ಕರಾವಳಿ

ಮಂಗಳೂರು: ‘ತುಡರ್’ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ತುಳುನಾಡ ಮಾಣಿಕ್ಯ’ ಅರವಿಂದ್ ಬೋಳಾರ್ ಅವರು ‘ತುಡರ್’ ತುಳು ಚಲನಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಸುಮುಖ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿಲ್ಸನ್ ರೆಬೆಲ್ಲೋ ಅವರು ‘ತುಡರ್’ ಸಿನಿಮಾವನ್ನು ನಿರ್ಮಿಸಿದ್ದು,ಈ ಚಿತ್ರವನ್ನು ಎಲ್ಟನ್ ಮಸ್ಕರೇನಸ್ ಮತ್ತು ತೇಜಸ್ ಪೂಜಾರಿ ನಿರ್ದೇಶಿಸಿದ್ದಾರೆ. ಇನ್ನು ಸಂಭಾಷಣೆಯನ್ನು ಮೋಹನ್ ರಾಜ್ ಬರೆದಿದ್ದಾರೆ, ಸಂಗೀತವನ್ನು ಪ್ಯಾಟ್ಸನ್ ಪಿರೇರಾ, ಛಾಯಾಗ್ರಹಣವನ್ನು ವಿಜೇತ್ ಆರ್ ನಾಯಕ್ ಮಾಡಿದ್ದಾರೆ.

ಮಂಗಳೂರು: ‘ತುಡರ್’ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ Read More »

ಕರಾವಳಿ

ಸುಬ್ರಹ್ಮಣ್ಯ: ಬಸ್ ನಿಲ್ದಾಣದ ಬಳಿ ತಿರುಗಾಡುತ್ತಿದ್ದ ಅಪರಿಚಿತ ಮಹಿಳೆ ಮತ್ತು ಬಾಲಕಿಯನ್ನು ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು

 (ನ್ಯೂಸ್ ಕಡಬ) newskadaba.com. ಸುಬ್ರಹ್ಮಣ್ಯ, ಮೇ.12. ಸುಬ್ರಹ್ಮಣ್ಯ ವ್ಯಾಪ್ತಿಯ ಏನೆಕಲ್ಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ಅಪರಿಚಿತ ಬಾಲಕಿ ಮತ್ತು ಮಹಿಳೆಯೊಬ್ಬರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿ ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ ಘಟನೆ ಸುಬ್ರಹ್ಮಣ್ಯದಿಂದ ವರಾದಿಯಾಗಿದೆ. ಸಾರ್ವಜನಿಕರ ಮಾಹಿತಿ ಮೇರೆಗೆ ಏನೆಕಲ್ಲು ಬಸ್ ನಿಲ್ದಾಣ ಸಮೀಪ ತಿರುಗಾಡುತ್ತಿದ್ದ ಹಿಂದೆ ಭಾಷಿಕ ಮಹಿಳೆ ಹಾಗೂ ಬಾಲಕಿಯನ್ನು ಪೊಲೀಸರು ವಿಚಾರಿಸಿದ್ದರು. ಈ ವೇಳೆ ಎಣ್ಮೂರು ಭಾಗದವರು ಎಂದು ಅಸಮರ್ಪಕ ಮಾಹಿತಿ ನೀಡಿದ್ದರು.ಇದರಿಂದ ಅನುಮಾನಗೊಂಡ ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿದ್ದಾರೆ.

ಸುಬ್ರಹ್ಮಣ್ಯ: ಬಸ್ ನಿಲ್ದಾಣದ ಬಳಿ ತಿರುಗಾಡುತ್ತಿದ್ದ ಅಪರಿಚಿತ ಮಹಿಳೆ ಮತ್ತು ಬಾಲಕಿಯನ್ನು ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು Read More »

ಕರಾವಳಿ

ಬಾವಿಗೆ ಇಳಿದವನ ರಕ್ಷಣೆಗೆ ಮುಂದಾದ ಇಬ್ಬರು ಸೇರಿ ಮೂವರೂ ಮೃತ್ಯು

(ನ್ಯೂಸ್ ಕಡಬ)newskadaba.com ಕಾರವಾರ, ಮೇ.12. ಬಾವಿಗೆ ಬಿದ್ದಿದ್ದ ಪಂಪ್ ಎತ್ತಲು ಇಳಿದ ವ್ಯಕ್ತಿ ಹಿಂತಿರುಗಿ ಬಾರದ ಹಿನ್ನೆಲೆ ರಕ್ಷಣೆಗೆ ಮುಂದಾದ ಇಬ್ಬರು ಸೇರಿ ಒಟ್ಟು ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನ ಕಟ್ಟ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗೋವಿಂದ ಸೋಮಯ್ಯ ಪೂಜಾರಿ, ಗಣೇಶ್ ರಾಮದಾಸ್ ಶೇಟ್, ಸುರೇಶ್ ನಾಯರ್ ಬಾವಿಗೆ ಬಿದ್ದು ಮರಣ ಹೊಂದಿದವರು ಎಂಬುದು ತಿಳಿದುಬಂದಿದೆ. ಬಾವಿಯಲ್ಲಿ ಬಿದ್ದಿದ್ದ ನೀರೆತ್ತುವ ಪಂಪ್ ಸೆಟ್ ತೆಗೆಯಲು ಬಾವಿಗೆ ಇಳಿದಿದ್ದ ವ್ಯಕ್ತಿ ಮೇಲಕ್ಕೆ

ಬಾವಿಗೆ ಇಳಿದವನ ರಕ್ಷಣೆಗೆ ಮುಂದಾದ ಇಬ್ಬರು ಸೇರಿ ಮೂವರೂ ಮೃತ್ಯು Read More »

ಕರಾವಳಿ

ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ.!➤ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ)Newskadaba.com ಕಾರ್ಕಳ,ಮೇ.12 ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯನ್ನು ಕಾರ್ಕಳ ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕಾಕರ್ಳದಲ್ಲಿ ನಡೆದಿದೆ. ಕಾರ್ಕಳ ತಾಲೂಕು ಕಚೇರಿ ಸಮೀಪದ ಬಂಗ್ಲೆಗುಡ್ಡೆ ಕೆಎಂಇಎಸ್ ಶಾಲೆ ಎದುರಿನ ನಿವಾಸಿ 33 ವರ್ಷದ ನಸೀಬಾ ಬಾನು ಬಾವಿಗೆ ರಕ್ಷಣೆಗೆ ಒಳಪಟ್ಟ ಮಹಿಳೆಯಾಗಿದ್ದಾರೆ. ಇವರು ತಮ್ಮ ಮನೆಯ ಪಕ್ಕದ ಬಾವಿಗೆ ಬಳಿ ತೆರಳಿದಾಗ ಆಯತಪ್ಪಿ ಬಾವಿಗೆ ಬಿದಿದ್ದು ಅವರ ಗಂಡ ಹುಸೇನ್ ಎಂಬವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ

ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ.!➤ಪ್ರಾಣಾಪಾಯದಿಂದ ಪಾರು Read More »

ಕರಾವಳಿ

ಅರಣ್ಯ ಇಲಾಖೆ ಉರಗ ರಕ್ಷಕನ ಕಾಲು ಕಡಿದು ಭೀಕರ ಹತ್ಯೆ

(ನ್ಯೂಸ್ ಕಡಬ)newskadaba.com ಕಾರವಾರ, ಮೇ.12. ಹಳಿಯಾಳ ಅರಣ್ಯ ವಿಭಾಗದ ದಿನಗೂಲಿ ನೌಕರ, ಹವ್ಯಾಸಿ ಉರಗ ಸಂರಕ್ಷಕ ಪರಶುರಾಮ ನಾರಾಯಣ ತೋರಸ್ಕರ ಎಂಬವರನ್ನು ಹಳಿಯಾಳ ತಾಲೂಕಿನ ಕರ್ಲಕಟ್ಟಾ ಗ್ರಾಮ ವ್ಯಾಪ್ತಿಯಲ್ಲಿರುವ ಹೊಲದಲ್ಲಿ ಎರಡೂ ಕಾಲುಗಳನ್ನು ಕಡಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಕೃಷಿ ಜಮೀನಿನ ವ್ಯಾಜ್ಯವೇ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ.  

ಅರಣ್ಯ ಇಲಾಖೆ ಉರಗ ರಕ್ಷಕನ ಕಾಲು ಕಡಿದು ಭೀಕರ ಹತ್ಯೆ Read More »

ಕರಾವಳಿ

ಮಂಗಳೂರು: ಎನ್‌ಐಟಿಕೆ ಸ್ಟ್ರಾಂಗ್ ರೂಮ್ ಸುತ್ತ ಬಿಗಿ ಬಂದೋಬಸ್ತ್

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಗೆ ಆರು ಗಂಟೆಗೆ ಮತದಾನ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದ್ದು ಇವುಗಳನ್ನು ಎನ್‌ಐಟಿಕೆ  ಸ್ಟ್ರಾಂಗ್ ರೂಮ್ ನಲ್ಲಿ ಇರಿಸಲಾಗಿದೆ. ಇವಿಎಂ ಯಂತ್ರಗಳಿರುವ ಎನ್‌ಐಟಿಕೆ  ಸ್ಟ್ರಾಂಗ್ ರೂಮ್ ಕೊಠಡಿಯನ್ನು ಸಂಪೂರ್ಣವಾಗಿ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಕಿಟಕಿ, ಬಾಗಿಲುಗಳನ್ನೂ ಮುಚ್ಚಿದ್ದಾರೆ. ಎನ್ ಐ ಟಿಕೆ ಸುತ್ತ ಪೊಲೀಸರು ಮತ್ತು ಅರೆಸೇನಾಪಡೆ ಹದ್ದಿನ ಕಣ್ಣಿರಿಸಿದ್ದಾರೆ.

ಮಂಗಳೂರು: ಎನ್‌ಐಟಿಕೆ ಸ್ಟ್ರಾಂಗ್ ರೂಮ್ ಸುತ್ತ ಬಿಗಿ ಬಂದೋಬಸ್ತ್ Read More »

ಕರಾವಳಿ

ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದ ಮರ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಕಾಪು, ಮೇ.12. ಕಾಪು – ಶಿರ್ವ ರಸ್ತೆಯ ಮಲ್ಲಾರು ಚಂದ್ರನಗರ ಬಳಿ ರಿಕ್ಷಾದ ಮೇಲೆ ಮರ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಪುಷ್ಪ(45) ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ. ಗಾಳಿ, ಮಳೆಯಿಂದಾಗಿ ರಿಕ್ಷಾದ ಮೇಲೆ ಬೃಹತ್ ದೂಪದ ಮರ ಉರುಳಿ ಬಿದ್ದಿದ್ದು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ರಿಕ್ಷಾದ ಮೇಲಿನಿಂದ ಮರ ತೆರವು ಗೊಳಿಸಲು ಒಂದು ಗಂಟೆಯಿಂದ ನಿರಂತರ ಪ್ರಯತ್ನ ನಡೆಸಿದ್ದು, ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ‌.

ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದ ಮರ ➤ ಇಬ್ಬರು ಮೃತ್ಯು Read More »

ಕರಾವಳಿ

ಮಂಗಳೂರು: ತಪಾಸಣೆ ವೇಳೆ ಜೈಲು ಸಿಬ್ಬಂದಿ ಬಳಿ ಗಾಂಜಾ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ನಗರದ ಜಿಲ್ಲಾ ಕಾರಾಗೃಹದ ಸಿಬ್ಬಂದಿಯೋರ್ವನ ಬಳಿ ಗಾಂಜಾ ಪತ್ತೆಯಾಗಿದೆ. ಕೆಐಎಸ್ಎ‌ಫ್‌ ನವರು ತಪಾಸಣೆ ಮಾಡುವಾಗ ಜೈಲಿನ ವೀಕ್ಷಕನೋರ್ವನ ಬಳಿ ಸುಮಾರು 50 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಆತನನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಮಂಗಳೂರು: ತಪಾಸಣೆ ವೇಳೆ ಜೈಲು ಸಿಬ್ಬಂದಿ ಬಳಿ ಗಾಂಜಾ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಕದ್ರಿ ದೇಗುಲದಲ್ಲಿ ಆವರಣದಲ್ಲಿ ಅನುಮಾನಸ್ಪದ ಓಡಾಟ ➤ ಮೂವರು ಆರೋಪಿಗಳು ವಶಕ್ಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ಕದ್ರಿ ದೇವಸ್ಥಾನದ ಆವರಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಯುವಕರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಅಪರಿಚಿತರು ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು, ದೇವಸ್ಥಾನಕ್ಕೆ ಭೇಟಿ ನೀಡಿದ ಅವರನ್ನು ವಿಚಾರಿಸಿದ್ದಾರೆ. ಯುವಕರು ದೇವಸ್ಥಾನದ ಅಂಗಣಕ್ಕೆ ಬೈಕ್ ತಂದಿದ್ದಲ್ಲದೇ ಚಪ್ಪಲಿ ಧರಿಸಿ ಅಡ್ಡಾಡುತ್ತಿದ್ದದ್ದು ಭಕ್ತರ ಅಕ್ರೋಶಕ್ಕೆ ಕಾರಣವಾಗಿತ್ತು. ಯುವಕರನ್ನು ವಿಚಾರಿಸಿದಾಗ ತಾವು ಅಸೈಗೋಳಿಯಿಂದ ಕಾಟಿಪಳ್ಳಕ್ಕೆ ಹೋಗುವವರಾಗಿದ್ದು, ತಪ್ಪಾಗಿ ಗೂಗಲ್ ಮ್ಯಾಪ್ ನೋಡಿಕೊಂಡು ಹೋಗುವಾಗ ದಾರಿ ತಪ್ಪಿ ಇಲ್ಲಿಗೆ ಬಂದಿರುವುದಾಗಿ

ಮಂಗಳೂರು: ಕದ್ರಿ ದೇಗುಲದಲ್ಲಿ ಆವರಣದಲ್ಲಿ ಅನುಮಾನಸ್ಪದ ಓಡಾಟ ➤ ಮೂವರು ಆರೋಪಿಗಳು ವಶಕ್ಕೆ Read More »

ಕರಾವಳಿ

ಮೇ. 13ರಂದು ಮತ ಎಣಿಕೆಯ ಹಿನ್ನೆಲೆ ➤ ದ.ಕ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ. 11. ಮೇ. 10ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯವು ಮೇ 13 ರ ಶನಿವಾರದಂದು ನಡೆಯಲಿರುವ ಹಿನ್ನೆಲೆ ದ.ಕ. ಜಲ್ಲೆಯಲ್ಲಿ 144 ಸೆಕ್ಷನ್‌ ಜಾರಿಗೊಳಿಸಿ ದ.ಕ ಜಿಲ್ಲಾಧಿಕಾರಿ ಎಮ್‌ ಆರ್‌ ರವಿ ಕುಮಾರ್‌ ಆದೇಶ ಹೊರಡಿಸಿದ್ದಾರೆ. ಮೇ 13ರ ಬೆಳಗ್ಗೆ 5 ರಿಂದ ರಾತ್ರಿ 12 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಶವ ಸಂಸ್ಕಾರ, ಮದುವೆ ಅಥವಾ ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್‌ 19 ಕಾರ್ಯಗಳಿಗೆ

ಮೇ. 13ರಂದು ಮತ ಎಣಿಕೆಯ ಹಿನ್ನೆಲೆ ➤ ದ.ಕ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ Read More »

ಕರಾವಳಿ
Scroll to Top