ಕರಾವಳಿ

ಹಿರಿಯ ಯಕ್ಷಗಾನ ಕಲಾವಿದ ,ರಂಗಕರ್ಮಿ ಸುಜನಾ ಸುಳ್ಯ ನಿಧನ

(ನ್ಯೂಸ್‌ ಕಡಬ) newskadaba.com,  ಅ..24 ಸುಳ್ಯ: ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯ (ಎಸ್.ಎನ್. ಜಯರಾಮ್) ಶುಕ್ರವಾರ ಬೆಳಿಗ್ಗೆ ವಿಧಿವಶರಾದರು. ವಯೋಸಹಜ ನಿಶ್ಶಕ್ತಿಯಿಂದಿದ್ದ ಅವರು ಎರಡು ದಿನಗಳಿಂದ ಆರೋಗ್ಯ ಹದಗೆಟ್ಟು ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಸುಜನಾ ಸುಳ್ಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಯರಾಮ ನಾವೂರು ಅವರು ಯಕ್ಷಗಾನದಲ್ಲಿ ಬಹುಮುಖ ಕಲಾವಿದರಾಗಿದ್ದರು. ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಾಗಿದ್ದ ಅವರು ಸುಳ್ಯ ತಾಲೂಕಿನ ‘ರಂಗಮನೆ’ ಎಂಬ ಕಲಾ ಕೇಂದ್ರದ ರೂವಾರಿ ಮತ್ತು ನಿರ್ದೇಶಕ ಜೀವನ್‌ರಾಮ್ ಸುಳ್ಯ […]

ಹಿರಿಯ ಯಕ್ಷಗಾನ ಕಲಾವಿದ ,ರಂಗಕರ್ಮಿ ಸುಜನಾ ಸುಳ್ಯ ನಿಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ : ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ – ಆರೋಪಿ ಪರಾರಿ

(ನ್ಯೂಸ್‌ ಕಡಬ) newskadaba.com,  ಅ..24 ಬೆಳ್ತಂಗಡಿ: ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪತ್ತೆ ಹಚ್ಚಿದ್ದು ಅಟೋ ರಿಕ್ಷಾ ಹಾಗೂ ಗೋ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅ.23 ರಂದು ಮಧ್ಯಾಹ್ನ ಕಿಲ್ಲೂರು ರಸ್ತೆಯಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು ಲಾಯಿಲ ಜಂಕ್ಷನ್ ನಲ್ಲಿ ತಡೆದು ನಿಲ್ಲಿಸಿ ಪರಿಶೀಲನೆಗೆ ಮುಂದಾದಾಗ ರಿಕ್ಷಾ ಚಾಲಕ ಲಾಯಿಲ ನಿವಾಸಿ ಹಕೀಂ (27) ಪೊಲೀಸರನ್ನು ನೋಡಿ ತಪ್ಪಿಸಿಕೊಂಡು ಓಡಿ ಪರಾರಿಯಾಗಿದ್ದಾನೆ

ಬೆಳ್ತಂಗಡಿ : ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ – ಆರೋಪಿ ಪರಾರಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಲಂಕಾರಿಕ ದೀಪಗಳನ್ನು ಸರಿಪಡಿಸುವಾಗ ವಿದ್ಯುತ್ ಅವಘಡ – ವ್ಯಕ್ತಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ಅ.21 ಕಾಸರಗೋಡು: ಸೀತಾಂಗೋಳಿ ಬಳಿಯ ಪುತ್ತಿಗೆಯಲ್ಲಿ ಸೋಮವಾರ ರಾತ್ರಿ ವಿದ್ಯುತ್ ಅವಘಡದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಪುತ್ತಿಗೆಯ ಆಚಾರಿಮೂಲೆ ನಿವಾಸಿ ರಾಜೇಶ್ ಆಚಾರ್ಯ (37) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ದೀಪಾವಳಿ ಆಚರಣೆಗಾಗಿ ರಾಜೇಶ್ ತಮ್ಮ ಮನೆಯ ಅಂಗಳದಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಲ್ಪಟ್ಟರು. ಕುಟುಂಬ ಸದಸ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ರಾಜೇಶ್ ವೃತ್ತಿಯಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಮೃತದೇಹವನ್ನು ಕಾಸರಗೋಡು

ಅಲಂಕಾರಿಕ ದೀಪಗಳನ್ನು ಸರಿಪಡಿಸುವಾಗ ವಿದ್ಯುತ್ ಅವಘಡ – ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೆಪಿಎಸ್ ಶಾಲೆಗಳ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡಲು ಆಡಳಿತ ಮಂಡಳಿ ರಚನೆ; ಮಧು ಬಂಗಾರಪ್ಪ

(ನ್ಯೂಸ್‌ ಕಡಬ) newskadaba.com,  ಅ.21 ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಕರ್ನಾಟಕ ಸಾರ್ವಜನಿಕ ಶಾಲೆಗಳ (ಕೆಪಿಎಸ್) ಶೈಕ್ಷಣಿಕ, ಮೂಲಸೌಕರ್ಯ ಮತ್ತು ಹಣಕಾಸಿನ ವಿಷಯದಲ್ಲಿ ಅವುಗಳ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡಲು ಆಡಳಿತ ಮಂಡಳಿಯನ್ನು ಶೀಘ್ರವೇ ರಚಿಸಲಿದೆ. ಬೆಂಗಳೂರಿನಲ್ಲಿ ಮಾತನಾಡಿಗ ಅವರು, ಶಾಲೆಗಳು, ಅವುಗಳ ಆಡಳಿತ ಮತ್ತು ಶಿಕ್ಷಕರ ವರ್ಗಾವಣೆ ಮೇಲ್ವಿಚಾರಣೆ ಮಾಡಲು ಯಾವುದೇ ಆಡಳಿತ ಮಂಡಳಿಗಳಿಲ್ಲ ಎಂದು ತಿಳಿಸಿದ್ದಾರೆ. ಕೆಪಿಎಸ್ ಶಾಲೆಗಳ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡಲು ಆಡಳಿತ ಮಂಡಳಿಯು ಅಗತ್ಯವಿದೆ. ಇಷ್ಟು ವರ್ಷಗಳಲ್ಲಿ, ಕೆಪಿಎಸ್ ಶಾಲೆಗಳಿಗೆ ಯಾವುದೇ ಆಡಳಿತ ಮಂಡಳಿ

ಕೆಪಿಎಸ್ ಶಾಲೆಗಳ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡಲು ಆಡಳಿತ ಮಂಡಳಿ ರಚನೆ; ಮಧು ಬಂಗಾರಪ್ಪ Read More »

ಕರಾವಳಿ

ಮಂಗಳೂರು ಆಸ್ಪತ್ರೆಯೊಂದರ ಬಳಿ ನಿಲ್ಲಿಸಿದ್ದ ಬೈಕ್ ಕಳವು – ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ಅ.21 ಮಂಗಳೂರು: ಫಳ್ನೀರ್ ರಸ್ತೆಯಲ್ಲಿರುವ ಆಸ್ಪತ್ರೆಯೊಂದರ ಸಮೀಪ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ಪ್ರದೀಪ್ ಆಚಾರ್ಯ ಅವರು ಕದ್ರಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ರಾತ್ರಿ 7.10ಕ್ಕೆ ಬೈಕನ್ನು ನಿಲ್ಲಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಿಕ್ಕಪ್ಪನನ್ನು ನೋಡಲು ಹೋಗಿದ್ದರು. 9 ಗಂಟೆಗೆ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಬೈಕಿನ ಮೌಲ್ಯ 45,000 ರೂ. ಎಂದು ದೂರಿನಲ್ಲಿ ತಿಳಿಸಿದ್ದಾರೆ.  

ಮಂಗಳೂರು ಆಸ್ಪತ್ರೆಯೊಂದರ ಬಳಿ ನಿಲ್ಲಿಸಿದ್ದ ಬೈಕ್ ಕಳವು – ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರಿನ ಜನ-ಮನ ಕಾರ್ಯಕ್ರಮದಲ್ಲಿ ನೂಕುನುಗ್ಗಲು, 11ಕ್ಕೂ ಹೆಚ್ಚು ಮಂದಿ ಅಸ್ವಸ್ಥ

(ನ್ಯೂಸ್‌ ಕಡಬ) newskadaba.com,  ಅ.21 ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶಾಸಕ ಅಶೋಕ ರೈ ನೇತೃತ್ವದಲ್ಲಿ ಸಿಎಂ ಉಪಸ್ಥಿತಿಯಲ್ಲಿ ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ಹಮ್ಮಿಕೊಂಡ ‘ಅಶೋಕ ಜನಮನ -2025’ ಕಾರ್ಯಕ್ರಮದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಭಾಗಿಯಾದ ಪರಿಣಾಮ ನೂಕು ನುಗ್ಗಲು ಉಂಟಾಗಿ ಕೆಲವು ಜನರು ಅಸ್ವಸ್ಥರಾದ ಘಟನೆ ನಡೆದಿದೆ. ಅಸ್ವಸ್ಥರಾದವರಿಗೆ ಪುತ್ತೂರು ತಾಲೂಕು ಸರ್ಕಾರಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರೈ ಎಸ್ಟೇಟ್ ಎಜುಕೇಶನ್ ಮತ್ತು ಚ್ಯಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಶಾಸಕ ಅಶೋಕ ರೈ ನೇತೃತ್ವದಲ್ಲಿ

ಪುತ್ತೂರಿನ ಜನ-ಮನ ಕಾರ್ಯಕ್ರಮದಲ್ಲಿ ನೂಕುನುಗ್ಗಲು, 11ಕ್ಕೂ ಹೆಚ್ಚು ಮಂದಿ ಅಸ್ವಸ್ಥ Read More »

ಕರಾವಳಿ

ಕಡಬದ ಕದಂಬ ಕ್ರಾಕರ್ಸ್ ನಲ್ಲಿ ದೀಪಾವಳಿ ಪಟಾಕಿ ಮೇಳ – ಟಿವಿ, ಮಿಕ್ಸಿ ಗೆಲ್ಲುವ ಅವಕಾಶ

(ನ್ಯೂಸ್ ಕಡಬ) newskadaba.com ಕಡಬ, ಅ.20. ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ಮಾಡ ದೈವಸ್ಥಾನದ ಬಳಿ ಆರಂಭಗೊಂಡಿರುವ ಕದಂಬ ಕ್ರಾಕರ್ಸ್ ನಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಪಟಾಕಿ‌ ಮಾರಾಟ ಆರಂಭಗೊಂಡಿದೆ‌. 2 ಸಾವಿರ ಮೇಲ್ಪಟ್ಟ ಖರೀದಿಗೆ ಟಿವಿ ಹಾಗೂ ಮಿಕ್ಸಿ ಜೊತೆಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದ್ದು, ಅಕ್ಟೋಬರ್ 22 ರಂದು ಸಂಜೆ 6 ಗಂಟೆಗೆ ಲೈವ್ ಡ್ರಾ ಇರಲಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಬದ ಕದಂಬ ಕ್ರಾಕರ್ಸ್ ನಲ್ಲಿ ದೀಪಾವಳಿ ಪಟಾಕಿ ಮೇಳ – ಟಿವಿ, ಮಿಕ್ಸಿ ಗೆಲ್ಲುವ ಅವಕಾಶ Read More »

ಕರಾವಳಿ

ಪುತ್ತೂರಿನಲ್ಲಿ ಸಿಡಿಲು ಬಡಿದು ಮನೆ ಸಂಪೂರ್ಣವಾಗಿ ಹಾನಿ- ಮಗು ಸಹಿತ 5 ಮಂದಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಅ.20 ಪುತ್ತೂರು:  ಭಾನುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯ ಜೊತೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಯಾಗಿ, ಮನೆಯಲ್ಲಿದ್ದ ಮಗು ಸಹಿತ ಐದು ಮಂದಿ ಸಣ್ಣಪುಟ್ಟ ಗಾಯಗೊಂಡ ಘಟನೆ ಪುತ್ತೂರು ನರಿಮೊಗ್ರು ಗ್ರಾಮದ ಬೆದ್ರಾಳದಲ್ಲಿ ನಡೆದಿದೆ. ಬೆದ್ರಾಳ ನಿವಾಸಿ ದಯಾನಂದ ಮೂಲ್ಯ ಅವರಿಗೆ ಸೇರಿದ ಮನೆಗೆ ಸಿಡಿಲು ಬಡಿದು ಹಂಚಿನ ಛಾವಣಿ ಸಂಪೂರ್ಣ ಹಾನಿಯಾಗಿದೆ. ಗೋಡೆ ಕುಸಿತಗೊಂಡಿದ್ದು, ಒಂದು ಭಾಗಕ್ಕೆ ಹಾಕಿದ್ದ ಸಿಮೆಂಟ್ ಶೀಟ್ ಹಾನಿಯಾಗಿದೆ. ಮನೆ ಮಂದಿಗೆ ಹೆಂಚಿನ ತುಂಡುಗಳು

ಪುತ್ತೂರಿನಲ್ಲಿ ಸಿಡಿಲು ಬಡಿದು ಮನೆ ಸಂಪೂರ್ಣವಾಗಿ ಹಾನಿ- ಮಗು ಸಹಿತ 5 ಮಂದಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ತೇರ್ಗಡೆಗೆ ಕನಿಷ್ಠ ಅಂಕ ೩೩ಕ್ಕೆ ಇಳಿಕೆ ಸರಿಯಲ್ಲ : ಶಿಕ್ಷಣ ಸಚಿವ ಎಂ.ಸಿ.ಸುಧಾಕರ್

(ನ್ಯೂಸ್‌ ಕಡಬ) newskadaba.com,  ಅ.20 ಉಡುಪಿ-ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ತೇರ್ಗಡೆಗೆ ಕನಿಷ್ಠ ಅಂಕ ೩೩ಕ್ಕೆ ಇಳಿಕೆ ಮಾಡಿರುವ ಶಾಲಾ ಶಿಕ್ಷಣ ಮಂತ್ರಿಗಳ ಈ ನಿರ್ಧಾರದ ಬಗ್ಗೆ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿಗಳು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ೩೫ ಅಂಕ ಇರುವುದನ್ನು ೩೩ಕ್ಕೆ ಇಳಿಸಿದ್ದಾರೆ ಈ ಬಗ್ಗೆ ಇನ್ನಷ್ಟು ಚರ್ಚೆಗಳು ಆಗಬೇಕು ಎಂಬ ಅಭಿಪ್ರಾಯವಿದೆ. ಶಾಲಾ ಶಿಕ್ಷಣ ಮಂತ್ರಿಗಳು ಯಾವ ಉದ್ದೇಶ ಇಟ್ಟುಕೊಂಡು ಇದನ್ನು ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ. ಈ ರೀತಿ ಅಂಕ ಕಡಿಮೆ ಮಾಡಿರುವುದು ಸರಿಯಲ್ಲ. ಸಂಪುಟ ಸಭೆಯಲ್ಲಿ ಈ

ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ತೇರ್ಗಡೆಗೆ ಕನಿಷ್ಠ ಅಂಕ ೩೩ಕ್ಕೆ ಇಳಿಕೆ ಸರಿಯಲ್ಲ : ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ Read More »

ಕರಾವಳಿ

ದೀಪಾವಳಿ ಹಬ್ಬದ ದಿನವೇ ‘ಜಿಟಿ ಮಾಲ್’ ನಿಂದ ಬಿದ್ದು ತರುಣ ಆತ್ಮಹತ್ಯೆ!

(ನ್ಯೂಸ್‌ ಕಡಬ) newskadaba.com,  ಅ.20 ಬೆಂಗಳೂರು: ನಾಡಿನಾದ್ಯಂತ ಇಂದು ದೀಪಾವಳಿ ಹಬ್ಬದ ಸಡಗರ, ಸಂಭ್ರಮ ಮನೆಮಾಡಿರುವಂತೆಯೇ ನಗರದ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾದ ಮಾಗಡಿ ರಸ್ತೆಯ ಜಿಟಿ ಮಾಲ್ ನಿಂದ ಬಿದ್ದು ಯುವಕನೋರ್ವ ಮೃತಪಟ್ಟಿದ್ದಾನೆ. GTವರ್ಲ್ಡ್ ಮಾಲ್ ನ ಮೂರನೇ ಅಂತಸ್ಥಿನಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಮಾಗಡಿ ರಸ್ತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…

ದೀಪಾವಳಿ ಹಬ್ಬದ ದಿನವೇ ‘ಜಿಟಿ ಮಾಲ್’ ನಿಂದ ಬಿದ್ದು ತರುಣ ಆತ್ಮಹತ್ಯೆ! Read More »

ಕರಾವಳಿ
Scroll to Top