ಹಾಲು ಸಾಗಾಟದ ಪಿಕಪ್ ಢಿಕ್ಕಿ 600 ಲೀ. ಹಾಲು ರಸ್ತೆಪಾಲು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ. 18. ಹಾಲು ಸಾಗಾಟದ ಪಿಕಪ್‌ ವಾಹನಕ್ಕೆ ಇನ್ನೊಂದು ಪಿಕಪ್‌ ವಾಹನ ಢಿಕ್ಕಿಯಾಗಿ ಹಾಲಿನ ವಾಹನ ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಬಾಳಿಲದಲ್ಲಿ ಮಂಗಳವಾರದಂದು ಸಂಭವಿಸಿದೆ.

ಗಾಯಗೊಂಡ ಪಿಕಪ್ ಚಾಲಕನನ್ನು ಸಯ್ಯದ್‌ ಅಬ್ದುಲ್‌ ಚೆನ್ನಾವರ ಎಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಪಿಕಪ್ ನಲ್ಲಿದ್ದ ಹಾಲಿನ ಕ್ಯಾನ್‌ಗಳು ಚೆಲ್ಲಾಪಿಲ್ಲಿಯಾಗಿದ್ದು, ಸುಮಾರು 600 ಲೀಟರ್‌ ಹಾಲು ರಸ್ತೆ ಪಾಲಾಗಿದೆ. 4 ಹಾಲಿನ ಸೊಸೈಟಿಗಳಲ್ಲಿ ಸಂಗ್ರಹವಾದ ಸುಮಾರು 600 ಲೀಟರ್‌ ಹಾಲು ತುಂಬಿದ್ದ 20 ಕ್ಯಾನ್‌ಗಳನ್ನು ಹೇರಿಕೊಂಡು ಬೆಳ್ಳಾರೆಯತ್ತ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.

Scroll to Top