ಈಜಲು ತೆರಳಿದ್ದ ಯುವಕರಿಬ್ಬರು ನದಿ ನೀರಿನಲ್ಲಿ ಮುಳುಗಿ ಮೃತ್ಯು..!

(ನ್ಯೂಸ್ ಕಡಬ) neskadaba.com ಉಡುಪಿ, ಪೆ. 26. ಸೋಮೇಶ್ವರದ ಸೀತಾ ನದಿಯಲ್ಲಿ ಈಜಲು ಬಂದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿಯ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಬಳಿ ನಡೆದಿದೆ.

ಮೃತಪಟ್ಟವರನ್ನು ಕೊಪ್ಪ ಮೂಲದ ಡಾ. ದೀಪಕ್ ಮತ್ತು ಶಿವಮೊಗ್ಗ ಮೂಲದ ಶೈನು ಡೇನಿಯಲ್ ಎಂದು ಗುರುತಿಸಲಾಗಿದೆ. ಪ್ರವಾಸಕ್ಕೆಂದು ಬಂದಿದ್ದ ಮೂವರು ಗೆಳೆಯರ ತಂಡದ ಇಬ್ಬರು ಈಜು ಬಾರದೇ ಮುಳುಗಿರುವ ಸಾಧ್ಯತೆ ಇದೆ. ಹೆಬ್ರಿಗೆ ಪ್ರವಾಸಕ್ಕೆ ಬಂದು ವಾಪಾಸ್ಸಾಗುವಾಗ ನದಿಗೆ ಇಳಿದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Scroll to Top