ಕರಾವಳಿ

ಹೃದಯಾಘಾತಕ್ಕೆ ಚಿಕಿತ್ಸೆಗೆ ತೆರಳಿದ್ದ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಜು. 01. ಎದೆನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ವ್ಯಕ್ತಿ ಅಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆಯಲ್ಲಿ ಸೋಮವಾರದಂದು ರಾತ್ರಿ ನಡೆದಿದೆ‌. ಮೃತಪಟ್ಟವರನ್ನು ಕಲ್ಲಾಜೆ ಗಂಪದಕೋಡಿ ನಿವಾಸಿ ವಜ್ರಾಕ್ಷ ಪೂಜಾರಿ(53) ಎಂದು ಗುರುತಿಸಲಾಗಿದೆ.   ಆರೋಗ್ಯವಂತರಾಗಿದ್ದ ವಜ್ರಾಕ್ಷ ಪೂಜಾರಿ ಎಂದಿನಂತೆ ಸೋಮವಾರವೂ ಟ್ಯಾಪಿಂಗ್ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದಿದ್ದರು. ರಾತ್ರಿ ವೇಳೆ ಎದೆನೋವು ಕಾಣಿಸಿದ ಹಿನ್ನೆಲೆ ತನ್ನ ಸ್ಕೂಟರ್ ನಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಹೋಗಿ […]

ಹೃದಯಾಘಾತಕ್ಕೆ ಚಿಕಿತ್ಸೆಗೆ ತೆರಳಿದ್ದ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಝೆನ್ ಮಾರ್ಕ್ ಸೇವಾಸಿಂಧು ಸ್ಥಳಾಂತರಗೊಂಡು ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜೂ. 30. ಕಳೆದ ವರ್ಷ ಕಡಬದಲ್ಲಿ ಆರಂಭಗೊಂಡು ಕಾರ್ಯಾಚರಿಸುತ್ತಿದ್ದ “ಝೆನ್ ಮಾರ್ಕ್” ಡಿಜಿಟಲ್‌ ಸೇವಾ ಕೇಂದ್ರ ಇದೀಗ ಸೇವಾ ಕೇಂದ್ರದ ಜೊತೆಗೆ ಕಂಪ್ಯೂಟರ್ ಕೋಚಿಂಗ್ ಸೆಂಟರ್, ಎಜುಕೇಷನ್ ಕನ್ಸಲ್ಟೆಂಟ್ಸ್ ಸ್ಥಳಾಂತರಗೊಂಡು ಕಡಬ ಬಸ್ ನಿಲ್ದಾಣದ ಎದುರುಗಡೆ ತುಳಸಿ ಸ್ಟುಡಿಯೋ ಪಕ್ಕದಲ್ಲಿ ಉದ್ಘಾಟನೆಗೊಂಡಿತು. ‘ಸಾರ್ವಜನಿಕರಿಗೆ ಅತ್ಯವಶ್ಯವಾದ ಹತ್ತು ಹಲವಾರು ಸೇವೆಗಳು ನಮ್ಮ ಕೇಂದ್ರದಲ್ಲಿ ಸಿಗುತ್ತವೆ. ನಮ್ಮಲ್ಲಿ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಪಾನ್ ಕಾರ್ಡ್ ಇನ್ನಿತರ ಸೌಲಭ್ಯಗಳಿದ್ದು, ಜೊತೆಗೆ ಸ್ವ-ಉದ್ಯೋಗ, ಶಿಕ್ಷಣ, ನಾಗರಿಕ

ಕಡಬ: ಝೆನ್ ಮಾರ್ಕ್ ಸೇವಾಸಿಂಧು ಸ್ಥಳಾಂತರಗೊಂಡು ಶುಭಾರಂಭ Read More »

ಕರಾವಳಿ
crime, arrest, suspected

ಗ್ರಾಹಕರು ಅಡವಿಟ್ಟ ಚಿನ್ನ ಎಗರಿಸಿ 3.5 ಕೋಟಿ ಸಾಲ ಪಡೆದ ಸಹಕಾರ ಸಂಘದ ಮ್ಯಾನೇಜರ್‌!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 01. ಗ್ರಾಹಕರು ಅಡವಿಟ್ಟಿದ್ದ 6.5 ಕೆಜಿ ಚಿನ್ನವನ್ನು ಶಕ್ತಿನಗರ ವ್ಯವಸಾಯ ಸೇವಾ ಸಹಕಾರಿ ಸಂಘದ  ಮ್ಯಾನೇಜರ್ ಓರ್ವರು ಮತ್ತೊಂದು ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿರುವ ಘಟನೆ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.   ಪ್ರಮುಖ ಆರೋಪಿ ಸಹಕಾರಿ ಸಂಘದ ವ್ಯವಸ್ಥಾಪಕ ಪ್ರೀತೇಶ್ ಎಂದು ಗುರುತಿಸಲಾಗಿದೆ. ಹಾಗೂ ಇವರಿಗೆ ಸಹಾಯ ಮಾಡಿದ ಶೇಖ್ ಮೊಹಮ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ವ್ಯಕ್ತಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.  

ಗ್ರಾಹಕರು ಅಡವಿಟ್ಟ ಚಿನ್ನ ಎಗರಿಸಿ 3.5 ಕೋಟಿ ಸಾಲ ಪಡೆದ ಸಹಕಾರ ಸಂಘದ ಮ್ಯಾನೇಜರ್‌! Read More »

ಕರಾವಳಿ, ಕ್ರೈಮ್ ನ್ಯೂಸ್

ಅಂತರಾಷ್ಟ್ರೀಯ ಕ್ಷುದ್ರಗ್ರಹ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 01. 1908 ರ ಜೂನ್ 30 ರಂದು ಸೈಬೀರಿಯಾದ ತುಂಗುಸ್ಕಾ ಎಂಬ ಪ್ರದೇಶದಲ್ಲಿ ಕ್ಷುದ್ರಗ್ರಹವೊಂದು ಭೂಮಿಯೆಡೆಗೆ ಉರಿದು ಬೀಳುತ್ತಾ ಅಪ್ಪಳಿಸಿ ಅಪಾರ ಪ್ರಮಾಣದಲ್ಲಿ  ಹಾನಿ ಸಂಭವಿಸಿತ್ತು. ಇಂತಹ ಸಂಭವನೀಯ ಘಟನೆಗಳ ಬಗ್ಗೆ ಅರಿವು ಮೂಡಿಸಲು ವಿಶ್ವ ಸಂಸ್ಥೆಯು ಜೂನ್ 30 ನ್ನು ‘ಅಂತರಾಷ್ಟ್ರೀಯ ಕ್ಷುದ್ರಗ್ರಹ ದಿನ’ ಎಂದು ಅನುಮೋದಿಸಿ, ಕ್ಷುದ್ರಗ್ರಹಗಳಿಂದಾಗಬಹುದಾದ ಅಪಾಯಗಳ ಬಗ್ಗೆ ಜಾಗತಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಕರೆ ನೀಡಿದೆ. ಈ ದಿನಾಚರಣೆಯನ್ನು ಸೋಮವಾರದಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ

ಅಂತರಾಷ್ಟ್ರೀಯ ಕ್ಷುದ್ರಗ್ರಹ ದಿನಾಚರಣೆ Read More »

ಕರಾವಳಿ

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 01. 2025-26ನೇ ಸಾಲಿನ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಗಳು:- ಅರಿವು ಶೈಕ್ಷಣಿಕ ಸಾಲ ಯೋಜನೆ (Fresh Students) ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ.   ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ ನಾಗರೀಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಕಡಬ: ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಮಹಾಸಭೆ

(ನ್ಯೂಸ್ ಕಡಬ) newskadaba.com ಕಡಬ, ಜು. 01. ಒಕ್ಕಲಿಗ ಗೌಡ ಸೇವಾ ಸಂಘ(ರಿ.) ಕಡಬ ತಾಲೂಕು ಇದರ 2024-25ನೆ ಸಾಲಿನ ವಾರ್ಷಿಕ ಮಹಾಸಭೆಯು ಒಕ್ಕಲಿಗ ಗೌಡ ಸಮುದಾಯ ಭವನ ಹೊಸಮಠದಲ್ಲಿ ಸಂಘದ ಮಾತೃ ಸಮಿತಿ ಅಧ್ಯಕ್ಷರಾದ ಶ್ರೀ ಸುರೇಶ್ ಗೌಡ ಬೈಲು ಇವರ ಸಭಾಧ್ಯಕ್ಷತೆಯಲ್ಲಿ ಭಾನುವಾರದಂದು ನಡೆಯಿತು.   ಸಂಘದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನ ಹಾಗೂ ಈ ವರ್ಷ ನಡೆದ ಕಾರ್ಯಕ್ರಮಗಳ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು. ಸಂಘದ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವ

ಕಡಬ: ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಮಹಾಸಭೆ Read More »

ಕರಾವಳಿ

ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮ: ವಿವಿಧ ಸಾಲ ಯೋಜನೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 01. 2025-26 ನೇ ಸಾಲಿನ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮದಿಂದ ವಿವಿಧ ಸಾಲ ಯೋಜನೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವೆಬ್‍ಸೈಟ್ kacdc.Karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ. ಯೋಜನೆಗಳು: ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಬ್ಯಾಂಕ್‍ ಗಳ ಸಹಯೋಗದೊಂದಿಗೆ ಆರ್ಯ ವೈಶ್ಯ ಆಹಾರ ವಾಹಿನಿ/ ವಾಹಿನಿ ಯೋಜನೆ, ವಾಸವಿ ಜಲಶಕ್ತಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ. ಹೆಚ್ಚಿನ

ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮ: ವಿವಿಧ ಸಾಲ ಯೋಜನೆಗೆ ಅರ್ಜಿ ಆಹ್ವಾನ Read More »

ಕರಾವಳಿ

ರಾಜಭವನಕ್ಕೆ ಡಾ.ಚೂಂತಾರು ಭೇಟಿ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 01. ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಾಜ್ಯ ಶಾಖೆಯ ಕಾರ್ಯಕಾರಿ ಸಮಿತಿಗೆ ರಾಜ್ಯಪಾಲರಿಂದ ನಾಮ ನಿರ್ದೇಶನಗೊಂಡ ಡಾ.ಮುರಲೀ ಮೋಹನ್ ಚೂಂತಾರು ಅವರು ಸೋಮವಾರದಂದು ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಾದ ಶ್ರೀ ಪಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ರೆಡ್ ಕ್ರಾಸ್ ವಿಚಾರವಾಗಿ ಚರ್ಚೆ ನಡೆಸಿ ಅವರ ಬಳಿ‌ ಮಾರ್ಗದರ್ಶನ ಪಡೆದರು.

ರಾಜಭವನಕ್ಕೆ ಡಾ.ಚೂಂತಾರು ಭೇಟಿ..! Read More »

ಕರಾವಳಿ

ನರ್ಸರಿ/ಮಾಂಟೆಸ್ಸರಿ ಶಿಕ್ಷಕಿ ತರಬೇತಿ ಪಡೆಯಲು ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಸುವರ್ಣ ಅವಕಾಶ

(ನ್ಯೂಸ್ ಕಡಬ) newskadaba.com  ಕಡಬ, ಜೂ. 30. ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕನಸು ಕಾಣುವ ಯುವತಿ/ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡಲು ನೆರವಾಗುವ ಒಂದು ವರ್ಷದ ನರ್ಸರಿ /ಮೊಂಟೆಸ್ಸರಿ ಕೋರ್ಸ್‍ ನ್ನು ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ: ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, ಉದ್ಯೋಗ ಪಡೆಯುವಲ್ಲಿ ಸಹಕಾರ ನೀಡುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಆಸಕ್ತಿಯಿರುವ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆದಿರುವ ಮಹಿಳೆಯರು/ಗೃಹಿಣಿಯರು ಈ ತರಬೇತಿಯ

ನರ್ಸರಿ/ಮಾಂಟೆಸ್ಸರಿ ಶಿಕ್ಷಕಿ ತರಬೇತಿ ಪಡೆಯಲು ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಸುವರ್ಣ ಅವಕಾಶ Read More »

ಉದ್ಯೋಗ, ಕರಾವಳಿ

ಕಡಬ: ಭೂಮಿ ಕೇಂದ್ರದಲ್ಲಿ 4 ದಿನಗಳ ಕಾಲ ಪಹಣಿ ಮತ್ತು ಎಂಆರ್ ವಿತರಣೆ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಜೂ.30. ಭೂಮಿ‌ ತಂತ್ರಾಂಶದಲ್ಲಿ ಕಂದಾಯ ವರ್ಷವನ್ನು ಬದಲಾಯಿಸುವ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಭೂಮಿ ಕೇಂದ್ರದಲ್ಲಿ ಪಹಣಿ ಮತ್ತು ಎಂಆರ್ ವಿತರಣೆ ಸ್ಥಗಿತಗೊಳ್ಳಲಿದೆ. ಜುಲೈ 01 ರಿಂದ ಜುಲೈ 04 ರ ವರೆಗೆ ಕಂದಾಯ ವರ್ಷ ಬದಲಾವಣೆ ಮತ್ತು ಮುಂಗಾರು ಅವಧಿಯ ಪಹಣಿ ಡಿಜಿಟಲ್ ಸಹಿ‌ ಮಾಡಲಿರುವ ಕಾರಣದಿಂದ ಭೂಮಿ ಕೇಂದ್ರದ ಕೆಲಸಗಳು ಸ್ಥಗಿತಗೊಳ್ಳುವ ಕಾರಣ ಈ ಅವಧಿಯಲ್ಲಿ ಸಾರ್ವಜನಿಕರು ಆನ್‌ಲೈನ್ ಮೂಲಕ ಪಹಣಿ ಪಡೆದುಕೊಳ್ಳುವಂತೆ ಕಡಬ ತಾಲೂಕು ತಹಶೀಲ್ದಾರರ ಕಾರ್ಯಾಲಯ

ಕಡಬ: ಭೂಮಿ ಕೇಂದ್ರದಲ್ಲಿ 4 ದಿನಗಳ ಕಾಲ ಪಹಣಿ ಮತ್ತು ಎಂಆರ್ ವಿತರಣೆ ಸ್ಥಗಿತ Read More »

ಕರಾವಳಿ
Scroll to Top