ಕರಾವಳಿ

ಗಂಡನ ಮೇಲೆ ಕುದಿಯುವ ಎಣ್ಣೆ ಹಾಗೂ ಖಾರದ ಪುಡಿ ಎರಚಿದ ಪತ್ನಿ!

(ನ್ಯೂಸ್‌ ಕಡಬ) newskadaba.com,  ಅ.09 ನವದೆಹಲಿ: ಗಂಡ ತಮ್ಮ ಮನೆಯಲ್ಲಿ ಮಲಗಿ ನಿದ್ರಿಸುತ್ತಿದ್ದ ಸಮಯದಲ್ಲಿ  ಆತನ ಹೆಂಡತಿಯು ಅವನ ಮೇಲೆ ಕೊತ ಕೊತ ಕುದಿಯುವ ಎಣ್ಣೆ ಹಾಗೂ ಮೆಣಸಿನಪುಡಿಯನ್ನು ಸುರಿದಿರುವ ಆಘಾತಕಾರಿ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಪತಿ ದಿನೇಶ್‍ಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಕ್ಟೋಬರ್ 3 ರಂದು ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 28 ವರ್ಷದ ದಿನೇಶ್, ಔಷಧ ಕಂಪನಿಯೊಂದರಲ್ಲಿ ಕೆಲಸ […]

ಗಂಡನ ಮೇಲೆ ಕುದಿಯುವ ಎಣ್ಣೆ ಹಾಗೂ ಖಾರದ ಪುಡಿ ಎರಚಿದ ಪತ್ನಿ! Read More »

ಕರಾವಳಿ

ವ್ಯಕ್ತಿಯೊಬ್ಬರು ಮೊಬೈಲ್ ಅನ್ನು ಮನೆಯಲ್ಲಿಯೇ ಬಿಟ್ಟು ಕಣ್ಮರೆ – ಕೇಸ್ ದಾಖಲು

(ನ್ಯೂಸ್‌ ಕಡಬ) newskadaba.com,  ಅ.09 ಮಂಗಳೂರು: ಮೊಬೈಲ್ ಮನೆಯಲ್ಲಿ ಬಿಟ್ಟು ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಹಾಸನ ಅರಸೀಕೆರೆ ಮೂಲದ ದೇವರಾಜ್ (49) ಎಂದು ಗುರುತಿಸಲಾಗಿದೆ.. ಇವರು ಪಂಪ್ ವೆಲ್ ಸಮೀಪದ ಎಕ್ಕೂರಿನಲ್ಲಿ ವಾಸವಿದ್ದು, ಮನೆಯಲ್ಲಿ ಮೊಬೈಲ್ ಬಿಟ್ಟು ಸೆಪ್ಟೆಂಬರ್ 25ರಿಂದ ನಾಪತ್ತೆಯಾಗಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೊಬ್ಬರು ಮೊಬೈಲ್ ಅನ್ನು ಮನೆಯಲ್ಲಿಯೇ ಬಿಟ್ಟು ಕಣ್ಮರೆ – ಕೇಸ್ ದಾಖಲು Read More »

ಕರಾವಳಿ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕರ್ನಾಗ್‌ನಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚುವ ಶೋಧ ಕಾರ್ಯ

(ನ್ಯೂಸ್‌ ಕಡಬ) newskadaba.com,  ಅ.09  ಅನಂತ್‌ನಾಗ್‌: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನ ಕೊಕರ್ನಾಗ್ ಪ್ರದೇಶದ ಅರಣ್ಯಗಳಲ್ಲಿ ಭಯೋತ್ಪಾದಕರ ಪತ್ತೆಗಾಗಿ ನಡೆಯುತ್ತಿದ್ದ ಕೂಂಬಿಂಗ್ ಕಾರ್ಯಾಚರಣೆ ವೇಳೆ 2 ಜನ ಸೈನಿಕರು ಕಣ್ಮರೆಯಾಗಿದ್ದಾರೆ. ಸಂಪರ್ಕ ಕಳೆದುಕೊಂಡ ಇಬ್ಬರು ಸೈನಿಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ಬುಧವಾರ(ಅ.08) ತಿಳಿಸಿದ್ದಾರೆ.2 ದಿನಗಳ ಹಿಂದೆ ಕೊಕರ್ನಾಗ್‌ನ ಅಹ್ಲಾನ್ ಗಡೋಲ್ ಪ್ರದೇಶದಲ್ಲಿ ಭಯೋತ್ಪಾದಕರ ಗುಂಪು ಅಡಗಿಕೊಂಡಿರುವ ಮಾಹಿತಿಯ ಮೇರೆಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದ್ದಾರೆ. ಈ ಮಧ್ಯೆ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕರ್ನಾಗ್‌ನಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚುವ ಶೋಧ ಕಾರ್ಯ Read More »

ಕರಾವಳಿ

ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ವ್ಯಕ್ತಿಗೆ ನ್ಯಾಯಾಲಯ 29,000 ರೂ. ದಂಡ

(ನ್ಯೂಸ್‌ ಕಡಬ) newskadaba.com,  ಅ.09  ಮಂಗಳೂರು : ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ವ್ಯಕ್ತಿಗೆ 29,000 ರೂ. ದಂಡ ವಿದಿಸಿದೆ. ಮಾರುತಿ ಕಂಬಾಲ್ ದಂಡ ಪಾವತಿಸಬೇಕಾದ ವ್ಯಕ್ತಿ ಎಂದು ತಿಳಿದುಬಂದಿದೆ. ಜೆಎಂಎಫ್‌ಸಿ 4 ನ್ಯಾಯಾಲಯದ ಪ್ರಭಾರ ನ್ಯಾಯಾಧೀಶೆ ಶಿಲ್ಪ ಎಸ್ ಬ್ಯಾಡಗಿ ಅವರು ಮಾರುತಿ ಕಂಬಾಲ್‌ಗೆ ದಂಡ ವಿಧಿಸಿ ಆದೇಶ ನೀಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ವ್ಯಕ್ತಿಗೆ ನ್ಯಾಯಾಲಯ 29,000 ರೂ. ದಂಡ Read More »

ಕರಾವಳಿ

ಬೆಳಗಾವಿ : ಮದುವೆಯಾದ ನಾಲ್ಕೇ ತಿಂಗಳಲ್ಲಿ ಹೆಂಡತಿಯನ್ನು ಕೊಂದು ಮಂಚದೊಳಗಿಟ್ಟು ಗಂಡ ಪರಾರಿ

(ನ್ಯೂಸ್‌ ಕಡಬ) newskadaba.com,  ಅ.09  ಬೆಳಗಾವಿ: ಪತ್ನಿಯನ್ನು ಕೊಂದು ಶವವನ್ನು ಮಂಚದೊಳಗಿಟ್ಟು ಬೆಡ್ ಮುಚ್ಚಿ ಪತಿ ಪರಾರಿ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ. ಸಾಕ್ಷಿ ಕಂಬಾರ (20) ಕೊಲೆಯಾದ ಪತ್ನಿ. ಆಕಾಶ್ ಪರಾರಿಯಾಗಿರುವ ಪತಿ. ಮೂಡಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 4 ತಿಂಗಳ ಹಿಂದೆಯಷ್ಟೇ ಆಕಾಶ್ ಮತ್ತು ಸಾಕ್ಷಿ ಕಂಬಾರ ಮದುವೆ ಆಗಿತ್ತು. 3 ದಿನದ ಹಿಂದೆ ಸಾಕ್ಷಿ ಕಂಬಾರಳನ್ನು ಕೊಂದು ಮಂಚದೊಳಗೆ ಶವ ಬಚ್ಚಿಟ್ಟು ಮೊಬೈಲ್

ಬೆಳಗಾವಿ : ಮದುವೆಯಾದ ನಾಲ್ಕೇ ತಿಂಗಳಲ್ಲಿ ಹೆಂಡತಿಯನ್ನು ಕೊಂದು ಮಂಚದೊಳಗಿಟ್ಟು ಗಂಡ ಪರಾರಿ Read More »

ಕರಾವಳಿ

ಕೆಲವು ದಿನಗಳ ಬಳಿಕ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ

(ನ್ಯೂಸ್‌ ಕಡಬ) newskadaba.com,  ಅ.09  ಸುಳ್ಯ : ಕೆಲವು ದಿನಗಳ ಬಿಡುವಿನ ನಂತರ ಬುಧವಾರ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಸುಳ್ಯ ತಾಲೂಕಿನ ವಿವಿಧೆಡೆಗಳಲ್ಲಿ ಬುಧವಾರ(ಅ.08) ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನದ ಬಳಿಕ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆ ಸುರಿದಿದೆ. ಕರಾವಳಿ ಹಾಗೂ ಒಳನಾಡಿನ ಕೆಲ ಪ್ರದೇಶದಲ್ಲಿ ಮುಂದಿನ ಕೆಲವು ದಿನಗಳ ಕಾಲ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಹಾಗೂ

ಕೆಲವು ದಿನಗಳ ಬಳಿಕ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ Read More »

ಕರಾವಳಿ

‘ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ’- ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ಅ.08: ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಎಚ್ಚರಿಕೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪರಿಸರ, ಅರಣ್ಯ ಸಂರಕ್ಷಕರಿಗೆ ಮುಖ್ಯಮಂತ್ರಿ ಪದಕ ವಿತರಿಸಿ ಮಾತನಾಡಿದರು. ಸಾಕು ಹಸುವನ್ನು ತಿಂದಿದೆ ಎನ್ನುವ ಕಾರಣಕ್ಕೆ ಹುಲಿಗಳಿಗೆ ವಿಷ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಯಾರೇ ಅರಣ್ಯ

‘ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ’- ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ Read More »

ಕರಾವಳಿ

ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿ: ಜಾಲಿವುಡ್ ಆಡಳಿತ ಮಂಡಳಿ ಮನವಿ

(ನ್ಯೂಸ್‌ ಕಡಬ) newskadaba.com,  ಅ.08: ಮಾಲಿನ್ಯ ನಿಯಮ ಉಲ್ಲಂಘಿಸಿದ್ದಕ್ಕೆ ಬಿಗ್‌ಬಾಸ್ ಮನೆಗೆ ಬೀಗ ಜಡಿದ ಬೆನ್ನಲ್ಲೇ ರಾಮನಗರ ಡಿಸಿ ಕಚೇರಿಗೆ ಜಾಲಿವುಡ್ ಆಡಳಿತ ಮಂಡಳಿ ಭೇಟಿ ನೀಡಿ 15 ದಿನ ಕಾಲಾವಕಾಶ ಕೇಳಿ ಮನವಿ ಸಲ್ಲಿಸಿದೆ. ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್‌ಬಾಸ್ ಸೀಸನ್ 12ರ ಶೋ ನಡೆಯುತ್ತಿದ್ದು, ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡ್ತಿದ್ದಾರೆ. ಹೀಗೆ ಏಕಾಏಕಿ ಬಂದ್ ಮಾಡಿದರೆ ಕಾರ್ಮಿಕರ ಕೆಲಸಕ್ಕೆ ಕುತ್ತು ಬೀಳಲಿದೆ. ನಮ್ಮಿಂದ ತಪ್ಪಾಗಿದೆ, ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ ಎಂದು ಜಾಲಿವುಡ್

ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿ: ಜಾಲಿವುಡ್ ಆಡಳಿತ ಮಂಡಳಿ ಮನವಿ Read More »

ಕರಾವಳಿ

ಜಾತಿ ಗಣತಿ 83% ಪೂರ್ಣ ; ನಿನ್ನೆಯೇ ಮುಗಿಯಬೇಕಿದ್ದ ಸಮೀಕ್ಷೆ ವಿಸ್ತರಣೆ

(ನ್ಯೂಸ್‌ ಕಡಬ) newskadaba.com,  ಅ.08: ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಡಿ ಅ.7ರವರೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊರತುಪಡಿಸಿ ಶೇ. 83.22 ರಷ್ಟು ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಅ. 7ರಂದು ಸಮೀಕ್ಷೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದರೂ ಅನೇಕ ಜಿಲ್ಲೆಗಳಲ್ಲಿ ಸಮೀಕ್ಷೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯ ಅವಧಿಯನ್ನು ಅ.18ರವರೆಗೂ ವಿಸ್ತರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಅ.7 ರಂದು ಮಂಗಳವಾರ ಸಂಜೆ ವೇಳೆಗೆ 3,57,197 ಕುಟುಂಬಗಳ ಸಮೀಕ್ಷೆ ನಡೆದಿದೆ. ಒಟ್ಟು 1,19,65,700 ಕುಟುಂಬಗಳ

ಜಾತಿ ಗಣತಿ 83% ಪೂರ್ಣ ; ನಿನ್ನೆಯೇ ಮುಗಿಯಬೇಕಿದ್ದ ಸಮೀಕ್ಷೆ ವಿಸ್ತರಣೆ Read More »

ಕರಾವಳಿ

ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ಇಡಿ ದಾಳಿ

(ನ್ಯೂಸ್‌ ಕಡಬ) newskadaba.com,  ಅ.08: ಭೂತಾನ್ ವಾಹನಗಳ ಅಕ್ರಮ ಕಳ್ಳಸಾಗಣೆ ಪ್ರಕರಣದಡಿ ಇಡಿ ಅಧಿಕಾರಿಗಳು ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟಿ , ದುಲ್ಕರ್ ಸಲ್ಮಾನ್ , ಪೃಥ್ವಿರಾಜ್ ಹಾಗೂ ಅಮಿತ್ ಚಕ್ಕಲಕಲ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಚೆನ್ನೈನಲ್ಲಿರುವ ಮಮ್ಮುಟ್ಟಿ ಅವರ ಚಲನಚಿತ್ರ ನಿರ್ಮಾಣ ಕಂಪನಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ನಡೆಸುತ್ತಿದ್ದಾರೆ. ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನಲ್ಲಿರುವ

ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ಇಡಿ ದಾಳಿ Read More »

ಕರಾವಳಿ
Scroll to Top