ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನಲ್ಲಿ “ಶಿಕ್ಷಣದಲ್ಲಿ ಕಲೆ ಮತ್ತು ನಾಟಕ” ವಿಷಯದ ಕಾರ್ಯಾಗಾರ



(ನ್ಯೂಸ್ ಕಡಬ) newskadaba.com ಕಡಬ, ಜೂ. 25. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ “ಶಿಕ್ಷಣದಲ್ಲಿ ಕಲೆ ಮತ್ತು ನಾಟಕ” ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.







ಕಾರ್ಯಗಾರದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರಾದ ಶ್ರೀಯುತ ಅರುಣ್ ಕುಮಾರ್ ಅವರು ದೀಪ ಬೆಳಗಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು.






ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಯುತ ಹರೀಶ್ ಕುಮಾರ್ ಟಿ, ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಶುಭವನ್ನು ಹಾರೈಸಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ವ್ಯವಸ್ಥಾಪಕಾದ ರೆ|ಫಾ|ಡಾ| ಎಲ್ದೊ ಪುತ್ತನ್‍ಕಂಡತ್ತಿಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಾರ್ಯಾಗಾರದ ಸಂಯೋಜಕರಾದ ಉಪನ್ಯಾಸಕಿ ಶ್ರೀಮತಿ ಉಮಾಶ್ರೀ ಪಿ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಪ್ರಶಿಕ್ಷಣಾರ್ಥಿಗಳು ರಚಿಸಿ, ನಿರ್ದೇಶಿಸಿದ ನಾಟಕಗಳ ಪ್ರದರ್ಶನ ನಡೆಯಿತು ಹಾಗೂ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಶ್ರೀಯುತ ಅರುಣ್ ಕುಮಾರ್ ಅವರು ನಾಟಕ ರಚನೆ, ಅಭಿನಯ, ನಿರ್ದೇಶನ ಹಾಗೂ ಇವುಗಳಿಗೆ ಸಂಬಂಧಿಸಿದಂತೆ ಪೂರಕ ಸಿದ್ಧತೆಗಳು ಮತ್ತು ತಯಾರಿಗಳ ಕುರಿತಂತೆ ಮಾರ್ಗದರ್ಶನವನ್ನು ನೀಡಿದರು. ಪ್ರಶಿಕ್ಷಣಾರ್ಥಿ ರೋಬಿನ್ ಪಿ ಜೆ, ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಫೀಕ್ ವಂದಿಸಿದರು. ಕು| ದೀಕ್ಷಾ ಮತ್ತು ಕು| ರಚನಾ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top