ಸುಳ್ಯ: ವಿದ್ಯಾರ್ಥಿಯನ್ನು 50 ಮೀಟರ್ ವರೆಗೆ ಎಳೆದೊಯ್ದ ಬಸ್

(ನ್ಯೂಸ್ ಕಡಬ) newskadaba.com ಸುಳ್ಯ, ಆ. 23. ಬಸ್ಸಿಗೆ ಓಡಿ ಹೋಗಿ ಹತ್ತುವ ಸಂದರ್ಭ ಆಯ ತಪ್ಪಿ ಬಿದ್ದ ಇಲ್ಲಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಯೋರ್ವನನ್ನು ಬಸ್‌ ಸುಮಾರು 50 ಮೀಟರ್‌ನಷ್ಟು ದೂರ ಎಳೆದೊಯ್ದ ಘಟನೆ ನಡೆದಿದೆ.


ಸುಳ್ಯದಿಂದ ಕೊಯ್ನಾಡಿಗೆ ಹೋಗುತ್ತಿದ್ದ ಸರಕಾರಿ ಬಸ್‌ ಕಾಲೇಜು ಬಳಿ ವಿದ್ಯಾರ್ಥಿಗಳನ್ನು ಹತ್ತಿಸಲು ನಿಂತಿದ್ದು ವಿದ್ಯಾರ್ಥಿಗಳು ಹತ್ತಿದ ಬಳಿಕ ಮುಂದಕ್ಕೆ ಸಾಗಿದೆ. ಈ ವೇಳೆ ಹತ್ತನೇ ತರಗತಿಯ ಅನಸ್‌ ಎಂಬಾತ ಓಡಿ ಬಂದು ಬಸ್‌ ಹತ್ತಲೆತ್ನಿಸಿದ್ದು, ಈ ಸಂದರ್ಭ ಆಯತಪ್ಪಿ ಬಿದ್ದನೆನ್ನಲಾಗಿದೆ. ಆಯ ತಪ್ಪಿ ಬಿದ್ದರೂ ಒಂದು ಕೈಯಿಂದ ಬಸ್ಸಿನ ರಾಡನ್ನು ಹಿಡಿದಿದ್ದ ಆತನ ಕಾಲುಗಳು ನೆಲಕ್ಕೆ ತಾಗಿಕೊಂಡಿದ್ದು, ಸುಮಾರು 50 ಮೀಟರ್‌ ಹೋದ ಬಳಿಕ ಚಾಲಕನಿಗೆ ವಿಷಯ ತಿಳಿದು ಬಸ್ಸನ್ನು ನಿಲ್ಲಿಸಿದರೆಂದು ತಿಳಿದು ಬಂದಿದೆ. ಘಟನೆ ತಿಳಿದ ಸುಳ್ಯ ಪೊಲೀಸರು ಕಾಲೇಜಿಗೆ ಹೋಗಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

Scroll to Top