ಕರಾವಳಿ

ಮಂಗಳೂರು: ಹೊರಲವಯದ ಪಿಲಿಕುಳ ನಿಸರ್ಗಧಾಮ ಕಚೇರಿಗೆ ಲೋಕಾಯುಕ್ತರು ದಾಳಿ

(ನ್ಯೂಸ್‌ ಕಡಬ) newskadaba.com,  ಅ.17  ಮಂಗಳೂರು :  ಪಿಲಿಕುಳ ನಿಸರ್ಗಧಾಮ ಕಚೇರಿಗೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ಡಾರೆ. ಡಿ ವೈ ಎಸ್ ಪಿ ಡಾ. ಗಾನ ಪಿ ಕುಮಾರ್ ನೇತೃತ್ವದ ತಂಡವು ಪ್ರಾಧಿಕಾರದ ಆಡಳಿತದಲ್ಲಿ ಸಾಕಷ್ಟು ಲೋಪದೋಷ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆಸಿದೆ. ಅಮುದಾನ ದುರುಪಯೋಗ, ಆದಾಯ ಮತ್ತು ವೆಚ್ಚದ ಬಗ್ಗೆ ಪರಿಶೀಲನೆ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ, ಮೃಗಾಲಯದ ಪ್ರಾಣಿಗಳ ಆಹಾರ […]

ಮಂಗಳೂರು: ಹೊರಲವಯದ ಪಿಲಿಕುಳ ನಿಸರ್ಗಧಾಮ ಕಚೇರಿಗೆ ಲೋಕಾಯುಕ್ತರು ದಾಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಿಮಿಷಾ ಪ್ರಿಯಾ ಪ್ರಕರಣ : ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ – ಹೊಸ ಮಧ್ಯವರ್ತಿ ಪ್ರವೇಶ

(ನ್ಯೂಸ್‌ ಕಡಬ) newskadaba.com,  ಅ.16- ಯೆಮೆನ್‌ನಲ್ಲಿ ಕೊಲೆ ಆರೋಪಕ್ಕೆ ಗುರಿಯಾಗಿರುವ ಭಾರತೀಯ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಬಿಡುಗಡೆಗೊಳಿಸುವ ಕುರಿತು ನಡೆಯುತ್ತಿರುವ ಮಾತುಕತೆಗಾಗಿ ಹೊಸ ಮಧ್ಯವರ್ತಿಯೊಬ್ಬರನ್ನು ನೇಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬುಧವಾರ ಮಾಹಿತಿ ನೀಡಿದೆ. ಈ ಮೊದಲು, ಅರ್ಜಿ ಸಲ್ಲಿಸಿದ್ದ ಕೆ.ಎ. ಪೌಲ್ ಅವರೇ ಮಧ್ಯವರ್ತಿಯೇ? ಎಂಬ ನ್ಯಾಯಾಲಯದ ಪ್ರಶ್ನೆಗೆ, ಕೇಂದ್ರ ಸರ್ಕಾರ “ಅವರು ನೇಮಕಗೊಂಡವರಲ್ಲ” ಎಂಬ ಸ್ಪಷ್ಟನೆ ನೀಡಿದೆ. ಈ ಪ್ರಕರಣದ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಕೇಂದ್ರ

ನಿಮಿಷಾ ಪ್ರಿಯಾ ಪ್ರಕರಣ : ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ – ಹೊಸ ಮಧ್ಯವರ್ತಿ ಪ್ರವೇಶ Read More »

ಕರಾವಳಿ

ಬೆಳ್ತಂಗಡಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ಅ.16 ಬೆಳ್ತಂಗಡಿ: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೆಳ್ತಂಗಡಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಸಾನ್ವಿ(17) ಎಂಬಾಕೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ಯಶೋಧರ ಶೆಟ್ಟಿ ಅವರ ಪುತ್ರಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಸಾನ್ವಿ ಶೆಟ್ಟಿ ಕಳೆದ ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಈಕೆ ತಾಯಿ ರೇಖಾ, ಸಹೋದರ ಸುಹಾನ್ ಅವರನ್ನು ಅಗಲಿದ್ದಾರೆ  

ಬೆಳ್ತಂಗಡಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೆಡಿಕಲ್ ಎಮರ್ಜೆನ್ಸಿ: ಬೆಂಗಳೂರಿನಲ್ಲಿ ಡ್ರೋನ್ ಸೇವೆ ಪ್ರಾರಂಭ

(ನ್ಯೂಸ್‌ ಕಡಬ) newskadaba.com,  ಅ.16 ಬೆಂಗಳೂರು: ವೈದ್ಯಕೀಯ ಅಗತ್ಯ ವಸ್ತುಗಳು, ಔಷಧ , ಪರಿಕರಗಳನ್ನು ಡ್ರೋನ್‌ ಮೂಲಕ ವಿತರಣೆ ಮಾಡುವ ವಿಶೇಷ “ಪೈಲೆಟ್‌ ಪ್ರಾಜೆಕ್ಟ್‌”ಗೆ ಏರ್‌ಬೌಂಡ್‌ ಸಂಸೈಯು ನಾರಾಯಣ ಹೆಲ್ತ್‌ನೊಂದಿಗೆ ಪಾಲುದಾರಿಗೆ ಘೋಷಿಸಿದೆ. ಏರ್‌ಬೌಂಡ್‌ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಏರ್‌ಬೌಂಡ್‌ನ ಸಂಸ್ಥಾಪಕ ಮತ್ತು ಸಿಇಒ ನಮನ್ ಪುಷ್ಪ್, ವೈದ್ಯಕೀಯ ಅಗತ್ಯ ವಸ್ತುಗಳನ್ನು ಪೂರೈಸುವ ಸಮಯ ಅತಿ ಪ್ರಾಮುಖ್ಯವಾದದ್ದು. ಈ ಸಂಚಾರ ದಟ್ಟಣೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಅಗತ್ಯವಸ್ತುಗಳನ್ನು ತಲುಪಿಸುವುದು ಕಷ್ಟಕರ. ಮಾನವರಹಿತ ವೈಮಾನಿಕ ವಾಹನ

ಮೆಡಿಕಲ್ ಎಮರ್ಜೆನ್ಸಿ: ಬೆಂಗಳೂರಿನಲ್ಲಿ ಡ್ರೋನ್ ಸೇವೆ ಪ್ರಾರಂಭ Read More »

ಕರಾವಳಿ

ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಭಾಗವಹಿಸಲು ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿ ನಿರಾಕರಣೆ

(ನ್ಯೂಸ್‌ ಕಡಬ) newskadaba.com,  ಅ.16- ಕರ್ನಾಟಕ ರಾಜ್ಯ ಸರಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ಇನ್ಫೋಸಿಸ್‌‍ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ನಿರಾಕರಿಸಿದ್ದಾರೆ. ನಾವು ಹಿಂದುಳಿದ ವರ್ಗದ ಯಾವ ಜಾತಿಗೂ ಸೇರುವವರಲ್ಲ. ಆದ್ದರಿಂದ ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಆದ್ದರಿಂದ ನಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಅಕ್ಟೋಬರ್‌ 10ರಂದು ಸುಧಾಮೂರ್ತಿ ದಂಪತಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸ್ವಯಂ ದೃಢೀಕರಣ

ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಭಾಗವಹಿಸಲು ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿ ನಿರಾಕರಣೆ Read More »

ಕರಾವಳಿ

ಶಕ್ತಿ ವಸತಿ ಶಾಲೆಗೆ “ಡೈನಾಮಿಕ್ ಸ್ಕೂಲ್ ಅವಾರ್ಡ್-2025” ಪ್ರಶಸ್ತಿ

(ನ್ಯೂಸ್‌ ಕಡಬ) newskadaba.com ಮಂಗಳೂರು, ಅ. 16. ಶಕ್ತಿ ವಸತಿ ಶಾಲೆಗೆ ಮೈಸೂರಿನ ದಿ|ರಾಡಿಸನ್ ಬ್ಲೂ ನಲ್ಲಿ ಎಜ್ಯುಕೇಶನ್ ನ್ಯೂಸ್ ನೆಟ್‍ ವರ್ಕ್ ಆಯೋಜಿಸಿದ ಕರ್ನಾಟಕ ಎಜ್ಯುಕೇಟರ್ಸ್ ಸಮ್ಮಿಟ್ 2025ನಲ್ಲಿ “ಡೈನಾಮಿಕ್ ಸ್ಕೂಲ್ ಅವಾರ್ಡ್-2025” ಎಂಬ ಪ್ರತಿಷ್ಠಿತ ಮಾನ್ಯತೆಯ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿನ ಶ್ರೇಷ್ಠತೆಗಾಗಿ ನೀಡಲಾಗಿದೆ.   ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಶ್ರೀಮತಿ. ಬಬಿತಾ ಸೂರಜ್ ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.

ಶಕ್ತಿ ವಸತಿ ಶಾಲೆಗೆ “ಡೈನಾಮಿಕ್ ಸ್ಕೂಲ್ ಅವಾರ್ಡ್-2025” ಪ್ರಶಸ್ತಿ Read More »

ಕರಾವಳಿ

ಸಮೀಕ್ಷೆಗೆ ಬಾಕಿ: ನಗರಪಾಲಿಕೆ ಸಹಾಯವಾಣಿ ಸಂಪರ್ಕಿಸಲು ಸೂಚನೆ

(ನ್ಯೂಸ್‌ ಕಡಬ) newskadaba.com ಮಂಗಳೂರು, ಅ.16. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಮಂಗಳೂರು ತಾಲೂಕಿನಾದ್ಯಂತ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಅದರಂತೆ ಸಮೀಕ್ಷೆಯಲ್ಲಿ ಭಾಗವಹಿಸದ ಸಾರ್ವಜನಿಕರು ಪಾಲಿಕೆಯ ಮನವಿಗೆ ಸ್ಪಂದಿಸಿ ಸಹಾಯವಾಣಿಗೆ ಸಂಪರ್ಕಿಸುವ ಮೂಲಕ ಬಹಳಷ್ಟು ನಾಗರೀಕರು ಗಣತಿ ಕಾರ್ಯಕ್ಕೆ ಮಾಹಿತಿ ನೀಡಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಅಕ್ಟೋಬರ್ 18ರ ಒಳಗಾಗಿ ಬಾಕಿ ಉಳಿದಿರುವ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿದ್ದು ಹಾಗೂ ಕೊನೆಯ 3 ದಿನಗಳು ಬಾಕಿ ಉಳಿದಿರುವುದರಿಂದ ಗಣತಿ ಕಾರ್ಯಕ್ಕೆ

ಸಮೀಕ್ಷೆಗೆ ಬಾಕಿ: ನಗರಪಾಲಿಕೆ ಸಹಾಯವಾಣಿ ಸಂಪರ್ಕಿಸಲು ಸೂಚನೆ Read More »

ಕರಾವಳಿ

ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟಕ್ಕೆ ಆಯ್ಕೆ

(ನ್ಯೂಸ್‌ ಕಡಬ) newskadaba.com ಅ.16. ದ.ಕ.ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ವಾರ್ಷಿಕ ಮಹಾಸಭೆ ಬಿಜೈ ಕಚೇರಿಯಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಎಮ್.ಜೆ.ಸಾಲ್ಯಾನ್ ನೇಮಕಗೊಂಡರು. ಅಧ್ಯಕ್ಷರಾಗಿ ಸುನಂದ ಕುಂಬ್ಳೆ, ಕಾರ್ಯದರ್ಶಿಯಾಗಿ ಡಿ.ಆರ್.ಸುನಂದ ದಂಬೆಕೋಡಿ, ಖಜಾಂಚಿಯಾಗಿ ಜಯಪ್ರಕಾಶ್, ಜತೆ ಕಾರ್ಯದರ್ಶಿಯಾಗಿ ರಾಯಿ ರಾಜ್ ಕುಮಾರ್ ಹಾಗೂ ಇಂದ್ರಾವತಿ ಆಯ್ಕೆಯಾದರು. ರಫೀಕ್ ಕುಕ್ಕಾಡಿ ಸ್ವಾಗತಿಸಿದರು.

ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟಕ್ಕೆ ಆಯ್ಕೆ Read More »

ಕರಾವಳಿ

ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿ

(ನ್ಯೂಸ್‌ ಕಡಬ) newskadaba.com ಅ.16. ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ.)ಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಅಭ್ಯರ್ಥಿಗಳಿಗೆ ಸಿಸ್ಕೊ ಸರ್ಟಿಫೈಡ್ ನೆಟ್‍ವರ್ಕ್ ಅಸೋಸಿಯೇಟ್ (ಸಿ.ಸಿ.ಎನ್.ಎ), ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಬೇಸಿಕ್ ವೆಲ್ಡಿಂಗ್, ಟಿಗ್ ವೆಲ್ಡಿಂಗ್, ಮಿಗ್ ವೆಲ್ಡಿಂಗ್, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಹಾಗೂ ಟ್ಯಾಲಿ ಪ್ರೈಮ್ ಅಲ್ಪಾವಧಿ ಕೋರ್ಸ್‍ಗಳಲ್ಲಿ ಉಚಿತ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನಗರದ ಕದ್ರಿ ಹಿಲ್ಸ್‍ ನಲ್ಲಿರುವ ಮಹಿಳಾ ಸರಕಾರಿ ಕೈಗಾರಿಕಾ ತರಬೇತಿ

ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿ Read More »

ಕರಾವಳಿ

ಕೆಪಿಟಿ ಸಂಸ್ಥೆಗೆ ಎಡಿಬಿ ನಿಯೋಗ ಭೇಟಿ

(ನ್ಯೂಸ್‌ ಕಡಬ) newskadaba.com ಅ.16. ಕರ್ನಾಟಕ ಸರ್ಕಾರವು ಏಷಿಯನ್ ಡೆವೆಲಪ್‍ ಮೆಂಟ್ ಬ್ಯಾಂಕ್‍ ನ (ಎಡಿಬಿ) ಸಹಯೋಗದೊಂದಿಗೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು ಅದರ ಅಂಗವಾಗಿ ರಾಜ್ಯದ ಒಂಭತ್ತು ಕಡೆಗಳಲ್ಲಿ ಉತ್ಕ್ರಷ್ಠತಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಯೋಜನೆಯ ಭಾಗವಾಗಿ ಎಡಿಬಿಯ ನಿಯೋಗವು ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಸಂಸ್ಥೆಗೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿತು. ಭೇಟಿಯ ಸಂದರ್ಭದಲ್ಲಿ ಸಂಸ್ಥೆಯ ಅಧಿಕಾರಿಗಳು ಮೂಲ ಸೌಕರ್ಯ

ಕೆಪಿಟಿ ಸಂಸ್ಥೆಗೆ ಎಡಿಬಿ ನಿಯೋಗ ಭೇಟಿ Read More »

ಕರಾವಳಿ
Scroll to Top