(ನ್ಯೂಸ್ ಕಡಬ) newskadaba.com ಕೊಕ್ಕಡ, ಜೂ. 13. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟ ಘಟನೆ ಕೊಕ್ಕಡದಲ್ಲಿ ಸೋಮವಾರದಂದು ಸಂಭವಿಸಿದೆ.

ಮೃತ ವಿದ್ಯಾರ್ಥಿನಿಯನ್ನು ಕೊಕ್ಕಡ ಗ್ರಾಮದ ಮೀಯಾಳ ನಿವಾಸಿ ನಾಗೇಶ್ ನಳಿಯಾರ್ – ಹೇಮಾವತಿ ದಂಪತಿಗಳ ಪುತ್ರಿ ಶ್ರಾವ್ಯ (17) ಎಂದು ಗುರುತಿಸಲಾಗಿದೆ. ಶ್ರಾವ್ಯ ಕಳೆದ ಕೆಲವು ದಿನಗಳಿಂದ ಉರಿಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹತ್ತು ದಿನಗಳ ಹಿಂದೆ ಆಕೆ ಆರೋಗ್ಯದಲ್ಲಿ ತೀರಾ ಏರುಪೇರು ಉಂಟಾಗಿದ್ದು ಚಿಕಿತ್ಸೆಗಾಗಿ ಪುತ್ತೂರಿನ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರಾವ್ಯ ಮೃತಪಟ್ಟಿದ್ದಾರೆ.





