ಮೂರು ವಾಹನಗಳ ನಡುವೆ ಸರಣಿ ಅಪಘಾತ; ಬೈಕ್ ನಿಂದ ಹಾರಿ ಪಾರಾದ ಸವಾರ..!

(ನ್ಯೂಸ್ ಕಡಬ) newskadaba.com ಕಿನ್ನಿಗೋಳಿ, ಫೆ. 26. ಹಾವೊಂದು ಅಡ್ಡ ಬಂದ ಕಾರಣ ಏಕಾಏಕಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದ ಘಟನೆ ರಾಜ್ಯ ಹೆದ್ದಾರಿಯ ಬಟ್ಟಕೋಡಿ ಎಂಬಲ್ಲಿ ನಡೆದಿದೆ.


ಹಾವು ಕಾಣಿಸಿಕೊಂಡ ಕಾರಣ ಕಾರಿನ ಚಾಲಕ ಹಠಾತ್‌ ಬ್ರೇಕ್‌ ಹಾಕಿದ್ದು, ಹಿಂದೆಯೇ ಇದ್ದ ಕ್ವಾಲಿಸ್‌ ನಿಯಂತ್ರಣ ಕಳೆದುಕೊಂಡು ಮುಂದಿನ ಕಾರಿಗೆ ಢಿಕ್ಕಿ ಹೊಡೆಯಿತು. ಇದರ ಮಧ್ಯದಲ್ಲಿದ್ದ ಬೈಕ್‌ ಸವಾರ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು, ಕ್ವಾಲಿಸ್‌ ಪ್ರಯಾಣಿಕರಿಗೆ ಗಾಯವಾಗಿದ್ದು, ಬೈಕ್‌ ಜಖಂಗೊಂಡಿದೆ ಎನ್ನಲಾಗಿದೆ.

Scroll to Top