ಧರ್ಮಸ್ಥಳ: ಮಹಿಳೆ ಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಧರ್ಮಸ್ಥಳ, ಏ.28. ಧರ್ಮಸ್ಥಳದ ಕೊಕ್ಕಡ ಎಂಬಲ್ಲಿ ಮರ ಕಡಿಯುತ್ತಿದ್ದ ವೇಳೆ ಮಹಿಳೆಯೋರ್ವರ ತಲೆಗೆ ಆಕಸ್ಮಿಕವಾಗಿ ಮರ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.


ಮೃತರನ್ನು ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ ಎಂದು ಗುರುತಿಸಲಾಗಿದೆ. ಹಳ್ಳಿಂಗೇರಿ ಕ್ವಾರ್ಟಸ್ ಬಳಿ ಮರವೊಂದರ ಗೆಲ್ಲುಗಳನ್ನು ತೆಗೆಯುವ ವೇಳೆ ಈ ದುರಂತ ನಡೆದಿದೆ.

Scroll to Top