ಕರಾವಳಿ

ಮಂಗಳೂರು: ನಕಲಿ ನೋಟು ಚಲಾವಣೆ       ➤ 4 ವರ್ಷ ಸಜೆ…!!!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.18. ನಕಲಿ ನೋಟುಗಳನ್ನು ಚಲಾವಣೆ ಮಾಡಿದ ಪ್ರಕರಣದ ಆರೋಪಿಗೆ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷಗಳ ಶಿಕ್ಷೆ ವಿಧಿಸಿದೆ. ಬಂಟ್ವಾಳ ತಾಲೂಕಿನ ಇರಾ ಗ್ರಾಮದ ದರ್ಬೆ ಹೌಸ್‌ನ ಅಬ್ಬಾಸ್ (53) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.  

ಮಂಗಳೂರು: ನಕಲಿ ನೋಟು ಚಲಾವಣೆ       ➤ 4 ವರ್ಷ ಸಜೆ…!!! Read More »

ಕರಾವಳಿ

ಉಡುಪಿ: ಬಜೆಟ್ ನಲ್ಲಿ ಬಿಲ್ಲವ, ಮೊಗವೀರ ಸಮುದಾಯ ಕಡೆಗಣನೆ  ➤ ರಮೇಶ್ ಕಾಂಚನ್ ಆಕ್ರೋಶ…!!!

(ನ್ಯೂಸ್ ಕಡಬ)newskadaba.com ಉಡುಪಿ, ಫೆ.18. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಬಿಲ್ಲವರಿಗೆ ಪ್ರತ್ಯೇಕ ನಿಗಮವನ್ನು ಮುಂದಿನ ಬಜೆಟ್ನಲ್ಲಿ ಘೋಷಣೆ ಮಾಡಿ ಅನುದಾನ ಇಡುವುದಾಗಿ ಹಾಗೂ ಮೀನುಗಾರರಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಹೇಳಿದ್ದಾರೆ. ಪ್ರಚಾರ ಗಿಟ್ಟಿಸಿಕೊಂಡ ಮುಖ್ಯಮಂತ್ರಿ ಬೊಮ್ಮಾಯಿಯವರು ತಮ್ಮ ಬಜೆಟ್ ನಲ್ಲಿ ಬಿಲ್ಲವ ಹಾಗೂ ಮೊಗವೀರ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ: ಬಜೆಟ್ ನಲ್ಲಿ ಬಿಲ್ಲವ, ಮೊಗವೀರ ಸಮುದಾಯ ಕಡೆಗಣನೆ  ➤ ರಮೇಶ್ ಕಾಂಚನ್ ಆಕ್ರೋಶ…!!! Read More »

ಕರಾವಳಿ

‘ಜಾನುವಾರು ಸಾಗಾಟ ನಿಷೇಧದ ಆದೇಶ ವಾಪಾಸ್     ➤ ಡಿಸಿ ರವಿಕುಮಾರ್…!!!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.18. ಜಾನುವಾರು ಸಾಗಾಣಿಕೆ ಸಂಬಂಧಿಸಿ ಹೇರಲಾಗಿದ್ದ ನಿಷೇಧವನ್ನು ಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಯಾದ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ. 348 ಗ್ರಾಮಗಳಲ್ಲಿನ 7,036 ಜಾನುವಾರಗಳಲ್ಲಿ ಚರ್ಮ ಗಂಟು ರೋಗ ಕಂಡುಬಂದಿತ್ತು. ಅಲ್ಲದೆ ಈವರೆಗೆ 397 ಜಾನುವಾರುಗಳು ಮರಣ ಹೊಂದಿತ್ತು. ಈ ಹಿನ್ನಲೆಯಲ್ಲಿ 2023ನೇ ಫೆ.15ರ ವರೆಗೆ 2,26,801 ಜಾನುವಾರುಗಳಿಗೆ ಚರ್ಮ ಗಂಟು ರೋಗ ನಿರೋಧಕ ಲಸಿಕೆ ಹಾಕಲಾಗಿತ್ತು.  

‘ಜಾನುವಾರು ಸಾಗಾಟ ನಿಷೇಧದ ಆದೇಶ ವಾಪಾಸ್     ➤ ಡಿಸಿ ರವಿಕುಮಾರ್…!!! Read More »

ಕರಾವಳಿ

 ಮಂಗಳೂರು: ಕರಾವಳಿಯಾದ್ಯಂತ ಇಂದು ಭಕ್ತಿ ಸಂಭ್ರಮದ ಶಿವರಾತ್ರಿ ಆಚರಣೆ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.18. ಕರಾವಳಿಯಾದ್ಯಂತ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಪೂಜಾ ವಿಧಿಗಳು ಆರಂಭಗೊಂಡಿವೆ. ಶಿವ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿಯ ವಿವಿಧ ಶಿವ ದೇವಸ್ಥಾನಗಳಲ್ಲಿ ಭಕ್ತಿ, ಸಂಭ್ರಮದಿಂದ ಶಿವರಾತ್ರಿ ಆಚರಣೆ ನಡೆಯುತ್ತಿದೆ. ಶಿವ ದೇವಸ್ಥಾನ ಸೇರಿದಂತೆ ವಿವಿಧ ದೇವಳಗಳಲ್ಲಿ ಶಿವನಿಗೆ ಅಭಿಷೇಕ, ವಿಶೇಷ ಪೂಜೆ, ಅರ್ಚನೆಗಳು ನಡೆಯುತ್ತಿವೆ.

 ಮಂಗಳೂರು: ಕರಾವಳಿಯಾದ್ಯಂತ ಇಂದು ಭಕ್ತಿ ಸಂಭ್ರಮದ ಶಿವರಾತ್ರಿ ಆಚರಣೆ Read More »

ಕರಾವಳಿ

ಬಂಟ್ವಾಳ: ಲಕ್ಷಾಂತರ ಮೌಲ್ಯದ ಸೊತ್ತು ಕಳವು     ➤ ಇಬ್ಬರು ಆರೋಪಿಗಳು ಅರೆಸ್ಟ್…!!!

(ನ್ಯೂಸ್ ಕಡಬ)newskadaba.com ಬಂಟ್ವಾಳ, ಫೆ.17. ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಪೋಲೀಸರ ತಂಡ ಸೊತ್ತುಗಳ ಸಹಿತ ಇಬ್ಬರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತುಂಬೆ ನಿವಾಸಿಗಳಾದ ಮೊಹಮ್ಮದ್ ಆನ್ಸಾಫ್, ನವಾಜ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಬಂಧಿತರಿಂದ ಒಟ್ಟು 1.90 ಲಕ್ಷ ಮೌಲ್ಯದ ಸೊತ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.  

ಬಂಟ್ವಾಳ: ಲಕ್ಷಾಂತರ ಮೌಲ್ಯದ ಸೊತ್ತು ಕಳವು     ➤ ಇಬ್ಬರು ಆರೋಪಿಗಳು ಅರೆಸ್ಟ್…!!! Read More »

ಕರಾವಳಿ, ಕ್ರೈಮ್ ನ್ಯೂಸ್

ಡಿಜಿಟಲ್ ಮಾರ್ಕೆಟಿಂಗ್ ವಂಚನೆ        ➤18.43 ಲಕ್ಷ ರೂ. ಹಣ ಕಳೆದುಕೊಂಡ ವ್ಯಕ್ತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.17. ಡಿಜಿಟಲ್ ಮಾರ್ಕೆಟಿಂಗ್ ಮೂಲಕ ತ್ವರಿತ ಹಣ ಗಳಿಸುವ ಆಮಿಷದ ಬಲೆಗೆ ಬಿದ್ದ ವ್ಯಕ್ತಿ 18.43 ಲಕ್ಷ ರೂ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಿಜಿಟಲ್‌ ಮಾರ್ಕೆಟಿಂಗ್‌ ಮೂಲಕ ಹಣಗಳಿಸುವ ಬಗ್ಗೆ ಅಪರಿಚಿತ ವ್ಯಕ್ತಿಯ ಸಂದೇಶ ವಾಟ್ಸಾಪ್‌ ಸಂದೇಶವನ್ನು ನಂಬಿದ ಅವರು ಅಪರಿಚಿತ ಕಳುಹಿಸಿದ್ದ ಟೆಲಿಗ್ರಾಂ ಚಾನಲ್‌ಗೆ ಸದಸ್ಯರಾಗಿದ್ದಾರೆ. ಆ ಚಾನೆಲ್‌ ಮೂಲಕ ವೆಬ್‌ಸೈಟ್‌ ಒಂದರಲ್ಲಿ ನೊಂದಣಿ ಮಾಡುವಂತೆ ತಿಳಿಸಿದ್ದು, ನೋಂದಣಿ ಮಾಡಿಸಿಕೊಂಡಿದ್ದಾರೆ.    

ಡಿಜಿಟಲ್ ಮಾರ್ಕೆಟಿಂಗ್ ವಂಚನೆ        ➤18.43 ಲಕ್ಷ ರೂ. ಹಣ ಕಳೆದುಕೊಂಡ ವ್ಯಕ್ತಿ Read More »

ಕರಾವಳಿ, ಕ್ರೈಮ್ ನ್ಯೂಸ್

ರೈಲಿನಲ್ಲಿ ಹೃದಯಾಘಾತ ➤ವಕೀಲ ಕೆ.ಪಿ. ಜೇಮ್ಸ್ ನಿಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.17.  ರೈಲಿನಲ್ಲಿ ಸಂಚರಿಸುತ್ತಿರುವಾಗ ಹೃದಯಾಘಾತದಿಂದ ವಕೀಲರೊಬ್ಬರು ಮೃತಪಟ್ಟಿರುವ ಘಟನೆ ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದೆ. ಪುತ್ತೂರಿನ ಎಪಿಎಂಸಿ ರಸ್ತೆಯ ನೆಲ್ಲಿಕಟ್ಟೆ ನಿವಾಸಿ, ವಕೀಲ ಕೆ.ಪಿ. ಜೇಮ್ಸ್ ಅವರು ತಮಿಳುನಾಡು ಕಡೆ ತೆರಳುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ರಾತ್ರಿ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೆ.ಪಿ.ಜೇಮ್ಸ್ ಅವರು ಪತ್ನಿಯೊಂದಿಗೆ ಚೆಂಗನೂರಿನ ಧಾರ್ಮಿಕ ಕ್ಷೇತ್ರಕ್ಕೆ ರೈಲಿನಲ್ಲಿ ತೆರಳುತ್ತಿದ್ದರು. ಹವಾನಿಯಂತ್ರಿತ ಕೋಚ್‌ನಲಿದ್ದ ಅವರು ರಾತ್ರಿ ವೇಳೆ ಶೌಚಾಲಯಕ್ಕೆ ಹೋದವರು ನಾಪತ್ತೆಯಾಗಿದ್ದರು. ಜೇಮ್ಸ್‌ ವಾಪಸ್‌ ಬರದ

ರೈಲಿನಲ್ಲಿ ಹೃದಯಾಘಾತ ➤ವಕೀಲ ಕೆ.ಪಿ. ಜೇಮ್ಸ್ ನಿಧನ Read More »

ಕರಾವಳಿ

➤ ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆ

ನ್ಯೂಸ್ ಕಡಬ) newskadaba.com.ಬೆಳ್ತಂಗಡಿ, ಫೆ.17.  ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆಯಾದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿನಿಯನ್ನು ದೀಕ್ಷಿತಾ(18) ಎಂದು ಗುರುತಿಸಲಾಗಿದೆ. ಈಕೆ ಹಾಸ್ಟೆಲ್ ನಲ್ಲಿ ಕಲಿಯುತ್ತಿದ್ದು, ಹಾಸ್ಟೆಲ್ ನಿಂದ ಮನೆಗೆ ಹೋದವಳು ಮನೆಗೆ ಹೋಗದೆ ನಾಪತ್ತೆಯಾಗಿದ್ದಾಳೆ. ಮಗಳು ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆಯ ಬಗ್ಗೆ ಯಾವುದಾದರೂ ಮಾಹಿತಿ ಸಿಕ್ಕಿದಲ್ಲಿ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

➤ ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಲ್ಪೆ: ರಿಕ್ಷಾದಲ್ಲಿ ಶವ ತಂದು ರಸ್ತೆ ಬದಿ ಎಸೆದ ವ್ಯಾಪಾರಿಗಳು!

(ನ್ಯೂಸ್ ಕಡಬ)newskadaba.com ಮಲ್ಪೆ, ಫೆ.17. ಇಬ್ಬರು ವ್ಯಕ್ತಿಗಳು ಗೂಡ್ಸ್‌ ರಿಕ್ಷಾವೊಂದರಲ್ಲಿ ವ್ಯಕ್ತಿಯೊಬ್ಬರ ಶವವನ್ನು ತಂದು ರಸ್ತೆ ಪಕ್ಕ ಎಸೆದು ಹೋದ ಘಟನೆ ಇಲ್ಲಿನ ಕೆಮ್ಮಣ್ಣು ಗ್ರಾಮದಲ್ಲಿ ಹಾಡುಹಗಲೇ ನಡೆದಿದೆ. ಈ ಘಟನೆ ಪಕ್ಕದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮಲ್ಪೆ ಠಾಣೆಯ ಪೊಲೀಸರು ತನಿಖೆ ನಡೆಸುತಿದ್ದಾರೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ರಸ್ತೆ ಪಕ್ಕ ಬಂದು ನಿಂತ ಗೂಡ್ಸ್‌ ರಿಕ್ಷಾದಿಂದ ಚಾಲಕ ಇಳಿದು ಸ್ವಲ್ಪ ದೂರ ಹೋಗಿ ನಿಲ್ಲುತ್ತಾನೆ.  ಇನ್ನೊಬ್ಬ ಗೂಡ್ಸ್‌ ರಿಕ್ಷಾದ ಹಿಂಭಾಗದಿಂದ ವ್ಯಕ್ತಿಯ ಶವವನ್ನು

ಮಲ್ಪೆ: ರಿಕ್ಷಾದಲ್ಲಿ ಶವ ತಂದು ರಸ್ತೆ ಬದಿ ಎಸೆದ ವ್ಯಾಪಾರಿಗಳು! Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಗಾಂಜಾ ಸೇವಿಸಿ ತೂರಾಟ      ➤ ವ್ಯಕ್ತಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಕಡಬ, ಫೆ.17. ಕಡಬ ತಾಲೂಕು ಕಳಾರದ ಅಂಗಡಿಯೊಂದರ ಬಳಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕಡಬ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಡಿಂಬಾಳ ಗ್ರಾಮದ ಕುತ್ಯಾಡಿ ನಿವಾಸಿ  ಮಿರ್ಷಾದ್ (35) ಬಂಧಿತ ಅರೋಪಿ ಎಂದು ಗುರುತಿಸಲಾಗಿದೆ. ಫೆ.15 ರಂದು ಠಾಣಾ ಎಸ್.ಐ  ಸಿಬ್ಬಂದಿಗಳ ಜೊತೆಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಕಳಾರ ಎಂಬಲ್ಲಿ ಕುಲ್ಕಿ ಜ್ಯೂಸ್‌ ಅಂಗಡಿ ಎದುರು ವ್ಯಕ್ತಿಯೋರ್ವ ರಸ್ತೆಯಲ್ಲಿ ತೂರಾಡುತ್ತಿದ್ದ ವೇಳೆ ವಿಚಾರಿಸಿದಾಗ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ.    

ಕಡಬ: ಗಾಂಜಾ ಸೇವಿಸಿ ತೂರಾಟ      ➤ ವ್ಯಕ್ತಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top