ಪಿಕಪ್‌: ಕಾರು ಡಿಕ್ಕಿ: ವಾಹನ ಜಖಂ, ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ನ. 26. ಅರಂಬೂರು ಬಳಿ ಮಡಿಕೇರಿಯಿಂದ ಸುಳ್ಯ ಕಡೆಗೆ ತರಕಾರಿ ತುಂಬಿಕೊಂಡು ಬರುತ್ತಿರುವ ಪಿಕಪ್ ವಾಹನಕ್ಕೆ ಸುಳ್ಯ ಕಡೆಯಿಂದ ಪೆರಾಜೆ ಕಡೆಗೆ ಹೊಗುತ್ತಿದ್ದ ಅಲ್ಟೊಕಾರು ಡಿಕ್ಕಿಯಾಗಿ ಕಾರು ಮತ್ತು ಪಿಕಪ್ ಸ್ವಲ್ಪ ಜಖಂಗೊಂಡ ಘಟನೆ ನ 24 ರಂದು ರಾತ್ರಿ ಸಂಭವಿಸಿದೆ.

ಕಾರಿನ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತ ಕುರಿತು ಸುಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

 

Scroll to Top