ಕರಾವಳಿ

ಉಡುಪಿ: ಅಣ್ಣ ತಂಗಿ ನೇಣಿಗೆ ಶರಣು-ಕಾರಣ ನಿಗೂಢ

(ನ್ಯೂಸ್‌ ಕಡಬ) newskadaba.com,  ಅ.18: ಅಣ್ಣ-ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಲೇಬರ್ ಕಾಲೋನಿಯ ಜೋಪಡಿಯಲ್ಲಿ ನಡೆದಿದೆ. ಮಲ್ಲೇಶ್ (23) ಮತ್ತು ಪವಿತ್ರಾ (17) ಮೃತರಾಗಿದ್ದು, ಪವಿತ್ರಾ ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು ಅಕ್ಕ ಮತ್ತು ತಂಗಿಯರ ಮಕ್ಕಳಾಗಿರೋ ಇವರಿಬ್ಬರು ಯಾಕೆ ಇಂತಹ ನಿರ್ಧಾರ ತೆಗೆದುಕೊಂಡರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಬೇರೊಂದು ಮನೆಯಲ್ಲಿ ಕೆಲಸ ಮಾಡಿ, ಉಡುಪಿಯ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಪವಿತ್ರಾ ಪ್ರಥಮ […]

ಉಡುಪಿ: ಅಣ್ಣ ತಂಗಿ ನೇಣಿಗೆ ಶರಣು-ಕಾರಣ ನಿಗೂಢ Read More »

ಕರಾವಳಿ, ಕ್ರೈಮ್ ನ್ಯೂಸ್

ಭಾರತದ ಸ್ವದೇಶಿ ಯುದ್ಧ ವಿಮಾನ ತೇಜಸ್ ಎಂಕೆ1ಎ -ಮೊದಲ ಹಾರಾಟ ಯಶಸ್ಸು

(ನ್ಯೂಸ್‌ ಕಡಬ) newskadaba.com,  ಅ.18 ನಾಸಿಕ್ : ಯುದ್ಧ ವಿಮಾನ ತೇಜಸ್ ಎಂಕೆ1ಎ ಇಂದು ತನ್ನ ಮೊದಲ ಹಾರಾಟ ನಡೆಸಿದೆ. ನಾಸಿಕ್‌ನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ವಿಮಾನ ಉತ್ಪಾದನಾ ವಿಭಾಗದಲ್ಲಿ ಈ ಹಾರಾಟ ನಡೆಯಿತು. ಭಾರತದಲ್ಲಿ ಯುದ್ಧ ವಿಮಾನ ತಯಾರಿಕೆಯ ಅಭಿವೃದ್ಧಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ರಾಜನಾಥ್ ಸಿಂಗ್ ಅವರು LCA ಎಂಕೆ1ಎಯ ಮೂರನೇ ಉತ್ಪಾದನಾ ಘಟಕ ಮತ್ತು ಎಚ್‌ಟಿಟಿ-40

ಭಾರತದ ಸ್ವದೇಶಿ ಯುದ್ಧ ವಿಮಾನ ತೇಜಸ್ ಎಂಕೆ1ಎ -ಮೊದಲ ಹಾರಾಟ ಯಶಸ್ಸು Read More »

ಕರಾವಳಿ

ಕಾರಣೀಕ ಕ್ಷೇತ್ರ ಬಂಟ್ವಾಳದ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದಲ್ಲಿ ಹೊಸ ಅಕ್ಕಿ ಅಗೆಲು ಸೇವೆ

(ನ್ಯೂಸ್‌ ಕಡಬ) newskadaba.com,  ಅ.18 ಬಂಟ್ವಾಳ: ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದಲ್ಲಿ ಅ.17 ರಂದು ಶುಕ್ರವಾರ ಮಧ್ಯಾಹ್ನ ಹೊಸ ಅಕ್ಕಿ ಅಗೆಲು ಸೇವೆ ನಡೆಯಿತು.ಪ್ರತೀ ವರ್ಷ ಕಾವೇರಿ ಸಂಕ್ರಮಣದಂದು ಕ್ಷೇತ್ರದಲ್ಲಿ ಹೊಸ ಅಕ್ಕಿಯ ಅಗೆಲು ಸೇವೆ ನಡೆಯುತ್ತದೆ. ಊರ ಪರ ಊರ ಭಕ್ತರು ಪುದ್ದಾರ್ ಅಗೆಲು ಸೇವೆಗೆ ವಿವಿಧ ಬಗೆಯ ತರಕಾರಿಗಳನ್ನು ನೀಡುತ್ತಾರೆ . ಈ ದಿನ ಅಗೆಲು ಸೇವೆಯಲ್ಲಿ ತರಕಾರಿಗಳನ್ನು ಬಿಡಿಸುವುದು ವಿಶೇಷವಾಗಿದೆ. ಇಲ್ಲಿ ಇತರೆ ದಿನಗಳಲ್ಲಿ ನಡೆಯುವ ಅಗೆಲು ಸೇವೆಯಂತೆ ದೈವಕ್ಕೆ ಅಗೆಲು ಸೇವೆ ಈ

ಕಾರಣೀಕ ಕ್ಷೇತ್ರ ಬಂಟ್ವಾಳದ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದಲ್ಲಿ ಹೊಸ ಅಕ್ಕಿ ಅಗೆಲು ಸೇವೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಯುವಕರ ನಡುವೆ ಘರ್ಷಣೆ – ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ಅ.17 ಬಂಟ್ವಾಳ : ಗ್ರಾಮದ ಮಂಚಿಕಟ್ಟೆ ಎಂಬ ಸ್ಥಳದಲ್ಲಿ ಯುವಕರ ಗುಂಪೊಂದು ಸಾರ್ವಜನಿಕವಾಗಿ ಗಲಾಟೆ ಮಾಡಿದ್ದು, ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ, ವಿಜೇತ್, ರಕ್ಷಿತ್ ಕೊಟ್ಟಾರಿ, ಪುಷ್ಪರಾಜ್, ಅಜಯ್, ಜಮೀರ್ ಮತ್ತು ಮೊಹಮ್ಮದ್ ಮುಸ್ತಫಾ ಎಂಬ ಯುವಕರ ಗುಂಪು ತೀವ್ರ ವಾಗ್ವಾದದಲ್ಲಿ ತೊಡಗಿದ್ದರು. ಅವರು ಅವಾಚ್ಯ ಶಬ್ದಗಳನ್ನು ಬಳಸಿ ಸಾರ್ವಜನಿಕ ಶಾಂತಿ ಮತ್ತು ಕೋಮು ಸಾಮರಸ್ಯವನ್ನು ಕದಡುವ ರೀತಿಯಲ್ಲಿ ಹೊಡೆದಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಬಂಟ್ವಾಳ

ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಯುವಕರ ನಡುವೆ ಘರ್ಷಣೆ – ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಟೋ ರಿಕ್ಷಾಕ್ಕೆ ಲಾರಿ ಢಿಕ್ಕಿ; ಚಾಲಕ ಸಾವು

(ನ್ಯೂಸ್‌ ಕಡಬ) newskadaba.com,  ಅ.17 ಪಡುಬಿದ್ರೆ: ಲಾರಿಯೊಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಬೈಪಾಸ್ ಬಳಿ ಶುಕ್ರವಾರ (ಅ 16) ಬೆಳಗ್ಗೆ ನಡೆದಿದೆ. ಹೆಜಮಾಡಿ ಮಾಸ್ತಿಕಟ್ಟೆ ನಿವಾಸಿ ರಫೀಕ್ (37) ಮೃತ ದುರ್ದೈವಿ. ರಫೀಕ್ ಶುಕ್ರವಾರ ಮುಂಜಾನೆ ಮನೆಯಿಂದ ಮಸೀದಿಗೆ ರಿಕ್ಷಾದಲ್ಲಿ ತೆರಳಿದ್ದರು. ಈ ವೇಳೆ ಹೆಜಮಾಡಿ ಬೈಪಾಸ್ ಬಳಿ ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಚಾಲಕ

ಆಟೋ ರಿಕ್ಷಾಕ್ಕೆ ಲಾರಿ ಢಿಕ್ಕಿ; ಚಾಲಕ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರ್ಕಳದಲ್ಲಿ ಕೋಟ್ಯಂತರ ಮೌಲ್ಯದ ಅಕ್ರಮ ಪಟಾಕಿ ದಾಸ್ತಾನು; ಮೂವರು ಆರೆಸ್ಟ್

(ನ್ಯೂಸ್‌ ಕಡಬ) newskadaba.com,  ಅ.17 ಕಾರ್ಕಳ: ದೀಪಾವಳಿ ಹಬ್ಬದ ಸಿದ್ಧತೆ ಹಿನ್ನೆಲೆಯಲ್ಲಿ, ಕಾರ್ಕಳ ತಾಲೂಕಿನ ಮಿಯಾರಿನಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಸಂಗ್ರಹಿಸಿದ್ದ ಮೂವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದು, ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಮಿಯಾರು ನಿವಾಸಿಗಳಾದ ಸತ್ಯೇಂದ್ರ ನಾಯಕ್ (70), ಶ್ರೀಕಾಂತ್ ನಾಯಕ್ (37) ಮತ್ತು ರಾಮಾನಂದ ನಾಯಕ್ (48) ಎಂದು ಗುರುತಿಸಲಾಗಿದೆ. ಈ ಮೂವರು ಯಾವುದೇ ಪರವಾನಗಿ ಇಲ್ಲದೆ ಮತ್ತು ಮಾನವ ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ಸ್ಫೋಟಕ ಪಟಾಕಿಗಳನ್ನು ಸಂಗ್ರಹಿಸಿದ್ದರು

ಕಾರ್ಕಳದಲ್ಲಿ ಕೋಟ್ಯಂತರ ಮೌಲ್ಯದ ಅಕ್ರಮ ಪಟಾಕಿ ದಾಸ್ತಾನು; ಮೂವರು ಆರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾವಿ ಶಿಕ್ಷಕರಿಗೆ ಆನ್‌ಲೈನ್‌ ಮೂಲಕ ಶಿಕ್ಷಕರ ಅರ್ಹತಾ ಪರೀಕ್ಷೆ

(ನ್ಯೂಸ್‌ ಕಡಬ) newskadaba.com,  ಅ.17 ಶಿಕ್ಷಕರ ಅರ್ಹತಾ ಪರೀಕ್ಷೆ ಅಂದರೆ ಟಿಇಟಿ ಇನ್ನು ಮುಂದೆ ಆನ್‌ಲೈನ್‌ನಲ್ಲಿ ನಡೆಯಲಿದೆ. ಆಫ್‌ಲೈನ್ ಪರೀಕ್ಷೆಗೆ ವಿದಾಯ ಹೇಳಿ, ಪಾರದರ್ಶಕತೆ ಮತ್ತು ವೇಗಕ್ಕಾಗಿ ಈ ಬದಲಾವಣೆಯನ್ನು ಮಾಡಲಾಗುತ್ತಿದೆ. ಕಂಪ್ಯೂಟರ್ ಆಧರಿತ ಪರೀಕ್ಷೆಗೆ ಸರಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಬಳಿಕ ಪರೀಕ್ಷೆ ನಡೆಸುವ ಏಜೆನ್ಸಿಯನ್ನು ಅಂತಿಮಗೊಳಿಸಲಾಗುತ್ತದೆ. ಇದರಿಂದ ಅರ್ಹ ಪ್ರತಿಭಾವಂತರು ಆಯ್ಕೆಯಾಗಲು ಅನುಕೂಲ ಆಗಲಿದೆ.   ಬಿ.ಎಡ್‌ ಪದವೀಧರರು ಇನ್ಮುಂದೆ ಆನ್‌ಲೈನ್‌ ಮೂಲಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಬೇಕಿದೆ. ಆಫ್‌ಲೈನ್‌

ಭಾವಿ ಶಿಕ್ಷಕರಿಗೆ ಆನ್‌ಲೈನ್‌ ಮೂಲಕ ಶಿಕ್ಷಕರ ಅರ್ಹತಾ ಪರೀಕ್ಷೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಸೇವೆ ಪ್ರಾರಂಭಿಸಲು ಒತ್ತಾಯಿಸಿ ಪ್ರತಿಭಟನೆ

(ನ್ಯೂಸ್‌ ಕಡಬ) newskadaba.com,  ಅ.17 ಮಂಗಳೂರು: ಮೀನುಗಾರರು ಅತ್ಯಧಿಕ ಸಂಖ್ಯೆಯಲ್ಲಿ ಇರುವ ಬಂದರು ಪ್ರದೇಶದಲ್ಲಿ ನಿರ್ಮಿಸಿಕೊಡಬೇಕಿದ್ದ ಇಂದಿರಾ ಕ್ಯಾಂಟೀನನ್ನು ತೆರೆಯದೆ ನಿರ್ಲಕ್ಷ್ಯ ಮಾಡಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ, ಕೂಡಲೇ ಇಂದಿರಾ ಕ್ಯಾಂಟೀನ್ ಸೇವೆ ಆರಂಭಿಸಲು ಒತ್ತಾಯಿಸಿ ಹಳೆ ಬಂದರು ಹಳೆ ಮುನ್ಸಿಪಲ್ ಕಚೇರಿ ಬಳಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಎದುರು ಬಂದರು ಶ್ರಮಿಕರ ಸಂಘ ಮತ್ತು ಡಿವೈಎಫ್ಐ ಬಂದರು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಡಿವೈಎಫ್ಐ ಜಿಲ್ಲಾಧ್ಯಕ್ಷರೂ, ಬಂದರು ಶ್ರಮಿಕರ ಸಂಘದ ಅಧ್ಯಕ್ಷರೂ ಆಗಿರುವ ಬಿ.ಕೆ ಇಮ್ತಿಯಾಜ್

ಮಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಸೇವೆ ಪ್ರಾರಂಭಿಸಲು ಒತ್ತಾಯಿಸಿ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳದಲ್ಲಿ ಎಂಡಿಎಂಎ ಸಹಿತ ಒಬ್ಬ ಆರೆಸ್ಟ್

(ನ್ಯೂಸ್‌ ಕಡಬ) newskadaba.com,  ಅ.17 ಬಂಟ್ವಾಳ : ಪಾಣೆಮಂಗಳೂರು ಸ್ಮಶಾನ ರಸ್ತೆಯ ಬಳಿ ಅಕ್ಟೋಬರ್ 15 ರಂದು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಎಂಡಿಎಂಎ ಹೊಂದಿದ್ದ ಆರೋಪದ ಮೇಲೆ ಬಂಟ್ವಾಳ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಮಾಹಿತಿಯ ಮೇರೆಗೆ ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಮತ್ತು ಅವರ ತಂಡ ಸ್ಥಳಕ್ಕೆ ತಲುಪಿದಾಗ ಸ್ಮಶಾನದ ಸಮೀಪ ನಿಲ್ಲಿಸಿದ್ದ ಆಟೋರಿಕ್ಷಾ (ಕೆಎ-19-ಡಿ-1806) ಪತ್ತೆಯಾಗಿದೆ. ಅವರನ್ನು ಬಂಟ್ವಾಳ ತಾಲೂಕಿನ ಮೊಹಮ್ಮದ್ ಇಮ್ತಿಯಾಜ್ (40) ಎಂದು ಗುರುತಿಸಲಾಗಿದೆ. ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ

ಬಂಟ್ವಾಳದಲ್ಲಿ ಎಂಡಿಎಂಎ ಸಹಿತ ಒಬ್ಬ ಆರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

1971 ರ ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಯುದ್ಧ ವೀರ ಗರೊಡಿ ತಿಮ್ಮಪ್ಪ ಆಳ್ವರವರು ವಿಧಿವಶ

(ನ್ಯೂಸ್‌ ಕಡಬ) newskadaba.com,  ಅ.17 ಮಂಗಳೂರು: ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಯುದ್ಧ ವೀರ ತಿಮ್ಮಪ್ಪ ಆಳ್ವ(85) ಗುರುವಾರ(ಅ.16) ಸಂಜೆ ಮಂಗಳೂರಿನ ಲೋಹಿತ್ ನಗರದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ಅವರ ಅನುಭವ ಕಥನ ಗರೋಡಿ ಮನೆಯಿಂದ ಸೇನಾ ಗರಡಿಗೆ ಪ್ರಕಟವಾಗಿತ್ತು. ತುಳುನಾಡಿನ ಕ್ರಷಿ ಕುಟುಂಬವೊಂದರಲ್ಲಿ ಜನಿಸಿದ ಯುವಕ ದೇಶಕಾಯುವ ಸೈನಿಕನಾಗಿ 1971ರ ಯುದ್ಧದಲ್ಲಿ ಹೆಲಿಕಾಫ್ಟರ್ ನಲ್ಲಿ ಯುದ್ಧ ಶಿಬಿರಕ್ಕೆ ಪ್ರಯಾಣಿಸುವ ವೇಳೆ ಪಾಕ್ ಸೈನಿಕರ ಫಿರಂಗಿ ದಾಳಿಗೆ ತುತ್ತಾಗಿ ಚಿತ್ತಗಾಂಗ್ ಪ್ರದೇಶದ ಕಾಡಿನಲ್ಲಿ ಬಿದ್ದು ಜೀವನ್ಮರಣ

1971 ರ ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಯುದ್ಧ ವೀರ ಗರೊಡಿ ತಿಮ್ಮಪ್ಪ ಆಳ್ವರವರು ವಿಧಿವಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top