ಸ್ನಾನದ ಮನೆಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ – ದೂರು ದಾಖಲು



(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಆ. 23. ನೆರೆಮನೆಯ ಮಹಿಳೆಯೋರ್ವರು ಸ್ನಾನಮಾಡುತ್ತಿದ್ದ ವೇಳೆ ಬಚ್ಚಲು ಮನೆಗೆ ನುಗ್ಗಿದ ಯುವಕನೋರ್ವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.







ಮಹಿಳೆ ರಾತ್ರಿ ವೇಳೆ ಸ್ನಾನಕ್ಕೆಂದು ಹೋದಾಗ ನೆರೆಮನೆಯ ಯುವಕ ಮನೋಜ್ ಎಂಬಾತ ಅಕ್ರಮವಾಗಿ ಬಚ್ಚಲು ಮನೆಗೆ ಪ್ರವೇಶಿಸಿ ಅನುಚಿತವಾಗಿ ವರ್ತಿಸಿದ್ದಲ್ಲದೇ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿದ್ದು ಮಹಿಳೆಯ ಮನೆಯವರು ಹೊರಬರುವ ವೇಳೆ ಆರೋಪಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎನ್ನಲಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top