ಕರಾವಳಿ

ವಾಹನಗಳ ಕರ್ಕಶ ಹಾರನ್, ಟಿಂಟೆಡ್ ಗ್ಲಾಸ್ ವಿರುದ್ದ ಕಾರ್ಯಚರಣೆ    ➤ 120 ಕೇಸು ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.01. ಪೊಲೀಸರು ಕರ್ಕಶ ಹಾರನ್ ಮತ್ತು ಟಿಂಟೆಡ್ ಗ್ಲಾಸ್ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದು, ಒಂದೇ ದಿನ 120 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಸ್‌‌ಗಳು ಸೇರಿದಂತೆ 106 ವಾಹನಗಳಿಂದ ಕರ್ಕಶ ಹಾರನ್ ತೆಗೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದದು, 14 ವಾಹನಗಳಿಂದ ಟಿಂಟೆಡ್ ಗ್ಲಾಸ್‌ಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

ವಾಹನಗಳ ಕರ್ಕಶ ಹಾರನ್, ಟಿಂಟೆಡ್ ಗ್ಲಾಸ್ ವಿರುದ್ದ ಕಾರ್ಯಚರಣೆ    ➤ 120 ಕೇಸು ದಾಖಲು Read More »

ಕರಾವಳಿ

ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿ.ಮೀ ಯಾತ್ರೆ ಪೂರ್ಣಗೊಳಿಸಿದ ಪದವಿ ವಿದ್ಯಾರ್ಥಿ 

(ನ್ಯೂಸ್ ಕಡಬ)newskadaba.com  ಉಡುಪಿ, ಏ.01. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ತೃತೀಯ ಬಿಎ ​​ವಿದ್ಯಾರ್ಥಿ ದಿನೇಶ್ ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿಲೋಮೀಟರ್ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಕಾಲೇಜಿನಲ್ಲಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು ಎನ್ನಲಾಗಿದೆ. 1500 ಕಿ.ಮೀ 20 ದಿನಗಳಲ್ಲಿ ಕನ್ಯಾಕುಮಾರಿ ಯಾತ್ರೆ ಪೂರ್ಣಗೊಳಿಸಿದ ದಿನೇಶ್ ಅವರನ್ನು ಕಾಲೇಜು ಕ್ಯಾಂಪಸ್‌ನಿಂದ ಅವರ ತಾಯಿ ಪಾರ್ವತಿ ಬೋವಿಯವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.  

ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿ.ಮೀ ಯಾತ್ರೆ ಪೂರ್ಣಗೊಳಿಸಿದ ಪದವಿ ವಿದ್ಯಾರ್ಥಿ  Read More »

ಕರಾವಳಿ

ಮಂಗಳೂರು: ಚುನಾವಣಾ ಸಿಬ್ಬಂದಿಗೆ ತರಬೇತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.01. ಪುತ್ತೂರಿನ ಪುರಭವನದಲ್ಲಿ ಚುನಾವಣಾ ಪೂರ್ವ ಸಿದ್ಧತೆಗಳ ಬಗ್ಗೆ ತರಬೇತಿ ನಡೆಯಿತು ಎನ್ನಲಾಗಿದೆ. ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಗಳೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ತರಬೇತಿ ನೀಡಿದರು. ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.  

ಮಂಗಳೂರು: ಚುನಾವಣಾ ಸಿಬ್ಬಂದಿಗೆ ತರಬೇತಿ Read More »

ಕರಾವಳಿ

ಕೊಕ್ಕಡ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!

(ನ್ಯೂಸ್ ಕಡಬ)newskadaba.com  ಕೊಕ್ಕಡ, ಏ.01. ಶಿಬಾಜೆ ಗ್ರಾಮದ ಪೆರ್ಲದಲ್ಲಿ  ಮೀನು ವ್ಯಾಪಾರಿಯೊಬ್ಬರು  ಬಾವಿಕಟ್ಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಕ್ಕಡದಲ್ಲಿ ನಡೆದಿದೆ. ಪೆರ್ಲ ನಿವಾಸಿ ನೋಣಯ್ಯ ಗೌಡ(55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ . ಹಲವು ಸಮಯದಿಂದ ಶಿಬಾಜೆಯ ಪರಿಸರದಲ್ಲಿ ಹಸಿಮೀನಿನ ವ್ಯಾಪಾರ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಅಂಗವೈಫಲ್ಯ ಹೊಂದಿದ್ದ ಇವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯಪಡಲಾಗಿದೆ ಎಂದು ವರದಿ ತಿಳಿಸಿದೆ.  

ಕೊಕ್ಕಡ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಇಂದಿನಿಂದ ಹರೇಕಳ-ಅಡ್ಯಾರ್ ಸೇತುವೆಯಲ್ಲಿ ವಾಹನಗಳ ಸಂಚಾರ   

(ನ್ಯೂಸ್ ಕಡಬ)newskadaba.com ಉಳ್ಳಾಲ, ಏ.01. ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್-ಕಣ್ಣೂರಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಎ.1ರಿಂದ ದ್ವಿಚಕ್ರ ಮತ್ತು ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಸಂಚಾರ ನಡೆಯಲಿದೆ ಎಂದು ತಿಳಿದು ಬಂದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಸೇತುವೆಯನ್ನು ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಸುವಂತಿಲ್ಲ. ಆದರೆ ಗ್ರಾಮಸ್ಥರು ಸೇತುವೆಯ ಬಳಕೆಗೆ ಅವಕಾಶ ಮಾಡಿಕೊಡುವಂತೆ ಸ್ಥಳೀಯ ಶಾಸಕ ಯು.ಟಿ. ಖಾದರ್ ಬಳಿ ಮನವಿ ಮಾಡಿಕೊಂಡ

ಉಳ್ಳಾಲ: ಇಂದಿನಿಂದ ಹರೇಕಳ-ಅಡ್ಯಾರ್ ಸೇತುವೆಯಲ್ಲಿ ವಾಹನಗಳ ಸಂಚಾರ    Read More »

ಕರಾವಳಿ

ಉಡುಪಿ: ಆನ್ಲೈನ್ ನಲ್ಲಿ ಮಹಿಳೆಗೆ ಲಕ್ಷ ರೂ. ವಂಚನೆ  ➤ ದೂರು ದಾಖಲು..!

(ನ್ಯೂಸ್ ಕಡಬ)newskadaba.com ಉಡುಪಿ, ಏ.01. ದೂರವಾಣಿ ಕರೆ ಮಾಡಿದ ವ್ಯಕ್ತಿಯೊಬ್ಬ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ ಎಂದು ಮಹಿಳೆಯೊಬ್ಬರನ್ನು ನಂಬಿಸಿ, ಕಾರ್ಡ್ ಸಂಖ್ಯೆ ಪಡೆದು ಬ್ಯಾಂಕ್ ಖಾತೆಯಿಂದ 1,04,500 ಹಣವನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ ಘಟನೆ ನಡೆದಿದೆ ಎನ್ನಲಾಗಿದೆ. ಪ್ರತಿಭಾ ಎಸ್. ಹೆಗ್ಡೆ ಅವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ, ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ ಈ ಕೂಡಲೇ ರಿನೀವಲ್ ಮಾಡುವಂತೆ ತಿಳಿಸಿ, ಕಾರ್ಡ್ ನಂಬ್ರ ಹಾಗೂ ಒಟಿಪಿಯನ್ನು

ಉಡುಪಿ: ಆನ್ಲೈನ್ ನಲ್ಲಿ ಮಹಿಳೆಗೆ ಲಕ್ಷ ರೂ. ವಂಚನೆ  ➤ ದೂರು ದಾಖಲು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: 11,158 ಮಂದಿ ಮತದಾರರ ಹೆಸರುಗಳು ಪಟ್ಟಿಯಿಂದ ರದ್ದು    

(ನ್ಯೂಸ್ ಕಡಬ)newskadaba.com ಮಂಗಳೂರು, ಏ.01. ವಿವಿಧ ಕಾರಣಗಳಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 11,158 ಮಂದಿಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ 2,40,057 ಮತದಾರರಿದ್ದರು. ಹೊಸದಾಗಿ ಈಗ 13,487 ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ 1,15,895 ಪುರುಷರು ಮತ್ತು 1,26,447 ಮಹಿಳೆಯರ ಸಹಿತ 2,42,888 ಮತದಾರರಿದ್ದಾರೆ ಎಂದು ಚುನಾವಣಾ ಅಧಿಕಾರಿ ಕೆಂಪೇಗೌಡ ಹೇಳಿದರು ಎನ್ನಲಾಗಿದೆ.  

ಮಂಗಳೂರು: 11,158 ಮಂದಿ ಮತದಾರರ ಹೆಸರುಗಳು ಪಟ್ಟಿಯಿಂದ ರದ್ದು     Read More »

ಕರಾವಳಿ

ಆಕಸ್ಮಿಕ ಕಾಲುಜಾರಿ ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು 

(ನ್ಯೂಸ್ ಕಡಬ)newskadaba.com ಕಾರ್ಕಳ, ಏ.01. ಮುಂಬೈಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದ ಮುಂಡ್ಕೂರು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿವಾಸಿ ರಮೇಶ್ ಸಪಳಿಗ (68) ವರ್ಷ ಎಂಬವರ ಮೃತದೇಹ ಮುಂಡ್ಕೂರು ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ವಿಪರೀತ ಮಧ್ಯಪಾನದ ಚಟ ಹೊಂದಿದ್ದ ರಮೇಶ್ ಸಪಳಿಗ ಕೆಲವು ಸಮಯದ ಹಿಂದೆ ಸಹೋದರ ಅನಾರೋಗ್ಯದ ಪೀಡಿತರಾದ ಹಿನ್ನಲೆ ಊರಿಗೆ ಬಂದವರು ವಾಪಸು ಹೋಗಿರಲಿಲ್ಲ. ಮಧ್ಯಪಾನ ಮಾಡಲೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ ಎನ್ನಲಾಗಿದೆ.  

ಆಕಸ್ಮಿಕ ಕಾಲುಜಾರಿ ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು  Read More »

ಕರಾವಳಿ

ಮಂಗಳೂರು: 3 ಟೋಲ್ ಗೇಟ್‌ಗಳಲ್ಲಿ ಏ.1ರಿಂದ ಶುಲ್ಕ ಹೆಚ್ಚಳ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.31. ತಲಪಾಡಿ, ಹೆಜಮಾಡಿ ಮತ್ತು ಗುಂಡ್ಮಿಯ ಮೂರು ಟೋಲ್ ಗೇಟ್‌ಗಳಲ್ಲಿ ಏಪ್ರಿಲ್ 1 ರಿಂದ ಪರಿಷ್ಕೃತ ಶುಲ್ಕವನ್ನು ಹೆಚ್ಚಿಸಲಾಗುವುದು ಎಂದು ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ. ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳ ಗುಂಡ್ಮಿ ಟೋಲ್ ಪ್ಲಾಜಾದ ಏಕಮುಖ ಸಂಚಾರಕ್ಕೆ ರೂ. 60 ಮತ್ತು ರೂ. 85 ಮಾಸಿಕ ಪಾಸ್ ತಿಂಗಳಿಗೆ ಗರಿಷ್ಠ 50 ಬಾರಿ 1930 ರೂ. ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಏಕಮುಖ ಸಂಚಾರ

ಮಂಗಳೂರು: 3 ಟೋಲ್ ಗೇಟ್‌ಗಳಲ್ಲಿ ಏ.1ರಿಂದ ಶುಲ್ಕ ಹೆಚ್ಚಳ Read More »

ಕರಾವಳಿ

ಕೌಟುಂಬಿಕ ಕಲಹಕ್ಕೆ ಮನನೊಂದು ದಂಪತಿ ಆತ್ಮಹತ್ಯೆ..!!

(ನ್ಯೂಸ್ ಕಡಬ)Newskadaba.com ಮಂಡ್ಯ,ಮಾ.31 ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ದಂಪತಿ. ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದಲ್ಲಿ  ಈ ಘಟನೆ ನಡೆದಿದೆ.ಪತಿ ಕೆಲಸಕ್ಕೆ ತೆರಳಿದಾಗ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಮನೆಗೆ ಬಂದ ಪತಿ ಮನೆ ಪಕ್ಕದ ಜಮೀನಿಗೆ ತೆರಳಿ ನೇಣಿಗೆ ಕೊರಳೊಡ್ಡಿದ್ದಾರೆ. ಪುರುಷೋತ್ತಮ (45), ವಿದ್ಯಾ(32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮೃತ ದಂಪತಿಗೆ 7 ಹಾಗೂ 5 ವರ್ಷದ ಮಕ್ಕಳಿದ್ದರು. ತಂದೆ-ತಾಯಿ ಆತ್ಮಹತ್ಯೆಯಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಸದ್ಯ ಸ್ಥಳಕ್ಕೆ

ಕೌಟುಂಬಿಕ ಕಲಹಕ್ಕೆ ಮನನೊಂದು ದಂಪತಿ ಆತ್ಮಹತ್ಯೆ..!! Read More »

ಕರಾವಳಿ
Scroll to Top