅಲ್ ಮದೀನಿ ಎಂದು ಗುರುತಿಸಲಾಗಿದೆ. ಸಂಸ್ಥೆಯ ಸ್ನೇಹಿತರ ಜತೆ ಮೊನ್ನೆ ಅಜ್ಮೀರ್ ಪ್ರವಾಸಕ್ಕೆಂದು ಹೋಗಿದ್ದ ಅವರಿಗೆ ಪುಣೆಯಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾಗಿ ಎನ್ನಲಾಗಿದೆ.  

ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿ ಪುಣೆಯಲ್ಲಿ ಮೃತ್ಯು !! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಲೈಟ್ ಕಂಬವೊಂದರ ಬುಡದಲ್ಲಿ ನವಜಾತ ಶಿಶು ಪತ್ತೆ !!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.17. ಸ್ಟೇಟ್‌ಬ್ಯಾಂಕ್‌ ಸಮೀಪದ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಲಾಗಿದೆ ಎಂದು ಮಂಗಳೂರಿನಲ್ಲಿ ವರದಿಯಾಗಿದೆ. ಲೈಟ್‌ ಕಂಬವೊಂದರ ಬುಡದಲ್ಲಿ ಮಗು ಇರುವುದನ್ನು ಗಮನಿಸಿದ ಚಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವೆನ್ಲಾಕ್‌ನ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಇದೀಗ ಪೊಲೀಸರು ಮಗುವನ್ನು ದಾಖಲಿಸಿದ್ದಾರೆ. ಮಗುವಿನ ಆರೋಗ್ಯದಲ್ಲಿ ಏರುಪೇರು ಇದ್ದು, ಸುಮಾರು ಒಂದು ವಾರದ ಹಿಂದೆ ಮಗು ಜನಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.  

ಮಂಗಳೂರು: ಲೈಟ್ ಕಂಬವೊಂದರ ಬುಡದಲ್ಲಿ ನವಜಾತ ಶಿಶು ಪತ್ತೆ !! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ತಾಯಿಗೆ ಕೊಲೆ ಬೆದರಿಕೆ !     ➤ ಹಲ್ಲೆ ಮಾಡಿ ಮೂಳೆ ಮುರಿದ ಪಾಪಿ ಮಗ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.17. ಮಗನೋರ್ವ ಹೆತ್ತ ತಾಯಿಗೆ ಅವ್ಯಾಚ ಶಬ್ದಗಳಿಂದ ಬೈದು ದೂಡಿ ಹಾಕಿ ತುಳಿದ ತೊಡೆಯ ಮೂಳೆ ಮುರಿದು ಹಾಕಿದ ಘಟನೆ ಬೋಳಾರ ಬತ್ತೇರಿ ಗಾರ್ಡನ್‌ನ ಫೆಲಿಕ್ಸ್‌ ಕಂಪೌಂಡ್‌ನ‌ಲ್ಲಿ ಫೆ. 15ರ ಬುಧವಾರ ತಡರಾತ್ರಿ ಸಂಭವಿಸಿದೆ. ಆರೋಪಿ ಪುತ್ರ ರೋಹಿತ್‌ ವಿರುದ್ಧ ಗಾಯಾಳು ಆಗಿರುವ ಶಾಂತಾ ರೈ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  

ಮಂಗಳೂರು: ತಾಯಿಗೆ ಕೊಲೆ ಬೆದರಿಕೆ !     ➤ ಹಲ್ಲೆ ಮಾಡಿ ಮೂಳೆ ಮುರಿದ ಪಾಪಿ ಮಗ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ವೃದ್ದೆಯೋರ್ವರಿಗೆ ಬಸ್ ಢಿಕ್ಕಿ     ➤ ವೃದ್ದೆ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.17. ಆಕಾಶಭವನದ ಆನಂದನಗರ ಸರ್ಕಲ್ ಸಮೀಪ ಇರುವ ಭಂಡಾರಿ ಟವರ್ಸ್ ಕಟ್ಟಡದ ಎದುರು ರಸ್ತೆ ದಾಟುತ್ತಿದ್ದ ವೃದ್ದೆಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ. ಮೃತರಾದವರನ್ನು ಆಕಾಶಭವನ ನಿವಾಸಿ ಶ್ರೀಮತಿ ಗೀತಾ (74 ವರ್ಷ) ಎಂದು ಗುರುತಿಸಲಾಗಿದೆ. ಬಸ್ಸು ಚಾಲಕ ವನೀಶ್ ಎಂಬಾತ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಆಕಾಶಭವನ ಮುಖ್ಯ ರಸ್ತೆಯಲ್ಲಿ 4ನೇ ಮೈಲು ಕಡೆಯಿಂದ ಆನಂದನಗರ ಸರ್ಕಲ್ ಕಡೆಗೆ ರಸ್ತೆಯಲ್ಲಿ ಹಂಪ್ಸ್ ಇರುವ ಜಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ

ಮಂಗಳೂರು: ವೃದ್ದೆಯೋರ್ವರಿಗೆ ಬಸ್ ಢಿಕ್ಕಿ     ➤ ವೃದ್ದೆ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬದ ಆಹಾರ ನಿರೀಕ್ಷಕ ಚಂದ್ರ ನಾಯ್ಕ್ ಕಂದಾಯ ನಿರೀಕ್ಷಕರಾಗಿ ಪಂಜಕ್ಕೆ ವರ್ಗಾವಣೆ !

(ನ್ಯೂಸ್ ಕಡಬ)newskadaba.com ಕಡಬ, ಫೆ.16. ಕಡಬ ತಾಲೂಕು ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿದ್ದ ಚಂದ್ರ ನಾಯ್ಕ ಎನ್. ಕಂದಾಯ ನಿರೀಕ್ಷಕರಾಗಿ ಪಂಜಕ್ಕೆ ವರ್ಗಾವಣೆಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ದಾವಣಗೆರೆ ನಿವಾಸಿಯಾದ ಚಂದ್ರ ನಾಯ್ಕ ಕಳೆದ 13 ವರ್ಷಗಳಿಂದ ಕೊಡಿಂಬಾಡಿ, ಉಪ್ಪಿನಂಗಡಿ, ಸವಣೂರು, ಪುಣಚ್ಚಾಡಿಯಲ್ಲಿ ಕಾರ್ಯ ನಿರ್ವಹಿಸಿದ್ದರು ಎನ್ನಲಾಗಿದೆ. ಕಡಬ ತಾಲೂಕು ಕಚೇರಿಗೆ ವರ್ಗಾವಣೆಗೊಂಡಿದ್ದ ಇವರು ಇದೀಗ ಕಂದಾಯ ನಿರೀಕ್ಷಕರಾಗಿ ಪದೊನ್ನತಿ ಪಡೆದು ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.  

ಕಡಬದ ಆಹಾರ ನಿರೀಕ್ಷಕ ಚಂದ್ರ ನಾಯ್ಕ್ ಕಂದಾಯ ನಿರೀಕ್ಷಕರಾಗಿ ಪಂಜಕ್ಕೆ ವರ್ಗಾವಣೆ ! Read More »

ಕರಾವಳಿ

ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದೆ ರಜನಿಕಾಂತ್‌ ಜೈಲರ್‌‌ ಸಿನಿಮಾದ ಶೂಟಿಂಗ್‌

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.16. ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಜೈಲರ್‌‌ ಸಿನಿಮಾದ ಶೂಟಿಂಗ್‌ಗಾಗಿ ಮಂಗಳೂರಿಗೆ ಆಗಮಿಸಿದ್ದು, ಪಿಲಿಕುಳದ ಗುತ್ತಿನ ಮನೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಪಿಲಿಕುಳದ ಗುತ್ತಿನ ಮನೆಯಲ್ಲಿ ಜೈಲರ್‌ ಚಿತ್ರದ ಚಿತ್ರೀಕರಣಕ್ಕಾಗಿ ವಿಶೇಷ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದ್ದು, ಭದ್ರತೆ ಮತ್ತು ಗೌಪ್ಯತೆ ದೃಷ್ಟಿಯಿಂದ ಅಭಿಮಾನಿಗಳು ಹಾಗೂ‌ ಸಾರ್ವಜನಿಕರಿಗೆ ಗುತ್ತಿನ ಮನೆಗೆ ಪ್ರವೇಶ ನಿಷೇಧಿಸಲಾಗಿದೆ.  

ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದೆ ರಜನಿಕಾಂತ್‌ ಜೈಲರ್‌‌ ಸಿನಿಮಾದ ಶೂಟಿಂಗ್‌ Read More »

ಕರಾವಳಿ
Scroll to Top