ಕರಾವಳಿ

ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ‘ಸಾಂಪ್ರದಾಯಕ ದಿನ’ ಆಚರಣೆ

(ನ್ಯೂಸ್ ಕಡಬ) newskadaba.com ಕುಂತೂರು, ಆ. 03. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾರತದ ಬಹು ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುವ ‘ಸಾಂಪ್ರದಾಯಕ ದಿನ’ವನ್ನು ವೈವಿಧ್ಯಮಯವಾಗಿ ಆಚರಿಸಲಾಯಿತು. ಕಾಲೇಜಿನ ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಕಾಲೇಜಿನ ವ್ಯವಸ್ಥಾಪಕರಾದ ರೆIಫಾIಡಾI ಎಲ್ದೋ ಪುತ್ತನ್‍ಕಂಡತ್ತಿಲ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಬಹುಭಾಷಿಕ ಹಾಗೂ ಬಹು ಸಂಸ್ಕೃತಿಯ ನಾಡಿನಲ್ಲಿ ನಮ್ಮ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಸಾಂಪ್ರದಾಯಕ ದಿನ ಆಚರಣೆಯ ಮಹತ್ವವನ್ನು ಕುರಿತು […]

ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ‘ಸಾಂಪ್ರದಾಯಕ ದಿನ’ ಆಚರಣೆ Read More »

ಕರಾವಳಿ

ಆನ್ಲೈನ್ ನಲ್ಲಿ 5.90 ಲಕ್ಷ ವಂಚನೆ..! – ದೂರು ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಆ.03. ಯನೈಟೆಡ್ ಕಿಂಗ್‌ಡಂನಿಂದ ಉಡುಗೊರೆ ಕಳುಹಿಸುವುದಾಗಿ ಹೇಳಿ ಸುಮಾರು 5.90 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸ್ ಆ್ಯಪ್ ಮೂಲಕ ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ಡಾ. ಫ್ರಾಕ್ಲಿನ್ ಪ್ಯಾಟ್ರಿಕ್ ಎಂದು ಪರಿಚಯಿಸಿಕೊಂಡು ಯುನೈಟೆಡ್ಕಿಂ ಗ್‌ಡಮ್‌ನಲ್ಲಿ ವೈದ್ಯನಾಗಿದ್ದೇನೆ ಎಂದು ಹೇಳಿಕೊಂಡಿದ್ದು, ಕೆಲವು ದಿನಗಳ ಬಳಿಕ ಆತ ತನ್ನ ಮಗಳ ಬರ್ತ್‌ಡೇಗೆ ವಿದೇಶಿ ಕರೆನ್ಸಿ, ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ತಿಳಿಸಿದ್ದ

ಆನ್ಲೈನ್ ನಲ್ಲಿ 5.90 ಲಕ್ಷ ವಂಚನೆ..! – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ನೈತಿಕ ಪೊಲೀಸ್ ಗಿರಿ – ಆಟೋ ಚಾಲಕನ ಮೇಲೆ ಹಲ್ಲೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.03. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಘಟನೆಗಳು ಮುಂದುವರಿದಿದ್ದು, ರಾತ್ರಿ ವೇಳೆ ಧರ್ಮಸ್ಥಳ ದ್ವಾರದ ಬಳಿಯ ಬಸ್ ನಿಲ್ದಾಣದಲ್ಲಿ ಅನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ ಎನ್ನಲಾಗಿದೆ. ಆಟೋದಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ ಸಂಘ ಪರಿವಾರದ ಕಾರ್ಯಕರ್ತರು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಆಟೋ ಚಾಲಕನನ್ನು ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್ (22) ಎಂದು ಗುರುತಿಸಲಾಗಿದೆ. ಈ ಕುರಿತು ‌ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಬೆಳ್ತಂಗಡಿ: ನೈತಿಕ ಪೊಲೀಸ್ ಗಿರಿ – ಆಟೋ ಚಾಲಕನ ಮೇಲೆ ಹಲ್ಲೆ Read More »

ಕರಾವಳಿ

ಕಾಣಿಕೆ ಡಬ್ಬಿಯನ್ನೇ ಕಳ್ಳತನಗೈದ ಖದೀಮರು….!

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.03. ನೆರಿಯ ಗ್ರಾಮದ ಗಂಡಿಬಾಗಿಲು ಸಂತ ಥೋಮಸರ ದೇವಾಲಯ ಮತ್ತು ಸಂತ ಮರಿಯಮ್ಮ ಗ್ರೋಟ್ಟೋದ ಕಾಣಿಕೆ ಡಬ್ಬಿಯನ್ನು ಕಳ್ಳರು ಕಳ್ಳತನಗೈದಿರುವ ಘಟನೆ ಬೆಳ್ತಂಗಡಿಯಲ್ಲಿ ವರದಿಯಾಗಿದೆ. ಚರ್ಚ್ ನ ಮುಂಭಾಗದಲ್ಲಿ ಕಾಣಿಕೆ ಡಬ್ಬಿಯ ಬೀಗ ಮುರಿಯಲಾಗಿದ್ದು ಅದರಲ್ಲಿದ್ದ ನಗದನ್ನು ಅಪಹರಿಸಲಾಗಿದೆ. ಕಾಣಿಕೆ ಡಬ್ಬಿಗೆ ಹಾನಿಯಾಗಿದೆ. ಇಲ್ಲಿಂದ ಅಣತಿ ದೂರದ ಆಲಂಗಾಯಿ ತಿರುವ ರಸ್ತೆ ಬಳಿ ಇರುವ ಸಂತ ಮರಿಯಮ್ಮರ ಗ್ರೋಟ್ಟೋ ಬಳಿಯ ಕಾಣಿಕೆ ಡಬ್ಬಿಯನ್ನೇ ಕಳ್ಳರು ಅಪಹರಿಸಿದ್ದಾರೆ.  

ಕಾಣಿಕೆ ಡಬ್ಬಿಯನ್ನೇ ಕಳ್ಳತನಗೈದ ಖದೀಮರು….! Read More »

ಕರಾವಳಿ, ಕ್ರೈಮ್ ನ್ಯೂಸ್

ಮಾದಕ ವಸ್ತು ಎಂಡಿಎಂಎ ಮಾರಾಟ….! – ಮೂವರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಆ.03. ಡ್ರಗ್ಸ್ ಮುಕ್ತ ಮಂಗಳೂರು ನಗರ ನಿರ್ಮಿಸುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೂಲತಃ ಸಜಿಪ ಉಳ್ಳಾಲದ ಹಫೀಝ್ ಯಾನೆ ಅಪ್ಪಿ(35), ಸಜಿಪ ಮುನ್ನೂರಿನ ಅಮೀರ್ ಯಾನೆ ಅಮ್ಮಿ(34) ಎಂದು ಗುರುತಿಸಲಾಗಿದೆ. ತಲಪಾಡಿ-ದೇವಿಪುರ ರಸ್ತೆಯಲ್ಲಿನ ತಚ್ಚಾಣಿ ಪರಸರದಲ್ಲಿ ಕಾರಿನಲ್ಲಿ ಮೂವರು ಮಾದಕ ವಸ್ತುವಾದ ಎಂಡಿಎಂಎ ಯನ್ನು ಬೆಂಗಳೂರಿನಿಂದ ಖರೀದಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ

ಮಾದಕ ವಸ್ತು ಎಂಡಿಎಂಎ ಮಾರಾಟ….! – ಮೂವರು ಆರೋಪಿಗಳು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಸಂಶಯಾಸ್ಪದ ರೀತಿಯಲ್ಲಿದ್ದ ಯುವಕ ಅರೆಸ್ಟ್.!

(ನ್ಯೂಸ್ ಕಡಬ)newskadaba.com ಮಂಗಳೂರು, ಆ.03. ಸಂಶಯಾಸ್ಪದ ರೀತಿಯಲ್ಲಿದ್ದ ಯುವಕನನ್ನು ಕದ್ರಿ ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕುಲಶೇಖರದ ಕಿರಣ್ ಎಂಟರ್‌ಪ್ರೈಸಸ್ ಕಟ್ಟಡದ ಬಳಿ ಸಂಶಯಾಸ್ಪದ ರೀತಿಯಲ್ಲಿದ್ದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಬಂಧಿತನನ್ನು ಶಿವನಗರದ ದೀಪಕ್ (27) ಎಂಬುದಾಗಿ ತಿಳಿದು ಬಂದಿದೆ. ಈತ ಪೊಲೀಸರು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡದ ಕಾರಣ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಬಲವಾದ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸಂಶಯಾಸ್ಪದ ರೀತಿಯಲ್ಲಿದ್ದ ಯುವಕ ಅರೆಸ್ಟ್.! Read More »

ಕರಾವಳಿ, ಕ್ರೈಮ್ ನ್ಯೂಸ್

ಕೆಮ್ಮಾರ ಶಾಲೆಯಲ್ಲಿ ಉಚಿತ ಸೇವೆಗೈದ ಗೌರವ ಉಪನ್ಯಾಸಕಿ ಕು|ಅಝ್ಮಿಯಾಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 03. ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಉಪನ್ಯಾಸಕಿಯಾಗಿ ಉಚಿತವಾಗಿ ಸೇವೆ ಮಾಡುತ್ತಿದ್ದ, ಇದೇ ಶಾಲೆಯ ಹಳೇ ವಿದ್ಯಾರ್ಥಿನಿ ಕುಮಾರಿ ಅಝ್ಮಿಯಾ ರವರಿಗೆ ವಿದಾಯದ ಗೌರವ ನೀಡಿ ಶುಭ ಹಾರೈಸಲಾಯಿತು. ತನ್ನ ಉನ್ನತ ಶಿಕ್ಷಣದ ನಿಮಿತ್ತ ಅನಿವಾರ್ಯ ಕಾರಣದಿಂದ ನಿವೃತ್ತಿ ಘೋಷಿಸಿದರು. ತಾನು ಕಲಿತ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಮಕ್ಕಳಿಗೆ ಉಚಿತವಾಗಿ ಭೋಧನೆ ಮಾಡುವ ಮೂಲಕ ಸೇವೆ ಮಾಡುತ್ತಿದ್ದ ಕುಮಾರಿ ಅಝ್ಮಿಯಾರವರ ಕಾರ್ಯ ಶ್ಲಾಘನೀಯ. ಅವರ ಮುಂದಿನ

ಕೆಮ್ಮಾರ ಶಾಲೆಯಲ್ಲಿ ಉಚಿತ ಸೇವೆಗೈದ ಗೌರವ ಉಪನ್ಯಾಸಕಿ ಕು|ಅಝ್ಮಿಯಾಗೆ ಬೀಳ್ಕೊಡುಗೆ Read More »

ಕರಾವಳಿ

ನೇತ್ರಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಆ.03. ನೇತ್ರಾವತಿ ನದಿಯಲ್ಲಿ ಮಹಿಳೆಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹದ ಗುರುತು ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ. ಇಲ್ಲಿನ ನೇತ್ರಾವತಿ ನದಿ ನೀರಿನಲ್ಲಿ ಸುಮಾರು 50ರಿಂದ 55 ವರ್ಷದ ಮಹಿಳೆಗೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, 142 ಸೆಂ. ಮೀ. ಎತ್ತರವಿದ್ದು, ಕೆಂಪು ಬಣ್ಣದ ರವಿಕೆ ಹಾಗೂ ಹಸಿರು ಬಣ್ಣದ ಬಟ್ಟೆ ತೊಟ್ಟಿರುತ್ತಾರೆ. ಮೂಗಲ್ಲಿ ಮೂಗುತಿ ಹಾಗೂ ಬಲ ಕೈಯಲ್ಲಿ ಗುಲಾಬಿ ಬಣ್ಣದ ಗಾಜಿನ ಬಳೆಯೊಂದಿದೆ. ಆದ್ದರಿಂದ ಇವರ ಬಗ್ಗೆ ತಿಳಿದವರು

ನೇತ್ರಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 03. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಶ್ರೀಮತಿ ಮೀನಾಕ್ಷಿ ದಲಾಯತ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಕಛೇರಿಯ ಆದೇಶದಂತೆ ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಶ್ರೀಮತಿ ಮೀನಾಕ್ಷಿ ಅವರು 2015ನೇ ಇಸವಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ 7 ವರ್ಷಗಳಿಂದ ಕರ್ತವ್ಯ ನಿರ್ವಹಿಸಿರುತ್ತಾರೆ.

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ Read More »

ಕರಾವಳಿ

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು-ಮಸ್ತಿಗೆ ಬ್ರೇಕ್: ಖಾಕಿ ಗಸ್ತು

(ನ್ಯೂಸ್ ಕಡಬ) newskadaba.com ಚಾರ್ಮಾಡಿ, ಆ. 03: ಚಾರ್ಮಾಡಿ ಘಾಟಿ ರಸ್ತೆ ಮಧ್ಯ ವಾಹನಗಳನ್ನು ನಿಲ್ಲಿಸಿ ಮೋಜು-ಮಸ್ತಿ ಮಾಡುವ ಪ್ರವಾಸಿಗರಿಗೆ ಬ್ರೇಕ್ ಹಾಕಲು ಘಾಟಿ ಪ್ರದೇಶದ ಅಗತ್ಯ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಘಾಟಿಯ ಸೌಂದರ್ಯ ವೀಕ್ಷಣೆ ನೆಪದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ನೀಡುವುದು, ಜಾರುವ ಬಂಡೆಗಳ ಮೇಲೆ ಹತ್ತುವುದು, ಅಪಾಯಕಾರಿ ತೊರೆ, ಹಳ್ಳಗಳಿಗೆ ಇಳಿಯುವುದು, ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿಗೆ ಮುಗಿ ಬೀಳುವುದು, ರಸ್ತೆಮಧ್ಯೆ ಕುಣಿದು, ಕುಪ್ಪಳಿಸುವುದು, ಮದ್ಯಪಾನ ಮೊದಲಾದ ಅನಗತ್ಯ ಚಟುವಟಿಕೆಗಳಿಂದ

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು-ಮಸ್ತಿಗೆ ಬ್ರೇಕ್: ಖಾಕಿ ಗಸ್ತು Read More »

ಕರಾವಳಿ
Scroll to Top