ಕರಾವಳಿ

ಆಟವಾಡುವಾಗ ಬಾವಿಗೆ ಬಿದ್ದು 3 ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಕೊಡಗು, ಮೇ.11. ತೆರೆದ ಬಾವಿಗೆ ಬಿದ್ದು ಮೂರು ವರ್ಷದ ಮಗು ದುರಂತ ಸಾವಿಗೀಡಾಗಿರುವ ಘಟನೆ ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ರೋಶನ್ ಎಂಬುವರ ಪುತ್ರಿ ಸಿಯಾನ್ (3) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಬಲೂನ್ ಜತೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಮಗು ತೆರೆದ ಬಾವಿಗೆ ಬಿದ್ದು ದುರ್ಘಟನೆ ಸಂಭವಿಸಿದೆ.  

ಆಟವಾಡುವಾಗ ಬಾವಿಗೆ ಬಿದ್ದು 3 ವರ್ಷದ ಮಗು ಮೃತ್ಯು Read More »

ಕರಾವಳಿ

ಮೂಡಬಿದಿರೆ: ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ಕೊಲೆ

(ನ್ಯೂಸ್ ಕಡಬ)newskadaba.com ಮೂಡಬಿದಿರೆ, ಮೇ.11. ಯುವಕನೋರ್ವನಿಗೆ ಚೂರಿಯಿಂದ ಇರಿದು ಕೊಲೆ‌ ಮಾಡಿರುವ ಘಟನೆ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಗಂಟಾಲ್ಕಟ್ಟೆ ಎಂಬಲ್ಲಿ ನಡೆದಿದೆ. ಮೃತರನ್ನು ಜಮಾಲ್ ಎಂದು ಗುರುತಿಸಲಾಗಿದೆ. ಮೃತ ಜಮಾಲ್ ನ ತಂಗಿಯ ಗಂಡ, ಚಿಕ್ಕಮಗಳೂರು ಮೂಲದ ಸುಹೈಬ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಮೂಡಬಿದಿರೆ: ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ಕೊಲೆ Read More »

ಕರಾವಳಿ

ಪ್ರೇಕ್ಷಾ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಸೂಸೈಡ್

(ನ್ಯೂಸ್ ಕಡಬ)newskadaba.com ಉಳ್ಳಾಲ, ಮೇ.11. ಎರಡು ವರುಷಗಳ ಹಿಂದೆ ಕುಂಪಲದ ಆಶ್ರಯ ಕಾಲನಿಯ ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರೂಪದರ್ಶಿ ಪ್ರೇಕ್ಷ ಸಾವಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ. ಕುತ್ತಾರು, ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ(20)ಆತ್ಮ ಹತ್ಯೆಗೈದ ಯುವಕ. ಯತಿರಾಜ್ ತನ್ನ ಮನೆಯ ಹಿಂದಿನ ಚಿಕ್ಕಮ್ಮನ ಮನೆಯ ಎದುರಿನ ಸಿಟ್ ಔಟ್ನ ಕಬ್ಬಿಣದ ಹುಕ್ಸ್ ಒಂದಕ್ಕೆ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾನೆ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮೃತದೇಹವನ್ನ

ಪ್ರೇಕ್ಷಾ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಸೂಸೈಡ್ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ವಿಶೇಷ ಚೆಕ್ ಪೋಸ್ಟ್ ಗಳ ತೆರವು

(ನ್ಯೂಸ್ ಕಡಬ)newskadaba.com ಉಡುಪಿ, ಮೇ.11. ಜಿಲ್ಲೆಗಳಲ್ಲಿ  ಸಂಪೂರ್ಣವಾಗಿ ಮತದಾನ ಪ್ರಕ್ರಿಯೆ  ಮುಕ್ತಯಗೊಂಡಿದ್ದು , ಮುನ್ನೆಚ್ಚರಿಕೆ ಕ್ರಮದಿಂದ ನಿರ್ಮಿಸಿದ್ದ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ. ಅರೆ ಸೇನಾಪಡೆಯ ಸುಮಾರು 19 ತಂಡಗಳು ಆಗಮಿಸಿದ್ದು,  ಸುಮಾರು 2 ಸಾವಿರ  ಸಿಬ್ಬಂದಿ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದು, ಇದಲ್ಲದೇ ಮಹಾರಾಷ್ಟ್ರ ಹಾಗೂ ತಮಿಳುನಾಡು ಪೊಲೀಸರೂ ಆಗಮಿಸಿದ್ದರು.  

ಉಡುಪಿ: ವಿಶೇಷ ಚೆಕ್ ಪೋಸ್ಟ್ ಗಳ ತೆರವು Read More »

ಕರಾವಳಿ

ಸುಬ್ರಹ್ಮಣ್ಯ: ಮತದಾನ ಬಹಿಷ್ಕರಿಸಿ ಆಕ್ರೋಶ ➤ ಸಂಕ ನಿರ್ಮಿಸಲು ಶ್ರಮಸೇವೆ

(ನ್ಯೂಸ್ ಕಡಬ)newskadaba.com ಸುಬ್ರಮಣ್ಯ, ಮೇ.11. ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನಕಿದು ಗ್ರಾಮದ ಕುಜುಂಬಾರ್ ನಲ್ಲಿ ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಬೇಡಿಕೆ ಇದ್ದರೂ ಅದನ್ನು ಈಡೇರಿಸದ ಹಿನ್ನಲೆಯಲ್ಲಿ ಆ ಭಾಗದ ಜನರು ಮತದಾನದಲ್ಲಿ ಭಾಗವಹಿಸದೆ ಹೊಳೆಗೆ ತಾತ್ಕಲಿಕ ಮರದ ಸಂಕ ನಿರ್ಮಿಸಿದಲು ಶ್ರಮಸೇವೆ ನಡೆಸಿದ ಘಟನೆ ನಡೆದಿದೆ. ಮತದಾನ ಬಹಿಷ್ಕರಿಸುವ ಬ್ಯಾನರ್ ಹಿಂದೆಯೇ ಅಳವಡಿಸಿದ್ದು ಅಧಿಕಾರಿಗಳು ಬಂದು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಭರವಸೆ ನೀಡದ ಹಿನ್ನಲೆ ೩೦ ಕ್ಕೂ ಹೆಚ್ಚು

ಸುಬ್ರಹ್ಮಣ್ಯ: ಮತದಾನ ಬಹಿಷ್ಕರಿಸಿ ಆಕ್ರೋಶ ➤ ಸಂಕ ನಿರ್ಮಿಸಲು ಶ್ರಮಸೇವೆ Read More »

ಕರಾವಳಿ

ಉಳ್ಳಾಲ: ಕಾಲೇಜು ವಿದ್ಯಾರ್ಥಿನಿ ಸಮುದ್ರಪಾಲು

(ನ್ಯೂಸ್ ಕಡಬ)newskadaba.com ಉಳ್ಳಾಲ, ಮೇ.11. ರುದ್ರ ಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಯುವತಿಯೋರ್ವಳು ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಸೋಮೇಶ್ವರ ರುದ್ರಪಾದೆಯಲ್ಲಿ ನಡೆದಿದೆ. ಮಂಗಳೂರಲ್ಲಿ ಪೋಷಕರ ಜೊತೆ ವಾಸಿಸುತ್ತಿದ್ದ ಬಾಗಲಕೋಟೆ ಜಿಲ್ಲೆಯ, ಬಾದಾಮಿ ನಿವಾಸಿ ಕಾವೇರಿ(20)ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.  

ಉಳ್ಳಾಲ: ಕಾಲೇಜು ವಿದ್ಯಾರ್ಥಿನಿ ಸಮುದ್ರಪಾಲು Read More »

ಕರಾವಳಿ

ಕಾರ್ಕಳ: ಅಪ್ರಾಪ್ತ ಬಾಲಕನಿಂದ ನಕಲಿ ಮತದಾನ

(ನ್ಯೂಸ್ ಕಡಬ)newskadaba.com ಕಾರ್ಕಳ, ಮೇ.11. ಅಪ್ರಾಪ್ತ ಬಾಲಕನೋರ್ವ ನಕಲಿ ಮತದಾನ ಮಾಡಿದ ಆರೋಪ ಕಾರ್ಕಳದಿಂದ ಕೇಳಿ ಬಂದಿದೆ. ತಾಲೂಕಿನ ಮಿಯ್ಯಾರು ಕುಂಟಿಬೈಲ್ ಮತಗಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೋಲೀಸರ ನಡುವೆ ವಾಗ್ವಾದ ನಡೆದು ಲಾಠಿ ಬೀಸಿದ ಘಟನೆ ಕಾರ್ಕಳಟ್ಟೆ ರಾತ್ರಿ ನಡೆದಿದೆ. ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿ ಸಂಚರಿಸಬೆಕಾಗಿದ್ದ ಬಸ್ ನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರು ನಕಲಿ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಪೋಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.ಇನ್ನು ಕಾರ್ಕಳ ವಿಧಾನ

ಕಾರ್ಕಳ: ಅಪ್ರಾಪ್ತ ಬಾಲಕನಿಂದ ನಕಲಿ ಮತದಾನ Read More »

ಕರಾವಳಿ

ಚಾರ್ಮಾಡಿಯಲ್ಲಿ ರಾತ್ರಿ 10.30ರವರೆಗೆ ತೆರಳದ ಮತಗಟ್ಟೆ ಅಧಿಕಾರಿಗಳು ➤ ಅನುಮಾನಗೊಂಡು ಸೇರಿದ ಜನ, ಕೆಲಕಾಲ ಗೊಂದಲ ಸೃಷ್ಟಿ

(ನ್ಯೂಸ್ ಕಡಬ)newskadaba.com ಚಾರ್ಮಾಡಿ, ಮೇ.11. ಮತದಾನ ಮುಗಿದಿದ್ದರೂ ರಾತ್ರಿ 10:30 ದಾಟಿದರೂ ಮತಗಟ್ಟೆಯ ಅಧಿಕಾರಿಗಳು ತೆರಳಲಿಲ್ಲ ಎಂದು ಸಂಶಯದಿಂದ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಯ ಬಳಿ ಸೇರಿ ಪ್ರಶ್ನಿಸಿದ್ದಾರೆ. ಚಾರ್ಮಾಡಿಯ ಬೂತ್ ವೊಂದರಲ್ಲಿ ರಾತ್ರಿ 7:20ರವರೆಗೂ ಮತದಾನ ನಡೆದಿತ್ತು. ಆದರೆ ರಾತ್ರಿ 10:30 ದಾಟಿದರೂ ಮತಗಟ್ಟೆಯ ಅಧಿಕಾರಿಗಳು ಅಲ್ಲಿಂದ ತೆರಳಿರಲಿಲ್ಲ.ಒಂದೇ ಒಂದು ಬೂತ್ ನಲ್ಲಿ ಮತದಾನ ವಿಳಂಬವಾಗಿತ್ತು.ಆದರೆ ಚಾರ್ಮಾಡಿ ಪಂಚಾಯತ್ ವ್ಯಾಪ್ತಿಯ ಯಾವುದೇ ಬೂತ್ ಗಳಿಂದ ಮತಯಂತ್ರಗಳನ್ನು ಕೊಂಡೊಯ್ದಿರಲಿಲ್ಲ.‌ಇದರಿಂದ ಕಾರ್ಯಕರ್ತರ ಅನುಮಾನ ಉಂಟಾಗಿದೆ.

ಚಾರ್ಮಾಡಿಯಲ್ಲಿ ರಾತ್ರಿ 10.30ರವರೆಗೆ ತೆರಳದ ಮತಗಟ್ಟೆ ಅಧಿಕಾರಿಗಳು ➤ ಅನುಮಾನಗೊಂಡು ಸೇರಿದ ಜನ, ಕೆಲಕಾಲ ಗೊಂದಲ ಸೃಷ್ಟಿ Read More »

ಕರಾವಳಿ, ಕರ್ನಾಟಕ

ದ.ಕ. ಜಿಲ್ಲೆಯಲ್ಲಿ74.87% ಮತದಾನ ➤ ಉಡುಪಿಯಲ್ಲಿ 78.46 ಶೇ. ಮತದಾನ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.11. ರಾಜ್ಯ ವಿಧಾನಸಭೆ ಚುನಾವಣೆ ಮುಗಿದಿದ್ದು ದಿನದಂತ್ಯಕ್ಕೆ ದ.ಕ. ಜಿಲ್ಲೆಯಲ್ಲಿ ೭೫.೮೭% ಮತದಾನವಾಗಿದೆ. ಕ್ಷೇತ್ರವರು ಮತದಾನ ವಿವರವನ್ನು ಚುನಾವಣಾ ಅಯೋಗ ತಿಳಿಸಿದೆ. ಅದರಂತೆ ಮಂಗಳೂರು ಉತ್ತರದಲ್ಲಿ ೭೧.೬ ಶೇಕಡ ಮತದಾನವಾಗಿದೆ. ಪುತ್ತೂರು ಕ್ಷೇತ್ರದಲ್ಲಿ ೭೯.೯೧ ಶೇಕಡ ಮತದಾನವಾಗಿದೆ. ಸುಳ್ಯ ಕ್ಷೇತ್ರದಲ್ಲಿ ೭೮.೫೩ ಶೇಕಡ ಮತದಾನವಾಗಿದೆ. ಉಳ್ಳಾಲ ಕ್ಷೇತ್ರದಲ್ಲಿ ೭೭.೩೮ ಶೇ. ಮತದಾನವಾಗಿದೆ. ಇನ್ನು ಬಂಟ್ವಾಳದಲ್ಲಿ ೮೦.೨೭ ಶೇ. ಮತದಾನವಾಗಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ೭೬ ಶೇ. ಮತದಾನವಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ೬೪.೮೯ ಮತದಾನವಾಗಿದೆ.

ದ.ಕ. ಜಿಲ್ಲೆಯಲ್ಲಿ74.87% ಮತದಾನ ➤ ಉಡುಪಿಯಲ್ಲಿ 78.46 ಶೇ. ಮತದಾನ Read More »

ಕರಾವಳಿ

ಮಂಗಳೂರು: ಮತದಾನದೋತ್ತರ ಘರ್ಷಣೆ ➤ 5 ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಜಾರಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.11. ಮತದಾನದ ಮುಗಿದ ಬಳಿಕ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 14ರವರೆಗೆ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾವೂರು, ಸುರತ್ಕಲ್ ಬಜ್ಪೆ, ಮೂಡುಬಿದಿರೆ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕಾನೂನು ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಮೇ.10

ಮಂಗಳೂರು: ಮತದಾನದೋತ್ತರ ಘರ್ಷಣೆ ➤ 5 ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಜಾರಿ Read More »

ಕರಾವಳಿ
Scroll to Top