ಕರಾವಳಿ

ಹೊಟೇಲ್ ಆರಂಭಿಸಿದ ತೃತೀಯ ಲಿಂಗಿ ಗೆಳತಿಯರು

(ನ್ಯೂಸ್ ಕಡಬ)newskadaba.com ಉಡುಪಿ, ಫೆ.16. ಬಸ್​ ನಿಲ್ದಾಣದ ಪಕ್ಕದಲ್ಲಿ ಮೂವರು ತೃತೀಯ ಲಿಂಗಿಯರು ಸೇರಿ ಹೊಟೇಲ್​ ಪ್ರಾರಂಭಿಸುವ ಮೂಲಕ ದುಡಿಮೆಗೆ ಇಳಿದಿದ್ದು ಮಾದರಿ ಕೆಲಸ‌ ಮಾಡಿದ್ದಾರೆ. ಪೂರ್ವಿ, ವೈಷ್ಣವಿ ಮತ್ತು ಚಂದನಾ ಎಂಬ ಹೆಸರಿನ ಮೂವರು ತೃತೀಯ ಲಿಂಗಿಗಳು ಉಡುಪಿ ಬಸ್​ ನಿಲ್ದಾಣದ ಪಕ್ಕದಲ್ಲಿ ಹೊಸದಾಗಿ ಹೋಟೆಲ್​ ತೆರೆದಿದ್ದಾರೆ. ಈ ಹೋಟೆಲ್ ರಾತ್ರಿ ಮಾತ್ರ ತೆರೆದಿರುತ್ತದೆ. ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರಿಗೆ, ರಾತ್ರಿ ಆಹಾರ ಸಿಗದೆ ಪರದಾಡುತ್ತಿರುತ್ತಾರೆ. ಹೀಗಾಗಿ ಇವರಿಗೆ ಅನುಕೂಲವಾಗಲೆಂದು ಮಧ್ಯರಾತ್ರಿ 1 ಗಂಟೆಯಿಂದ ಬೆಳಿಗ್ಗೆ […]

ಹೊಟೇಲ್ ಆರಂಭಿಸಿದ ತೃತೀಯ ಲಿಂಗಿ ಗೆಳತಿಯರು Read More »

ಕರಾವಳಿ

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ; ಮೈಸೂರಲ್ಲಿ ಎನ್‌ಐಎ ದಾಳಿ       ➤ ಅಪಾರ ಪ್ರಮಾಣದ ಡಿಜಿಟಲ್ ಸಾಮಗ್ರಿ ಜಪ್ತಿ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.16. ಕಳೆದ ವರ್ಷ ಅ.23ರಂದು ತಮಿಳುನಾಡಿನ ಕೊಯಮತ್ತೂರು ಮತ್ತು ನ.19ರಂದು ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು 3 ರಾಜ್ಯಗಳ 40 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿ ನಡೆದ ಸ್ಥಳಗಳಲ್ಲಿ ಕರ್ನಾಟಕದ ಮೈಸೂರು ಸೇರಿದೆ. ದಾಳಿ ವೇಳೆ ಅಪಾರ ಪ್ರಮಾಣದ ಡಿಜಿಟಲ್‌ ಸಾಮಗ್ರಿ, ಆಧಾರ್‌ ಕಾರ್ಡ್‌, ಸಿಮ್‌ ಕಾರ್ಡ್‌, ಮೊಬೈಲ್‌, ಲ್ಯಾಪ್‌ಟಾಪ್‌ ಮತ್ತು 4 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ; ಮೈಸೂರಲ್ಲಿ ಎನ್‌ಐಎ ದಾಳಿ       ➤ ಅಪಾರ ಪ್ರಮಾಣದ ಡಿಜಿಟಲ್ ಸಾಮಗ್ರಿ ಜಪ್ತಿ Read More »

ಕರಾವಳಿ, ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಲಾರಿ !       ➤  ಅದೃಷ್ಟವಶಾತ್ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಕಡಬ, ಫೆ.16. ಕಡಬ ತಾಲೂಕಿನ ಆಲಂಕಾರು ಶರವೂರು ದೇವಾಲಯದ ಬಳಿ ಮೊಟ್ಟೆ ಸಾಗಾಟ ಲಾರಿಯೊಂದು ಚಾಲನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಘಟನೆ ಗುರುವಾರದಂದು ಸಂಭವಿಸಿದೆ. ಚರಂಡಿಗೆ ಉರುಳಿ ಬಿದ್ಬ ಪರಿಣಾಮ ಲಾರಿಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮೈಸೂರಿನಿಂದ ನೆಟ್ಟಣಕ್ಕೆ ಮೊಟ್ಟೆ ತಲುಪಿಸಿ ಉಳಿದ ಮೊಟ್ಟೆಗಳನ್ನು ಪುತ್ತೂರಿಗೆ ಕೊಂಡೊಯ್ಯುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಲಾರಿ !       ➤  ಅದೃಷ್ಟವಶಾತ್ ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಕಡಲಬ್ಬರ ಸಾಧ್ಯತೆ      ➤ ಸಮುದ್ರ ತೀರದ ನಿವಾಸಿಗಳಿಗೆ; ಮೀನುಗಾರರಿಗೆ ಎಚ್ಚರಿಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.16. ಕರಾವಳಿಯಲ್ಲಿ ಕಡಲಬ್ಬರ ಹೆಚ್ಚಾಗಲಿದೆ ಎಂದು ಕೇಂದ್ರ ಸಮುದ್ರ ಸ್ಥಿತಿ ಅಧ್ಯಯನ ಸಂಶೋಧನಾ ಕೇಂದ್ರ (ಐನ್ ಸಿಓಐಎಸ್)ಎಚ್ಚರಿಕೆ ನೀಡಿದೆ. ಕರ್ನಾಟಕ, ಕೇರಳ, ಲಕ್ಷದೀಪ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಸಮುದ್ರದಲ್ಲಿ ಕಡಲು ಅಬ್ಬರದಿಂದ ಕೂಡಿರುವ ಸಾಧ್ಯತೆ ಇದೆ .ಆದುದರಿಂದ ಮೀನುಗಾರರು ಮತ್ತು ಕಿನಾರೆಯ ಜನರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.  

ಮಂಗಳೂರು: ಕಡಲಬ್ಬರ ಸಾಧ್ಯತೆ      ➤ ಸಮುದ್ರ ತೀರದ ನಿವಾಸಿಗಳಿಗೆ; ಮೀನುಗಾರರಿಗೆ ಎಚ್ಚರಿಕೆ Read More »

ಕರಾವಳಿ

ವೈಯಕ್ತಿಕ ಕಾರಣಕ್ಕೆ ಮನನೊಂದು ಓರ್ವ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಉಡುಪಿ, ಫೆ.16. ವೈಯಕ್ತಿಕ ಕಾರಣದಿಂದ ಮನನೊಂದು ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ಘಟನೆ ವರದಿಯಾಗಿದೆ. ಕೆಲಸ ಮಾಡುವ ಮನೆಯ ಮೇಲಿನ ಟೇರಸ್‌ನ ಕಬ್ಬಣದ ಕೊಂಡಿಗೆ ನೈಲನ್‌ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು ಅನಂತರ ಸೀರೆ ತುಂಡಾಗಿ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈಯಕ್ತಿಕ ಕಾರಣಕ್ಕೆ ಮನನೊಂದು ಓರ್ವ ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಖಾಸಗಿ ಬಸ್ ಪಲ್ಟಿ ➤ ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.16.  ಬೆಂಗಳೂರಿನಿಂದ-ಮಂಗಳೂರು, ಕುಮಟಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ರಾಷ್ಟೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಮುಂಜಾನೆ ವೇಳೆ ಸಂಭವಿಸಿದೆ.

ಖಾಸಗಿ ಬಸ್ ಪಲ್ಟಿ ➤ ಹಲವರಿಗೆ ಗಾಯ Read More »

ಕರಾವಳಿ

25 ಸಾವಿರ ಹೂಡಿಕೆಯಿಂದ ಯಶಸ್ವಿ ರೈತನಾದ ಸುಳ್ಯದ ವ್ಯಕ್ತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.16. ಎರಡೂವರೆ ವರ್ಷಗಳ ಹಿಂದೆ ಈ ಕೋವಿಡ್-19 ಸಾಂಕ್ರಾಮಿಕ) ರೋಗದ ಹಾವಳಿ ಶುರುವಾದಾಗ ಪಟ್ಟಣಗಳಲ್ಲಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಂತಹ ಅನೇಕ ಜನರು ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದರು. ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದ ಅನೇಕ ಜನರು ಬೇರೆ ಯಾವ ಕೆಲಸಗಳನ್ನು ಹುಡುಕಿಕೊಳ್ಳದೆ ಕೃಷಿಯತ್ತ ಮುಖ ಮಾಡಿದ್ದು ನಮಗೆಲ್ಲಾ ಗೊತ್ತೇ ಇದೆ. ಹೀಗೆ ಅನೇಕ ವಿದ್ಯಾವಂತ ಯುವಕರು ತಮ್ಮ ಹಳ್ಳಿಗಳಲ್ಲಿ ವಿನೂತನ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಪ್ರಗತಿಪರ ರೈತರಾಗುವ ದಿಸೆಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

25 ಸಾವಿರ ಹೂಡಿಕೆಯಿಂದ ಯಶಸ್ವಿ ರೈತನಾದ ಸುಳ್ಯದ ವ್ಯಕ್ತಿ Read More »

ಕರಾವಳಿ

ವೇತನ ಹೆಚ್ಚು ಮಾಡಿಲ್ಲ ಅಂತ ಮಾಲೀಕರ ಮನೆಯಲ್ಲಿ ಕಳ್ಳತನ… ಆರೋಪಿ ಅರೆಸ್ಟ್​..

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.16. ಸಂಬಳ ಹೆಚ್ಚು ಮಾಡಿಲ್ಲ ಅಂತ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನ ಅರೆಸ್ಟ್​ ಮಾಡಲಾಗಿದೆ. ಸಂಬಳ ಹೆಚ್ಚು ಮಾಡಿಲ್ಲ ಅಂತ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧನ ಮಾಡಲಾಗಿದೆ. ಶಾಂತಿನಗರ ಮನೆಯೊಂದರಲ್ಲಿ 2 ಲಕ್ಷ ಮೌಲ್ಯದ ಚಿನ್ನಭಾರಣ ಕಳ್ಳತನವಾಗಿದೆ.  ಕದ್ದು‌ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನ ಹುಂಡಿಯಲ್ಲಿ ಚಿನ್ನ ಹಾಕುತ್ತಿದ್ದ, ದೇವಸ್ಥಾನದ ಬಳಿ ಇರುವ ಭೀಕ್ಷಕರಿಗೂ ಕಳ್ಳತನದಲ್ಲಿ ಆರೋಪಿ ಪಾಲು ನೀಡುತ್ತಿದ್ದ.ಸದ್ಯ ಅಶೋಕ್ ನಗರ ಪೊಲೀಸರಿಂದ ಆರೋಪಿ

ವೇತನ ಹೆಚ್ಚು ಮಾಡಿಲ್ಲ ಅಂತ ಮಾಲೀಕರ ಮನೆಯಲ್ಲಿ ಕಳ್ಳತನ… ಆರೋಪಿ ಅರೆಸ್ಟ್​.. Read More »

ಕರಾವಳಿ

ಕುಂದಾಪುರ: ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ ಕಡವೆ ಮರಿ ಮೃತ್ಯು!!!                                       

(ನ್ಯೂಸ್ ಕಡಬ)newskadaba.com  ಕುಂದಾಪುರ, ಫೆ.15. ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಡವೆ ಮರಿಯೊಂದು ಅಡ್ಡ ಬಂದ ಪರಿಣಾಮ ಕಡವೆ ಮರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ದ್ವಿಚಕ್ರವಾಹನ ಜಖಂಗೊಡಿದ್ದಲ್ಲದೇ ಸವಾರನಿಗೂ ಗಾಯಗಳಾದ ಘಟನೆ ಕೊಲ್ಲೂರು ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರೊಬ್ಬರು ಚಿತ್ತೂರು ಕಡೆಯಿಂದ ಕೊಲ್ಲೂರು ಕಡೆಗೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗ್ಗಿನ ಸಂದರ್ಭ ಹಾರ್ಮಣ್ಣು ಎಂಬಲ್ಲಿರುವ ಪೆಟ್ರೋಲ್ ಬಂಕ್ ಸಮೀಪ ಬರುತ್ತಿದ್ದಂತೆ ಕಡವೆಮರಿಯೊಂದು ವೇಗವಾಹಿ ರಸ್ತೆಗೆ ಹಾರಿದ ಪರಿಣಾಮ ಸ್ಕೂಟರ್ ಮುಂಭಾಗಕ್ಕೆ

ಕುಂದಾಪುರ: ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ ಕಡವೆ ಮರಿ ಮೃತ್ಯು!!!                                        Read More »

ಕರಾವಳಿ, ಕ್ರೈಮ್ ನ್ಯೂಸ್

ಮಲೇರಿಯಾ ಮುಕ್ತದತ್ತ “ಕರಾವಳಿ’ !!! ➤ ಸಾವಿರದಷ್ಟಿದ್ದ ಮಲೇರಿಯಾ ಈಗ ಬಹು ಪ್ರಮಾಣದಲ್ಲಿ ಇಳಿಕೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಫೆ.15. ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲೇ ಅತ್ಯಧಿಕ ಮಲೇರಿಯಾ ಪ್ರಕರಣ ಕಂಡುಬರುತ್ತಿದ್ದ ಕರಾವಳಿ ಜಿಲ್ಲೆಗಳಲ್ಲಿ ಸದ್ಯ ಗಣನೀಯ ಇಳಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕ 4 ಸಾವಿರಕ್ಕೂ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಪ್ರಕರಣ 168ಕ್ಕೆ, ಉಡುಪಿ ಜಿಲ್ಲೆಯಲ್ಲಿ 2,217ರಿಂದ 18ಕ್ಕೆ ಇಳಿಕೆ ಕಂಡಿದೆ. ಉಭಯ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಕಾರ್ಯತಂತ್ರಗಳು ಫಲಿಸುತ್ತಿವೆ. ಪ್ರಕರಣ ಕಂಡುಬಂದರೆ 1 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ನಿಗಾ ವಹಿಸಲಾಗುತ್ತಿದೆ. ಆರೋಗ್ಯ ಇಲಾ ಖೆಯ ವಿಶೇಷ ತರಬೇತಿ ಹೊಂದಿದ ಕಾರ್ಯ ಕರ್ತರು

ಮಲೇರಿಯಾ ಮುಕ್ತದತ್ತ “ಕರಾವಳಿ’ !!! ➤ ಸಾವಿರದಷ್ಟಿದ್ದ ಮಲೇರಿಯಾ ಈಗ ಬಹು ಪ್ರಮಾಣದಲ್ಲಿ ಇಳಿಕೆ Read More »

ಕರಾವಳಿ
Scroll to Top