ಕಡಬ: ಅಸ್ವಸ್ಥಗೊಂಡ ಕಾಡಾನೆ ಸಾವು

(ನ್ಯೂಸ್ ಕಡಬ) newskadaba.com ಕಡಬ, ಎ.28. ಕಳೆದೆರಡು ದಿನಗಳಿಂದ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದ ಕಾಡಾನೆಯು ಇಂದು ಬೆಳಿಗ್ಗೆ ಸಾವನ್ನಪ್ಪಿದೆ.

ಕೆಲವು ದಿನಗಳ ಹಿಂದೆ ಕೈಕಂಬ ಸಮೀಪದ ಚೇರು ಭಾಗದಲ್ಲಿ ಅಸ್ವಸ್ಥ ರೀತಿಯಲ್ಲಿ ಆನೆಯೊಂದು ಕಂಡುಬಂದಿದ್ದು, ನಡೆದಾಡಲು ಕಷ್ಟಪಡುತ್ತಿತ್ತು. ಅಸ್ವಸ್ಥಗೊಂಡ ಕಾಡಾನೆಯು ಗುರುವಾರದಂದು ಹಳ್ಳಕ್ಕೆ ಬಿದ್ದು ಒದ್ದಾಡಿತ್ತು. ತಡರಾತ್ರಿ ವೇಳೆಗೆ ಆನೆಯು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

 

Scroll to Top