ಕರಾವಳಿ

ಕಡಬ: ಕಾರು – ಬೈಕ್ ನಡುವೆ ಢಿಕ್ಕಿ – ಶಾಲಾ ವಿದ್ಯಾರ್ಥಿ ಮೃತ್ಯು, ಇಬ್ಬರಿಗೆ ಗಾಯ

ಕಡಬ, ಡಿ.16. ಇಲ್ಲಿನ ಕಳಾರ ಸಮೀಪ ಶುಕ್ರವಾರ ತಡ ರಾತ್ರಿ ಕಾರು ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕಾಣಿಯೂರು ಮೂಲದ ಪ್ರಸ್ತುತ ಕಳಾರದಲ್ಲಿ ವಾಸವಿರುವ ಚಂದ್ರಶೇಖರ ಅವರ ಪುತ್ರ ,ಸರಸ್ವತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಬಿಪಿನ್ ಮೃತಪಟ್ಟ ಬಾಲಕ.ತಮ್ಮ ನಿವಾಸಕ್ಕೆ ತಲುಪುವ ಸುಮಾರು ನೂರು‌ ಮೀಟರ್ ಅಂತರದಲ್ಲಿ ಈ ಅಪಘಾತ ನಡೆದಿದೆ ಈ ಅಪಘಾತದಲ್ಲಿ ಮೃತ ಬಾಲಕನ ತಂದೆ ಚಂದ್ರಶೇಖರ ಮತ್ತು ಪುಟಾಣಿ ತಂಗಿ […]

ಕಡಬ: ಕಾರು – ಬೈಕ್ ನಡುವೆ ಢಿಕ್ಕಿ – ಶಾಲಾ ವಿದ್ಯಾರ್ಥಿ ಮೃತ್ಯು, ಇಬ್ಬರಿಗೆ ಗಾಯ Read More »

ಕರಾವಳಿ

ನೆಲ್ಯಾಡಿ: ಖಾಸಗಿ ಶಾಲಾ ಬಸ್ – ದ್ವಿಚಕ್ರ ವಾಹನ ನಡುವೆ ಢಿಕ್ಕಿ – ದ್ವಿಚಕ್ರ ವಾಹನ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ.13. ಶಾಲಾ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಪಡುಬೆಟ್ಟು ಎಂಬಲ್ಲಿ ಬುಧವಾರದಂದು ನಡೆದಿದೆ. ಗಾಯಾಳುವನ್ನು ಪಡುಬೆಟ್ಟು ನಿವಾಸಿ ಸಾಬಿತ್(23) ಎಂದು ಗುರುತಿಸಲಾಗಿದೆ. ಪಡುಬೆಟ್ಟು ಖಾಸಗಿ ಶಾಲೆಯ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಪಡುಬೆಟ್ಟು ಎಂಬಲ್ಲಿ ಬುಧವಾರದಂದು ಢಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ಸಾಬಿತ್ ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ

ನೆಲ್ಯಾಡಿ: ಖಾಸಗಿ ಶಾಲಾ ಬಸ್ – ದ್ವಿಚಕ್ರ ವಾಹನ ನಡುವೆ ಢಿಕ್ಕಿ – ದ್ವಿಚಕ್ರ ವಾಹನ ಸವಾರ ಗಂಭೀರ Read More »

ಕರಾವಳಿ

ಕಡಬ: ವಿಷ ಸೇವಿಸಿ ವೃದ್ಧೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಡಿ.13. ವೃದ್ಧೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಎಂಬಲ್ಲಿ ಮಂಗಳವಾರದ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವೃದ್ಧೆಯನ್ನು ಕುಟ್ರುಪ್ಪಾಡಿ ಗ್ರಾಮದ ಬೈದ್ರಿಜಾಲು ನಿವಾಸಿ ಬಾಬು ಗೌಡ ಎಂಬವರ ಪತ್ನಿ ಶಿವಮ್ಮ(78) ಎಂದು ಗುರುತಿಸಲಾಗಿದೆ. ಶಿವಮ್ಮ ಅವರು ಮಂಗಳವಾರ ಸಂಜೆ ತನ್ನ ಮನೆಯಲ್ಲಿ ಎಂಡೋಸಲ್ಫಾನ್ ಸೇವಿಸಿದ್ದು, ತಕ್ಷಣವೇ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ

ಕಡಬ: ವಿಷ ಸೇವಿಸಿ ವೃದ್ಧೆ ಆತ್ಮಹತ್ಯೆ Read More »

ಕರಾವಳಿ

ಸುಳ್ಯ: ಕಾರು ಹಾಗೂ ಲಾರಿ ನಡುವೆ ಅಪಘಾತ- ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 07. ಕಾರು ಹಾಗೂ ಲಾರಿ ಮಧ್ಯೆ ಪರಸ್ಪರ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನಡೆದಿದೆ. ಗಾಯಗೊಂಡ ಕಾರು ಚಾಲಕನನ್ನು ಶಿವಪ್ಪ ಎಂದು ಗುರುತಿಸಲಾಗಿದೆ. ಇವರು ತನ್ನ ಕಾರಿನಲ್ಲಿ ಸಂಪಾಜೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಗೂನಡ್ಕದಲ್ಲಿ ಲಾರಿಯೊಂದು ಢಿಕ್ಕಿ ಹೊಡೆದಿದ್ದು, ಪರಿಣಾಮ ಚಾಲಕ ಶಿವಪ್ಪರವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸುಳ್ಯ: ಕಾರು ಹಾಗೂ ಲಾರಿ ನಡುವೆ ಅಪಘಾತ- ಓರ್ವನಿಗೆ ಗಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಪತನದ ಅಂಚಿನಲ್ಲಿ ಖಾಸಗಿ ಬಸ್ ಸೇವಾ ವ್ಯವಸ್ಥೆ – ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಆತಂಕ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 07. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಅತ್ಯುತ್ತಮ ಸೇವೆ ನೀಡುತ್ತಿದ್ದರೂ ಸರ್ಕಾರದ ಕೆಲವು ಧೋರಣೆಯಿಂದ ಬಸ್ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರವು ಬಸ್ ಮಾಲೀಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸದಿದ್ದಲ್ಲಿ 110 ವರ್ಷಗಳ ಇತಿಹಾಸ ಹೊಂದಿರುವ ಖಾಸಗಿ ಬಸ್ಸಿನ ಸೇವಾ ವ್ಯವಸ್ಥೆ ಪತನಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಆತಂಕ ವ್ಯಕ್ತಪಡಿಸಿದೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರದಂದು ದ.ಕ.

ಪತನದ ಅಂಚಿನಲ್ಲಿ ಖಾಸಗಿ ಬಸ್ ಸೇವಾ ವ್ಯವಸ್ಥೆ – ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಆತಂಕ Read More »

ಕರಾವಳಿ, ಕರ್ನಾಟಕ
crime, arrest, suspected

ಪುತ್ತೂರು: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ – ಕಡಬದ ಯುವಕನಿಗೆ ಜಾಮೀನು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.07. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ನಂತರ ಅತ್ಯಾಚಾರಗೈದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಕಡಬದ ಯಜ್ಞೇಶ್ ಎಂಬವರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿ, ಅಪ್ರಾಪ್ತ ಬಾಲಕಿಯೋರ್ವಳು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಎಂದಿನಂತೆ ಕಾಲೇಜಿಗೆಂದು ತೆರಳಿದ್ದು, ಸ್ಪೆಷಲ್ ಕ್ಲಾಸ್ ಇರುವ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ತನ್ನ ಸ್ನೇಹಿತೆಯ ಮನೆಯಲ್ಲಿ ನಿಲ್ಲುವುದಾಗಿ ತಿಳಿಸಿ ತೆರಳಿದ್ದಳು ಎನ್ನಲಾಗಿದೆ. ಬಳಿಕ ಅಪ್ರಾಪ್ತ ಬಾಲಕಿಯು ಮನೆಗೆ ಫೋನ್ ಮಾಡದೆ

ಪುತ್ತೂರು: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ – ಕಡಬದ ಯುವಕನಿಗೆ ಜಾಮೀನು Read More »

ಕರಾವಳಿ

ಕಡಬ: ಮೇಯಲು ಬಿಟ್ಟಿದ್ದ ದನ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ – ಕಾಡಾನೆ ದಾಳಿಯ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಡಿ.6. ಮೇಯಲು ಬಿಟ್ಟಿದ್ದ ದನವೊಂದು ತೋಟದಲ್ಲಿ ಗಾಯಗೊಂಡು ಮೃತಪಟ್ಟಿದ್ದು, ಆನೆ ದಾಳಿ ನಡೆಸಿದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕಡಬ ತಾಲೂಕು ಕೊಣಾಜೆ ದೊಡ್ಡಮನೆ ನಿವಾಸಿ ಅಶೋಕ್ ಎಂಬವರಿಗೆ ಸೇರಿದ ದನವನ್ನು ಮಂಗಳವಾರ ಮೇಯಲು ಬಿಡಲಾಗಿತ್ತು. ಸಂಜೆ ವೇಳೆಗೆ ಮನೆಯವರು ಹುಡುಕಾಡಿದಾಗ ದನ ಸಿಕ್ಕಿರಲಿಲ್ಲ. ಬುಧವಾರ ಬೆಳಿಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ದನ ತೋಟದಲ್ಲಿ ಗಾಯಗೊಂಡು ಸತ್ತು ಬಿದ್ದಿರುವುದು ಕಂಡುಬಂದಿದೆ. ತೋಟದಲ್ಲಿ ನೀರಾವರಿ ಪೈಪ್ ಗಳಿಗೆ ಹಾನಿಯಾಗಿದ್ದು, ರಾತ್ರಿ ವೇಳೆ ಆನೆ ಬಂದಿರುವ

ಕಡಬ: ಮೇಯಲು ಬಿಟ್ಟಿದ್ದ ದನ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ – ಕಾಡಾನೆ ದಾಳಿಯ ಶಂಕೆ Read More »

ಕರಾವಳಿ

ನೆಲ್ಯಾಡಿ: ಶಿರಾಡಿ ಘಾಟ್ ನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಅಪರಿಚಿತ ವಾಹನ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ –

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ.06. ಗೂಡ್ಸ್ ಟೆಂಪೋವೊಂದಕ್ಕೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ಟೆಂಪೋಲ್ಲಿದ್ದ ಇಬ್ಬರು ಮೃತಪಟ್ಟ ದಾರುಣ ಘಟನೆ ಶಿರಾಡಿ ಘಾಟ್ ನ ಗುಂಡ್ಯ ಕೆಂಪು ಹೊಳೆ ಸಮೀಪ ಬುಧವಾರ ಬೆಳಗಿನ ಜಾವ ನಡೆದಿದೆ. ಅಪಘಾತದಲ್ಲಿ ಗೂಡ್ಸ್ ವಾಹನದ ಚಾಲಕ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತರನ್ನು ಹಾಸನ ನಿವಾಸಿಗಳು ಎಂದು ಗುರುತಿಸಲಾಗಿದೆ. ಶಿರಾಡಿ ಘಾಟ್ ನ ಕೆಂಪು ಹೊಳೆ ಸಮೀಪ ಈ ಘಟನೆ ನಡೆದಿದ್ದು, ಯಾವುದೋ ಅಪರಿಚಿತ ಘನ ವಾಹನ

ನೆಲ್ಯಾಡಿ: ಶಿರಾಡಿ ಘಾಟ್ ನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಅಪರಿಚಿತ ವಾಹನ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ – Read More »

ಕರಾವಳಿ

ಕಡಬದ ಅಡಿಗ ಮೋಟಾರ್ಸ್ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡು ಇಂದು(ಡಿ.04) ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಡಿ.04. ಕಳೆದ ಏಳು ವರ್ಷಗಳಿಂದ ಕಡಬದಲ್ಲಿ ಕಾರ್ಯಾಚರಿಸುತ್ತಿರುವ ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟ ಸಂಸ್ಥೆ ಅಡಿಗ ಮೋಟಾರ್ಸ್ ಇಂದು (ಡಿ.04) ಪ್ರೋಪೆಲ್ ಆಟೋ ಗ್ಯಾಸ್ ಸ್ಟೇಷನ್ ಮುಂಭಾಗದಲ್ಲಿ ವಿಸ್ತ್ರತವಾದ ಹಾಗೂ ಸುಸಜ್ಜಿತವಾದ ಕಟ್ಟಡದಲ್ಲಿ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ. ಇಂದು ಬೆಳಿಗ್ಗೆ ಗಂಟೆ 10:30ಕ್ಕೆ ಸರಿಯಾಗಿ ಆಹ್ವಾನಿತ ಗಣ್ಯರಿಂದ ದೀಪ ಪ್ರಜ್ವಲನೆಯೊಂದಿಗೆ ಶುಭಾರಂಭಗೊಳ್ಳಲಿದ್ದು, ಉದ್ಘಾಟನೆಯ ಪ್ರಯುಕ್ತ ದ್ವಿಚಕ್ರ ವಾಹನಗಳಿಗೆ ವಿಶೇಷ ಆಫರ್ ಸೌಲಭ್ಯ ಕಲ್ಪಿಸಲಾಗಿದೆ. ಕಡಬದ ಅಡಿಗ ಮೋಟಾರ್ಸ್ ಸಂಸ್ಥೆಯು ದಕ್ಷಿಣ ಕನ್ನಡ

ಕಡಬದ ಅಡಿಗ ಮೋಟಾರ್ಸ್ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡು ಇಂದು(ಡಿ.04) ಶುಭಾರಂಭ Read More »

ಕರಾವಳಿ

ಕಡಬದಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ – ಆತಂಕದಲ್ಲಿ ಜನತೆ

(ನ್ಯೂಸ್ ಕಡಬ) newskadaba.com ಕಡಬ, ಡಿ.01. ಪರಿಸರದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಕೃಷಿಕರು ಕಂಗೆಟ್ಟಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ ಕಡಬ ತಾಲೂಕಿನ ಐತ್ತೂರು ಗ್ರಾಮದ ಹತ್ಯಡ್ಕ ಕುದ್ರಡ್ಕ ಸಮೀಪ ತೋಟವೊಂದರಲ್ಲಿ ಕಾಡಾನೆ ಸಂಚರಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಕಾಡಾನೆಯು ಇಬ್ಬರನ್ನು ಕೊಂದು ಹಾಕಿತ್ತು. ತದನಂತರ ಊರವರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆಯು ಕಾಡಾನೆ ಸ್ಥಳಾಂತರ ಕಾರ್ಯಾಚರಣೆ ನಡೆಸಿದ್ದು, ಒಂದು ಆನೆಯನ್ನು ಸೆರೆ ಹಿಡಿದಿದ್ದರು.

ಕಡಬದಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ – ಆತಂಕದಲ್ಲಿ ಜನತೆ Read More »

ಕರಾವಳಿ
Scroll to Top